China: ಟಿವಿಯಲ್ಲಿ ಪುರುಷರನ್ನು ನಿಷೇಧಿಸಿದ ಚೀನಾ- ಹೊಸ ನಿಯಮಗಳನ್ನು ಜಾರಿಗೆ ತಂದ ಕ್ಸಿ ಜಿನ್‌ಪಿಂಗ್ ಸರ್ಕಾರ

China Bans Men From Tv: ಅಧ್ಯಕ್ಷ ಕ್ಸಿ ಜಿನ್‌ಪಿಂಗ್ , ವ್ಯಾಪಾರ, ಶಿಕ್ಷಣ, ಸಂಸ್ಕೃತಿ ಮತ್ತು ಧರ್ಮದ ಮೇಲೆ ಕಮ್ಯುನಿಸ್ಟ್ ಪಕ್ಷದ ಬಿಗಿ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪುನರುಜ್ಜೀವನ ಎಂಬ ಹೆಸರಿನಲ್ಲಿ ಹೊಸ ಆದೇಶಗಳನ್ನು ಜನರ ಮೇಲೆ ಹೇರುತ್ತಿದ್ದಾರೆ.

ಕ್ಸಿ ಜಿನ್‌ಪಿಂಗ್

ಕ್ಸಿ ಜಿನ್‌ಪಿಂಗ್

  • Share this:
ಚೀನಾದ ಸರ್ಕಾರವು ಪುರುಷರು  ಟಿವಿಯಲ್ಲಿ  ಕಾಣಿಸಿಕೊಳ್ಳುವುದನ್ನ ನಿಷೇಧಿಸಿದ್ದು,  ಕ್ರಾಂತಿಕಾರಿ ಸಂಸ್ಕೃತಿಯನ್ನು ಉತ್ತೇಜಿಸಲು ಮಾಧ್ಯಮಗಳಿಗೆ ಆದೇಶಿಸಿದೆ. ವ್ಯಾಪಾರ ಮತ್ತು ಸಮಾಜದ ಮೇಲೆ ನಿಯಂತ್ರಣವನ್ನು ಬಿಗಿಗೊಳಿಸಲು ಮತ್ತು ಅಧಿಕೃತ ನೈತಿಕತೆಯನ್ನು ಜಾರಿಗೊಳಿಸಲು ಚೀನಾ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.  

ಅಧ್ಯಕ್ಷ ಕ್ಸಿ ಜಿನ್‌ಪಿಂಗ್ , ವ್ಯಾಪಾರ, ಶಿಕ್ಷಣ, ಸಂಸ್ಕೃತಿ ಮತ್ತು ಧರ್ಮದ ಮೇಲೆ ಕಮ್ಯುನಿಸ್ಟ್ ಪಕ್ಷದ ಬಿಗಿ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪುನರುಜ್ಜೀವನ ಎಂಬ ಹೆಸರಿನಲ್ಲಿ ಹೊಸ ಆದೇಶಗಳನ್ನು ಜನರ ಮೇಲೆ ಹೇರುತ್ತಿದ್ದಾರೆ. ಇನ್ನು ಚೀನಾದ ಕಂಪನಿಗಳು ಮತ್ತು ಜನರು ಹೆಚ್ಚು ಶಕ್ತಿಶಾಲಿ ಚೀನಾ ಮತ್ತು ಆರೋಗ್ಯಕರ ಸಮಾಜಕ್ಕಾಗಿ ಈ ಯೋಜನೆಗಳನ್ನು ಒಪ್ಪಿಕೊಳ್ಳುವಂತೆ ಮತ್ತು ಅನುಸರಿಸುವಂತೆ ಒತ್ತಡ ಹಾಕಲಾಗುತ್ತಿದೆ.

ಆಡಳಿತ ಪಕ್ಷವು ಮಕ್ಕಳು ಹೆಚ್ಚು ಆನ್​ಲೈನ್ ಆಟಗಳನ್ನು ಆಡದಂತೆ ನಿಷೇಧ ಹೇರಿದೆ.  ಇನ್ನು ಮಾಧ್ಯಮಗಳು ಸಿಸ್ಸಿ ಪುರುಷರು ಮತ್ತು ಇತರ ಅಸಹಜ ಸೌಂದರ್ಯಶಾಸ್ತ್ರವನ್ನು ಬಿಂಬಿಸುವುದನ್ನ  ನಿಲ್ಲಿಸಬೇಕು ಎಂದು ರಾಷ್ಟ್ರೀಯ ರೇಡಿಯೋ ಮತ್ತು ಟಿವಿ ಆಡಳಿತವು ಆದೇಶ ನೀಡಿದೆ.

ಕೆಲವು ದಕ್ಷಿಣ ಕೊರಿಯಾದ ಮತ್ತು ಜಪಾನಿನ ಗಾಯಕರು ಮತ್ತು ನಟರ ಅದ್ಭುತವಾದ ಫ್ಯಾಶನ್ ನೋಟದಿಂದ ಪ್ರಭಾವಿತರಾಗಿರುವ ಚೀನಾದ ಪಾಪ್ ತಾರೆಯರು ಚೀನಾದ ಯುವಕರನ್ನು  ಪುರುಷರ ರೀತಿ ಇರುವ ಹಾಗೆ ಪ್ರೋತ್ಸಾಹಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಚೀನಾ ಆಡಳಿತ ವಾದ.  ಮಾಧ್ಯಮಗಳು  ಸಾಮಾಜಿಕ ಜಾಲಾತಾಣದಲ್ಲಿ ಅಸಭ್ಯವಾಗಿ ವರ್ತಿಸುವ ಸೆಲೆಬ್ರಿಟಿಗಳನ್ನು  ಅವರ ಬಗ್ಗೆ ಹಾಗೂ ಅವರ ಸಂಪತ್ತಿನ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವನ್ನು  ಉತ್ತೇಜಿಸುವುದನ್ನು ತಪ್ಪಿಸಬೇಕು ಎಂದು ಆದೇಶಿಸಲಾಗಿದೆ. ಬದಲಾಗಿ,  ಅತ್ಯುತ್ತಮ ಚೀನೀ ಸಾಂಪ್ರದಾಯಿಕ ಸಂಸ್ಕೃತಿ, ಕ್ರಾಂತಿಕಾರಿ ಸಂಸ್ಕೃತಿ ಮತ್ತು ಮುಂದುವರಿದ ಸಮಾಜವಾದಿ ಸಂಸ್ಕೃತಿಯ ಕುರಿತು ಕಾರ್ಯಕ್ರಮಗಳನ್ನು ಹೆಚ್ಚು ಪ್ರಸಾರ ಮಾಡಬೇಕು. ಎಂದಿದೆ.

ಕ್ಸಿ ಸರ್ಕಾರವು ಚೀನಾದ ಇಂಟರ್ನೆಟ್ ಉದ್ಯಮಗಳ ಮೇಲೆ ಸಹ  ನಿಯಂತ್ರಣವನ್ನು ಬಿಗಿ ಮಾಡುತ್ತಿದೆ. ಆಟಗಳು ಮತ್ತು ಸಾಮಾಜಿಕ ಮಾಧ್ಯಮ ಪೂರೈಕೆದಾರ ಟೆನ್ಸೆಂಟ್ ಹೋಲ್ಡಿಂಗ್ ಮತ್ತು ಇ-ಕಾಮರ್ಸ್ ದೈತ್ಯ ಅಲಿಬಾಬಾ ಗ್ರೂಪ್ ಸೇರಿದಂತೆ ಅನೇಕ  ಕಂಪನಿಗಳ  ಮೇಲೆ ಏಕಸ್ವಾಮ್ಯ ವಿರೋಧಿ, ಡೇಟಾ ಭದ್ರತೆ ಮತ್ತು ಇತರ ಕ್ರಮಗಳನ್ನು ಜಾರಿ ಮಾಡಲು ಸರ್ಕಾರ  ಆರಂಭಿಸಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಇಡಾ ಚಂಡಮಾರುತ ಅಬ್ಬರ; ನ್ಯೂಯಾರ್ಕ್​ನಲ್ಲಿ 41 ಸಾವು

ಬುಧವಾರದಿಂದ ಜಾರಿಗೆ ಬಂದ  ಹೊಸ ನಿಯಮಗಳ ಪ್ರಕಾರ 18ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಾರದಲ್ಲಿ ಮೂರು ಗಂಟೆಗಳವರೆಗೆ ಮಾತ್ರ  ಆನ್‌ಲೈನ್ ಆಟಗಳನ್ನು ಆಡಲು ಅನುಮತಿ ನೀಡಲಾಗಿದೆ ಮತ್ತು ಶಾಲಾ ದಿನಗಳಲ್ಲಿ ಆನ್​ಲೈನ್ ಆಟವಾಡುವುದನ್ನು ನಿಷೇಧ ಮಾಡಲಾಗಿದೆ.  ಗೇಮ್ ಡೆವಲಪರ್‌ಗಳು ಈಗಾಗಲೇ ಹೊಸ  ಆಟಗಳನ್ನು ಬಿಡುಗಡೆ ಮಾಡುವ ಮೊದಲು ಸರ್ಕಾರದ ಅನುಮೋದನೆಗಾಗಿ ಸಲ್ಲಿಸಬೇಕಾಗಿತ್ತು.

ಇನ್ನು  ಸರ್ಕಾರ ಸೆಲೆಬ್ರಿಟಿಗಳ ಮೇಲೆ ಕೂಡ  ನಿಯಂತ್ರಣವನ್ನು ಬಿಗಿ ಮಾಡುತ್ತಿದೆ.  ಮಾಧ್ಯಮಗಳಲ್ಲಿ ಸಾರ್ವಜನಿಕ ಆದೇಶವನ್ನು ಉಲ್ಲಂಘಿಸುವ ಅಥವಾ ನೈತಿಕತೆಯನ್ನು ಕಳೆದುಕೊಂಡ  ಜನರನ್ನು ತೋರಿಸಬಾರದು ಎಂದು ಆದೇಶ ಮಾಡಲಾಗಿದೆ. ಜೊತೆಗೆ ಸೆಲೆಬ್ರಿಟಿಗಳ ಮಕ್ಕಳ ಕುರಿತ ಕಾರ್ಯಕ್ರಮಗಳನ್ನು ಸಹ ನಿಷೇಧಿಸಲಾಗಿದೆ.

ಶನಿವಾರ, ಮೈಕ್ರೋಬ್ಲಾಗ್ ಪ್ಲಾಟ್‌ಫಾರ್ಮ್  ಆದ ವೀಬೋ ಕಾರ್ಪ್  ತನ್ನ ಸಾವಿರಾರು ಫ್ಯಾನ್ಸ್ ಕ್ಲಬ್‌ಗಳು ಮತ್ತು ಮನರಂಜನಾ ಸುದ್ದಿಗಳಿಗಾಗಿ ಇರುವ ಸಾವಿರಾರು ಖಾತೆಗಳನ್ನು ಸ್ಥಗಿತಗೊಳಿಸಿದೆ.

ಜನಪ್ರಿಯ ನಟಿ, ಜಾವೋ ವೇ, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಕಾರಣವನ್ನು ಹೇಳದೆ ಕಣ್ಮರೆಯಾಗಿದ್ದಾರೆ ಮತ್ತು ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಂದ ಆಕೆಯ ಹೆಸರನ್ನು ತೆಗೆದುಹಾಕಲಾಗಿದೆ.
Published by:Sandhya M
First published: