ಕಳೆದೊಂದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಚೀನಾ ತತ್ತರಿಸಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹದ ವಾತವಾರಣ ಸೃಷ್ಟಿಯಾಗಿದೆ. ಚೀನಾದ ಹೆನಾನ್ ಪ್ರಾಂತ್ಯದ Zhengzhou ಪ್ರದೇಶದಲ್ಲಿ ಉಂಟಾಗಿರುವ ಪ್ರವಾಹದಿಂದ ಈಗಾಗಲೇ 12ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಅನೇಕ ಮನೆಗಳಿಗೆ ನೀರು ನುಗ್ಗಿದೆ. ಈಗಾಗಲೇ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆದಿದೆ. ಈ ನಡುವೆ ಅಣೆಕಟ್ಟೊಂದನ್ನು ಚೀನಾ ಮಿಲಿಟರಿ ಬ್ಲಾಸ್ಟ್ ಮಾಡಿದೆ. Luoyang ಸಿಟಿಯಲ್ಲಿ ಅಣೆಕಟ್ಟು ಸ್ಪೋಟಿಸಿದ ಪರಿಣಾಮ 12 ಜನ ಸಾವನ್ನಪ್ಪಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಇದರಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಣೆಕಟ್ಟಿನ ನೀರು ನಗರದೆಲ್ಲೆಡೆ ಪ್ರವಾಹ ವಾತಾವರಣ ಸೃಷ್ಟಿಸಿದೆ. ಏಳು ಜನರು ಕಣ್ಮರೆಯಾಗಿದ್ದು, ಜನರು ಸಬ್ವೇಗಳಲ್ಲಿ ಸಿಲುಕಿಕೊಂಡಿರುವ ದೃಶ್ಯಗಳು ಕಂಡು ಬಂದಿದೆ.
ರಸ್ತೆಗಳು ನದಿಗಳಾಗಿದ್ದು, ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. 10 ಸಾವಿರಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದ 10 ಟ್ರೈನ್ಗಳು ಕೂಡ ಮಳೆಯಿಂದ ಸ್ಥಗಿತಗೊಂಡಿದ್ದು, ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇಲ್ಲಿನ ಆಸ್ಪತ್ರೆಯೊಳಗೆ ಕೂಡ ನೀರು ನುಗ್ಗಿದ ಪರಿಣಾಮ ರೋಗಿಗಳು ಸಮಸ್ಯೆ ಅನುಭವಿಸಿದ್ದಾರೆ. ಹ್ಯಾಂಡ್ ಪಂಪ್ಡ್ ಏರ್ಬ್ಯಾಗ್ನಿಂದಾಗಿ ರೋಗಿಗಳಿಗೆ ಉಸಿರಾಡಲು ವ್ಯವಸ್ಥೆ ಮಾಡಲಾಗಿದೆ, ಅಲ್ಲದೇ ತಕ್ಷಣಕ್ಕೆ 600ಕ್ಕೂ ಹೆಚ್ಚು ರೋಗಿಗಳನ್ನು ಸ್ಥಳಾಂತರಿಸಲಾಗಿದೆ.
ಅನೇಕ ಸಾಂಸ್ಕೃತಿಕ ತಾಣ ಹೊಂದಿರುವ ಹೆನಾನ್ ಹಳದಿ ನದು ದಂಡೆಯ ಮೇಲಿದೆ, ಉದ್ಯಮ ಮತ್ತು ಕೃಷಿಯ ಪ್ರಮುಖ ಕೇಂದ್ರ ಇದಾಗಿದ್ದು, ಅನೇಕ ಜಲಮಾರ್ಗ ಹೊಂದಿದೆ, ಕಳೆದೊಂದು ದಿನಗಳಿಂದ ಸುರಿದ ಭಾರೀ ಮಳೆಗೆ ಬಹುತೇಕ ಎಲ್ಲಾ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದೆ.
ಇದನ್ನು ಓದಿ: ಕಂಬಳದಲ್ಲಿ ಹಲವು ನಿಯಮಗಳ ಸೇರ್ಪಡೆ; ಏನೆಲ್ಲಾ ಬದಲಾವಣೆ?
ವಿಪರೀತ ಸುರಿದ ಮಳೆಗೆ ನಗರಗಳಲ್ಲಿ ಹೊಳೆಯಂತೆ ನೀರು ಹರಿದಿದೆ. ಇನ್ನು ನೀರಿನ ಮಧ್ಯೆ ಸಿಕ್ಕಿಕೊಂಡ ಜನರನ್ನು ರಕ್ಷಣಾ ತಂಡ ಕಾರ್ಯಚರಣೆ ಮಾಡಿ ಸುರಕ್ಷತ ಸ್ಥಳಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿದೆ
ಸಿಟಿಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಮಳೆಯಿಂದಾಗಿ ರಸ್ತೆಗಳು ಕಣ್ಮರೆಯಾಗಿದೆ. ಮಳೆಯ ಅವಾಂತರದ ಹಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೆಟ್ರೊ ರೈಲಿನ ಒಳಕ್ಕೆ ನೀರು ನುಗ್ಗಿದ್ದು, ಜನರ ಭುಜದಷ್ಟು ಎತ್ತರ ನೀರು ಹರಿಯುವ ದೃಶ್ಯ ವೈರಲ್ ಆಗಿದೆ
ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಚೀನಾದ ದೂರದರ್ಶನದಲ್ಲಿ ಮಾತನಾಡಿದ್ದು, ಪ್ರವಾಹ ತಡೆಗಟ್ಟುವ ಪ್ರಯತ್ನ ಬಹಳ ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ