• Home
 • »
 • News
 • »
 • national-international
 • »
 • ಬೈಕ್​ನಲ್ಲಿ ಕಪ್ಪುಹಲಗೆ ಇಟ್ಟುಕೊಂಡು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಹೋಗಿ ಪಾಠ ಮಾಡ್ತಿದ್ದಾರೆ ಈ ಶಿಕ್ಷಕ

ಬೈಕ್​ನಲ್ಲಿ ಕಪ್ಪುಹಲಗೆ ಇಟ್ಟುಕೊಂಡು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಹೋಗಿ ಪಾಠ ಮಾಡ್ತಿದ್ದಾರೆ ಈ ಶಿಕ್ಷಕ

ಶಿಕ್ಷಕ ರುದ್ರ ರಾಣಾ

ಶಿಕ್ಷಕ ರುದ್ರ ರಾಣಾ

ಕೋವಿಡ್​-19ನಿಂದ ಶಾಲೆಗಳು ಮುಚ್ಚಿದ್ದು, ಅನೇಕ ವಿದ್ಯಾರ್ಥಿಗಳಿಗೆ ಆನ್​ಲೈನ್ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇಂಟರ್​ನೆಟ್​ ಸಮಸ್ಯೆಯಿಂದಾಗಿ ಕೆಲವು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತೆರಳಿ ಶಿಕ್ಷಣ ಕೊಡುವ ಕೆಲಸ ಮಾಡುತ್ತಿದ್ದೇನೆ ಎಂದು ಶಿಕ್ಷಕ ರಾಣಾ ಹೇಳುತ್ತಾರೆ.

ಮುಂದೆ ಓದಿ ...
 • Share this:

  ಛತ್ತೀಸ್​ಗಢ(ಸೆ.18): ಕೊರೋನಾ ಭೀತಿಯಿಂದಾಗಿ ಶಾಲೆಗಳು ಮುಚ್ಚಿದ್ದು, ಸದ್ಯ ಆನ್​ಲೈನ್ ತರಗತಿಗಳು ನಡೆಯುತ್ತಿವೆ. ವಿದ್ಯಾಗಮ ಯೋಜನೆಯಡಿ ಶಿಕ್ಷಕರು ದೇವಸ್ಥಾನ ಅಥವಾ ಮರದ ಕೆಳಗೆ ಕುಳಿತು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಆದರೆ ಛತ್ತೀಸ್​ಗಢದಲ್ಲಿ ಶಾಲಾ ಶಿಕ್ಷಕರೊಬ್ಬರು ತಮ್ಮ ಬೈಕ್​ನಲ್ಲಿ ಕಪ್ಪು ಹಲಗೆ ಇಟ್ಟುಕೊಂಡು ಮೊಹಲ್ಲಾ(ಬೀದಿ) ತರಗತಿಯ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಇವರ ಈ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಮೆಚ್ಚುಗೆ ಪಡೆದಿದೆ. ಛತ್ತೀಸ್​​ಗಢದ ಕೊರಿಯಾ ಜಿಲ್ಲೆಯ ರುದ್ರ ರಾಣಾ ಎಂಬ ಸರ್ಕಾರಿ ಶಾಲೆಯ ಶಿಕ್ಷಕ ಇಂತಹ ಮೆಚ್ಚುಗೆಯ ಕಾರ್ಯ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ತಮ್ಮ ಬೈಕ್​ನಲ್ಲಿ ಕಪ್ಪು ಹಲಗೆ ಇಟ್ಟುಕೊಂಡು ವಿದ್ಯಾರ್ಥಿಗಳ ಮನೆ-ಮನೆಗೆ ತೆರಳುತ್ತಾರೆ. ನೆರಳಿಗಾಗಿ ಛತ್ರಿಯೊಂದನ್ನು ಸಹ ಇಟ್ಟುಕೊಂಡಿದ್ದಾರೆ. ಇವರ ಈ ಕ್ರಿಯಾಶೀಲತೆ ಮಕ್ಕಳನ್ನು ಮತ್ತಷ್ಟು ಓದಿನತ್ತ ಸೆಳೆಯುತ್ತಿದೆ.


  ಕೋವಿಡ್​-19ನಿಂದ ಶಾಲೆಗಳು ಮುಚ್ಚಿದ್ದು, ಅನೇಕ ವಿದ್ಯಾರ್ಥಿಗಳಿಗೆ ಆನ್​ಲೈನ್ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇಂಟರ್​ನೆಟ್​ ಸಮಸ್ಯೆಯಿಂದಾಗಿ ಕೆಲವು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತೆರಳಿ ಶಿಕ್ಷಣ ಕೊಡುವ ಕೆಲಸ ಮಾಡುತ್ತಿದ್ದೇನೆ ಎಂದು ಶಿಕ್ಷಕ ರಾಣಾ ಹೇಳುತ್ತಾರೆ.


  ಕೆಲವೇ ಕೆಲವು ವಿದ್ಯಾರ್ಥಿಗಳು ಆನ್​ಲೈನ್​ ತರಗತಿ ಕೇಳಲು ಸಾಧ್ಯವಾಗುತ್ತಿತ್ತು. ಹೀಗಾಗಿ ನಾವು ಮೊಹಲ್ಲಾ(ಬೀದಿ) ತರಗತಿಗಳನ್ನು ಆರಂಭಿಸಿದೆವು. ಇದು ಒಂದು ಉತ್ತಮ ಹಾಗೂ ಸುರಕ್ಷಿತ ವಿಧಾನ ಎನಿಸಿತು. ಇದರಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಬ್ಬರೂ ಸಹ ಸಂಪರ್ಕ ಮಾಡುವ ಸಾಧ್ಯತೆ ಇರುವುದಿಲ್ಲ. ವಿದ್ಯಾರ್ಥಿಗಳು ಶಾಲೆಗೆ ಹೋಗಲು ಆಗುವುದಿಲ್ಲ. ಹೀಗಾಗಿ ನಾನು ಮಕ್ಕಳ ಮನೆಬಾಗಿಲಿಗೆ ಶಿಕ್ಷಣ ಒದಗಿಸುವ ಕೆಲಸ ಮಾಡುತ್ತಿದ್ದೇನೆ ಎಂದು ರಾಣಾ ಹೇಳುತ್ತಾರೆ.


  ಸಾವಿರಾರು ಚೀನೀಯರಲ್ಲಿ ಪುರುಷತ್ವ ನಾಶಮಾಡಬಲ್ಲ ಬ್ಯಾಕ್ಟೀರಿಯಾ ಸೋಂಕು ಪತ್ತೆ


  ನಾನು ಕಪ್ಪು ಹಲಗೆ ಹಾಗೂ ಪುಸ್ತಕಗಳನ್ನು ಬೈಕ್​​ನಲ್ಲಿ ಇಟ್ಟುಕೊಂಡಿದ್ದೇನೆ. ನಾನು ಬೆಲ್​ ಮಾಡಿದ ಬಳಿಕ ವಿದ್ಯಾರ್ಥಿಗಳು ಮನೆಯಿಂದ ಹೊರಗೆ ಬರುತ್ತಾರೆ. ಶಾಲಾ ದಿನಚರಿಯಂತೆ ವಿದ್ಯಾರ್ಥಿಗಳು ಮೊದಲಿಗೆ ಪ್ರಾರ್ಥನೆ ಮಾಡುತ್ತಾರೆ. ಬಳಿಕ ನಾನು ಪಠ್ಯಕ್ರಮದ ಪ್ರಕಾರ ತರಗತಿಗಳೊಂದಿಗೆ ಪ್ರಾರಂಭಿಸುತ್ತೇನೆ ಎಂದರು.


  ರಾಣಾ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬೈಕ್​ನಲ್ಲೇ ತೆರಳುತ್ತಾರೆ. ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಅವರಿಗೆ ಶೈಕ್ಷಣಿಕ ವಿಷಯಗಳ ಜೊತೆಗೆ ಕೊರೋನಾ ಕುರಿತು ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಶಿಕ್ಷಕ ರಾಣ ಅವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಲಿಯುವಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ.


  ಬಿಸಿಲು ಮತ್ತು ಮಳೆಯಿಂದ ನನ್ನನ್ನು ರಕ್ಷಿಸಿಕೊಳ್ಳಲು ಬೈಕ್​​ಗೆ ಒಂದು ಛತ್ರಿಯನ್ನು ಸಹ ಕಟ್ಟಿದ್ದೇನೆ. ಜೊತೆಗೆ ಈ ಬೈಕ್​ ನನ್ನದೇ ಎಂದು ವಿದ್ಯಾರ್ಥಿಗಳು ಬಹುಬೇಗ ಗುರುತಿಸುತ್ತಾರೆ ಎಂದರು.

  Published by:Latha CG
  First published: