ಮುಂಬೈ (ಆಗಸ್ಟ್ 26): ದಾವೂದ್ ಇಬ್ರಾಹಿಂ ಕರಾಚಿಯಲ್ಲಿರುವುದಾಗಿ ಪಾಕಿಸ್ತಾನ ಒಪ್ಪಿಕೊಂಡಿತ್ತು. ಅಷ್ಟೇ ಅಲ್ಲ, ಆತನ ವಿಳಾಸವನ್ನು ಕೂಡ ಬಹಿರಂಗ ಮಾಡಿತ್ತು. ಆದರೆ ದಾವೂದ್ ಕರಾಚಿಯಲ್ಲಿದ್ದಾನೆ ಎನ್ನುವ ವಿಚಾರವನ್ನು ಆತನ ಆಪ್ತ ಛೋಟಾ ಶಕೀಲ್ ಅಲ್ಲ ಗಳೆದಿದ್ದಾನೆ.
ಸಿಎನ್ಎನ್-ನ್ಯೂಸ್18 ಜೊತೆ ದೂರವಾಣಿ ಕರೆ ಮೂಲಕ ಛೋಟಾ ಶಕೀಲ್ ಮಾತನಾಡಿದ್ದಾನೆ. ಈ ವೇಳೆ ದಾವೂದ್ ಕರಾಚಿಯಲ್ಲಿರುವ ವಿಚಾರ ಸುಳ್ಳು ಎಂದು ಹೇಳಿದ್ದಾನೆ. ಪಾಕಿಸ್ತಾನ ದಾವೂದ್ ವಿಳಾಸ ಬಹಿರಂಗ ಮಾಡಿದ ವಿಚಾರದ ಬಗ್ಗೆ ಮಾತನಾಡಿದ ಛೋಟಾ ಶಕೀಲ್, ದಾವೂದ್ ಕಂಪನಿಯವರು ಯಾರಿಗೂ ಉತ್ತರ ಕೊಡುವ ಅಗತ್ಯ ಇಲ್ಲ. ಕರಾಚಿಯಲ್ಲಿ ನಾವು ಇಲ್ಲ. ನಾವು ಪಾಕಿಸ್ತಾನ ಸರ್ಕಾರಕ್ಕೂ ಉತ್ತರ ಕೊಡಬೇಕಿಲ್ಲ ಎಂದು ಹೇಳಿದ್ದಾನೆ.
ಇದನ್ನೂ ಓದಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಿವಾಸದ ವಿಳಾಸ ಬಹಿರಂಗ ಮಾಡಿದ ಪಾಕಿಸ್ತಾನ!
ಇದು ಸೋಷಿಯಲ್ ಮೀಡಿಯಾ ಕಾಲ. ನೀವು ಒಂದು ಬಂಗಲೆ ತೋರಿಸಿ ಇದು ದಾವೂದ್ ಇಬ್ರಾಹಿಂಗೆ ಸೇರಿದ್ದು ಎಂದರೆ ಜನ ನಂಬುತ್ತಾರೆ. ನೀವು ಹಾಗೆ ತೋರಿಸೋಕೆ ಯಾವುದೇ ನಿರ್ಬಂಧ ಇಲ್ಲ ಎಂದಿದ್ದಾನೆ.
ದಾವೂದ್ ಇಬ್ರಾಹಿಂ ಸಾಕಷ್ಟು ಅಕ್ರಮ ದಂದೆಗಳನ್ನು ನಡೆಸುತ್ತಿದ್ದಾನೆ. 1993ರಲ್ಲಿ ನಡೆದ ಮುಂಬೈ ಬಾಂಬ್ ದಾಳಿಗೆ ಈತನೇ ಮಾಸ್ಟರ್ ಮೈಂಡ್. ಈ ಘಟನೆ ನಡೆದ ನಂತರದಲ್ಲಿ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳ ಸಾಲಿಗೆ ದಾವೂದ್ ಸೇರಿದ್ದ. ಈಗ ಇದೇ ಮೊದಲ ಬಾರಿಗೆ ದಾವೂದ್ ಪಾಕಿಸ್ತಾನದಲ್ಲಿರುವುದಾಗಿ ಅಧಿಕಾರಿಗಳು ಒಪ್ಪಿಕೊಂಡಿದ್ದರು. ಅಷ್ಟೇ ಅಲ್ಲ, ಆತನ ನಿವಾಸದ ವಿಳಾಸ ಕೂಡ ಬಹಿರಂಗ ಮಾಡಿದ್ದರು. ಆದರೆ, ಈ ವಿಳಾಸ ಸುಳ್ಳು ಎಂಬುದಾಗಿ ಛೋಟಾ ಶಕೀಲ್ ಹೇಳಿಕೊಂಡಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ