• Home
 • »
 • News
 • »
 • national-international
 • »
 • Terrorist: ಪಾಕ್ ಮೂಲದ ಭಯೋತ್ಪಾದಕನನ್ನು ಬ್ಲ್ಯಾಕ್‌ ಲಿಸ್ಟ್ ಮಾಡಲು ಭಾರತ-ಅಮೆರಿಕಾ ಪ್ರಸ್ತಾಪ; ಮತ್ತೆ ಚೀನಾ ಅಡ್ಡಗಾಲು

Terrorist: ಪಾಕ್ ಮೂಲದ ಭಯೋತ್ಪಾದಕನನ್ನು ಬ್ಲ್ಯಾಕ್‌ ಲಿಸ್ಟ್ ಮಾಡಲು ಭಾರತ-ಅಮೆರಿಕಾ ಪ್ರಸ್ತಾಪ; ಮತ್ತೆ ಚೀನಾ ಅಡ್ಡಗಾಲು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

42 ವರ್ಷದ ಮಹಮೂದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಹೆಸರಿಸುವ ಭಾರತ ಮತ್ತು ಯುಎಸ್ ಪ್ರಸ್ತಾಪವನ್ನು ಪಾಕಿಸ್ತಾನದ ಮಿತ್ರರಾಷ್ಟ್ರವಾದ ಚೀನಾ ತಡೆಹಿಡಿದಿದೆ

 • Trending Desk
 • Last Updated :
 • Karnataka, India
 • Share this:

  ಲಷ್ಕರ್-ಎ-ತೊಯ್ಬಾ ನಾಯಕ ಶಾಹಿದ್ ಮಹಮೂದ್‌ನನ್ನು ಜಾಗತಿಕ ಭಯೋತ್ಪಾದಕ (Terrorist) ಎಂದು ವಿಶ್ವಸಂಸ್ಥೆಯಲ್ಲಿ (United Nations) ಪಟ್ಟಿ ಮಾಡುವ ಭಾರತ ಮತ್ತು ಅಮೆರಿಕದ ಪ್ರಸ್ತಾವನೆಯನ್ನು ಚೀನಾ ತಡೆಹಿಡಿದಿದ್ದು, ವಿಶ್ವಮಟ್ಟದಲ್ಲಿ ಪಾಕಿಸ್ತಾನ (Pakistan) ಮೂಲದ ಭಯೋತ್ಪಾದಕರನ್ನು ಕಪ್ಪು ಪಟ್ಟಿಗೆ ಸೇರಿಸುವ ಪ್ರಸ್ತಾವನೆಯನ್ನು ಬೀಜಿಂಗ್ ಹಲವು ತಿಂಗಳುಗಳಿಂದ ನಿರ್ಬಂಧಿಸುತ್ತಾ ಬಂದಿರುವುದಕ್ಕೆ ಇದು ನಾಲ್ಕನೇ ನಿದರ್ಶನವಾಗಿದೆ.


  ತಡೆಹಿಡಿದ ಚೀನಾ


  ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನ 1267 ಅಲ್ ಖೈದಾ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ 42 ವರ್ಷದ ಮಹಮೂದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಹೆಸರಿಸುವ ಭಾರತ ಮತ್ತು ಯುಎಸ್ ಪ್ರಸ್ತಾಪವನ್ನು ಪಾಕಿಸ್ತಾನದ ಮಿತ್ರರಾಷ್ಟ್ರವಾದ ಚೀನಾ ತಡೆಹಿಡಿದಿದೆ ಎಂಬುದು ಇದರಿಂದ ವ್ಯಕ್ತವಾಗಿದೆ.


  ಭಯೋತ್ಪಾದಕ ಮಹಮೂದ್


  "ಲಷ್ಕರ್-ಎ-ತೊಯ್ಬಾದ (LeT) ನಿಧಿಸಂಗ್ರಹಣೆ ಮತ್ತು ಬೆಂಬಲ ಸಂಪರ್ಕಗಳನ್ನು ಅಡ್ಡಿಪಡಿಸುವ ಯೋಜನೆಯ ಭಾಗವಾಗಿ ಯುಎಸ್ ಟ್ರೆಶರ್ ಇಲಾಖೆಯು ಡಿಸೆಂಬರ್ 2016 ರಲ್ಲಿ ಮಹಮೂದ್ ಮತ್ತು ಇನ್ನೊಬ್ಬ LeT ನಾಯಕ ಮುಹಮ್ಮದ್ ಸರ್ವರ್ ಅವರನ್ನು ಹೆಸರಿಸಿದೆ.


  ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರು ಭಾರತದಲ್ಲಿದ್ದು, ಮುಂಬೈನಲ್ಲಿ 26/11 ದಾಳಿಯ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಸಮಯದಲ್ಲಿ ಈ ಉಗ್ರರನ್ನು ಬಂಧಿಸಲು ನಿರ್ಧಾರ ತೆಗೆದುಕೊಂಡಿದ್ದರು. ಎಲ್ಇಟಿ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ಅಮೆರಿಕದ ನಾಗರಿಕರು ಸೇರಿದಂತೆ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.


  ಇದನ್ನೂ ಓದಿ:Maharashtra: ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ಬಣಕ್ಕೆ ಹೊಸ ಹೆಸರು, ಚಿಹ್ನೆ ಕೊಟ್ಟ ಚುನಾವಣಾ ಆಯೋಗ!


  ಭಯೋತ್ಪಾದಕ ಸಂಘಟನೆಗಳಲ್ಲಿ ಮಹಮೂದ್ ಭಾಗಿ


  ಯುಎಸ್ ಟ್ರೆಶರ್ ಇಲಾಖೆಯಲ್ಲಿನ ವೆಬ್‌ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ ಮಹಮೂದ್ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿರುವ ದೀರ್ಘಕಾಲದ ಹಿರಿಯ LeT ಸದಸ್ಯನಾಗಿದ್ದು ಮತ್ತು ಕನಿಷ್ಠ 2007 ರಿಂದ ಗುಂಪಿನೊಂದಿಗೆ ಸಂಯೋಜಿತಗೊಂಡಿರುವುದು ತಿಳಿದುಬಂದಿದೆ.


  ಜೂನ್ 2015 ರಿಂದ ಕನಿಷ್ಠ ಜೂನ್ 2016 ರವರೆಗೆ ಮಹಮೂದ್ ಎಲ್ಇಟಿಯ ಮಾನವೀಯ ಮತ್ತು ನಿಧಿಸಂಗ್ರಹಣೆಯ ಅಂಗವಾದ ಫಲಾಹ್-ಇ-ಇನ್ಸಾನಿಯತ್ ಫೌಂಡೇಶನ್ (FIF) ನ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದಾನೆ ಎಂಬ ಮಾಹಿತಿ ಕೂಡ ಇದೆ.


  2014 ರಲ್ಲಿ, ಮಹಮೂದ್ ಕರಾಚಿಯಲ್ಲಿ FIF ನ ನಾಯಕನಾಗಿದ್ದನು. ಆಗಸ್ಟ್ 2013 ರಲ್ಲಿ, ಮಹಮೂದ್ ನನ್ನು ಎಲ್‌ಇಟಿ ಪಬ್ಲಿಕೇಶನ್‌ನ ವಿಂಗ್ ಸದಸ್ಯ ಎಂದು ಗುರುತಿಸಲಾಗಿದೆ ಎಂದು ವೆಬ್‌ಸೈಟ್ ತಿಳಿಸಿದೆ.


  ಇದನ್ನೂ ಓದಿ: Khosta-2: ಮತ್ತೆ ವೈರಸ್​ ಆತಂಕ, ಲಸಿಕೆಗೂ ಜಗ್ಗಲ್ಲ ಕೊರೋನಾದ ಹೊಸ ರೂಪಾಂತರ!


  ಭಾರತ, ಅಮೆರಿಕಾದ ಮೇಲೆ ದಾಳಿ ನಡೆಸುವ ಉದ್ದೇಶ


  ಇಷ್ಟೇ ಅಲ್ಲದೆ ಮಹಮೂದ್ ಈ ಹಿಂದೆ ಸಜ್ಜಿದ್ ಮೀರ್ ನೇತೃತ್ವದ ಎಲ್‌ಇಟಿಯ ಸಾಗರೋತ್ತರ ಕಾರ್ಯಾಚರಣೆಯ ತಂಡದ ಭಾಗವಾಗಿದ್ದನು. ಅಂತೆಯೇ ಹೆಚ್ಚುವರಿಯಾಗಿ, ಆಗಸ್ಟ್ 2013 ರಲ್ಲಿ, ಬಾಂಗ್ಲಾದೇಶ ಮತ್ತು ಬರ್ಮಾದಲ್ಲಿನ ಇಸ್ಲಾಮಿಕ್ ಸಂಘಟನೆಗಳೊಂದಿಗೆ ರಹಸ್ಯ ಸಂಪರ್ಕಗಳನ್ನು ಬೆಸೆಯಲು ಮಹಮೂದ್‌ಗೆ ಸೂಚನೆ ನೀಡಲಾಯಿತು ಮತ್ತು 2011 ರ ಅಂತ್ಯದ ವೇಳೆಗೆ, ಮಹಮೂದ್ ತಿಳಿಸಿರುವಂತೆ ಎಲ್‌ಇಟಿಯ ಮುಖ್ಯ ಗುರಿ ಭಾರತ ಮತ್ತು ಅಮೆರಿಕದ ಮೇಲೆ ದಾಳಿ ನಡೆಸುವುದಾಗಿದೆ ಎಂದು ಅಮೆರಿಕದ ಟ್ರೆಶರಿ ಇಲಾಖೆ ತಿಳಿಸಿದೆ.


  ಅಡ್ಡಗಾಲು ಹಾಕುತ್ತಿರುವ ಚೀನಾ


  1267 ರ ಅಲ್-ಖೈದಾ ನಿರ್ಬಂಧಗಳ ಸಮಿತಿಯ ಆಡಳಿತದ ಅಡಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಗುರುತಿಸುವ ಪ್ರಸ್ತಾಪಗಳಿಗೆ ಚೀನಾ ತಡೆಯೊಡ್ಡುವುದು ಹಲವು ತಿಂಗಳುಗಳಲ್ಲಿ ಇದು ನಾಲ್ಕನೇ ಬಾರಿಯಾಗಿದೆ.


  ಈ ವರ್ಷದ ಜೂನ್‌ನಲ್ಲಿ, UN ಭದ್ರತಾ ಮಂಡಳಿಯ 1267 ಅಲ್-ಖೈದಾ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಬ್ಲ್ಯಾಕ್‌ಲಿಸ್ಟ್ ಮಾಡುವ ಭಾರತ ಮತ್ತು ಯುಎಸ್ ಜಂಟಿ ಪ್ರಸ್ತಾವನೆಯನ್ನು ಚೀನಾ ಕೊನೆಯ ಕ್ಷಣದಲ್ಲಿ ತಡೆಹಿಡಿಯಿತು.


  ಅಮೆರಿಕ ಪತ್ತೆಹಚ್ಚಿರುವ ಭಯೋತ್ಪಾಕನಾಗಿರುವ ಮಕ್ಕಿ, ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಅಂತೆಯೇ 26/11 ಪ್ರಕರಣದ ಮಾಸ್ಟರ್‌ಮೈಂಡ್ ಆಗಿದ್ದಾನೆ. ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನ 1267 ISIL ಮತ್ತು ಅಲ್ ಖೈದಾ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಮಕ್ಕಿಯನ್ನು ಜಾಗತಿಕ ಭಯೋತ್ಪಾದಕ ಎಂದು ಹೆಸರಿಸಲು ನವದೆಹಲಿ ಮತ್ತು ವಾಷಿಂಗ್ಟನ್ ಜಂಟಿ ಪ್ರಸ್ತಾವನೆಯನ್ನು ಮುಂದಿಟ್ಟಿದ್ದವು ಆದರೆ ಬೀಜಿಂಗ್ ಕೊನೆಯ ಕ್ಷಣದಲ್ಲಿ ಈ ಪ್ರಸ್ತಾಪವನ್ನು ತಡೆಹಿಡಿದಿದೆ.

  Published by:ಪಾವನ ಎಚ್ ಎಸ್
  First published: