Crime News: 5 ವರ್ಷದ ಮಗುವನ್ನು ಕಾಲುವೆಗೆಸೆದ ಮಹಿಳೆ, ಕಂದನ ಪ್ರಾಣ ಕಾಪಾಡಿದ ಯುವಕ!

ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರು 5 ವರ್ಷದ ಬಾಲಕಿಯನ್ನು ಕಾಲುವೆಗೆ ಎಸೆದು ಓಡಿ ಹೋಗಿದ್ದಾರೆ. ಅದೃಷ್ಟವಶಾತ್ ಸ್ಥಳದಲ್ಲಿದ್ದ ಯುವಕ ಬಾಲಕಿಯನ್ನು ರಕ್ಷಿಸಿದ್ದಾನೆ. ಬಳಿಕ ಜನರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇ ವೇಳೆ ಬಾಲಕಿಯನ್ನು ಕಾಲುವೆಗೆ ಎಸೆದ ಮಹಿಳೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇದೇ ವೇಳೆ ಬಾಲಕಿಯನ್ನು ಚೈಲ್ಡ್‌ಲೈನ್‌ಗೆ ಸೇರಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸದ್ಯ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಲುವೆಯಿಂದ ರಕ್ಷಿಸಲ್ಪಟ್ಟ ಮಗು

ಕಾಲುವೆಯಿಂದ ರಕ್ಷಿಸಲ್ಪಟ್ಟ ಮಗು

  • Share this:
ರಾಯ್ಪುರ(ಸೆ.06): ಛತ್ತೀಸ್‌ಗಢದ (Chhattisgarh) ಮುಂಗೇಲಿ ಜಿಲ್ಲೆಯ ಲೋರ್ಮಿ ಪ್ರದೇಶದಲ್ಲಿ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಡೀ ಘಟನೆಯು ಲೋರ್ಮಿಯ ಖಮ್ಹಿ ಗ್ರಾಮದಲ್ಲಿ ನಡೆದಿದೆ. ಮಹಿಳೆಯೊಬ್ಬರು 4-5 ವರ್ಷದ ಅಮಾಯಕ ಮಗುವನ್ನು ಕಾಲುವೆಗೆ ಎಸೆದಿದ್ದಾರೆ. ನಿರ್ದಯಿ ಮಹಿಳೆ ಹರಿಯುವ ಕಾಲುವೆಗೆ ಬಾಲಕಿಯನ್ನು ಎಸೆದು ಓಡಿ ಹೋಗಿದ್ದಾಳೆ. ಆದರೆ ಇದೇ ವೇಳೆ ಅಲ್ಲಿದ್ದ ಯುವಕನೊಬ್ಬ ಅಮಾಯಕ ಬಾಲಕಿಯನ್ನು ಸುರಕ್ಷಿತವಾಗಿ ಕಾಲುವೆಯಿಂದ ಹೊರಕ್ಕೆ ತಂದಿದ್ದಾನೆ. ಇದಾದ ನಂತರ ಲೋರ್ಮಿ ಪೊಲೀಸರಿಗೆ (Police)ಮಾಹಿತಿ ನೀಡಲಾಯಿತು. ಅಲ್ಲದೆ, ಆಂಬ್ಯುಲೆನ್ಸ್ ಸಹಾಯದಿಂದ ಬಾಲಕಿಯನ್ನು ಲೋರ್ಮಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಮಗುವಿನ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ವೈದ್ಯರ ಪ್ರಕಾರ, ಬಾಲಕಿ ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲವಾಗಿದ್ದಾಳೆ ಎನ್ನಲಾಗಿದೆ. ಪ್ರಸ್ತುತ, ಉತ್ತಮ ಆರೋಗ್ಯ ಸೌಲಭ್ಯಗಳಿಗಾಗಿ ಬಾಲಕಿಯನ್ನು ಮುಂಗೇಲಿಗೆ ಶಿಫಾರಸು ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಅದೇ ಸಮಯದಲ್ಲಿ, ಲೋರ್ಮಿ ಪೊಲೀಸರು ಸುತ್ತಮುತ್ತಲಿನ ಜನರನ್ನು ವಿಚಾರಣೆ ಮಾಡುವಲ್ಲಿ ನಿರತರಾಗಿದ್ದಾರೆ ಮತ್ತು ಆರೋಪಿ ಮಹಿಳೆಯನ್ನು ಹುಡುಕುತ್ತಿದ್ದಾರೆ.

ಇದನ್ನೂ ಓದಿ: ತಂದೆ & ಆತನ ಜೊತೆಗಿದ್ದ ಮಹಿಳೆಯನ್ನು ಕೊಚ್ಚಿ ಕೊಲೆಗೈದ ಮಗ..!

ಅದೇ ಸಮಯದಲ್ಲಿ, ಈ ಘಟನೆಯಿಂದ ಹಲವಾರು ಪ್ರಶ್ನೆಗಳು ಸಹ ಉದ್ಭವಿಸುತ್ತವೆ. ಅಷ್ಟಕ್ಕೂ ಮಹಿಳೆ ಯಾವ ಕಾರಣಕ್ಕೆ ಅಮಾಯಕ ಬಾಲಕಿಯನ್ನು ಕಾಲುವೆಗೆ ಎಸೆದು ಸಾಯಿಸಲು ಯತ್ನಿಸಿದ್ದಾಳೆ ಎಂಬ ತನಿಖೆಯೂ ಆರಂಭಿಸಲಾಗಿದೆ. ಇನ್ನು ಮಗುವನ್ನು ಕಾಲುವೆಗೆ ಎಸೆದಾಕೆ ಆಕೆಯ ತಾಯಿ ಆಗಿರಬಹುದೇ ಎಂಬ ಅನುಮಾನವೂ ಎದ್ದಿದೆ.

ಮಹಿಳೆ ಸಿಕ್ಕಿಬಿದ್ದ ನಂತರವಷ್ಟೇ ಈ ಎಲ್ಲಾ ವಿಚಾರಗಳು ಬಹಿರಂಗಗೊಳ್ಳಲಿವೆ. ಸದ್ಯ ಪೊಲೀಸರು ತನಿಖೆಯಲ್ಲಿ ತೊಡಗಿದ್ದಾರೆ. ಬಾಲಕಿಗೆ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂದು ಮಕ್ಕಳ ತಜ್ಞ ಡಾ.ಪ್ರದೀಪ್ ಜೈಸ್ವಾಲ್ ತಿಳಿಸಿದ್ದಾರೆ. ಅಲ್ಲದೆ, ಬಾಲಕಿ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಮಗುವಿಗೆ ಯಾರೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಚೈಲ್ಡ್‌ಲೈನ್‌ನೊಂದಿಗೆ ಮಾತನಾಡಲಾಗುತ್ತಿದೆ. ಇದರಿಂದ ಸೂಕ್ತ ಸಹಾಯ ಪಡೆಯಬಹುದು ಎಂದಿದ್ದಾರೆ.

ಮಾಟಗಾರನ ಮಾತು ನಂಬಿ ಮಗುವನ್ನೇ ಕೊಂದ ತಾಯಿ!

ಮಾಟಗಾರನ ಮಾತುಗಳನ್ನು ನಂಬಿ ತಾಯಿಯೊಬ್ಬಳು ತನ್ನ ಮಗುವಿಗೆ ಚಾಕು ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ಸೂರ್ಯಪೇಟೆಯಲ್ಲಿ ನಡೆದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗೃಹಿಣಿಯ ಬರ್ಬರ ಕೊಲೆ; ಗಂಡನನ್ನು ವಶಕ್ಕೆ ಪಡೆದ ಪೊಲೀಸರು!

ಸೂರ್ಯಪೇಟೆ ಜಿಲ್ಲೆಯ ಮೋಥೆ ಮಂಡಲ ಮೇಕಲಪತಿತನಂದ ನಿವಾಸಿ ಬನೊತು ಭಾರತಿ ಮಾಟಮಂತ್ರ ನಂಬಿ ತನ್ನ ಆರು ತಿಂಗಳ ಮಗುವನ್ನೇ ಕೊಂದವಳು. ಇವಳು ನಕಲಿ ಬಾಬನೊಬ್ಬ ಹೇಳಿದ್ದ ಸುಳ್ಳನ್ನು ನಂಬಿ, ತನ್ನ ಪತಿ ಮನೆಯಲ್ಲಿ ಇಲ್ಲದ ವೇಳೆ ಈ ಕೃತ್ಯ ಎಸಗಿದ್ದಾಳೆ.


ಈ ಕುರಿತು ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಭಾರತಿ ಕಳೆದ ಕೆಲವು ದಿನಗಳಿಂದ ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿದ್ದಾಳೆ. ಆರು ತಿಂಗಳಿಂದ ನಕಲಿ ಬಾಬ ಹೇಳಿದ ಹಾಗೆಯೇ ಪೂಜೆ ಮಾಡುತ್ತಿದ್ದಳು ಎಂದು ತಿಳಿಸಿದರು.

Published by:Precilla Olivia Dias
First published: