ಪೋಷಕರೇ ಎಚ್ಚರ!; ಕಾರೊಳಗೆ ಆಟವಾಡುವಾಗ ಉಸಿರುಗಟ್ಟಿ ಇಬ್ಬರು ಮಕ್ಕಳು ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ

ಮೊರದಾಬಾದ್​ನಲ್ಲಿ ಮನೆ ಎದುರು ನಿಲ್ಲಿಸಲಾಗಿದ್ದ ಕಾರಿನೊಳಗೆ ಹತ್ತಿದ್ದ ನಾಲ್ಕು ಮಕ್ಕಳು ಕಿಟಕಿ ಕ್ಲೋಸ್ ಮಾಡಿಕೊಂಡು ಆಟವಾಡುತ್ತಿದ್ದರು. ಕಾರಿನ ಕಿಟಕಿ ಮುಚ್ಚಿಕೊಂಡ ಮೇಲೆ ಡೋರ್ ಕೂಡ ಲಾಕ್ ಆಗಿತ್ತು.

news18-kannada
Updated:June 16, 2020, 8:20 AM IST
ಪೋಷಕರೇ ಎಚ್ಚರ!; ಕಾರೊಳಗೆ ಆಟವಾಡುವಾಗ ಉಸಿರುಗಟ್ಟಿ ಇಬ್ಬರು ಮಕ್ಕಳು ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ
ಮೊರಾದಾಬಾದ್​ನಲ್ಲಿ ಮಕ್ಕಳು ಸಿಲುಕಿದ್ದ ಕಾರು
  • Share this:
ನವದೆಹಲಿ (ಜೂ. 16): ಆಟ ಆಡುವ ಉತ್ಸಾಹದಲ್ಲಿ ಕಾರಿನೊಳಗೆ ಸಿಲುಕಿಕೊಂಡು ಇಬ್ಬರು ಮಕ್ಕಳು ದುರಂತವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮೊರದಾಬಾದ್​ನಲ್ಲಿ ನಡೆದಿದೆ. ಕಾರಿನ ಕಿಟಕಿ ಹಾಕಿಕೊಂಡು ಒಳಗೆ ಕುಳಿತು ನಾಲ್ಕು ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ಕಾರಿನ ಡೋರ್ ಕೂಡ ಲಾಕ್ ಆದ ಪರಿಣಾಮ ಉಸಿರುಕಟ್ಟಿ ಮಕ್ಕಳು ಸಾವನ್ನಪ್ಪಿದ್ದಾರೆ.

ಮೊರದಾಬಾದ್​ನ ಮುಂದ ಪಾಂಡೆ ಏರಿಯಾದಲ್ಲಿ ಮನೆ ಎದುರು ನಿಲ್ಲಿಸಲಾಗಿದ್ದ ಕಾರಿನೊಳಗೆ ಹತ್ತಿದ್ದ ನಾಲ್ಕು ಮಕ್ಕಳು ಕಿಟಕಿ ಕ್ಲೋಸ್ ಮಾಡಿಕೊಂಡು ಆಟವಾಡುತ್ತಿದ್ದರು. ಎಲ್ಲರೂ 4ರಿಂದ 7 ವರ್ಷದೊಳಗಿನ ಮಕ್ಕಳಾಗಿದ್ದು, ಕಾರಿನ ಕಿಟಕಿ ಮುಚ್ಚಿಕೊಂಡ ಮೇಲೆ ಡೋರ್ ಕೂಡ ಲಾಕ್ ಆಗಿತ್ತು. ಇದರಿಂದ ಹೊರಗೆ ಬರಲಾಗದೆ ಉಸಿರುಗಟ್ಟಿ ಒದ್ದಾಡಿದ ಮಕ್ಕಳು ಸಹಾಯಕ್ಕಾಗಿ ಕಿರುಚಾಡಿದರೂ ಯಾರಿಗೂ ಕೇಳಿಸಿಲ್ಲ.

ಇದನ್ನೂ ಓದಿ: ಇನ್ಷೂರೆನ್ಸ್ ಹಣಕ್ಕಾಗಿ ಸ್ವಹತ್ಯೆಗೆ ಸ್ಕೆಚ್; ಸಾವಿನ ನಂತರ ಸಂಚು ಬಯಲು

ಸೋಮವಾರ ಬೆಳಗ್ಗೆ 8 ಗಂಟೆಗೆ ಈ ಘಟನೆ ನಡೆದಿದೆ. ಮನೆಯವರಿಗೆ ವಿಷಯ ತಿಳಿಯುವಷ್ಟರಲ್ಲಿ ಮಕ್ಕಳು ಅರೆಪ್ರಜ್ಞಾವಸ್ಥೆಗೆ ತಲುಪಿದ್ದರು. ಪೋಷಕರು ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರು. ಆದರೆ, ನಾಲ್ವರ ಪೈಕಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಇನ್ನಿಬ್ಬರಿಗೆ ಚಿಕಿತ್ಸೆ ಮುಂದುವರಿಯುತ್ತಿದೆ ಎಂದು ಮೊರದಾಬಾದ್ ಎಸ್.ಪಿ. ಅಮಿತ್ ಕುಮಾರ್ ಹೇಳಿದ್ದಾರೆ.
First published: June 16, 2020, 8:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading