Chile Sinkhole: ಪತ್ತೆಯಾಯ್ತು ಬೃಹತ್ ಸಿಂಕ್ ಹೋಲ್! ಇದರ ಸೃಷ್ಟಿಯ ಬಗ್ಗೆ ಶುರುವಾಯ್ತು ತನಿಖೆ

ಈ ಸಿಂಕ್​ಹೋಲ್ ಸರಿಸುಮಾರು 200 ಮೀಟರ್‌ಗಳಷ್ಟು ಆಳವಿದೆ.  ಸಿಂಕ್​ಹೋಲ್​ನ ಕೆಳಭಾಗದಲ್ಲಿ ನಾವು ಯಾವುದೇ ವಸ್ತುವನ್ನು ಪತ್ತೆ ಮಾಡಿಲ್ಲ, ಆದರೆ ಸಾಕಷ್ಟು ನೀರು ಇರುವುದು ಪತ್ತೆಯಾಗಿದೆ ಎಂದು ಏಜೆನ್ಸಿಯ ನಿರ್ದೇಶಕ ಡೇವಿಡ್ ಮಾಂಟೆನೆಗ್ರೊ ತಿಳಿಸಿದ್ದಾರೆ.

ಸಿಂಕ್ ಹೋಲ್

ಸಿಂಕ್ ಹೋಲ್

  • Share this:
    ಜಗತ್ತಿನಲ್ಲಿ ಮನುಷ್ಯ ಎಷ್ಟೇ ಮುಂದುವರೆದರೂ ಒಂದಿಲ್ಲೊಂದು ವಿಸ್ಮಯ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಸದ್ಯ ಚಿಲಿ ದೇಶದಲ್ಲಿ (Mining In Chile) ಗಣಿಗಾರಿಕೆ ಪ್ರದೇಶವೊಂದರಲ್ಲಿ ಬೃಹತ್ ಕುಳಿಯೊಂದು ಪತ್ತೆಯಾಗಿದೆ. ಚಿಲಿ ದೇಶದ ಉತ್ತರ ಭಾಗದಲ್ಲಿರುವ ಗಣಿಗಾರಿಕೆ ಪ್ರದೇಶದಲ್ಲಿ ಕಾಣಿಸಿಕೊಂಡ ಸುಮಾರು 25 ಮೀಟರ್  ವ್ಯಾಸದ ನಿಗೂಢ ಸಿಂಕ್‌ಹೋಲ್ ಬಗ್ಗೆ ತನಿಖೆ ಇದೀಗ ಆರಂಭಗೊಂಡಿದೆ. ಚಿಲಿ ದೇಶದ ರಾಜಧಾನಿ ಸ್ಯಾಂಟಿಯಾಗೊದ ಉತ್ತರಕ್ಕೆ ಸುಮಾರು 665 ಕಿಲೋಮೀಟರ್‌ ದೂರದಲ್ಲಿ ಕೆನಡಾದ ಲುಂಡಿನ್ ಮೈನಿಂಗ್ ತಾಮ್ರದ ಗಣಿ ಇರುವ ಭಾಗದಲ್ಲೇ ಈ ಬೃಹತ್ ಸಿಂಕ್‌ಹೋಲ್‌ (Chile Sinkhole) ಪತ್ತೆಯಾಗಿದೆ. ಸಿಂಕ್​ಹೋಲ್​ನ ವೈಮಾನಿಕ ಚಿತ್ರಗಳನ್ನು ಚಿಲಿಯ ಮಾಧ್ಯಮಗಳು ಬಿತ್ತರಿಸಿವೆ.

    ಭೂವಿಜ್ಞಾನ ಮತ್ತು ಗಣಿಗಾರಿಕೆಯ ರಾಷ್ಟ್ರೀಯ ಸೇವೆ (ಸೆರ್ನಾಜಿಯೊಮಿನ್) ಶನಿವಾರದಂದು ಸಿಂಕ್‌ಹೋಲ್ ಬಗ್ಗೆ ತನಿಖೆ ನಡೆಸಲು ಆ ಪ್ರದೇಶಕ್ಕೆ ವಿಶೇಷ ಸಿಬ್ಬಂದಿಯನ್ನು ಕಳುಹಿಸಿದೆ ಎಂದು ಏಜೆನ್ಸಿಯ ನಿರ್ದೇಶಕ ಡೇವಿಡ್ ಮಾಂಟೆನೆಗ್ರೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.



    ಈ ಸಿಂಕ್​ಹೋಲ್ ಸರಿಸುಮಾರು 200 ಮೀಟರ್‌ಗಳಷ್ಟು ಆಳವಿದೆ.  ಸಿಂಕ್​ಹೋಲ್​ನ ಕೆಳಭಾಗದಲ್ಲಿ ನಾವು ಯಾವುದೇ ವಸ್ತುವನ್ನು ಪತ್ತೆ ಮಾಡಿಲ್ಲ, ಆದರೆ ಸಾಕಷ್ಟು ನೀರು ಇರುವುದು ಪತ್ತೆಯಾಗಿದೆ ಎಂದು ಏಜೆನ್ಸಿಯ ನಿರ್ದೇಶಕ ಡೇವಿಡ್ ಮಾಂಟೆನೆಗ್ರೊ ತಿಳಿಸಿದ್ದಾರೆ. ಸಿಂಕ್‌ಹೋಲ್‌ನ ಸಮೀಪದಲ್ಲಿರುವ ಅಲ್ಕಾಪರ್ರೋಸಾ ಗಣಿಯ ಕೆಲಸದ ಸ್ಥಳದ ಪ್ರವೇಶದ್ವಾರದಿಂದ ಪ್ರದೇಶಗಳನ್ನು ಮುಚ್ಚಲಾಗಿದೆ ಎಂದು ಸೆರ್ನಾಜಿಯೋಮಿನ್ ವರದಿ ಮಾಡಿದೆ.

    ಕಾರ್ಮಿಕರ ಮೇಲೆ ಏನಾದರೂ ಪರಿಣಾಮ ಬೀರುತ್ತಿದೆಯೇ?
    ಸೋಮವಾರ ಮಧ್ಯಾಹ್ನ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಲುಂಡಿನ್ ಮೈನಿಂಗ್​ನಲ್ಲಿ ಪತ್ತೆಯಾದ ಸಿಂಕ್ ಹೋಲ್ ಯಾವುದೇ ಕಾರ್ಮಿಕರು ಅಥವಾ ಸಮುದಾಯದ ಸದಸ್ಯರ ಮೇಲೆ ಪರಿಣಾಮ ಬೀರಿಲ್ಲ ಎಂದು ತಿಳಿಸಿಲಾಗಿದೆ.

    ಹತ್ತಿರ ಜನವಸತಿ ಪ್ರದೇಶ ಇದೆಯೇ?
    ಸಿಂಕ್​ಹೋಲ್​ನಿಂದ ಹತ್ತಿರದ ಮನೆಯು 600 ಮೀಟರ್​ಗಿಂತ ಹೆಚ್ಚು ದೂರದಲ್ಲಿದೆ. ಆದರೆ ಯಾವುದೇ ಜನನಿಬಿಡ ಪ್ರದೇಶ ಅಥವಾ ಸಾರ್ವಜನಿಕ ಸೇವೆಯು ಪೀಡಿತ ವಲಯದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ.

    ಇದನ್ನೂ ಓದಿ: China Taiwan Crisis 2022: ಚೀನಾ-ತೈವಾನ್ ಯುದ್ಧವಾದ್ರೆ ವಿಶ್ವದ ಕಾರು, ಮೊಬೈಲ್ ಕಂಪನಿಗಳಿಗೆ ಕಂಟಕ

    ಸಿಂಕ್ ಹೋಲ್ ಪತ್ತೆಯಾಗಿರುವ ಪ್ರದೇಶದಲ್ಲಿ ಲುಂಡಿನ್ ಮೈನಿಂಗ್ ಸಂಸ್ಥೆಯು 80% ಆಸ್ತಿಯನ್ನು ಹೊಂದಿದೆ. ಉಳಿದ ಪ್ರದೇಶ ಜಪಾನ್‌ನ ಸುಮಿಟೊಮೊ ಕಾರ್ಪೊರೇಶನ್‌ ಬಳಿಯಿದೆ.
    Published by:guruganesh bhat
    First published: