ರಾಯ್ಪುರ: ಹೊಸದಾಗಿ ಮದುವೆಯಾದ (Marriage) ದಂಪತಿ (Couple) ನೂರು ವರ್ಷಗಳ ಕಾಲ ಸಂತೋಷದಿಂದ ಬದುಕಿ ಬಾಳಬೇಕೆಂದು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಮದುವೆ ಸಂಭ್ರಮದಲ್ಲಿದ್ದ ಮನೆ 48 ಗಂಟೆಗಳು ಕಳೆಯುವ ಮುನ್ನವೇ ದುರಂತದ (Tragedy) ಸುಳಿಗೆ ಸಿಲುಕಿದೆ. ಸಂಸಾರ ನೌಕೆ ಆರಂಭಿಸುವ ಮೊದಲೇ ಈ ಜೋಡಿ ಒಬ್ಬರ ಮೇಲೊಬ್ಬರು ಮೇಲುಗೈ ಸಾಧಿಸುವುದಕ್ಕಾಗಿ ಜಗಳ ಮಾಡಿಕೊಂಡಿದ್ದು, ಈ ಜಗಳ ವಿಕೋಪಕ್ಕೆ ತಿರುಗಿದೆ. ಕೊನೆಗೆ ಆರತಕ್ಷತೆಗೆ (Reception) ಹೋಗಬೇಕಿದ್ದ ನವವಿವಾಹಿತರು ಸಾವನ್ನಪ್ಪಿ ಸ್ಮಶಾನಕ್ಕೆ ತೆರಳಿದ್ದಾರೆ. ಛತ್ತೀಸ್‌ಗಢದಲ್ಲಿ (Chhattisgarh) ಈ ದಾರುಣ ಘಟನೆ ನಡೆದಿದೆ. ರಾಯ್‌ಪುರದ ಬ್ರೀಜ್‌ನಗರದಲ್ಲಿ ಆರತಕ್ಷತೆಗೆ ತಯಾರಾಗಲೆಂದು ರೂಮಿಗೆ ತೆರಳಿದ್ದ ದಂಪತಿ ಶವವಾಗಿ ಪತ್ತೆಯಾಗಿದ್ದಾರೆ.
ಆರತಕ್ಷತೆಗಾಗಿ ತಯಾರಾಗಲು ರೂಮಿಗೆ ತೆರಳಿದ್ದ ನವದಂಪತಿ ನಡುವೆ ಜಗಳ ನಡೆದಿದೆ ಎನ್ನಲಾಗಿದ್ದು, ವರ ವಧುವಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ನಂತರ ಅದೇ ಚಾಕುವಿನಿಂದ ಇರಿದು ಪ್ರಾಣ ಕಳೆದುಕೊಂಡಿದ್ದಾನೆ. ಕುಡಿದ ಅಮಲಿನಲ್ಲಿ ವರ ತನ್ನ ಪತ್ನಿಯನ್ನು ಕೊಂದಿದ್ದಾನೆ ಎನ್ನಲಾಗುತ್ತಿದೆ.
ಜಗಳ ಇಬ್ಬರ ಸಾವಿನಲ್ಲಿ ಅಂತ್ಯ
ಛತ್ತೀಸ್‌ಗಢದ ರಾಯ್‌ಪುರದ ಬ್ರೀಜ್‌ನಗರದಲ್ಲಿ ಅಸ್ಲಾಂ ಎಂಬ 24 ವರ್ಷದ ಹುಡುಗ 21 ವರ್ಷದ ಕಹ್ಕಾಷಾ ಬಾನೊ ಎಂಬ ಹುಡುಗಿಯನ್ನು ಭಾನುವಾರ ವಿವಾಹವಾದ್ದನು. ಮಂಗಳವಾರ ರಾತ್ರಿ ಅವರ ಆರತಕ್ಷತೆ ನಡೆಸಲು ಎರಡೂ ಕುಟುಂಬ ಸದಸ್ಯರು ನಿರ್ಧರಿಸಿದ್ದರು. ಇದರ ಅಂಗವಾಗಿ ಆರತಕ್ಷತೆಗೂ ಮುನ್ನ ತಯಾರಾಗಲು ನವದಂಪತಿಗಳು ಕೊಠಡಿಗೆ ತೆರಳಿದರು. ಅಲ್ಲಿ ಇಬ್ಬರಿಗೂ ಜಗಳವಾಗಿದೆ. ಇರಿತಕ್ಕೊಳಗಾದ ವಧು ಜೋರಾಗಿ ಕಿರುಚಿಕೊಂಡ ನಂತರ ಕುಟುಂಬಸ್ಥರು ಬಾಗಿಲು ತಟ್ಟಿದ್ದಾರೆ. ನಂತರ ಕಿಟಕಿಯಿಂದ ನೋಡಿದಾಗ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ.
ವರನ ರೂಮಿನಲ್ಲಿ ಡ್ರಗ್ಸ್ ಪತ್ತೆ
ವರನ ರೂಮಿನಲ್ಲಿ ಕೆಲವು ಡ್ರಗ್ಸ್ ಪತ್ತೆಯಾಗಿರುವುದರಿಂದ ಮದುವೆಗೆ ಮುನ್ನ ಆತ ಡ್ರಗ್ಸ್ ಸೇವಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದ್ದರಿಂದ ಆತ ಅಮಲಿನಲ್ಲಿ ತನ್ನ ಹೆಂಡತಿಯನ್ನು ಕೊಂದಿದ್ದಾನೆ. ನಂತರ ಆತ ಚಾಕುವಿನಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸ್ ಅಧಿಕಾರಿ ಅನುಮಾನವ್ಯಕ್ತಪಡಿಸಿದ್ದಾರೆ.
ಮದುವೆ ದಿನವೇ ಆತ್ಮಹತ್ಯೆಗೆ ಯತ್ನ
ಅಸ್ಲಂ ಸೋಮವಾರ ರಾತ್ರಿಯೇ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಎನ್ನಲಾಗಿದ್ದು, ಈ ವೇಳೆ ಆತನ ಸಂಬಂಧಿಕರು ಕಂಡು ಆತನನ್ನು ತಡೆದು ರೂಮಿನಲ್ಲಿ ಕೂಡಿ ಹಾಕಿದ್ದರು ಎನ್ನಲಾಗುತ್ತಿದೆ. ಅಲ್ಲದೆ ಆತ್ಮಹತ್ಯೆಗೆ ಯತ್ನಿಸಿದ್ದ ಆತನಿಗೆ ಕುಟುಂಬಸ್ಥರು ಥಳಿಸಿದ್ದರು ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಮೃತ ನವದಂಪತಿ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಹುಡುಗಿಗೆ ಬೇರೊಬ್ಬನ ಜೊತೆಗೆ ಸಂಬಂಧವಿತ್ತು, ಇದು ಇವರಿಬ್ಬರ ನಡುವಿನ ಜಗಳಕ್ಕೆ ಕಾರಣವಾಗಿ ಕೊಲೆಯಲ್ಲಿ ಅಂತ್ಯವಾಗಿವೆ ಎಂಬ ವದಂತಿಗಳು ಕೇಳಿಬರುತ್ತಿವೆ. ಜೊತೆಗೆ ಅಸ್ಲಂ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ, ಹಾಗಾಗಿ ಮಾದಕ ದ್ರವ್ಯದ ವ್ಯಸನಿಯಾಗಿದ್ದ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ