ಜಾಮೀನಿಗಾಗಿ ಸುಪ್ರೀಂ ಕದ ತಟ್ಟಲಿರುವ ಪಿ. ಚಿದಂಬರಂ; ಸಿಜೆಐ ರಂಜನ್​ ಗೊಗೋಯ್​ ನಿರ್ಧಾರದಲ್ಲಿ ಅಡಗಿದೆ ಭವಿಷ್ಯ

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ವಿದೇಶಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪಕ್ಕೆ ಒಳಗಾಗಿದ್ದ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಕಳೆದ ಆಗಸ್ಟ್. 21 ರಂದು ಅವರ ಜೋರ್ ಬಾಗ್ ನಿವಾಸದಿಂದ ಬಂಧಿಸಿದ್ದರು. ಅಲ್ಲದೆ, ಅಕ್ಟೋಬರ್ 3 ರಿಂದ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಅವರನ್ನು ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ಬಂಧನಕ್ಕೊಳಪಡಿಸಲಾಗಿದೆ.

MAshok Kumar | news18-kannada
Updated:October 3, 2019, 12:34 PM IST
ಜಾಮೀನಿಗಾಗಿ ಸುಪ್ರೀಂ ಕದ ತಟ್ಟಲಿರುವ ಪಿ. ಚಿದಂಬರಂ; ಸಿಜೆಐ ರಂಜನ್​ ಗೊಗೋಯ್​ ನಿರ್ಧಾರದಲ್ಲಿ ಅಡಗಿದೆ ಭವಿಷ್ಯ
ಪ್ರಾತಿನಿಧಿಕ ಚಿತ್ರ.
MAshok Kumar | news18-kannada
Updated: October 3, 2019, 12:34 PM IST
ನವ ದೆಹಲಿ (ಅಕ್ಟೋಬರ್ 03); ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಜಾಮೀನು ಕೋರಿ ಇಂದು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಿದ್ದಾರೆ. ಚಿದಂಬರಂ ಬಿಡುಗಡೆಯಾದರೆ ಸಾಕ್ಷಿಗಳ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ದೆಹಲಿ ಹೈಕೋರ್ಟ್ ಕಳೆದ ವಾರ ಅವರ ರಾಜೀನಾಮೆ ಅರ್ಜಿಯನ್ನು ನಿರಾಕರಿಸಿತ್ತು. ಇದಾದ ಒಂದು ವಾರದ ಬಳಿಕ ಮಾಜಿ ಸಚಿವರು ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ

ಪಿ. ಚಿದಂಬರಂ ಅವರಿಗೆ ಜಾಮೀನು ಕೋರಿ ಸುಪ್ರೀಂ ಗೆ ಅರ್ಜಿ ಸಲ್ಲಿಸುವ ಮುನ್ನವೇ ಅವರ ಪರ ವಕೀಲರಾದ ಕಪಿಲ್ ಸಿಬಲ್ ಈ ಕುರಿತು ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಎದುರು ಇಂದೇ ಈ ಕುರಿತು ವಿಚಾರಣೆ ನಡೆಸುವಂತೆಯೂ ವಿಷಯ ಪ್ರಸ್ತಾಪಿಸಿದ್ದಾರೆ. ಆದರೆ, ಈ ವಿಚಾರವನ್ನು ಸುಪ್ರೀಂ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಅವರ ಎದುರೆ ಪ್ರಸ್ತಾಪಿಸಬೇಕು ಎಂದು ಅವರು ನಿರ್ದೇಶಿಸಿದ್ದಾರೆ ಎಂದು ತಿಳಿದುಬಂದಿದೆ.

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ವಿದೇಶಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪಕ್ಕೆ ಒಳಗಾಗಿದ್ದ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಕಳೆದ ಆಗಸ್ಟ್. 21 ರಂದು ಅವರ ಜೋರ್ ಬಾಗ್ ನಿವಾಸದಿಂದ ಬಂಧಿಸಿದ್ದರು. ಅಲ್ಲದೆ, ಅಕ್ಟೋಬರ್ 3 ರಿಂದ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಅವರನ್ನು ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ಬಂಧನಕ್ಕೊಳಪಡಿಸಲಾಗಿದೆ.

2007 ರಲ್ಲಿ ಚಿದಂಬರಂ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ 305 ಕೋಟಿ ರೂ.ಗಳ ವಿದೇಶಿ ಹಣವನ್ನು ಐಎನ್ಎಕ್ಸ್ ಮೀಡಿಯಾ ಸಮೂಹ ಪಡೆಯಲು ಅಕ್ರಮವಾಗಿ ಎಫ್ಐಪಿಬಿ ಕ್ಲಿಯರೆನ್ಸ್​ ನೀಡಿದ ಆರೋಪದ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) 2017 ರ ಮೇ 15 ರಂದು ಪಿ. ಚಿದಂಬರಂ ವಿರುದ್ಧ ಎಫ್ಐಆರ್ ದಾಖಲಿಸಿತ್ತು.

ಈ ಹಿನ್ನೆಲೆಯಲ್ಲಿ ಮನಿ ಲಾಂಡರಿಂಗ್ ಆರೋಪದ ಮೇಲೆ 2017ರಲ್ಲಿ ಜಾರಿ ನಿರ್ದೇಶನಾಲಯದ ಸಹ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಹೀಗಾಗಿ ಚಿದಂಬರಂ ಅವರನ್ನು “ಆರ್ಥಿಕ ಅಪರಾಧಗಳ ಘೊರ ಅಪರಾಧಿ” ಎಂದು ನ್ಯಾಯಾಲಯದ ಎದುರು ವಾದ ಮಂಡಿಸಿದ್ದ ಸಿಬಿಐ ಅವರ ಜಾಮೀನು ಅರ್ಜಿಗೆ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ.

ಆದರೆ, ಪಿ. ಚಿದಂಬರಂ ಅವರ ಬಂಧನವನ್ನು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ಅಲ್ಲದೆ, ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಭಿ ಆಜಾದ್ ಸೇರಿದಂತೆ ಅನೇಕರು ಇತ್ತೀಚೆಗೆ ತಿಹಾರ್ ಜೈಲಿಗೆ ಹೋಗಿ ಚಿದಂಬರಂ ಅವರನ್ನು ಭೇಟಿ ಮಾಡಿದ್ದಾರೆ.

ಇದನ್ನೂ ಓದಿ : ಶಿಫಾರಸ್ಸುಗಳನ್ನು ಒಪ್ಪಿಕೊಳ್ಳುವುದು ಅಪರಾಧವೇ? ಚಿದಂಬರಂ ಬಂಧನದ ವಿರುದ್ಧ ಮತ್ತೆ ಧ್ವನಿ ಎತ್ತಿದ ಮನಮೋಹನ್​ ಸಿಂಗ್​
Loading...

First published:October 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...