ಅನಾರೋಗ್ಯ ಹಿನ್ನೆಲೆ ಪಿ. ಚಿದಂಬರಂ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿ ವಜಾ

ಹೈದ್ರಾಬಾದ್​ನಲ್ಲಿರುವ ಏಷಿಯನ್​ ಇನ್ಸ್​ಟ್ಯೂಟ್​ ಆಫ್​ ಗ್ಯಾಸ್ಟ್ರೋಲಾಜಿಯಲ್ಲಿ ತಮ್ಮನ್ನು ಪರೀಕ್ಷಿಸುವ ವೈದ್ಯರ ಬಳಿ ಆರೋಗ್ಯ ತಪಾಸಣೆ ನಡೆಸಲು ಆರು ದಿನ ಕಾಲಾವಕಾಶ ನೀಡಬೇಕು ಎಂದು ಚಿದಂಬರಂ ಮಧ್ಯಂತರ ಅರ್ಜಿ ಸಿಲ್ಲಿಸಿದ್ದರು.

Seema.R
Updated:October 30, 2019, 5:04 PM IST
ಅನಾರೋಗ್ಯ ಹಿನ್ನೆಲೆ ಪಿ. ಚಿದಂಬರಂ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿ ವಜಾ
ಪಿ. ಚಿದಂಬರಂ
  • Share this:
ನವದೆಹಲಿ (ಅ.30): ಅನಾರೋಗ್ಯದ ಹಿನ್ನೆಲೆ ತಮಗೆ ಜಾಮೀನು ನೀಡಬೇಕು ಎಂದು ಐಎನ್​ಎಕ್ಸ್​ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಪಿ ಚಿದಂಬರಂ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದೆ.

ಜಾಮೀನು ಅರ್ಜಿ ತಿರಸ್ಕರದ ಜೊತೆ ಅವರನ್ನು ಮತ್ತೆ 14 ದಿನಗಳ ಕಾಲ ಅಂದರೆ, ನ.13ರವರೆಗೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಮಾಡಿದೆ,

ಜಾಮೀನು ಕೋರಿ ಚಿದಂಬರಂ ಪರ ಹಿರಿಯ ವಕೀಲ ಕಪಿಲ್​ ಸಿಬಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು​​, ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾ. ಡಿಎನ್​ ಪಟೇಲ್​ ಮತ್ತು ನ್ಯಾ. ಸಿ ಹರಿಶಂಕರ್​ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಅರ್ಜಿಯನ್ನು ತಳ್ಳಿಹಾಕಿದೆ.

ಹೈದ್ರಾಬಾದ್​ನಲ್ಲಿರುವ ಏಷಿಯನ್​ ಇನ್ಸ್​ಟ್ಯೂಟ್​ ಆಫ್​ ಗ್ಯಾಸ್ಟ್ರೋಲಾಜಿಯಲ್ಲಿ ತಮ್ಮನ್ನು ಪರೀಕ್ಷಿಸುವ ವೈದ್ಯರ ಬಳಿ ಆರೋಗ್ಯ ತಪಾಸಣೆ ನಡೆಸಲು ಆರು ದಿನ ಕಾಲಾವಕಾಶ ನೀಡಬೇಕು ಎಂದು ಚಿದಂಬರಂ ಮಧ್ಯಂತರ ಅರ್ಜಿ ಸಿಲ್ಲಿಸಿದ್ದರು.

ಅಲ್ಲದೇ  ತಾವು ಹೊಟ್ಟೆ ನೋವಿನಿಂದ ಬಳಲುತ್ತಿದ್ದು ತಮಗೆ ತುರ್ತು ಚಿಕಿತ್ಸೆ ಅವಶ್ಯಕತೆ ಇದೆ. 2017ರಲ್ಲಿ ತಾವು ಕ್ರೋನ್ಸ್​ ಕಾಯಿಲೆಗೆ ತುತ್ತಾಗಿದ್ದಾಗಿ ತಿಳಿಸಿದ್ದಾರೆ. ಕ್ರೋನ್ಸ್​ ಕಾಯಿಲೆಯಿಂದ ಜೀರ್ಣಾಂಗವ್ಯೂಹದ ಅತಿಸಾರ, ಹೊಟ್ಟೆ ನೋವು, ತೂಕ ನಷ್ಟವಾಗುತ್ತದೆ.

ಇದನ್ನು ಓದಿ: ನೀರಿನ ರಕ್ಷಣೆ ಮಾಡದಿದ್ದರೆ ಚೆನ್ನೈ, ಬೆಂಗಳೂರು ಆಫ್ರಿಕಾದ ಕೇಪ್​ ಟೌನ್​ ಆಗುವುದರಲ್ಲಿ ಅನುಮಾನವಿಲ್ಲ; ಸಚಿವ ಗಜೇಂದ್ರ ಸಿಂಗ್

ಇನ್ನು ಈ ಹೊಟ್ಟೆ ನೋವು ಸಂಬಂಧ ಅ.7ರಂದು ದೆಹಲಿ ಏಮ್ಸ್​ಗೆ ದಾಖಲಾಗಿದ್ದ ಅವರಿಗೆ ಕೇವಲ ಆ್ಯಂಟಿಬಯೋಟಿಕ್​ ಹಾಗೂ ನೋವು ನಿವಾರಕ ಮಾತ್ರೆ ನೀಡಲಾಗಿತ್ತು. ಇದಾದ ಬಳಿಕ ಅ.22, 23ರಂದು ಮತ್ತೆ ಏಮ್ಸ್​ನಲ್ಲಿ ಪರೀಕ್ಷೆಗೆ ಒಳಪಟ್ಟ ಅವರಿಗೆ ಮಾತ್ರೆ ಬದಲಾವಣೆ ಮಾಡಲಾಯಿತಾದರೂ, ಹೊಟ್ಟೆ ನೋವು ಕಡಿಮೆಯಾಗಿಲ್ಲ ಎಂದಿದ್ದಾರೆ.
First published:October 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading