• Home
  • »
  • News
  • »
  • national-international
  • »
  • Chinese Coup: ಚೀನಾದಲ್ಲಿ ಮಿಲಿಟರಿ ದಂಗೆ! ಏನಿದು ಕ್ಸಿ ಜಿನ್‌ಪಿಂಗ್ ಗೃಹಬಂಧನದ ವದಂತಿ?

Chinese Coup: ಚೀನಾದಲ್ಲಿ ಮಿಲಿಟರಿ ದಂಗೆ! ಏನಿದು ಕ್ಸಿ ಜಿನ್‌ಪಿಂಗ್ ಗೃಹಬಂಧನದ ವದಂತಿ?

ಚೀನಾದ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಮತ್ತು ಲಿ ಕ್ಷಿಯಾಮಿಂಗ್‌

ಚೀನಾದ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಮತ್ತು ಲಿ ಕ್ಷಿಯಾಮಿಂಗ್‌

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಭುಗಿಲೆದ್ದಿವೆ. ಅದರಲ್ಲೂ ಚೀನಾದ ಇಬ್ಬರು ಮಾಜಿ ಮಂತ್ರಿಗಳಿಗೆ ಭ್ರಷ್ಟಾಚಾರದ ಶಿಕ್ಷೆ ವಿಧಿಸಿದ ಒಂದು ವಾರದ ನಂತರ ದೇಶದಲ್ಲಿ ಸಂಭವನೀಯ ದಂಗೆ ನಡೆಯುತ್ತಿದೆ ಎನ್ನಲಾಗ್ತಿದೆ. ಅಲ್ದೇ ಇದು ರಾಷ್ಟ್ರದ ಇತಿಹಾಸದಲ್ಲಿ ಹೆಚ್ಚು ವಿವಾದಾತ್ಮಕ ನಿರ್ಧಾರವಾಗಿದೆ.

ಮುಂದೆ ಓದಿ ...
  • Share this:

ಜಗತ್ತಿನ ಪ್ರಬಲ ಕಮ್ಯೂನಿಸ್ಟ್‌ ರಾಷ್ಟ್ರ ಚೀನಾದಲ್ಲಿ (China) ದಂಗೆ ಆರಂಭವಾಗಿದೆ ಅನ್ನೋದ್ರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ವದಂತಿಗಳು ಹರಿದಾಡುತ್ತಿದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರು ಮಿಲಿಟರಿ ದಂಗೆಯ ಬೆದರಿಕೆಯಲ್ಲಿದ್ದಾರೆ ಎಂಬುದರ ಬಗ್ಗೆ ಮಾಹಿತಿಗಳು ಹೊರಬೀಳುತ್ತಿವೆ. ಅಲ್ಲದೇ ಚೀನಾದ ಅಧ್ಯಕ್ಷರಾಗಿ ಪ್ರಬಲ ಮಿಲಿಟರಿ ಜನರಲ್‌ ಲಿ ಕ್ಷಿಯಾಮಿಂಗ್‌ (Li Qiaoming) ಅವರನ್ನು ನೇಮಿಸಲು ಸಿದ್ಧತೆ ನಡೆದಿರುವ ಬಗ್ಗೆ ಹೇಳಲಾಗ್ತಿದೆ. ಅಂದಹಾಗೆ ಈಗ ಕೇಳಿ ಬರುತ್ತಿರುವ ಸಂಭವನೀಯ ಚೀನಾ ಹೊಸ ಅಧ್ಯಕ್ಷರ ಹೆಸರು ಲಿ ಕ್ಷಿಯಾಮಿಂಗ್‌ ಅಂತ. ಅವರು ಚೀನಾ ಸೇನೆಯಲ್ಲಿ (Chinese Army) ಮಹತ್ವದ ಸೇವೆ ಸಲ್ಲಿಸಿದ್ದು ಸಾಕಷ್ಟು ಅನುಭವ ಹೊಂದಿದ್ದಾರೆ.


ಯಾರು ಈ ಲಿ ಕ್ಷಿಯಾಮಿಂಗ್?‌
ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ಅತ್ಯಂತ ಹಿರಿಯ ಅಧಿಕಾರಿಗಳಲ್ಲಿ ಒಬ್ಬರಾಗಿರುವ ಲಿ ಕ್ಷಿಯಾಮಿಂಗ್ ಅವರು ಸೆಪ್ಟೆಂಬರ್ 2017 ರಿಂದ ಸೆಪ್ಟೆಂಬರ್ 2022 ರವರೆಗೆ ಉತ್ತರ ಥಿಯೇಟರ್ ಕಮಾಂಡ್‌ನ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ.


ಅಲ್ಲಿನ ಸೇನೆಯ 361 ನೇ ರೆಜಿಮೆಂಟ್‌ನ ಮುಖ್ಯಸ್ಥ, 364 ನೇ ರೆಜಿಮೆಂಟ್‌ನ ಕಮಾಂಡರ್, 124 ನೇ ವಿಭಾಗದ ಸಿಬ್ಬಂದಿ ಮುಖ್ಯಸ್ಥ, 42 ನೇ ಗುಂಪಿನ ಸೈನ್ಯದ ಉಪ ಮುಖ್ಯಸ್ಥ ಮತ್ತು ಹಾಗೂ 42 ನೇ ಸೇನೆಯ 124 ನೇ ವಿಭಾಗದ ಕಮಾಂಡರ್ ಸೇರಿದಂತೆ ಚೀನಾದ ಸೈನ್ಯದಲ್ಲಿ ಲಿ ಕ್ವಿಯಾಮಿಂಗ್ ವಿವಿಧ ಮಹತ್ವದ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ 2017 ರಲ್ಲಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ 19 ನೇ ಕೇಂದ್ರ ಸಮಿತಿಯ ಸದಸ್ಯರಾಗಿ ಲಿ ಕ್ಷಿಯಾಮಿಂಗ್ ಆಯ್ಕೆಯಾದರು.


ಏನಿದು ಕ್ಸಿ ಜಿನ್‌ಪಿಂಗ್ ಗೃಹಬಂಧನದ ವದಂತಿ!
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಭುಗಿಲೆದ್ದಿವೆ. ಅದರಲ್ಲೂ ಚೀನಾದ ಇಬ್ಬರು ಮಾಜಿ ಮಂತ್ರಿಗಳಿಗೆ ಭ್ರಷ್ಟಾಚಾರದ ಶಿಕ್ಷೆ ವಿಧಿಸಿದ ಒಂದು ವಾರದ ನಂತರ ದೇಶದಲ್ಲಿ ಸಂಭವನೀಯ ದಂಗೆ ನಡೆಯುತ್ತಿದೆ ಎನ್ನಲಾಗ್ತಿದೆ. ಅಲ್ದೇ ಇದು ರಾಷ್ಟ್ರದ ಇತಿಹಾಸದಲ್ಲಿ ಹೆಚ್ಚು ವಿವಾದಾತ್ಮಕ ನಿರ್ಧಾರವಾಗಿದೆ.


ಇದನ್ನೂ ಓದಿ: Baba Vanga: ಭಾರತದ ಬಗ್ಗೆ ಬಾಬಾ ವಂಗಾ ಭಯಾನಕ ಭವಿಷ್ಯವಾಣಿ, ದೇಶಾದ್ಯಂತ ಆವರಿಸುತ್ತಾ ಈ ಅಪಾಯ?


ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಪ್ರಕಾರ, ಚೀನಾದ ಅನೇಕ ಕ್ಷೇತ್ರಗಳ ತಜ್ಞರೂ ಸೇರಿದಂತೆ ಬೀಜಿಂಗ್‌ನಲ್ಲಿರುವ ಕ್ಸಿ ಜಿನ್‌ಪಿಂಗ್ ಅವರ ನಿವಾಸದ ಕಡೆಗೆ ಮಿಲಿಟರಿ ಗಸ್ತು ತಿರುಗುತ್ತಿದೆ. ಕ್ಸಿ ಜಿನ್‌ ಪಿಂಗ್‌ ನಿವಾಸದ ಸಮೀಪದಲ್ಲಿ ಸೇನಾ ವಾಹನಗಳು ಸಂಚಾರ ನಡೆಸುತ್ತಿರುವುದು ಕಂಡುಬಂದಿದೆ. ಅಂತಹ ಚಳುವಳಿಗಳ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಆದಾಗ್ಯೂ, ಈ ಬಗ್ಗೆ ಯಾವುದೇ ನಿರ್ದಿಷ್ಟ ದೃಢೀಕರಣ ಹೊರ ಬಿದ್ದಿಲ್ಲ.


9,000 ದೇಶೀಯ ವಿಮಾನಗಳು ರದ್ದು
ಇನ್ನು ಯಾವುದೇ ನಿರ್ದಿಷ್ಟ ಕಾರಣವನ್ನು ನೀಡದೆ ದೇಶವು 9,000 ದೇಶೀಯ ವಿಮಾನಗಳನ್ನು ರದ್ದುಗೊಳಿಸಿದೆ. ಇದನ್ನು ನೋಡಿದರೆ ದಂಗೆಯು ಬಹುತೇಕ ದೃಢಪಟ್ಟಿದೆ ಎಂದು ಚೀನಾದ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ. ಅಲ್ಲದೇ ಮಿಲಿಟರಿ ಮುಖ್ಯಸ್ಥ ಜನರಲ್ ಲಿ ಕ್ವಿಯಾಮಿಂಗ್ ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂದೂ ಸಹ ಕೆಲವರು ಹೇಳಿದ್ದಾರೆ.


ಈ ಮಧ್ಯೆ PLA ಮಿಲಿಟರಿ ವಾಹನಗಳು ಸೆಪ್ಟೆಂಬರ್ 22 ರಂದು ಬೀಜಿಂಗ್‌ಗೆ ಹೋಗುತ್ತವೆ. ಅದಾದ ಬಳಿಕ ಬೀಜಿಂಗ್ ಬಳಿಯ ಹುವಾನ್ಲೈ ಕೌಂಟಿಯಿಂದ ಪ್ರಾರಂಭವಾಗಿ ಮತ್ತು ಹೆಬೈ ಪ್ರಾಂತ್ಯದ ಝಾಂಗ್ಜಿಯಾಕೌ ನಗರದಲ್ಲಿ ಕೊನೆಗೊಳ್ಳುತ್ತದೆ.


ಇದನ್ನೂ ಓದಿ: Traffic Rules Break: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಬ್ರಿಟನ್‌ ದಳಪತಿ, ಖಡಕ್ ತೀರ್ಪು ನೀಡಿದ ನ್ಯಾಯಾಲಯ


ಸಂಪೂರ್ಣ ಮೆರವಣಿಗೆಯು 80 ಕಿ.ಮೀ ಸಂಚರಿಸುತ್ತವೆ. ಈ ಮಧ್ಯೆ ಸಿಸಿಪಿ ವರಿಷ್ಠರು, ಜಿನ್‌ ಪಿಂಗ್‌ ರನ್ನು ಪಿಎಲ್ಎ ಮುಖ್ಯಸ್ಥರನ್ನಾಗಿ ತೆಗೆದುಹಾಕಿದ ನಂತರ ಅವರನ್ನು ಬಂಧಿಸಲಾಯಿತು ಎಂಬ ವದಂತಿಗಳಿವೆ. ಹೀಗಂತ ಜೆನ್ನಿಫರ್‌ ಝೆಂಗ್‌ ಎನ್ನುವವರೊಬ್ಬರು ಟ್ವಿಟ್ಟರ್‌ ಪೋಸ್ಟ್‌ ಮಾಡಿದ್ದಾರೆ.

Published by:Ashwini Prabhu
First published: