ಗುಜರಾತ್: ಅಹಮದಾಬಾದ್ನಲ್ಲಿ (Ahmedabad) ಬುಧವಾರ ನಡೆದ ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವದ ( Pramukh Swami Maharaj Shatabdi Mahotsav) ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದರು. ಸುಮಾರು 600 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಒಂದು ತಿಂಗಳ ಕಾಲ ಉತ್ಸವ ನಡೆಯಲಿದ್ದು, ಡಿಸೆಂಬರ್ 15 ರಿಂದ ಜನವರಿ 15 ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಇನ್ನೂ ಈ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಸುಮಾರು 80,000ಕ್ಕೂ ಹೆಚ್ಚು ಸ್ವಯಂಸೇವಕರು ಮತ್ತು ನೂರಾರು ಸ್ವಾಮಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಮಕ್ಕಳಿಗೆ ಹ್ಯಾಂಡ್ ಶೇಕ್ ಮಾಡಿದ್ದು ಬಹಳ ವಿಶೇಷವಾಗಿತ್ತು. ಇನ್ನೂ ಮೋದಿ ನೋಡಲು ಮಕ್ಕಳು ಮಗಿಬಿದ್ದರು. ಸದ್ಯ ಈ ವಿಡಿಯೋ ಸೋಶಿಯಲ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಐದು ವರ್ಷಗಳ ಅಂತರರಾಷ್ಟ್ರೀಯ ಶತಮಾನೋತ್ಸವ ಸಮಾರಂಭ ಒಂದು ತಿಂಗಳ ಕಾಲ ನಡೆಯಲಿದ್ದು, ನಂತರ ಮುಕ್ತಾಯಗೊಳ್ಳಲಿದೆ. ಜಾಗತಿಕವಾಗಿ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಜೀವನ ಮತ್ತು ಕಾರ್ಯವನ್ನು ಗೌರವಿಸಲಾಗುತ್ತದೆ. ಅವರು ಇತರರ ಸಂತೋಷದಲ್ಲಿ ತಮ್ಮ ಸಂತೋಷವನ್ನು ಕಾಣುತ್ತಿದ್ದರು.
ಸುಮಾರು 600 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮ
ಅಹಮದಾಬಾದ್ನ ಸರ್ದಾರ್ ಪಟೇಲ್ ರಿಂಗ್ ರಸ್ತೆಯ ಉದ್ದ, 600 ಎಕರೆ ಪ್ರದೇಶದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಪ್ರದೇಶ ಗುಜರಾತ್ನ ಆಕರ್ಷಣಿಯ ಕೇಂದ್ರವಾಗಿದೆ. ಹೀಗಾಗಿ ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಆಧ್ಯಾತ್ಮಿಕತೆಯ ವಿವಿಧ ಅಂಶಗಳನ್ನೊಳಗೊಂಡ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ.
ಸದ್ಯ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಎಲ್ಲಾ ವಯಸ್ಸಿನವರಿಗೂ ಪ್ರೇರೇಪಿಸುವುದರ ಜೊತೆಗೆ ಮನರಂಜಿಸಲಾಗುತ್ತಿದೆ. ಈ ಕಾರ್ಯಕ್ರಮ ನಡೆಸಲು 250 ಕ್ಕೂ ಹೆಚ್ಚು ರೈತರು ಮತ್ತು ಬಿಲ್ಡರ್ಗಳು ತಮ್ಮ ಭೂಮಿಯನ್ನು ನೀಡಿದ್ದಾರೆ.
ಮಕ್ಕಳಿಗಾಗಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ
ಕಲಾತ್ಮಕ ದ್ವಾರಗಳು, ಸ್ಪೂರ್ತಿದಾಯಕ ವಸ್ತು ಪ್ರದರ್ಶನಗಳು, ಅಕ್ಷರಧಾಮ ಮಂದಿರದ ದೈತ್ಯ ಪ್ರತಿಕೃತಿ, ಅನನ್ಯ ಬಾಲ ನಗರಿ (ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ) ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು, ವಿಶಾಲವಾದ ಅಸೆಂಬ್ಲಿ, ಕಂಗೊಳಿಸುವ ಲೈಟಿಂಗ್ಸ್, ಧ್ವನಿ ಪ್ರದರ್ಶನ, ಸುಂದರವಾದ ಗಾರ್ಡನ್ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಶೈಕ್ಷಣಿಕ, ವೃತ್ತಿಪರ ಸಮ್ಮೇಳನಗಳು ಹೀಗೆ ನಾನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಭಾರತದ ಶ್ರೇಷ್ಠ ಆಧ್ಯಾತ್ಮಿಕ ಗಣ್ಯರ 28 ಪ್ರತಿಮೆ ಸ್ಥಾಪನೆ
ಈ ಕಾರ್ಯಕ್ರಮಕ್ಕೆ ಆಗಮಿಸಲು ಒಟ್ಟು ಏಳು ದೊಡ್ಡ, ಕಲಾತ್ಮಕ ದ್ವಾರಗಳಿವೆ (ಗೇಟ್ವೇ). ಅದರಲ್ಲಿಯೂ ಮುಖ್ಯ ದ್ವಾರವಾದ ಸಂತ ದ್ವಾರ 380 ಅಡಿ ಉದ್ದ ಮತ್ತು 52 ಅಡಿ ಎತ್ತರವಿದೆ. ಅಲ್ಲದೇ ಈ ದ್ವಾರ ಎಸ್ಪಿ ರಿಂಗ್ ರಸ್ತೆಯಿಂದಲೇ ಕಾಣಿಸುತ್ತದೆ. ಈ ಕಾರ್ಯಕ್ರಮದಲ್ಲಿ ಆದಿ ಶಂಕರಾಚಾರ್ಯ, ಸಂತ ತುಳಸಿದಾಸ್, ಭಗವಾನ್ ಶ್ರೀ ಬುದ್ಧ, ಶ್ರೀ ಮಹಾವೀರ ಸ್ವಾಮಿ, ಸ್ವಾಮಿ ವಿವೇಕಾನಂದ ಸೇರಿದಂತೆ ಭಾರತದ ಕೆಲವು ಶ್ರೇಷ್ಠ ಆಧ್ಯಾತ್ಮಿಕ ಗಣ್ಯರ 28 ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಉಳಿದ ಆರು ದ್ವಾರಗಳು116 ಅಡಿ ಉದ್ದ ಮತ್ತು 38 ಅಡಿ ಎತ್ತರವಿದೆ.
ಅಲ್ಲದೇ 15 ಅಡಿ ಉದ್ದ ಪೀಠದ ಮೇಲೆ ಪ್ರಮುಖ್ ಸ್ವಾಮಿ ಮಹಾರಾಜರ 30 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗಿದ್ದು, ಪ್ರಮುಖ್ ಸ್ವಾಮಿ ಮಹಾರಾಜರ ಜೀವನಶೈಲಿಯನ್ನು ಶಿಲ್ಪಿಯ ಮೇಲೆ ಕೆತ್ತಲಾಗಿದೆ. ಅವರ ಪ್ರತಿಯೊಂದು ಚಿತ್ರಣದ ಮೇಲೂ ಸ್ಫೂರ್ತಿದಾಯಕ ಸಂಗತಿಗಳಿದೆ.
ಇದನ್ನೂ ಓದಿ: Narendra Modi-Deve Gowda: ಮೋದಿ ಭೇಟಿಯಾದ ದೇವೇಗೌಡ! ಹಾಲಿ-ಮಾಜಿ ಪ್ರಧಾನಿಗಳ ಮಾತುಕತೆ ಉದ್ದೇಶವೇನು?
ಸುಮಾರು 17 ಎಕರೆ ಇರುವ ಬಾಲನಗರಿ
ಸುಮಾರು 17 ಎಕರೆ ಇರುವ ಬಾಲನಗರಿಯಲ್ಲಿ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸುಮಾರು 4,500 ಕ್ಕೂ ಹೆಚ್ಚು ಮಕ್ಕಳು ಈ ಕಾಯರ್ಕ್ರದಲ್ಲಿ ಭಾಗವಹಿಸಲಿದ್ದಾರೆ. ಎಲ್ಲಾ ವಯಸ್ಸಿನ ಮಕ್ಕಳಿಗಾಗಿ ನೈತಿಕ ಜೀವನ ಮುಂತಾದ ಮೌಲ್ಯಗಳನ್ನು ಪ್ರೇರೇಪಿಸುವ, ಶೈಕ್ಷಣಿಕ ಪ್ರದರ್ಶನಗಳು ಮತ್ತು ಆಟಗಳನ್ನು ಆಯೋಜಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ