• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Shocking: ಸೆಲ್ಫಿ ತೆಗೆದುಕೊಳ್ಳುವಾಗ ಡ್ಯಾಮ್​ಗೆ ಬಿದ್ದ ಮೊಬೈಲ್! ಇಡೀ ಜಲಾಶಯದ ನೀರನ್ನು ಖಾಲಿ ಮಾಡಿಸಿದ ಫುಡ್​ ಇನ್ಸೆಪೆಕ್ಟರ್

Shocking: ಸೆಲ್ಫಿ ತೆಗೆದುಕೊಳ್ಳುವಾಗ ಡ್ಯಾಮ್​ಗೆ ಬಿದ್ದ ಮೊಬೈಲ್! ಇಡೀ ಜಲಾಶಯದ ನೀರನ್ನು ಖಾಲಿ ಮಾಡಿಸಿದ ಫುಡ್​ ಇನ್ಸೆಪೆಕ್ಟರ್

ಮೊಬೈಲ್​ಗಾಗಿ  ಡ್ಯಾಮ್​ನಲ್ಲಿದ್ದ 21 ಲಕ್ಷ ಲೀಟರ್ ನೀರು ಖಾಲಿ ಮಾಡಿಸಿದ ಅಧಿಕಾರಿ

ಮೊಬೈಲ್​ಗಾಗಿ ಡ್ಯಾಮ್​ನಲ್ಲಿದ್ದ 21 ಲಕ್ಷ ಲೀಟರ್ ನೀರು ಖಾಲಿ ಮಾಡಿಸಿದ ಅಧಿಕಾರಿ

ಈ ಘಟನೆ ನಂತರ ಆಹಾರ ನಿರೀಕ್ಷಕ ರಾಜೇಶ್ ವಿಶ್ವಾಸ್​ರನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಇಷ್ಟು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡದೆ ಇಷ್ಟೊಂದು ನೀರನ್ನು ಹೊರಬಿಡಲು ಹೇಗೆ ಒಪ್ಪಿಗೆ ನೀಡಲಾಗಿದೆ ಎಂಬುದರ ಬಗ್ಗೆ ತಕ್ಷಣವೇ ಉತ್ತರ ನೀಡಲು ಜಲಸಂಪನ್ಮೂಲ ಎಸ್‌ಡಿಒ ಆರ್​ ಸಿ ದಿವಾರ್ ಅವರಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ.

ಮುಂದೆ ಓದಿ ...
  • Share this:

ಛತ್ತಿಸ್​ಗಢ: ಕೆಲವೊಮ್ಮೆ ವಿದ್ಯಾವಂತರೂ (Educated) ಕೂಡ ಮೂರ್ಖರಂತೆ (Fool) ವರ್ತಿಸುತ್ತಾರೆ. ಇಲ್ಲೊಬ್ಬ ಫುಡ್ ಇನ್​ಸ್ಪೆಕ್ಟರ್​ (Food Inspector) ಒಬ್ಬರು ಅದಕ್ಕೆ ಸಾಕ್ಷಿಯಾಗಿದ್ದಾರೆ. ಸೆಲ್ಫಿ (Selfie) ತೆಗೆದುಕೊಳ್ಳುವಾಗ ಅಧಿಕಾರಿ ರಾಜೇಶ್ ವಿಶ್ವಾಸ್ ಮೊಬೈಲ್ ಕೈಜಾರಿ ಜಲಾಶಯಕ್ಕೆ (Dam) ಬಿದ್ದಿದೆ. ಆದರೆ ತನ್ನ ಮೊಬೈಲ್​ ಫೋನ್​ಗಾಗಿ ಆತ ಮಾಡಿರುವ ಕೆಲಸ ಆಘಾತಕಾರಿಯಾಗಿದೆ. ತನ್ನ ದುಬಾರಿ ಮೊಬೈಲ್ ಹೊರ ತೆಗೆಯಲು ಆತ ಜಲಾಶಯದ 21 ಲಕ್ಷ ಲೀಟರ್​ ನೀರನ್ನು ಮೋಟಾರ್​​ ಬಳಸಿ ಖಾಲಿ ಮಾಡಿಸಿದ್ದಾರೆ. ಈ ನೀರನ್ನು ಸುಮಾರು 1500 ಎಕರೆ ಕೃಷಿ ಭೂಮಿಗೆ ಬಳಕೆ ಮಾಡಿಕೊಳ್ಳಬಹುದಿತ್ತು ಎನ್ನಲಾಗಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ (District Commissioner) ಪ್ರಿಯಾಂಕಾ ಶುಕ್ಲಾ ಅವರು ಫುಡ್​ ಇನ್​ಸ್ಪೆಕ್ಟರ್​ನನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.


ನೀರನ್ನು ಉಳಿಸಿ ಎಂದು ದೇಶಾದ್ಯಂತ ವಿವಿಧ ಅಭಿಯಾನಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಆದರೆ ಛತ್ತೀಸ್‌ಗಢದ ಕಂಕೇರ್‌ ಜಿಲ್ಲೆಯಲ್ಲಿ ನಡೆದಿರುವ ಘಟನೆ ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ. ಪಂಖಜೂರಿನ ಪ್ಯಾರಕೋಟೆ ಜಲಾಶಯದ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಫುಡ್​ ಇನ್​​ಸ್ಪೆಕ್ಟರ್​ ತನ್ನ 1.25 ಲಕ್ಷ ಮೌಲ್ಯದ ಮೊಬೈಲ್ ಜಲಾಶಯದೊಳಗೆ ಬೀಳಿಸಿದ್ದಾರೆ. ಅದನ್ನು ಇಡೀ ಜಲಾಶಯದ ನೀರನ್ನು ಖಾಲಿ ಮಾಡಿಸಿದ್ದಾರೆ. ವರದಿಗಳ ಪ್ರಕಾರ ಜಲಾಶಯದಲ್ಲಿ ಸಂಗ್ರಹವಾಗಿದ್ದ 21 ಲಕ್ಷ ಲೀಟರ್​ ನೀರನ್ನು ಅಧಿಕಾರಿ ಖಾಲಿ ಮಾಡಿಸಿದ್ದಾನೆ. ನೀರೆಲ್ಲಾ ಖಾಲಿಯಾದ ನಂತರ ಆತನ ಮೊಬೈಲ್ ಫೋನ್ ಸಿಕ್ಕಿದೆ ಎಂದು ತಿಳಿದುಬಂದಿದೆ.


ಕುಟುಂಬ ಸಮೇತರಾಗಿ ಜಲಾಶಯಕ್ಕೆ ಭೇಟಿ


ಸೋಮವಾರ ಫುಡ್​ ಇನ್​ಸ್ಪೆಕ್ಟರ್​ ರಾಜೇಶ್ ವಿಶ್ವಾಸ್ ರಜಾ ನಿಮಿತ್ತ ಕುಟುಂಬ ಸಮೇತ ಜಲಾಶಯಕ್ಕೆ ತೆರಳಿದ್ದರು. ಈ ವೇಳೆ ರಾಜೇಶ್ ಜಲಾಶಯದ ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿದ್ದಾಗ ಅವರ ದುಬಾರಿ ಫೋನ್ ಕೈ ಜಾರಿ ನೀರಿನಲ್ಲಿ ಬಿದ್ದಿದೆ. ಈ ಜಲಾಶಯದಲ್ಲಿ ಸುಮಾರು 15 ಅಡಿಯಷ್ಟು ನೀರು ತುಂಬಿತ್ತು.


ಇದನ್ನೂ ಓದಿ:  Mushroom: ಲಾಕ್​ಡೌನ್​ನಿಂದ ಕೆಲಸ ಕಳ್ಕೊಂಡ್ರು, ಅಣಬೆಯಿಂದಾಗಿ ತಾವೇ 25 ಜನರಿಗೆ ಉದ್ಯೋಗ ಕೊಟ್ರು! ಇದು ಯುವಕರ ಸಾಧನೆಯ ಕಥೆ


ನೀರಿಗಿಳಿದು ಹುಡುಕಾಟ


ಸೋಮವಾರದಂದು ಈ ಘಟನೆ ನಡೆದಿದ್ದು, ರಾಜೇಶ್​ ವಿಶ್ವಾಸ್ ಮೊಬೈಲ್ ಬೀಳಿಸಿದ ನಂತರ ಆತನ ಚಾಲಕರು ನೀರಿಗೆ ಇಳಿದು ಫೋನ್ ಹುಡುಕಾಡಿದ್ದಾರೆ. ಆದರೆ ಅವರು ಫೋನ್ ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ನಂತರ 30 ಎಚ್​ಪಿ ಮೋಟರ್​ ಅಳವಡಿಸಿ ಜಲಾಶಯದ ನೀರನ್ನು ಹೊರ ಬಿಡಲಾಗಿದೆ. ಇದರಿಂದ ಸುಮಾರು 21 ಲಕ್ಷ ಲೀಟರ್ ಖಾಲಿಯಾಗಿದೆ ಎಂದು ತಿಳಿದುಬಂದಿದೆ.


ಸೋಮವಾರ ಈ ಘಟನೆ ಆರಂಭಗೊಂಡಿದ್ದು, ಗುರುವಾರ ಬೆಳಿಗ್ಗೆ ಫೋನ್ ಅನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಇನ್ನು ರಾಜೇಶ್ ವಿಶ್ವಾಸ್ ಅವರ ಫೋನ್ ಸಿಕ್ಕಿದೆ. ಆದರೆ ಕೆರೆಯಲ್ಲಿ ಬಿದ್ದಿದ್ದ ಫೋನ್ ಹೊರತೆಗೆಯಲು ನೀರನ್ನು ಖಾಲಿ ಮಾಡಿರುವ ಸಂಗತಿ ಇಡೀ ಪ್ರಾಂತ್ಯದಲ್ಲಿ ಹಬ್ಬಿದೆ.
ಜಲಸಂಪನ್ಮೂಲ ಅಧಿಕಾರಿಗೆ ನೋಟಿಸ್​


ಈ ಘಟನೆ ನಂತರ ಆಹಾರ ನಿರೀಕ್ಷಕ ರಾಜೇಶ್ ವಿಶ್ವಾಸ್​ರನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಇಷ್ಟು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡದೆ ಇಷ್ಟೊಂದು ನೀರನ್ನು ಹೊರಬಿಡಲು ಹೇಗೆ ಒಪ್ಪಿಗೆ ನೀಡಲಾಗಿದೆ ಎಂಬುದರ ಬಗ್ಗೆ ತಕ್ಷಣವೇ ಉತ್ತರ ನೀಡಲು ಜಲಸಂಪನ್ಮೂಲ ಎಸ್‌ಡಿಒ ಆರ್​ ಸಿ ದಿವಾರ್ ಅವರಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ.


ಇದನ್ನೂ ಓದಿ: Viral News: 17 ರೂಪಾಯಿ ಇದ್ದ ಖಾತೆಯಲ್ಲೀಗ ಕೋಟಿ ಕೋಟಿ ಮೊತ್ತ, ದಿನ ಬೆಳಗಾಗ್ತಿದಂತೆ ಕುಬೇರನಾದ ಕೂಲಿ ಕಾರ್ಮಿಕ!

 ಮಾಜಿ ಸಿಎಂ ಆಕ್ರೋಶ

ಮೊಬೈಲ್ ಫೋನ್​ಗಾಗಿ ಜಲಾಶಯದ ನೀರನ್ನು ಖಾಲಿ ಮಾಡಿರುವ ಈ ಪ್ರಕರಣ ವೈರಲ್ ಆದ ಬೆನ್ನಲ್ಲೇ, ಈ ಕುರಿತು ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಡಾ.ರಮಣ್ ಸಿಂಗ್ ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವೀಟ್ ಮೂಲಕ ಮಾಜಿ ಸಿಎಂ ರಾಜ್ಯದ ಭೂಪೇಶ್ ಬಘೇಲ್ ಸರ್ಕಾರವನ್ನು ಗುರಿಯಾಗಿಸಿ ಟೀಕಿಸಿದ್ದಾರೆ.


" ಭೂಪೇಶ್‌ಬಾಘೇಲ್ ಅವರ ಸರ್ವಾಧಿಕಾರದಲ್ಲಿ ಅಧಿಕಾರಿಗಳು ರಾಜ್ಯವನ್ನು ತಮ್ಮ ಪೂರ್ವಜರ ಆಸ್ತಿ ಎಂದು ಪರಿಗಣಿಸುತ್ತಿದ್ದಾರೆ. ಇಂದು ಬಿಸಿಲಿನ ಬೇಗೆಯಲ್ಲಿ ಜನರು ಜೀವಜಲಕ್ಕಾಗಿ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ, ಕುಡಿಯುವ ನೀರಿಗೂ ವ್ಯವಸ್ಥೆ ಇಲ್ಲ. ಆದರೆ ಅಧಿಕಾರಿ ತನ್ನ ಮೊಬೈಲ್‌ಗಾಗಿ ಸುಮಾರು 21 ಲಕ್ಷ ಲೀಟರ್ ನೀರನ್ನು ವ್ಯರ್ಥ ಮಾಡಿದ್ದಾನೆ. ಈ ನೀರಿನಿಂದ ಒಂದೂವರೆ ಸಾವಿರ ಎಕರೆ ಜಮೀನು ನೀರಾವರಿಗೆ ಮಾಡಬಹುದಿತ್ತು ಎಂದು ಆಕ್ರೋಶ ಹೊರ ಹಾಕಿದ್ದಾರೆ.

top videos
    First published: