‘ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ’ – ಭಾರತೀಯ ಸೇನಾ ಮುಖ್ಯಸ್ಥರಿಗೆ ಪಿ. ಚಿದಂಬರಮ್ ಕಿವಿಮಾತು

ಸೇನಾ ಮುಖ್ಯಸ್ಥರ ಬಗ್ಗೆ ಚಿದಂಬರಮ್ ವ್ಯಕ್ತಪಡಿಸಿದ ಆಕ್ಷೇಪಕ್ಕೆ ಸಿಪಿಐಎಂ ಮುಖಂಡ ಸೀತಾರಾಮ್ ಯೆಚೂರಿ ಧ್ವನಿಗೂಡಿಸಿದರು. ಸೇನೆಗೆ ರಾಜಕೀಯ ಬಣ್ಣ ಅಂಟುಕೊಳ್ಳುವುದು ಮುಂದುವರಿದರೆ ದೇಶದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ ಎಂದು ಸೀತಾರಾಮ್ ಯೆಚೂರಿ ಎಚ್ಚರಿಕೆ ನೀಡಿದರು.

news18
Updated:December 28, 2019, 6:31 PM IST
‘ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ’ – ಭಾರತೀಯ ಸೇನಾ ಮುಖ್ಯಸ್ಥರಿಗೆ ಪಿ. ಚಿದಂಬರಮ್ ಕಿವಿಮಾತು
ಪಿ. ಚಿದಂಬರಂ
  • News18
  • Last Updated: December 28, 2019, 6:31 PM IST
  • Share this:
ತಿರುವನಂತಪುರಂ(ಡಿ. 28): ಪ್ರತಿಭಟನೆಯ ಹೆಸರಲ್ಲಿ ಜನರು ಹಿಂಸಾಕೃತ್ಯ ಎಸಗಲು ಪ್ರಚೋದಿಸುತ್ತಿರುವುದನ್ನು ಖಂಡಿಸಿರುವ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ವಿರುದ್ಧ ಪಿ. ಚಿದಂಬರಮ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ಧಾರೆ. ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ ಎಂದು ಮಾಜಿ ಗೃಹ ಸಚಿವರು ಕಿಡಿ ಕಾರಿದ್ಧಾರೆ.

ಪೌರತ್ವ ಕಾಯ್ದೆ ವಿರೋಧಿಸಿ ಜನರು ನಡೆಸುತ್ತಿರುವ ಪ್ರತಿಭಟನೆ ವೇಳೆ ಹಿಂಸಾಚಾರ ಘಟನೆಗಳು ನಡೆಯುತ್ತಿರುವುದಕ್ಕೆ ಜನರಲ್ ಬಿಪಿನ್ ರಾವತ್ ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರತಿಭಟನಾಕಾರರು ಹಿಂಸಾಚಾರಕ್ಕೆ ಇಳಿಯುವಂತೆ ಕೆಲವರು ಪ್ರಚೋದಿಸುತ್ತಿದ್ದಾರೆ. ಈ ರೀತಿ ಮಾಡುವವರು ನಾಯಕರೆನಿಸುವುದಿಲ್ಲ. ಪ್ರತಿಭಟನೆಗಳನ್ನು ಮಾಡಿರಿ. ಆದರೆ, ಜನರು ಲೂಟಿ, ದಂಗೆ ನಡೆಸುವಂತೆ ಪ್ರಚೋದಿಸಬೇಡಿ ಎಂದು ಸೇನಾ ಮುಖ್ಯಸ್ಥರು ಹೇಳಿದ್ದರು.

ಇದನ್ನೂ ಓದಿ: ನೋಟ್​ಬ್ಯಾನ್​ಗಿಂತಲೂ ಭೀಕರವಾಗಿರುತ್ತದೆ ಎನ್ಆರ್​ಸಿ: ರಾಹುಲ್ ಗಾಂಧಿ

ಕೇರಳ ಕಾಂಗ್ರೆಸ್ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಪಿ. ಚಿದಂಬರಮ್ ಅವರು, ಸೇನಾ ಮುಖ್ಯಸ್ಥರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು. ಪೌರತ್ವ ಕಾಯ್ದೆ ವಿಚಾರದಲ್ಲಿ ಸರ್ಕಾರದ ನಿಲುವಿನ ಪರವಾಗಿ ಸೇನಾ ಮುಖ್ಯಸ್ಥರು ಮತ್ತು ಉ.ಪ್ರ. ಡಿಜಿಪಿ ಅವರನ್ನು ಬಳಸಿಕೊಳ್ಳಲಾಗುತ್ತಿರುವುದಕ್ಕೆ ವಿಷಾದಿಸಿದ ಚಿದಂಬರಮ್, ಇದು ನಾಚಿಕೆಗೇಡಿನ ವಿಚಾರ ಎಂದು ಖೇದ ವ್ಯಕ್ತಪಡಿಸಿದರು.

ಸೇನಾ ಮುಖ್ಯಸ್ಥರ ಬಗ್ಗೆ ಚಿದಂಬರಮ್ ವ್ಯಕ್ತಪಡಿಸಿದ ಆಕ್ಷೇಪಕ್ಕೆ ಸಿಪಿಐಎಂ ಮುಖಂಡ ಸೀತಾರಾಮ್ ಯೆಚೂರಿ ಧ್ವನಿಗೂಡಿಸಿದರು. ಸೇನೆಗೆ ರಾಜಕೀಯ ಬಣ್ಣ ಅಂಟುಕೊಳ್ಳುವುದು ಮುಂದುವರಿದರೆ ದೇಶದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ ಎಂದವರು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಸೋಮಾಲಿಯಾದಲ್ಲಿ ಭೀಕರ ಬಾಂಬ್​ ಸ್ಪೋಟ: 70ಕ್ಕೂ ಹೆಚ್ಚು ಸಾವು

“ಪ್ರತಿಭಟನೆಗಳು ಹಿಂಸಾರೂಪಿಯಾಗಿವೆ ಎಂಬುದು ಸರ್ಕಾರದ ಆರೋಪ. ಪ್ರಧಾನಿಯವರು ಅದನ್ನು ಹೇಳಿದ್ದಾರೆ. ಸೇನಾ ಮುಖ್ಯಸ್ಥರೂ ಅದನ್ನೇ ಹೇಳಿದ್ಧಾರೆ. ಸೇನಾ ಮುಖ್ಯಸ್ಥರಿಗೆ ಆಂತರಿಕ ರಾಜಕಾರಣದ ಉಸಾಬರಿ ಯಾಕೆ? ಸ್ವತಂತ್ರ ಭಾರತದಲ್ಲಿ ಸೇನಾ ಮುಖ್ಯಸ್ಥರೊಬ್ಬರು ಆಂತರಿಕ ರಾಜಕಾರಣದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದ್ದು ಇದೇ ಮೊದಲ ಬಾರಿ” ಎಂದು ಯೆಚೂರಿ ವಿವರಿಸಿದರು.“ಸೇನಾ ಪಡೆಯ ರಾಜಕೀಯಗೊಳಿಸಲಾಗುತ್ತಿದೆ. ಇದು ಹೀಗೇ ಮುಂದುವರಿದರೆ ಪಾಕಿಸ್ತಾನದ ಪರಿಸ್ಥಿತಿ ಭಾರತಕ್ಕೂ ಬರುತ್ತದೆ. ಸರ್ಕಾರ ಈ ಎಚ್ಚರಿಕೆಗೆ ಕಿವಿಗೊಡಬೇಕು” ಎಂದು ಯೆಚೂರಿ ಆಗ್ರಹಪಡಿಸಿದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ