ಜೈಲಿನಲ್ಲಿರುವ ಪಿ.ಚಿದಂಬರಂಗೆ ಜನ್ಮದಿನದ ಶುಭಾಶಯ ಕೋರಿ ಪತ್ರ ಬರೆದು, ಊರಿಗೆ ಕಳುಹಿಸಿದ ಪ್ರಧಾನಿ ಮೋದಿ!

ಪ್ರಧಾನಿ ಮೋದಿ ಶುಭಾಶಯ ಪತ್ರವನ್ನು ನೋಡಿ ನನಗೆ ನಿಜಕ್ಕೂ ಅಚ್ಚರಿಯಾಯಿತು ಎಂದು ತಮಿಳಿನಲ್ಲಿ ಅವರಿಗೆ ಶುಭಕೋರಿ ಬರೆದಿರುವ ಪತ್ರವನ್ನು ಟ್ವೀಟ್​ ಮಾಡಿರುವ ಅವರು ಪ್ರಧಾನಿ ವಿರುದ್ಧ ತಣ್ಣಗೆ ಹರಿಹಾಯ್ದಿದ್ದಾರೆ.

Seema.R | news18-kannada
Updated:September 24, 2019, 9:28 PM IST
ಜೈಲಿನಲ್ಲಿರುವ ಪಿ.ಚಿದಂಬರಂಗೆ ಜನ್ಮದಿನದ ಶುಭಾಶಯ ಕೋರಿ ಪತ್ರ ಬರೆದು, ಊರಿಗೆ ಕಳುಹಿಸಿದ ಪ್ರಧಾನಿ ಮೋದಿ!
ಚಿದಂಬರಂ ಅವರನ್ನು ತಿಹಾರ್ ಜೈಲಿಗೆ ಕರೆದೊಯ್ಯುತ್ತಿರುವುದು.
  • Share this:
ನವದೆಹಲಿ (ಸೆ.24): ಐಎನ್​ಎಕ್ಸ್​ ಪ್ರಕರಣದಲ್ಲಿ ತಿಹಾರ್​ ಜೈಲಿನಲ್ಲಿರುವ ಪಿ ಚಿದಂಬರಂ ಕಳೆದ ವಾರವಷ್ಟೇ 74ನೇ ವಸಂತಕ್ಕೆ ಕಾಲಿರಿಸಿದ್ದರು. ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿ ಪ್ರಧಾನಿ ನರೇಂದ್ರ ಮೋದಿ ಚಿದಂಬರಂ ಅವರ ಗ್ರಾಮಕ್ಕೆ ಶುಭಾಶಯ ಪತ್ರ ಕೂಡ ರವಾನಿಸಿದ್ದರು. ಈ ಪತ್ರ ಈಗ ನೇರವಾಗಿ ತಿಹಾರ್​ ಜೈಲಿಗೆ ರವಾನೆಯಾಗಿದ್ದು, ಇದನ್ನು ತಮ್ಮ ಖಾತೆಯಲ್ಲಿ ಮಾಜಿ ಗೃಹ ಸಚಿವರು ಟ್ವೀಟ್​ ಮಾಡಿದ್ದಾರೆ.

ಪ್ರಧಾನಿ ಮೋದಿ ಶುಭಾಶಯ ಪತ್ರವನ್ನು ನೋಡಿ ನನಗೆ ನಿಜಕ್ಕೂ ಅಚ್ಚರಿಯಾಯಿತು ಎಂದು ತಮಿಳಿನಲ್ಲಿ ಅವರಿಗೆ ಶುಭಕೋರಿ ಬರೆದಿರುವ ಪತ್ರವನ್ನು ಟ್ವೀಟ್​ ಮಾಡಿರುವ ಅವರು ಪ್ರಧಾನಿ ವಿರುದ್ಧ ತಣ್ಣಗೆ ಹರಿಹಾಯ್ದಿದ್ದಾರೆ.ಜನರ ಸೇವೆಯನ್ನು ಹೀಗೆ ಮುಂದುವರೆಸುವಂತೆ ನೀವು ಪತ್ರದಲ್ಲಿ ಆಶಿಸಿದ್ದೀರಾ. ದುರಾದೃಷ್ಟವಶಾತ್​ ನಿಮ್ಮ ತನಿಖಾ ಸಂಸ್ಥೆಗಳು ಇದರಿಂದ ನನ್ನನ್ನು ತಡೆ ಹಿಡಿದಿದ್ದಾರೆ. ಈ ದೌರ್ಜನ್ಯ ಮುಗಿದ ಬಳಿಕ ನಾನು ಜನರ ಬಳಿ ಹಾಗೂ ನಿಮ್ಮ ಬಳಿ ಮರಳುತ್ತೇನೆ. ನಾನು ಜನಸೇವೆಗೆ ಬದ್ಧನಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.ಸೆಪ್ಟೆಂಬರ್​ 5ರಂದು ಚಿದಂಬರಂ 74ನೇ ಜನ್ಮದಿನಕ್ಕೆ ಕಾಲಿರಿಸಿದ್ದರು. ಈ ವೆಳೆ ಅವರು ಏಷ್ಯಾದ ಅತಿದೊಡ್ಡ ಜೈಲಾದ ತಿಹಾರ್​ ಜೈಲಿನಲ್ಲಿದ್ದರು.

ಇದನ್ನು ಓದಿ: ಶಿಫಾರಸ್ಸುಗಳನ್ನು ಒಪ್ಪಿಕೊಳ್ಳುವುದು ಅಪರಾಧವೇ? ಚಿದಂಬರಂ ಬಂಧನದ ವಿರುದ್ಧ ಮತ್ತೆ ಧ್ವನಿ ಎತ್ತಿದ ಮನಮೋಹನ್​ ಸಿಂಗ್

ಜೈಲಿನಲ್ಲಿದ್ದರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿದಂಬರಂ ಕ್ರಿಯಾಶೀಲರಾಗಿದ್ದಾರೆ. ಅವರ ಕುಟುಂಬದ ಸದಸ್ಯರಿಂದ ತಮ್ಮ ಟ್ವೀಟರ್​ ಖಾತೆಯನ್ನು ನಿರ್ವಹಿಸುತ್ತಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಹೌಡಿ ಮೋದಿ ಕಾರ್ಯಕ್ರಮದ ಬಗ್ಗೆ ಟೀಕಿಸಿದ್ದ ಅವರು, ಹೌಡಿ ಮೋದಿ ಎಂದು ನನ್ನನ್ನು ಕೇಳಿದರೆ, ನಿರುದ್ಯೋಗ, ಕಡಿಮೆ ವೇತನ, ಸಾಮೂಹಿಕ ಹಲ್ಲೆ, ಕಾಶ್ಮೀರದಲ್ಲಿ ವಿಪಕ್ಷ ನಾಯಕರ ಬಂಧನದ ಹೊರತಾಗಿ ಭಾರತದಲ್ಲಿ ಎಲ್ಲವೂ ಸರಿಯಿದೆ ಎಂದು ಟ್ವೀಟ್​ ಮಾಡಿದ್ದರು.

First published:September 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading