• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • China Projects: ಮದುವೆಗಳಾಗ್ತಿಲ್ಲ, ಮಕ್ಕಳು ಹುಟ್ತಿಲ್ಲ! ಇದಕ್ಕಾಗಿ ಹೊಸ ಯೋಜನೆಗಳನ್ನು ಜಾರಿಗೆ ತಂದ ಚೀನಾ

China Projects: ಮದುವೆಗಳಾಗ್ತಿಲ್ಲ, ಮಕ್ಕಳು ಹುಟ್ತಿಲ್ಲ! ಇದಕ್ಕಾಗಿ ಹೊಸ ಯೋಜನೆಗಳನ್ನು ಜಾರಿಗೆ ತಂದ ಚೀನಾ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಮದುವೆಯಾಗಲು 30 ದಿನಗಳ ಮದುವೆ ರಜೆ ನೀಡಲಾಗುತ್ತದೆ. ನಗರದ ಮಹಿಳೆಯರನ್ನು ಗ್ರಾಮೀಣ ಭಾಗದ ಹಳೆಯ ಬ್ಯಾಚುಲರ್‌ಗಳೊಂದಿಗೆ ಡೇಟ್ ಮಾಡಲು ಪ್ರಚಾರಗಳನ್ನು ಪ್ರಾರಂಭಿಸಿದೆ.

  • Share this:

ಚೀನಾದಲ್ಲಿ (China) ಜನನ ಪ್ರಮಾಣ ದರವು (Birth Rate) ಇಳಿಕೆಯಾಗುತ್ತಿದ್ದು ಇದನ್ನು ನಿಯಂತ್ರಿಸುವ ಹಾಗೂ ಜನನ ಪ್ರಮಾಣ ದರವನ್ನು ವರ್ಧಿಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು (Projects) ಕಾರ್ಯರೂಪಕ್ಕೆ ತರುತ್ತಿದೆ. ವಿವಾಹ ಹಾಗೂ ಜನನ ಪ್ರಮಾಣಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳುತ್ತಿದೆ.


ವಿವಾಹ ಹಾಗೂ ಮಕ್ಕಳನ್ನು ಹೊಂದಲು ಪ್ರೋತ್ಸಾಹ


ಚೀನಾದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಕೂಡ ಸರ್ಕಾರದೊಂದಿಗೆ ಯೋಜನೆಯಲ್ಲಿ ಕೈಜೋಡಿಸಿದೆ. ಸರ್ಕಾರದ ಜನಸಂಖ್ಯೆ ಹಾಗೂ ಫಲವತ್ತತೆ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಸಂಸ್ಥೆಯು ಮಹಿಳೆಯರಿಗೆ ವಿವಾಹವಾಗಲು ಹಾಗೂ ಮಕ್ಕಳನ್ನು ಹೊಂದಲು ಪ್ರೋತ್ಸಾಹ ನೀಡುತ್ತಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.


ವಿವಾಹವನ್ನು ಪ್ರೋತ್ಸಾಹಿಸುವುದು, ಸೂಕ್ತ ವಯಸ್ಸಿನಲ್ಲಿ ಮಕ್ಕಳನ್ನು ಹೊಂದುವುದು,  ಮಕ್ಕಳ ಆರೈಕೆ ಕಾಳಜಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಕ್ಕಾಗಿ ಪ್ರೋತ್ಸಾಹಿಸಲಾಗುತ್ತದೆ. ವಿವಾಹದ ಖರ್ಚುವೆಚ್ಚಗಳನ್ನು ಕಡಿಮೆ ಮಾಡುವುದು, ವಧು ಬೆಲೆಗಳನ್ನು ನಿಗ್ರಹಿಸುವುದು ಅಂತೆಯೇ ಕೆಲವೊಂದು ಮೂಢನಂಬಿಕೆ ಹಾಗೂ ಪದ್ಧತಿಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಯೋಜನೆಗಳನ್ನು ಕೈಗೊಳ್ಳುತ್ತಿದೆ.



20 ನಗರಗಳಲ್ಲಿ ಯೋಜನೆಯ ಅನುಷ್ಟಾನ


ಯೋಜನೆ ಒಳಗೊಂಡಿರುವ ನಗರಗಳಲ್ಲಿ ಉತ್ಪಾದನಾ ಕೇಂದ್ರವಾದ ಗುವಾಂಗ್‌ಝೌ ಮತ್ತು ಚೀನಾದ ಹೆಬೈ ಪ್ರಾಂತ್ಯದ ಹಂಡನ್ ಸೇರಿವೆ. ಕಳೆದ ವರ್ಷ ಬೀಜಿಂಗ್ ಸೇರಿದಂತೆ 20 ನಗರಗಳಲ್ಲಿ ಸಂಘವು ಈಗಾಗಲೇ ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಸುದ್ದಿ ಸಮೂಹ ತಿಳಿಸಿದೆ.


ಸಮಾಜವು ಯುವಜನರಿಗೆ ಮದುವೆ ಮತ್ತು ಹೆರಿಗೆಯ ಪರಿಕಲ್ಪನೆಯ ಬಗ್ಗೆ ಹೆಚ್ಚು ಮಾರ್ಗದರ್ಶನ ನೀಡಬೇಕಾಗಿದೆ" ಎಂದು ಜನಸಂಖ್ಯಾಶಾಸ್ತ್ರಜ್ಞ ಹಿ ಯಾಫು ಟೈಮ್ಸ್‌ಗೆ ತಿಳಿಸಿದೆ. ತೆರಿಗೆ ಪ್ರೋತ್ಸಾಹಗಳು, ವಸತಿ ಸಬ್ಸಿಡಿಗಳು ಮತ್ತು ಮೂರನೇ ಮಗುವನ್ನು ಹೊಂದಲು ಉಚಿತ ಅಥವಾ ಸಬ್ಸಿಡಿ ಶಿಕ್ಷಣ ಸೇರಿದಂತೆ ಮಕ್ಕಳನ್ನು ಹೊಂದಲು ಜನರನ್ನು ಉತ್ತೇಜಿಸಲು ಚೀನಾದ ಪ್ರಾಂತ್ಯಗಳು ಹೊರತರುತ್ತಿರುವ ಕ್ರಮಗಳ ನಡುವೆಯೇ ಈ ಯೋಜನೆಗಳು ಬಂದಿವೆ.


ಜನಸಂಖ್ಯಾ ಸವಾಲುಗಳು


ಚೀನಾ 1980 ರಿಂದ 2015 ರವರೆಗೆ ಕಟ್ಟುನಿಟ್ಟಾದ ಒಂದು ಮಗು ನೀತಿಯನ್ನು ಜಾರಿಗೆ ತಂದಿತು - ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಲು ಅವಕಾಶ ಮಾಡಿಕೊಟ್ಟಿರುವ ಅದರ ಅನೇಕ ಜನಸಂಖ್ಯಾ ಸವಾಲುಗಳ ಮೂಲವಾಗಿದೆ. ಅಂದಿನಿಂದ ಈ ಮಿತಿಯನ್ನು ಮೂರು ಮಕ್ಕಳಿಗೆ ಹೆಚ್ಚಿಸಲಾಗಿದೆ.


ಸಾಂದರ್ಭಿಕ ಚಿತ್ರ


ಆರು ದಶಕಗಳಲ್ಲಿ ಚೀನಾದ ಮೊದಲ ಜನಸಂಖ್ಯೆಯ ಕುಸಿತ ಮತ್ತು ಅದರ ತ್ವರಿತ ವಯಸ್ಸಾದ ಬಗ್ಗೆ ಕಳವಳ ವ್ಯಕ್ತಪಡಿಸಿ ಸರ್ಕಾರದ ರಾಜಕೀಯ ಸಲಹೆಗಾರರು ಮಾರ್ಚ್‌ನಲ್ಲಿ ಒಂಟಿ ಮತ್ತು ಅವಿವಾಹಿತ ಮಹಿಳೆಯರಿಗೆ ದೇಶದ ಫಲವತ್ತತೆ ದರವನ್ನು ಹೆಚ್ಚಿಸಲು ಇತರ ಸೇವೆಗಳ ಜೊತೆಗೆ ಮೊಟ್ಟೆಯ ಘನೀಕರಣ ಮತ್ತು IVF ಚಿಕಿತ್ಸೆಗೆ ಪ್ರವೇಶವನ್ನು ಹೊಂದಿರಬೇಕು ಎಂದು ಪ್ರಸ್ತಾಪಿಸಿದ್ದಾರೆ.


ಮಕ್ಕಳನ್ನು ಹೊಂದುವುದನ್ನು ಮುಂದೂಡುತ್ತಿರುವ ಮಹಿಳೆಯರು


ಲಿಂಗ ತಾರತಮ್ಯವು ಇನ್ನೂ ಒಂದು ಪ್ರಮುಖ ಅಡಚಣೆಯೊಂದಿಗೆ ಮಕ್ಕಳ ಆರೈಕೆಯ ವೆಚ್ಚ ಮತ್ತು ತಮ್ಮ ವೃತ್ತಿಜೀವನಕ್ಕೆ ಅಂತ್ಯಹಾಡಬೇಕೆಂಬ ಕಾರಣದಿಂದಾಗಿ ಅನೇಕ ಮಹಿಳೆಯರು ಮಕ್ಕಳನ್ನು ಹೊಂದುತ್ತಿಲ್ಲ.  ಮಕ್ಕಳನ್ನು ಹೊಂದುವುದನ್ನು ಮುಂದೂಡುತ್ತಿದ್ದಾರೆ.


ಇದನ್ನೂ ಓದಿ: Flight Case: ವಿಮಾನದಲ್ಲಿ ಮತ್ತೊಂದು ಕಿರಿಕ್, ಕುಡಿದ ಮತ್ತಿನಲ್ಲಿ ಗಗನಸಖಿಗೆ ಕಿರುಕುಳ ನೀಡಿದ ಪ್ರಯಾಣಿಕ!


ಚೀನಾ 1980 ರಿಂದ 2015 ರವರೆಗೆ ಕಟ್ಟುನಿಟ್ಟಾದ ಒಂದೇ ಮಗುವನ್ನು ಹೊಂದುವ ನೀತಿಯನ್ನು ಜಾರಿಗೆ ತಂದಿತು ಅಂತೆಯೇ ಜನಸಂಖ್ಯಾ ಕುಸಿತ ಆರಂಭವಾದಾಗಿನಿಂದ ಚೀನಾ ಮಕ್ಕಳ ಸಂಖ್ಯೆಯನ್ನು ಮೂರಕ್ಕೆ ಹೆಚ್ಚಿಸಿದೆ. ಆ ಜನಸಂಖ್ಯಾಶಾಸ್ತ್ರಜ್ಞರ ತಂಡದ ಅತ್ಯಂತ ನಿರಾಶಾವಾದಿ ಪ್ರಕ್ಷೇಪಗಳ ಪ್ರಕಾರ, ಚೀನಾವು 2100 ರಲ್ಲಿ ಕೇವಲ 587 ಮಿಲಿಯನ್ ನಿವಾಸಿಗಳನ್ನು ಹೊಂದಬಹುದಾಗಿದ್ದು, ಇಂದಿನ ಅರ್ಧಕ್ಕಿಂತ ಕಡಿಮೆ ಪ್ರಮಾಣದ್ದಾಗಿರುತ್ತದೆ ಎಂದು ಊಹಿಸಲಾಗಿದೆ.


ಸ್ಥಳೀಯ ಕಂಪನಿಗಳು, ಪ್ರಾಂತ್ಯಗಳು ಮತ್ತು ಟೌನ್‌ಶಿಪ್‌ಗಳು ಜನರನ್ನು ಮದುವೆಯಾಗಲು 30 ದಿನಗಳ "ಮದುವೆ ರಜೆ" ಅಥವಾ ನಗರ ಮಹಿಳೆಯರನ್ನು ಗ್ರಾಮೀಣ ಹಳೆಯ ಬ್ಯಾಚುಲರ್‌ಗಳೊಂದಿಗೆ ಡೇಟ್ ಮಾಡಲು ಪ್ರಚಾರಗಳನ್ನು ಪ್ರಾರಂಭಿಸುವಂತಹ ವಿಧಾನಗಳನ್ನು ಪ್ರಯೋಗಿಸುತ್ತಿವೆ.

top videos
    First published: