ದಿನೇ ದಿನೇ ಮಕ್ಕಳ ಮೇಲಿನ ಶೋಷಣೆ ಹೆಚ್ಚಾಗುತ್ತಿದೆ. ಮಕ್ಕಳ ಮಗ್ದತೆಯನ್ನು ಬಳಸಿಕೊಂಡು ಅನೇಕ ಮಂದಿ ತಮ್ಮ ದುಷ್ಕೃತ್ಯ ಎಸಗುತ್ತಿದ್ದಾರೆ. ದುಷ್ಕರ್ಮಿಗಳ ಕೆಟ್ಟಚಾಳಿಗಳನ್ನು ತಡೆಗಟ್ಟಲು ಸರ್ಕಾರ ನಾನಾ ಸರ್ಕಸ್ ನಡೆಸುತ್ತಿದೆ. ಹೀಗಿದ್ದರೂ ಮಕ್ಕಳ ಮೇಲಿನ ಅತ್ಯಾಚಾರ (Rape), ಲೈಂಗಿಕ ದೌರ್ಜನ್ಯ ( Sexual Harassment Case) ನಿಂತಿಲ್ಲ. ಇದೀಗ ತಿಂಡಿ ಕೊಡಿಸುವ ನೆಪದಲ್ಲಿ ಕಿಡಿಗೇಡಿಯೋರ್ವ 7ರ ಬಾಲಕಿಗೆ (Girl) ಲೈಂಗಿಕ ಕಿರುಕುಳ ನೀಡಿರುವ ಘಟನೆ ಚಂಡೀಗಢದಲ್ಲಿ (Chhattisgarh) ಬೆಳಕಿಗೆ ಬಂದಿದೆ. ಏನು ಅರಿಯದ ಕಂದಮ್ಮಗಳ ಮೇಲೆ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ.
ತಿಂಡಿ ಆಮಿಷವೊಡ್ಡಿ ಚಂಡೀಗಢದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ
ಹೌದು, ಬೆಳಗಿನ ತಿಂಡಿಕೊಡಿಸುವುದಾಗಿ ಆಸೆ ತೋರಿಸಿ ವ್ಯಕ್ತಿ ಯೋರ್ವ 7 ವರ್ಷದ ಅಪ್ರಾಪ್ತ ಬಾಲಕಿಯನ್ನು ಜಮೀನಿಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಚಂಡೀಗಢದ ಬಿಲಾಸ್ಪುರದಲ್ಲಿ ಈ ಘಟನೆ ನಡೆದಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಎಎಸ್ಪಿ ರಿಯಾಕ್ಷನ್
ಈ ಕುರಿತಂತೆ ಬಿಲಾಸ್ಪುರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ರಾಜೇಂದ್ರ ಜೈಸ್ವಾಲ್ ಅವರು, ಬೆಳಗಿನ ತಿಂಡಿ ಕೊಡಿಸುವ ನೆಪದಲ್ಲಿ ಆರೋಪಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ.
ಚಕರಭಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿದ್ದ ಆರೋಪಿ ಅಪ್ರಾಪ್ತ ಬಾಲಕಿಯಗೆ ಬೆಳಗಿನ ತಿಂಡಿ ಕೊಡಿಸುವ ಆಮಿಷವೊಡ್ಡಿ ನಂತರ ಬೈಕ್ಗೆ ಹತ್ತಿಸಿಕೊಂಡಿದ್ದಾನೆ. ಬಳಿಕ ಆಕೆಯನ್ನು ಯಾರು ಇಲ್ಲದ ಜಮೀನಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಸಿಸಿಟಿವಿ ದೃಶ್ಯಾವಳಿ ಮೂಲಕ ಆರೋಪಿ ಸೆರೆ
ಬಾಲಕಿ ನಾಪತ್ತೆಯಾಗಿರುವ ವಿಚಾರ ತಿಳಿದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
ಆರೋಪಿ ವಿವಾಹಿತನಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಮೊದಲು ಆತನ ಬೈಕ್ ಪತ್ತೆ ಹಚ್ಚಿದೆವು. ನಂತೆ ಆರೋಪಿ ಗುರುತನ್ನು ಪತ್ತೆ ಮಾಡಿದೆವು. ಇದೀಗ ಘಟನೆ ಸಂಬಂಧ ತನಿಖೆಯನ್ನು ಚರುಕುಗೊಳಿಸಲಾಗಿದೆ. ಆರೋಪಿ ವಿರುದ್ಧ ಸಂಬಂಧಿತ ಐಪಿಸಿ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕೆಲವು ತಿಂಗಳ ಹಿಂದೆ ರಾಜ್ಯದಲ್ಲೊಂದು ಇಂತಹದ್ದೆ ಪ್ರಕರಣ
ಕೆಲವು ತಿಂಗಳ ಹಿಂದೆಯಷ್ಟೇ ಮಂಡ್ಯ ಜಿಲ್ಲೆಯಲ್ಲೂ ಟ್ಯೂಷನ್ ಮೇಲ್ವಿಚಾರಕನೋರ್ವ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದನು. ಈ ಸುದ್ದಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ಅ. 13 ರ ಮಧ್ಯಾಹ್ನ ಬಾಲಕಿ ಟ್ಯೂಷನ್ಗೆ ತೆರಳಿದ್ದಳು. ಎಷ್ಟು ಸಮಯ ಕಳೆದರೂ ಬಾಲಕಿ ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಟ್ಯೂಷನ್ ಹಿಂಭಾಗದಲ್ಲಿ ನಿರ್ಮಾಣ ಹಂತದ ಮನೆಯ ಸಂಪ್ನಲ್ಲಿ ಬಾಲಕಿ ಶವ ಪತ್ತೆಯಾಗಿತ್ತು. ನಂತರ ಸ್ಥಳಕ್ಕೆ ಮಳವಳ್ಳಿ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಶವಾಗಾರಕ್ಕೆ ರವಾನಿಸಿದ್ದರು.
ಈ ಮಧ್ಯೆ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದರು. ಜೊತೆಗೆ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಕುಟುಂಬಸ್ಥರು ಪ್ರತಿಭಟನೆ ಸಹ ಮಾಡಿದ್ದರು.
ಬಾಲಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ ಶಿಕ್ಷಕ
ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಟ್ಯೂಷನ್ ಶಿಕ್ಷಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಬಾಲಕಿಯನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದನು.
ಟ್ಯೂಷನ್ ನೀಡುವ ನೆಪದಲ್ಲಿ ಕಾಂತರಾಜ್ ಎಂಬಾತ ಬಾಲಕಿಯನ್ನು ಕರೆಸಿಕೊಂಡು ನಂತರ ಅತ್ಯಾಚಾರವೆಸಿಗಿದ್ದಾನೆ. ಕೊನೆಗೆ ಬಾಲಕಿ ಮನೆಯವರಿಗೆ ವಿಷಯ ತಿಳಿದರೆ ಪರಿಸ್ಥಿತಿ ಬೇರೆಯದ್ದೇ ಆಗುತ್ತದೆ ಎಂಬ ಭಯದಿಂದ ಬಾಲಕಿಯ ತಲೆಗೆ ರಾಡ್ನಿಂದ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿದ್ದನು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ