• Home
 • »
 • News
 • »
 • national-international
 • »
 • Chhattisgarh Congress: ನಡುರಸ್ತೆಯಲ್ಲೇ ಕಾಂಗ್ರೆಸ್ ಮುಖಂಡನ ಗುಂಡಿಟ್ಟು ಕೊಲೆ, ಹಂತಕರು ಪರಾರಿ!

Chhattisgarh Congress: ನಡುರಸ್ತೆಯಲ್ಲೇ ಕಾಂಗ್ರೆಸ್ ಮುಖಂಡನ ಗುಂಡಿಟ್ಟು ಕೊಲೆ, ಹಂತಕರು ಪರಾರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Sanju Tripathi Murder: ಬಿಲಾಸ್‌ಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡ ಸಂಜು ತ್ರಿಪಾಠಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹಗಲಿನಲ್ಲೇ ನಡೆದ ಈ ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಭಾರೀ ಸಂಚಲನ ಸೃಷ್ಟಿಯಾಗಿದೆ.

 • News18 Kannada
 • Last Updated :
 • Bangalore [Bangalore], India
 • Share this:

  ರಾಯ್ಪುರ(ಡಿ.15): ಛತ್ತೀಸ್‌ಗಢದ (Chhattisgarh) ಬಿಲಾಸ್‌ಪುರದಲ್ಲಿ ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಸಂಜೀವ್ ತ್ರಿಪಾಠಿ (Sanju Tripathi) ಅವರನ್ನು ಹಗಲು ಹೊತ್ತಿನಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ (Murder). ಸಂಜೀವ್ ತ್ರಿಪಾಠಿ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ದಾಳಿಕೋರರು ಹತ್ಯೆ ಮಾಡಿದ್ದಾರೆ. ದಾಳಿಕೋರರು ಮೊದಲು ಕಾರನ್ನು ನಿಲ್ಲಿಸಿ ನಂತರ ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದ ಸಂಜೀವ್ ತ್ರಿಪಾಠಿಯ ತಲೆಯ ಮೇಲೆ ಗುಂಡು ಹಾರಿಸಿದರು, ಇದರಿಂದಾಗಿ ಸಂಜೀವ್ ತ್ರಿಪಾಠಿ ಸ್ಥಳದಲ್ಲೇ ಸಾವನ್ನಪ್ಪಿದರು. ಘಟನೆಯ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಬಿಲಾಸ್‌ಪುರ ಎಸ್‌ಎಸ್‌ಪಿ ಪಾರುಲ್ ಮಾಥುರ್ ಸೇರಿದಂತೆ ಹಿರಿಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.


  ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ತ್ರಿಪಾಠಿ


  ಮಾಹಿತಿ ಪ್ರಕಾರ ಈ ಘಟನೆ ಸಕ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಸಂಜೀವ್ ತ್ರಿಪಾಠಿ ತಮ್ಮ ಫಾರ್ಚುನರ್ ಕಾರಿನಲ್ಲಿ ಸಕ್ರಿ ಬೈಪಾಸ್ ರಸ್ತೆಯಿಂದ ಬೇರೆಡೆ ಪ್ರಯಾಣಿಸುತ್ತಿದ್ದರು. ಅಷ್ಟರಲ್ಲಿ ಎರಡು ಮೂರು ಮಂದಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಅಲ್ಲಿಗೆ ತಲುಪಿದ್ದಾರೆ. ಮೊದಲು ಅವರು ವಾಹನವನ್ನು ನಿಲ್ಲಿಸಿದ್ದಾರೆ. ಬಳಿಕ ದಾಳಿಕೋರರು ಸಂಜೀವ್ ತ್ರಿಪಾಠಿಗೆ ಗುಂಡು ಹಾರಿಸಿದರು. ತಲೆಗೆ ಗುಂಡು ತಗುಲಿ ಡ್ರೈವಿಂಗ್ ಸೀಟಿನಲ್ಲಿಯೇ ಸಂಜೀವ್ ತ್ರಿಪಾಠಿ ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಬಿಲಾಸ್‌ಪುರದ ಎಸ್‌ಎಸ್‌ಪಿ ಪಾರುಲ್ ಮಾಥುರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.


  NASA ಪ್ರಾಜೆಕ್ಟ್‌ಗೆ ಆಯ್ಕೆಯಾದ ಛತ್ತೀಸ್‌ಗಢದ 16 ವರ್ಷದ ಬಾಲಕಿ! ಈಕೆಯ ಶ್ರಮದ ಕಥೆ ಏನು ಗೊತ್ತಾ?


  ಆರೋಪಿಗಳನ್ನು ಬಂಧಿಸಲು ನಗರದಲ್ಲಿ ಪೊಲೀಸ್ ಮುತ್ತಿಗೆ


  ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮುಖಂಡನ ಹತ್ಯೆಯ ನಂತರ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಅದೇ ಸಮಯದಲ್ಲಿ, ಈ ಕೊಲೆ ಘಟನೆಗೆ ಸಂಬಂಧಿಸಿದ ಎಲ್ಲಾ ಅಂಶಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ಸುತ್ತಮುತ್ತಲಿನ ಜನರನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಕೊಲೆಗೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಗರದಲ್ಲಿ ಪೊಲೀಸರು ದಿಗ್ಬಂಧನವನ್ನೂ ಹಾಕಿದ್ದಾರೆ.


  Hubballi Murder: ಸುಪಾರಿ ಕೊಟ್ಟು ಮಗನನ್ನೇ ಕೊಂದ ಕೇಸ್​; ಅಖಿಲ್ ಜೈನ್ ಶವ ಪತ್ತೆ! ಸಿಕ್ಕಿದ್ದೆಲ್ಲಿ?


  ಜಮೀನಿನ ಅಕ್ರಮ ದಂಧೆಯಲ್ಲಿ ಗ್ಯಾಂಗ್ ವಾರ್ 


  ಸಂಜು ತ್ರಿಪಾಠಿಯ ಹತ್ಯೆಯು ಅಕ್ರಮವಾಗಿ ಜಮೀನು ಒತ್ತುವರಿ ವುಚಾರವಾಗಿ ನಡೆಯುವ ದೊಡ್ಡ ಗ್ಯಾಂಗ್ ವಾರ್‌ನ ಅಪಾಯವನ್ನು ಹೆಚ್ಚಿಸಿದೆ. ಎಲ್ಲಾ ಪಕ್ಷಗಳ ಜನರು ಸೇರಿದಂತೆ ಬಿಲಾಸ್‌ಪುರದಲ್ಲಿ ರಾಜಕೀಯ ಪ್ರಭಾವ ಹೊಂದಿರುವ ಅನೇಕರು ಭೂ ವ್ಯವಹಾರ ನಡೆಸುತ್ತಾರೆ. ಅಕ್ರಮ ಸಂಚು ಹೂಡಿದ ಆರೋಪ ಹೊತ್ತಿರುವ ಅನೇಕರು ಕಾಂಗ್ರೆಸ್‌ನಲ್ಲೇ ಇದ್ದಾರೆ. ಮೂಲಗಳ ಪ್ರಕಾರ, ಅಕ್ರಮ ಸಂಚುಗಳಿಂದ ಹಿಂಸಾಚಾರ ನಡೆಯುವ ಹುನ್ನಾರ ನಡೆಯುತ್ತಿದೆ. ಇದು ಯಾವಾಗ ಬೇಕಾದರೂ ಲಾವಾದಂತೆ ಸ್ಫೋಟಗೊಳ್ಳಬಹುದು ಎನ್ನಲಾಗಿದೆ.

  Published by:Precilla Olivia Dias
  First published: