• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • CBI Director: ಸಿಬಿಐ ಅಧ್ಯಕ್ಷರ ಆಯ್ಕೆಗೆ ಪ್ರಧಾನಿ ನಿವಾಸದಲ್ಲಿ ಉನ್ನತಾಧಿಕಾರ ಸಮಿತಿ ಸಭೆ; ಸುಪ್ರೀಂಕೋರ್ಟ್ ಸಿಜೆಐ ಭಾಗಿ

CBI Director: ಸಿಬಿಐ ಅಧ್ಯಕ್ಷರ ಆಯ್ಕೆಗೆ ಪ್ರಧಾನಿ ನಿವಾಸದಲ್ಲಿ ಉನ್ನತಾಧಿಕಾರ ಸಮಿತಿ ಸಭೆ; ಸುಪ್ರೀಂಕೋರ್ಟ್ ಸಿಜೆಐ ಭಾಗಿ

ಪ್ರಧಾನಿ ಮೋದಿ

ಪ್ರಧಾನಿ ಮೋದಿ

ಪ್ರಸ್ತುತ, ಗುಜರಾತ್ ಕೇಡರ್​ನ 1988ರ ಬ್ಯಾಚಿನ ಅಧಿಕಾರಿ ಪ್ರವೀಣ್ ಸಿನ್ಹಾ ಅವರು ಸಿಬಿಐ ಹಂಗಾಮಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅತ್ಯುನ್ನತ ಅಧಿಕಾರದ ಸಮಿತಿ ಮುಂದಿನ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡುವವರೆಗೆ ಸಿಬಿಐ ಹೆಚ್ಚುವರಿ ನಿರ್ದೇಶಕರಾದ ಪ್ರವೀಣ್ ಸಿನ್ಹಾ ಅವರೇ ಹಂಗಾಮಿ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ.

ಮುಂದೆ ಓದಿ ...
 • Share this:

  ನವದೆಹಲಿ: ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಮುಂದಿನ ನಿರ್ದೇಶಕ ಆಯ್ಕೆ ಸಮಿತಿ ಸಭೆಯಲ್ಲಿ ಭಾಗವಹಿಸಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಪ್ರಧಾನಿ ಮೋದಿ ಅವರು ನಿವಾಸಕ್ಕೆ ತೆರಳಿದರು. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ. ವಿಪಕ್ಷ ನಾಯಕ ಅದೀರ್ ರಂಜನ್ ಚೌಧರಿ ಅವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮತ್ತು ಮುಖ್ಯ ನ್ಯಾಯಮೂರ್ತಿ ಅವರು (1984-87) ನಾಲ್ಕು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಮುಂದಿನ ಸಿಬಿಐ ನಿರ್ದೇಶಕರನ್ನಾಗಿ ಪರಿಗಣಿಸುತ್ತಾರೆ.

   1984ರ ಬ್ಯಾಚಿನ ಅಸ್ಸಾಂ- ಮೇಘಾಲಯ ಕೇಡರ್​ನ ಐಪಿಎಸ್ ಅಧಿಕಾರಿ ಮತ್ತು ಎನ್​ಐಎ ಪ್ರಧಾನ ನಿರ್ದೇಶಕರಾದ ವೈಸಿ ಮೋದಿ, ಗುಜರಾತ್ ಕೇಡರ್​ನ ಐಪಿಎಸ್ ಅಧಿಕಾರಿ ಹಾಗೂ ಬಾರ್ಡರ್ ಸೆಕ್ಯುರಿಟಿ ಫೋರ್ಟ್ ಪ್ರಧಾನ ನಿರ್ದೇಶಕರಾದ ರಾಏಶ್ ಅಸ್ತಾನಾ, ಮತ್ತು ಹರಿಯಾಣ ಕೇಡರ್​ನ ಐಪಿಎಸ್ ಅಧಿಕಾರಿ ಮತ್ತು ಇಂಡೋ- ಟಿಬೆಟಿಯನ್ ಬಾರ್ಡರ್ ಪೊಲೀಸ್ ಪ್ರಧಾನ ನಿರ್ದೇಶಕ ಎಸ್​ಎಸ್ ದೇಸ್ವಾಲ್ ಅವರು ಸೇರಿದಂತೆ ಹಲವು ಐಪಿಎಸ್​ ಅಧಿಕಾರಿಗಳ ಹೆಸರು ಮುಂದಿನ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಬಲವಾಗಿ ಕೇಳಿಬರುತ್ತಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ.


  ಸಿಬಿಐ ನಿರ್ದೇಶಕ ಸ್ಥಾನಕ್ಕೆ 12 ಐಪಿಎಸ್ ಅಧಿಕಾರಿಗಳ ಹೆಸರು ಕೇಳಿಬರುತ್ತಿದೆ. ಇದರಲ್ಲಿ ಕೇರಳ ಪೊಲೀಸ್ ಪ್ರಧಾನ ನಿರ್ದೇಶಕರಾದ ಲೋಕನಾಥ್ ಬೆಹರ್, ಹಾಗೂ ಗುಜರಾತ್ ಎಸಿಬಿ ಮುಖ್ಯಸ್ಥರಾದ ಕೇಶವ್ ಕುಮಾರ್ ಅವರ ಹೆಸರು ರೇಸ್​ನಲ್ಲಿದೆ. ಸುಮಾರು ನಾಲ್ಕು ತಿಂಗಳು ವಿಳಂಬದ ನಂತರ ಸಭೆ ನಡೆಯಲಿದ್ದು, 1984-87 ಬ್ಯಾಚ್‌ಗಳಿಂದ 100 ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳನ್ನು ಸಮಿತಿ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಪರಿಗಣಿಸಿ, ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಲಿದೆ.


  ಇದನ್ನು ಓದಿ: Amphotericin B:19,420 ವಯಲ್ಸ್ ಎಂಫೋಟೆರಿಸಿನ್-ಬಿ ಹಂಚಿಕೆ, ಮೇ ಒಳಗೆ 3.63 ಲಕ್ಷ ವಯಲ್ಸ್ ಆಮದಿಗೆ ಕ್ರಮ: ಕೇಂದ್ರ ಸಚಿವ ಸದಾನಂದ ಗೌಡ


  ವರದಿಗಳ ಪ್ರಕಾರ, ಹಿರಿತನ, ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರ ನಿಗ್ರಹ ಪ್ರಕರಣ ತನಿಖೆಯ ಅನುಭವದ ಆಧಾರದ ಮೇಲೆ ಸಿಬಿಐ ನಿರ್ದೇಶಕರನ್ನು ಉನ್ನತಾಧಿಕಾರ ಹೊಂದಿರುವ ಸಮಿತಿ ಆಯ್ಕೆ ಮಾಡುತ್ತದೆ. ಈ ನಾಲ್ಕು ಬ್ಯಾಚ್​​ಗಳಲ್ಲಿ (1984- 87) ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.


  ಸಿಬಿಐ ನಿರ್ದೇಶಕರಾಗಿ ಆಯ್ಕೆಯಾಗುವ ಅಧಿಕಾರಿ ಎರಡು ವರ್ಷಗಳಿಗಿಂತ ಕಡಿಮೆ ಇಲ್ಲದ ಹಾಗೆ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಸಿಬಿಐ ನಿರ್ದೇಶಕ ಸ್ಥಾನದಿಂದ ರಿಶಿ ಕುಮಾರ್ ಶುಕ್ಲಾ ಅವರ ಅಧಿಕಾರ ಅವಧಿ ಫೆಬ್ರವರಿ 3ರಂದು ಮುಕ್ತಾಯಗೊಂಡಿದ್ದು, ಆ ಸ್ಥಾನದಲ್ಲಿ ಪ್ರಸ್ತುತ, ಗುಜರಾತ್ ಕೇಡರ್​ನ 1988ರ ಬ್ಯಾಚಿನ ಅಧಿಕಾರಿ ಪ್ರವೀಣ್ ಸಿನ್ಹಾ ಅವರು ಸಿಬಿಐ ಹಂಗಾಮಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅತ್ಯುನ್ನತ ಅಧಿಕಾರದ ಸಮಿತಿ ಮುಂದಿನ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡುವವರೆಗೆ ಸಿಬಿಐ ಹೆಚ್ಚುವರಿ ನಿರ್ದೇಶಕರಾದ ಪ್ರವೀಣ್ ಸಿನ್ಹಾ ಅವರೇ ಹಂಗಾಮಿ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ.

  Published by:HR Ramesh
  First published: