Child Marriage: ಪೋಷಕರ ವಿರೋಧವನ್ನೂ ಲೆಕ್ಕಿಸದೆ 2ನೇ ಮದುವೆಯಾದ ಬಾಲಕಿಗೆ ಹೈಕೋರ್ಟ್​ ತರಾಟೆ

Child Marriage: ಎರಡನೇ ಬಾರಿ ಮದುವೆಯಾದ 16 ವರ್ಷದ ಬಾಲಕಿಯ ಪ್ರಕರಣವೊಂದು ಹರಿಯಾಣದಲ್ಲಿ ಬೆಳಕಿಗೆ ಬಂದಿದ್ದು, ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಅಪ್ರಾಪ್ತೆಯನ್ನು ಕೇರ್​ ಹೋಂಗೆ ಕಳುಹಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದಲ್ಲಿ ಮಹಿಳೆ ಕನಿಷ್ಠ 18 ವರ್ಷ ದಾಟುವವರೆಗೆ ಮದುವೆ ಆಗುವ ಹಾಗಿಲ್ಲ. ಹಾಗೆ, ಪುರುಷ ಸಹ 21 ವರ್ಷವಾದ ಬಳಿಕವೇ ವಿವಾಹವಾಗಬಹುದು. ಆದರೆ, 16 ವರ್ಷಕ್ಕೆ ಎರಡು ಮದುವೆಯಾದ ಬಾಲಕಿಯ ಪ್ರಕರಣವೊಂದು ಬಯಲಾಗಿದ್ದು, ಈ ಸಂಬಂಧ ಹೈಕೋರ್ಟ್‌ ಅಪ್ರಾಪ್ತೆಯ ರಕ್ಷಣೆಗೆ ನಿಂತಿದೆ. ಎರಡನೇ ಬಾರಿಗೆ ಮದುವೆಯಾದ 16 ವರ್ಷದ ಬಾಲಕಿಯ ಪ್ರಕರಣವೊಂದು ಹರಿಯಾಣದಲ್ಲಿ ಬೆಳಕಿಗೆ ಬಂದಿದ್ದು, ಈ ಪ್ರಕರಣದ ರಕ್ಷಣಾ ಅರ್ಜಿಯನ್ನು ಕೈಗೆತ್ತಿಕೊಂಡ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಅಪ್ರಾಪ್ತೆ ಅರ್ಜಿದಾರಳನ್ನು ಆಕೆಯ ನಿವಾಸಕ್ಕೆ ಸಮೀಪದಲ್ಲಿರುವ ನಾರಿ ನಿಕೇತನ್‌ನಲ್ಲಿ ದಾಖಲಿಸುವಂತೆ ನಿರ್ದೇಶಿಸಿದೆ.

ತಮ್ಮ ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದೇವೆ. ತಮಗೆ ಜೀವ ಮತ್ತು ಸ್ವಾತಂತ್ರ್ಯದ ರಕ್ಷಣೆ ಬೇಕು ಎಂದು ಅರ್ಜಿದಾರ ದಂಪತಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಮೊರೆ ಹೋಗಿದ್ದರು.

ಈ ಸಂಬಂಧ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ವಿಚಾರಣೆ ನಡೆಸಿದ್ದು, ವಿಚಾರಣೆಯ ಸಮಯದಲ್ಲಿ ಈ ಬಾಲಕಿಗೆ (ಅರ್ಜಿದಾರ) 16 ವರ್ಷ ಎಂದು ಹೇಳಲಾಗಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಸುಧೀರ್ ಮಿತ್ತಲ್ ಅವರ ನ್ಯಾಯಪೀಠದ ಗಮನಕ್ಕೆ ಬಂದಿತು. ಈ ಹಿನ್ನೆಲೆ ''ಈ ಮದುವೆಯನ್ನು (ಇದನ್ನು ಮದುವೆ ಎಂದು ಕರೆಯಬಹುದಾದರೆ) ಆಕೆಯ ಎರಡನೇ ಮದುವೆ ಎಂದು ಸಹ ಗಮನಿಸಲಾಗಿದೆ. ಅಪ್ರಾಪ್ತ ವಯಸ್ಕಳಾಗಿರುವುದರಿಂದ, ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ರ ಸೆಕ್ಷನ್ 12 ರಲ್ಲಿರುವ ನಿಷೇಧವನ್ನು ಆಕರ್ಷಿಸಲಾಗುವುದು ಮತ್ತು ಮುಸ್ಲಿಂ ಹುಡುಗಿಯ ಎರಡನೇ ವಿವಾಹವು ಅನೂರ್ಜಿತವಾಗಿದೆ'' ಎಂಬ ಅಂಶವನ್ನು ನ್ಯಾಯಮೂರ್ತಿ ಸುಧೀರ್ ಮಿತ್ತಲ್ ಹೇಳಿದರು.

ಇದನ್ನೂ ಓದಿ: Amazon: ಕನ್ನಡ ಧ್ವಜದ ಚಿತ್ರವಿರುವ ಬಿಕಿನಿ ಸೇಲ್​ಗಿಟ್ಟ ಅಮೇಜಾನ್!; ಗೂಗಲ್ ಬಳಿಕ Amazonನಿಂದಲೂ ಕನ್ನಡಕ್ಕೆ ಅವಮಾನ

ಇನ್ನು, ಹರಿಯಾಣ ರಾಜ್ಯಕ್ಕೆ ನೋಟಿಸ್ ನೀಡಿದ ಹೈಕೋರ್ಟ್‌ ಬಾಲಕಿಯನ್ನು ವಶಕ್ಕೆ ತೆಗೆದುಕೊಂಡು ಆಕೆಯ ನಿವಾಸಕ್ಕೆ ಸಮೀಪದಲ್ಲಿರುವ ನಾರಿ ನಿಕೇತನ್‌ನಲ್ಲಿ ದಾಖಲಿಸುವಂತೆ ನಿರ್ದೇಶನ ನೀಡಿತು.

ಅಲ್ಲದೆ, “ನಾರಿ ನಿಕೇತನ್‌ನಲ್ಲಿರುವಾಗ, ಅವಳನ್ನು ಅರ್ಜಿದಾರರ ಸಂಖ್ಯೆ 1 (ಅನೂರ್ಜಿತಗೊಂಡ ಮದುವೆಯ ಪತಿ) ಮತ್ತು ಇಬ್ಬರೂ ಪೋಷಕರು / ಸಂಬಂಧಿಕರ ಸಮ್ಮುಖದಲ್ಲಿ ಕೌನ್ಸೆಲಿಂಗ್ ನಡೆಸಬೇಕು. ಮತ್ತು ಮುಂದಿನ ವರದಿಯ ವಿಚಾರಣೆಯ ದಿನಾಂಕದಂದು ( ಜುಲೈ 23 ) ಅಥವಾ ಮೊದಲು ಈ ನ್ಯಾಯಾಲಯಕ್ಕೆ ಕಳುಹಿಸಬೇಕು'' ಎಂದು ನ್ಯಾಯಪೀಠ ಹರಿಯಾಣ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಈ ಮಧ್ಯೆ, ಇಬ್ಬರೂ ಅರ್ಜಿದಾರರ ಜೀವನ ಮತ್ತು ಸ್ವಾತಂತ್ರ್ಯಕ್ಕೆ ಯಾವುದೇ ಹಾನಿ ಬರದಂತೆ ನೋಡಿಕೊಳ್ಳಬೇಕು” ಎಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಪೀಠ ಹರಿಯಾಣ ಸರ್ಕಾರಕ್ಕೆ ಸೂಚನೆ ನೀಡಿದೆ.
Published by:Sushma Chakre
First published: