China Bans Taiwan Fruits: ಮತ್ತೆ ತೈವಾನ್​ನಿಂದ ಹಣ್ಣುಗಳ ಅಮದಿಗೆ ನಿರ್ಬಂಧ ಹೇರಿದ ಚೀನಾ..

China And Taiwan: ತೈವಾನ್ , ಮಾವಿನ ಹಣ್ಣುಗಳು ಮಾತ್ರವಲ್ಲದೆ ಸೀತಾಫಲ ಮತ್ತು ಜಾಮೂನು ಹಣ್ಣಿಗೆ ಹೆಸರುವಾಸಿಯಾಗಿದೆ. ಚೀನಾವು ತೈವಾನ್‍ನಿಂದ ಹಣ್ಣುಗಳ ಆಮದಿಗೆ ತಡೆ ಒಡ್ಡುತ್ತಿರುವುದು 2021ರಲ್ಲಿ ಇದು ಎರಡನೆಯ ಸಲ. ತೈವಾನಿನ ಅನನಾಸ್‍ಗಳಿಂದ “ಹಾನಿಕಾರಕ ಕೀಟಗಳು” ಬಂದು ತನ್ನ ಕೃಷಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂಬ ಕಾರಣ ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಕೀಟದ ಸಮಸ್ಯೆಯ ಕಾರಣ ನೀಡಿ, ತೈವಾನ್‍(Taiwan)ನಿಂದ ಅನನಾಸುಗಳನ್ನು ಆಮದು ಮಾಡಿಕೊಳುವುದಕ್ಕೆ ನಿರ್ಬಂಧ ಹೇರಿದ್ದ ಚೀನಾ(China), ಇದೀಗ ಮತ್ತದೇ ಕಾರಣವನ್ನು ನೀಡುವ ಮೂಲಕ ತಾನು ಅಲ್ಲಿಂದ ಸೀತಾ ಫಲ ಹಾಗೂ  ಜಂಬೂ ನೇರಳೆಯ ಆಮದಿಗೂ ನಿರ್ಬಂಧ ಹೇರುವುದಾಗಿ ತಿಳಿಸಿದೆ. ಈ ಸಂಗತಿ, ತೈವಾನ್ ಮತ್ತು ಅದರ ಬಹುಕಾಲದ ವಿರೋಧಿ ಚೀನಾದ ಮಧ್ಯೆ ಮತ್ತೊಂದು ಹಣ್ಣಿನ ಜಗಳಕ್ಕೆ ಕಾರಣವಾಗಿದೆ. ಈ ಕುರಿತು ಬೀಜಿಂಗನ್ನು ವಿಶ್ವ ವ್ಯಾಪಾರ ಸಂಸ್ಥೆಯ ಮುಂದೆ ನಿಲ್ಲಿಸುವುದಾಗಿ ತೈವಾನ್ ಎಚ್ಚರಿಕೆ ನೀಡಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಭಾನುವಾರ ವರದಿ ಮಾಡಿದೆ.


ಆ ವರದಿಯ ಪ್ರಕಾರ, ತೈವಾನ್‍ನಿಂದ ಚೀನಾಗೆ ಆಮದಾಗುವ ಸೀತಾಫಲ ಹಾಗೂ ಜಾಮೂನು ಹಣ್ಣುಗಳಲ್ಲಿ ಪದೇ ಪದೇ “ಪ್ಲನೋಕೋಕಸ್ ಮೈನರ್” ಎಂಬ ಕೀಟಗಳನ್ನು ಪತ್ತೆ ಹಚ್ಚಿರುವುದಾಗಿ ಚೀನಾದ ಕಸ್ಟಮ್ಸ್ ಆಡಳಿತವು ಹೇಳಿದ್ದು, ಸೋಮವಾರದಿಂದ ಈ ಹಣ್ಣುಗಳ ಕಸ್ಟಮ್ಸ್ ಕ್ಲಿಯೆರೆನ್ಸ್ ನಿಲ್ಲಿಸುವಂತೆ, ಅದರ ಅಂಗಸಂಸ್ಥೆಗಳ ಕಚೇರಿಗಳಿಗೆ ತಿಳಿಸಿದೆ. ಆದರೆ ಈ ನಿರ್ಧಾರವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ತೈವಾನ್ ಹೇಳಿದೆ. “ನಾವು ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ” ಎಂದು ತೈವಾನಿನ ಕೃಷಿ ಸಚಿವ ಚೆನ್ ಚಿ-ಚುಂಗ್ ತೇಪೆಯಲ್ಲಿ ಸುದ್ದಿಗಾರರಿಗೆ ತಿಳಿಸಿರುವುದಾಗಿ , ರಾಯಿಟರ್ಸ್ ತನ್ನ ವರದಿಯಲ್ಲಿ ತಿಳಿಸಿದೆ.


“ವೈಜ್ಞಾನಿಕ ಪುರಾವೆಯನ್ನು ನೀಡದೆ” ಚೀನಾವು ಏಕಪಕ್ಷೀಯವಾಗಿ ವರ್ತಿಸಿದೆ ಎಂದು ಚೆನ್ ಹೇಳಿದ್ದಾರೆ.ಪ್ರಸ್ತುತ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಚೌಕಟ್ಟಿನ ಅಡಿಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವ ಮನವಿಗೆ ಚೀನಾವು , ಸೆಪ್ಟೆಂಬರ್ 30 ರ ಒಳಗೆ ಒಪ್ಪದಿದ್ದರೆ, ಈ ವಿವಾದವನ್ನು ಬಗೆಹರಿಸಲು ಚೀನಾವನ್ನು ವಿಶ್ವ ವ್ಯಾಪಾರ ಸಂಸ್ಥೆಗೆ ಕರೆದುಕೊಂಡು ಹೋಗುವುದಾಗಿ ತೈವಾನ್ ಹೇಳಿದೆ ಎಂಬ ಚೆನ್ ಹೇಳಿಕೆಯನ್ನು ವರದಿ ತಿಳಿಸಿದೆ.


ಇದನ್ನೂ ಓದಿ: ಪ್ರವಾಸಿಗರಿಗೆ ಮತ್ತೆ ಬಾಗಿಲು ತೆರೆದ Goa: ಕ್ಯಾಸಿನೋ- ನೈಟ್‌ ಕ್ಲಬ್‌ಗಳು ರೀ ಓಪನ್..!

ಇದೊಂದು ಹಾಸ್ಯವೇ?
ಚೀನಾವು ತೈವಾನನ್ನು ತನ್ನದೇ ಪ್ರಾಂತ್ಯವೆಂದು ಹೇಳಿಕೊಳ್ಳುತ್ತದೆ, ಮತ್ತು ಅವೆರಡರ ನಡುವಿನ ಸಂಬಂಧಗಳು ಪ್ರಸ್ತುತ ಹದಗೆಟ್ಟಿದ್ದು, ತೇಪೆ ತನ್ನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಬೇಕೆಂದು ಚೀನಾವು ರಾಜಕೀಯ ಮತ್ತು ಮಿಲಿಟರಿ ಒತ್ತಡವನ್ನು ಹೆಚ್ಚಿಸುತ್ತಿದೆ ಎಂದು ಹೇಳಲಾಗುತ್ತಿದೆ.


“ಸರಣಿ ಮಿಲಿಟರಿ ಬೆದರಿಕೆಗಳ ಬಳಿಕ #ಪಿಆರ್‍ಸಿ ಯು ತೈವಾನಿನ ಸೀತಾಫಲ ಮತ್ತು ಜಮೂನು ಹಣ್ಣಿನ ಮೇಲೆ ತುರ್ತು ನಿಷೇಧವನ್ನು ಘೋಷಿಸುವ ಮೂಲಕ ವ್ಯಾಪಾರವನ್ನು ಆಯುಧಿಕರಣಗೊಳಿಸುತ್ತಿದೆ.ಈ ಪ್ರತಿಕೂಲ ನಡೆಯು ಅಂತಾರಾಷ್ಟ್ರೀಯ ವ್ಯಾಪಾರ ನಿಯಮಗಳನ್ನು ಉಲ್ಲಂಘಿಸುತ್ತದೆ # ಚೀನಾ ಉನ್ನತ ಗುಣ ಮಟ್ಟದ # ಸಿಪಿಟಿಪಿಪಿಗೆ ಸೇರಲು ಬಯಸುತ್ತದೆ? ಇದು ಒಂದು ಹಾಸ್ಯವೇ?” ಎಂದು ತೈವಾನ್ ವಿದೇಶಾಂಗ ಸಚಿವ ಜೋಸೆಫ್ ವು ಭಾನುವಾರ ಟ್ವೀಟ್ ಮಾಡಿದ್ದಾರೆ.


ತೈವಾನ್ , ಮಾವಿನ ಹಣ್ಣುಗಳು ಮಾತ್ರವಲ್ಲದೆ ಸೀತಾಫಲ ಮತ್ತು ಜಾಮೂನು ಹಣ್ಣಿಗೆ ಹೆಸರುವಾಸಿಯಾಗಿದೆ. ಚೀನಾವು ತೈವಾನ್‍ನಿಂದ ಹಣ್ಣುಗಳ ಆಮದಿಗೆ ತಡೆ ಒಡ್ಡುತ್ತಿರುವುದು 2021ರಲ್ಲಿ ಇದು ಎರಡನೆಯ ಸಲ.
ತೈವಾನಿನ ಅನನಾಸ್‍ಗಳಿಂದ “ಹಾನಿಕಾರಕ ಕೀಟಗಳು” ಬಂದು ತನ್ನ ಕೃಷಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂಬ ಕಾರಣ ನೀಡಿ, ಚೀನಾವು ಈ ವರ್ಷದ ಫೆಬ್ರವರಿ ತಿಂಗಳಲ್ಲಿ ತೈವಾನ್‍ನಿಂದ ಅನನಾಸಿನ ಆಮದಿಗೆ ನಿಷೇಧ ಹೇರಿತ್ತು.


ಇದನ್ನೂ ಓದಿ: ಭಾರತದ ಚಿರಪರಿಚಿತ ಬ್ರ್ಯಾಂಡ್ ದಾವತ್ ಜಾಗತಿಕವಾಗಿ ಖ್ಯಾತಿಗೊಳಗಾಗಿದ್ದು ಹೇಗೆ..? ಇಲ್ಲಿದೆ ವಿವರ...

ತನ್ನ ಅನನಾಸುಗಳಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದ ತೈವಾನ್, ಬೀಜಿಂಗ್ ರಾಜಕೀಯದ ಆಟ ಆಡುತ್ತಿದೆ ಎಂದು ವಾದಿಸಿತ್ತು. ಕಳೆದ ವರ್ಷ ತಾನು 46,000 ಮೆಟ್ರಿಕ್ ಟನ್ ಅನನಾಸ್‍ಗಳನ್ನು ರಫ್ತು ಮಾಡಿದ್ದು, ಅದರಲ್ಲಿ ಶೇಕಡಾ 90 ರಷ್ಟನ್ನು ಚೀನಾಗೆ ರಫ್ತು ಮಾಡಲಾಗಿದೆ ಎಂದು ತೈವಾನ್ ಹೇಳಿದೆ ಎಂದು ಫೆಬ್ರವರಿಯಲ್ಲಿ ರಾಯಿಟರ್ಸ್ ವರದಿ ಮಾಡಿತ್ತು.


Published by:Sandhya M
First published: