ಇವಿಎಂನಲ್ಲಿ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಓಟ್ ಹಾಕಿದರೆ 'ಕರೆಂಟ್​ ಶಾಕ್'​ ಹೊಡೆಯುತ್ತೆ ಎಂದ ಛತ್ತೀಸಗಢ ಸಚಿವ!

ಮಂಗಳವಾರ ಬಿಜೆಪಿ ಶಾಸಕ ರಮೇಶ್​ ಕಟಾರ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮತಗಟ್ಟೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ. ಮತ್ತು ಯಾವ ಏರಿಯಾದಲ್ಲಿ ಬಿಜೆಪಿಗೆ ಕಡಿಮೆ ಮತ ಬಿದ್ದಿವೆ ಎಂಬುದು ಅವರಿಗೆ ತಿಳಿಯಲಿದೆ ಎಂದು ಹೇಳಿದ್ದರು. ಈ ಹೇಳಿಕೆ ಸಂಬಂಧ ರಮೇಶ್​ ಅವರಿಗೂ ಚುನಾವಣಾ ಆಯೋಗ ನೋಟಿಸ್ ನೀಡಿದೆ.

HR Ramesh | news18
Updated:April 17, 2019, 3:58 PM IST
ಇವಿಎಂನಲ್ಲಿ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಓಟ್ ಹಾಕಿದರೆ 'ಕರೆಂಟ್​ ಶಾಕ್'​ ಹೊಡೆಯುತ್ತೆ ಎಂದ ಛತ್ತೀಸಗಢ ಸಚಿವ!
ಪ್ರಾತಿನಿಧಿಕ ಚಿತ್ರ
HR Ramesh | news18
Updated: April 17, 2019, 3:58 PM IST
ನವದೆಹಲಿ: ಚುನಾವಣೆ ಪ್ರಚಾರದ ವೇಳೆ ದ್ವೇಷ, ಪ್ರಚೋದನಾಕಾರಿ ಭಾಷಣ ಮಾಡದಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರೂ ಛತ್ತೀಸಗಢದ ಸಚಿವರೊಬ್ಬರು ಕ್ಯಾಮರಾ ಮುಂದೆ ನಾಲಿಗೆ ಹರಿಬಿಟ್ಟಿದ್ದಾರೆ. ಮತದಾರರು ಮತಯಂತ್ರದಲ್ಲಿ ಕಾಂಗ್ರೆಸ್​ ಬಿಟ್ಟು ಬೇರೆ ಪಕ್ಷಕ್ಕೆ ಮತ ಹಾಕಿದರೆ ಎಲೆಕ್ಟ್ರಿಕ್ ಶಾಕ್​ ಹೊಡೆಯಲಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  

"ನೀವು ಮೊದಲ ಬಟನ್​ ಒತ್ತುವ ಮೂಲಕ ಬೈರೇಶ್ ಥಾಕೂರ್ ಅವರಿಗೆ ಮತ ಹಾಕಬೇಕು. ಮೊದಲ ಬಟನ್​ ಬಿಟ್ಟು ಎರಡನೇ ಬಟನ್​ ಒತ್ತಿದರೆ ನಿಮಗೆ ಕರೆಂಟ್ ಶಾಕ್​ ಹೊಡೆಯಲಿದೆ. ಮೂರನೇ ಬಟನ್ ಒತ್ತಿದರೂ ಕೂಡ ಶಾಕ್ ಹೊಡೆಯಲಿದೆ. ಅದಕ್ಕಾಗಿ ನಾವು ಮೊದಲ ಗುಂಡಿ ಸಿದ್ಧ ಮಾಡಿದ್ದೇವೆ," ಎಂದು ಛತ್ತೀಸಗಢದ ಅಬಕಾರಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಕವಾಸಿ ಲಖ್ಮಾ ಕಂಕೇರ್ ಜಿಲ್ಲೆಯಲ್ಲಿ ಹೇಳಿದ್ದಾಗಿ ಎನ್​ಡಿಟಿವಿ ವರದಿ ಮಾಡಿದೆ.

ಇದನ್ನು ಓದಿ: ದಲಿತರ ಮತಕ್ಕಾಗಿ ಬಿಜೆಪಿ ಅಡ್ವಾಣಿ ಬದಲು ಕೋವಿಂದ್​ರನ್ನು ರಾಷ್ಟ್ರಪತಿಯಾಗಿ ಮಾಡಿದೆ; ಸಿಎಂ ಅಶೋಕ್​ ಗೆಹ್ಲೋಟ್​ ವಿವಾದಾತ್ಮಕ ಹೇಳಿಕೆ

ಲಖ್ಮಾ ಅವರ ಹೇಳಿಕೆ ವಿರುದ್ಧ ಬಿಜೆಪಿ ದೂರು ದಾಖಲಿಸಿದ ನಂತರ ಚುನಾವಣಾ ಆಯೋಗ ಸಚಿವರಿಗೆ ನೋಟಿಸ್​ ನೀಡಿ, ಮೂರು ದಿನದಲ್ಲಿ ವಿವರಣೆ ನೀಡುವಂತೆ ಕೋರಿದೆ.
ಇದೇ ಹೇಳಿಕೆ ರೀತಿ ಗುಜರಾತ್​ನಲ್ಲಿ ವರದಿಯಾಗಿದೆ. ಮಂಗಳವಾರ ಬಿಜೆಪಿ ಶಾಸಕ ರಮೇಶ್​ ಕಟಾರ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮತಗಟ್ಟೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ. ಮತ್ತು ಯಾವ ಏರಿಯಾದಲ್ಲಿ ಬಿಜೆಪಿಗೆ ಕಡಿಮೆ ಮತ ಬಿದ್ದಿವೆ ಎಂಬುದು ಅವರಿಗೆ ತಿಳಿಯಲಿದೆ ಎಂದು ಹೇಳಿದ್ದರು. ಈ ಹೇಳಿಕೆ ಸಂಬಂಧ ರಮೇಶ್​ ಅವರಿಗೂ ಚುನಾವಣಾ ಆಯೋಗ ನೋಟಿಸ್ ನೀಡಿದೆ.


Loading...


First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626