ಅತ್ಯಾಚಾರ ಪ್ರಕರಣ ದಾಖಲೆಗೆ ಕಾರಣ ಬ್ರೇಕ್​ಅಪ್​; ವಿವಾದ ಮೂಡಿಸಿದ ಮಹಿಳಾ ಆಯೋಗ ಅಧ್ಯಕ್ಷೆ ಹೇಳಿಕೆ

ಬಹುತೇಕ ಪ್ರಕರಣಗಳಲ್ಲಿ ಯುವತಿಯರು ಸಹಮತದ ಸಂಬಂಧದಲ್ಲಿ ಬ್ರೇಕ್​ ಅಪ್​ ಆದ ಬಳಿಕ ಪೊಲೀಸರಿಗೆ ಅತ್ಯಾಚಾರದ ದೂರು ಸಲ್ಲಿಸುತ್ತಾರೆ

ಮಹಿಳಾ ಆಯೋಗ ಅಧ್ಯಕ್ಷೆ

ಮಹಿಳಾ ಆಯೋಗ ಅಧ್ಯಕ್ಷೆ

 • Share this:
  ಹುಡುಗ-ಹುಡುಗಿಯ ನಡುವಿನ ಒಮ್ಮತದ ಸಂಬಂಧದಲ್ಲಿ ಬ್ರೇಕ್​ ಆಪ್​ ಆದಾಗ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತವೆ ಎಂದು ಛತ್ತೀಸ್​ಗಢ ಮಹಿಳಾ ಆಯೋಗದ ಮುಖ್ಯಸ್ಥೆ ಕಿರಣ್ಮಯಿ ನಾಯಕ್​​ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. ಅವರ ಈ ಹೇಳಿಕೆ ಅನೇಕ ಹಲವರ ಆಕ್ರೋಶಕ್ಕೆ ಕೂಡ ಗುರಿಯಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಕುರಿತಾದ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಹುತೇಕ ಪ್ರಕರಣಗಳಲ್ಲಿ ಯುವತಿಯರು ಸಹಮತದ ಸಂಬಂಧದಲ್ಲಿ ಬ್ರೇಕ್​ ಅಪ್​ ಆದ ಬಳಿಕ ಪೊಲೀಸರಿಗೆ ಅತ್ಯಾಚಾರದ ದೂರು ಸಲ್ಲಿಸುತ್ತಾರೆ ಎಂದಿದ್ದಾರೆ .

  ವಿವಾಹಿತ ಪುರಷನೊಬ್ಬ ಯುವತಿ ಜೊತೆ ಸಂಬಂಧ ಹೊಂದಿದಾಗ ಆಕೆ ಆತ ಸುಳ್ಳು ಹೇಳುತ್ತಿದ್ದಾನಾ ಆಥವಾ ಸಹಾಯ ಮಾಡುತ್ತಿದ್ದಾನಾ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಇಲ್ಲವಾದಲ್ಲಿ ಯುವತಿಯರು ಅಥವಾ ಮಹಿಳೆಯರು ತಕ್ಷಣಕ್ಕೆ ಪೊಲೀಸರನ್ನು ಸಂಪರ್ಕಿಸಬೇಕು ಎಂದರು.  ಅಲ್ಲದೇ ಮಹಿಳಾ ಆಯೋಗದ ಮೂಲಕ ಅನೇಕ ಕೌಟುಂಬಿಕ ವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ. ಕೆಲವೊಮ್ಮೆ ಪುರಷರು ಮತ್ತು ಮಹಿಳೆಯರನ್ನು ನಾವು ಗದರಿಸಿ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸುತ್ತೇವೆ ಎಂದರು.

  ಇದನ್ನು ಓದಿ: ಹೈದ್ರಾಬಾದ್​ನ ಕೆಮಿಕಲ್​ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ; ಏಂಟು ಜನರಿಗೆ ಗಾಯ

  ಇದೇ ವೇಳೆ ಯುವ ಜನತೆಗೆ ಮನವಿ ಮಾಡಿದ ಅವರು, ನೀವು ಅಪ್ರಾಪ್ತರಾಗಿದ್ದರೆ, ಸಿನಿಮಾದಲ್ಲಿ ತೋರಿಸಿದಂತೆ ಬಲೆಗೆ ಬೋಳಬೇಡಿ. ಇದರಿಂದ ನಿಮ್ಮ ಕುಟುಂಬ ಸ್ನೇಹಿತರು ಮತ್ತು ನಿಮ್ಮ ಸಂಪೂರ್ಣ ಜೀವನ ಹಾಳಾಗಲಿದೆ. ಇತ್ತೀಚಿನ ದಿನಗಳಲ್ಲಿ 18 ವರ್ಷಕ್ಕೆಲ್ಲಾ ಮದುವೆಯಾಗುವ ಟ್ರೆಂಡ್​ ಸೃಷ್ಟಿಯಾಗುತ್ತಿದೆ. ಮದುವೆಯಾಗಿ ಮಗುವಾದ ಬಳಿಕ ಅವರಿಬ್ಬರು ಒಟ್ಟಿಗೆ ಜೀವಿಸಲು ಕಷ್ಟಪಡುತ್ತಾರೆ ಎಂದರು.

  2019ರ ಅಂಕಿ ಅಂಶದ ಪ್ರಕಾರ ಭಾರತದಲ್ಲಿ ದಿನವೊಂದಕ್ಕೆ ಸರಾಸರಿ 87 ಅತ್ಯಾಚಾರದ ಪ್ರಕರಣಗಳು ದಾಖಲಾಗುತ್ತಿದೆ. ಮಹಿಳೆಯರ ಮೇಲೆ 4 ಲಕ್ಷಕ್ಕೂ ಅಧಿಕ ಅಪರಾಧ ಪ್ರಕರಣ ದಾಖಲಾಗಿವೆ. ಕಳೆದ ವರ್ಷ ಅಂದರೆ, 2018ಕ್ಕೆ ಹೋಲಿಸಿದರೆ ಅಪರಾಧ ಪ್ರಕರಣಗಳು ಶೇ 7ರಷ್ಟು ಹೆಚ್ಚಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಮಾಹಿತಿ ತಿಳಿಸಿದೆ.
  Published by:Seema R
  First published: