ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಛತ್ತೀಸ್​ಗಢದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ ನಿಧನ

ಹುಟ್ಟೂರಾದ ಗೌರೆಲ್ಲಾದಲ್ಲಿ ತಂದೆಯವರ ಅಂತಿಮ ವಿಧಿ ವಿಧಾನ ಪ್ರಕ್ರಿಯೆಗಳು ನಡೆಯಲಿವೆ ಎಂದು ಮಗ ಅಮಿತ್ ಜೋಗಿ ಅವರು ತಿಳಿಸಿದ್ದಾರೆ.

news18-kannada
Updated:May 29, 2020, 4:49 PM IST
ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಛತ್ತೀಸ್​ಗಢದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ ನಿಧನ
ಅಜಿತ್ ಜೋಗಿ
  • Share this:
ಛತ್ತೀಸ್​ಗಢದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ ಅವರು ಶುಕ್ರವಾರ ಮಧ್ಯಾಹ್ನ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 74 ವರ್ಷದ ಅಜಿತ್ ಜೋಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ತಿಳಿಸಿದ್ದಾರೆ.

ಅಜಿತ್ ಜೋಗಿ ಅವರ ಮಗ ಅಮಿತ್ ಜೋಗಿ ಅವರು ನಿಧನ ಸುದ್ದಿಯನ್ನು ಅಧಿಕೃತವಾಗಿ ಟ್ವಿಟ್​ ಸಹ ಮಾಡಿದ್ದಾರೆ. 

ಅಜಿತ್ ಜೋಗಿ ಅವರು ಛತ್ತೀಸ್​ಗಢ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದರು. ಹೃದಯ ಹಾಗೂ ಉಸಿರಾಟದ ಸಮಸ್ಯೆಯಿಂದಾಗಿ ಅಜಿತ್ ಜೋಗಿ ಅವರು ಮೇ 9ರಂದು ರಾಯ್​ಪುರದ ಶ್ರೀ ನಾರಾಯಣ ಆಸ್ಪತ್ರೆಗೆ ದಾಖಲಾಗಿದ್ದರು. ಹುಟ್ಟೂರಾದ ಗೌರೆಲ್ಲಾದಲ್ಲಿ ತಂದೆಯವರ ಅಂತಿಮ ವಿಧಿ ವಿಧಾನ ಪ್ರಕ್ರಿಯೆಗಳು ನಡೆಯಲಿವೆ ಎಂದು ಮಗ ಅಮಿತ್ ಜೋಗಿ ಅವರು ತಿಳಿಸಿದ್ದಾರೆ.
First published: May 29, 2020, 4:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading