• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Unemployment Allowance: ನಿರುದ್ಯೋಗಿ ಯುವಕರಿಗೆ ಗುಡ್ ನ್ಯೂಸ್, ಮುಂದಿನ ಹಣಕಾಸು ವರ್ಷದಿಂದಲೇ ಸಿಗುತ್ತಂತೆ ನಿರುದ್ಯೋಗ ಭತ್ಯೆ!

Unemployment Allowance: ನಿರುದ್ಯೋಗಿ ಯುವಕರಿಗೆ ಗುಡ್ ನ್ಯೂಸ್, ಮುಂದಿನ ಹಣಕಾಸು ವರ್ಷದಿಂದಲೇ ಸಿಗುತ್ತಂತೆ ನಿರುದ್ಯೋಗ ಭತ್ಯೆ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಈ ಬಾರಿಯ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಭೂಪೇಂದ್ರ ಭಘೇಲ್ ಅವರು, ಮುಂದಿನ ಹಣಕಾಸು ವರ್ಷದಿಂದ (2023-24) ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡಲಾಗುವುದು" ಎಂದು ಘೋಷಿಸಿದರು.

  • News18 Kannada
  • 5-MIN READ
  • Last Updated :
  • New Delhi, India
  • Share this:

ಚಂಢೀಗಢ: ಛತ್ತೀಸ್‌ಗಢ (Chhattisgarh) ವಿಧಾನಸಭೆ ಚುನಾವಣೆಗೆ (Vidhan Sabha Election) ಮುನ್ನವೇ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Chief Minister Bhupesh Baghel) ಅವರು, ನಿರುದ್ಯೋಗಿ ಯುವಕರಿಗೆ (Unemploy Youths) ಮುಂದಿನ ಹಣಕಾಸು ವರ್ಷದಿಂದ (Financial Year) ಮಾಸಿಕ ಭತ್ಯೆ (Monthly Allowance) ನೀಡಲಾಗುವುದು ಎಂದು ಹೇಳಿದ್ದಾರೆ. ಇದು 2018 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದಾಗಿತ್ತು. ಆದರೆ 15 ವರ್ಷಗಳ ನಂತರ ಪಕ್ಷ ಅಧಿಕಾರಕ್ಕೆ ಬಂದಿತು. ಸದ್ಯ ಇಂದು ಗಣರಾಜ್ಯೋತ್ಸವ (Republic Day) ಪ್ರಯುಕ್ತ ಬಸ್ತಾರ್ ಜಿಲ್ಲೆಯ (Bastar district) ಪ್ರಧಾನ ಕಛೇರಿ ಜಗದಲ್‌ಪುರದ (Jagdalpur) ಲಾಲ್‌ಬಾಗ್ ಪರೇಡ್ ಮೈದಾನದಲ್ಲಿ (Lalbag Parade ground) ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಧ್ವಜಾರೋಹಣ (National Flag) ನೆರವೇರಿಸಿದರು.


ರಾಯಪುರ ವಿಮಾನ ನಿಲ್ದಾಣದ ಬಳಿ ಏರೋಸಿಟಿ ಸ್ಥಾಪನೆ


ಇದೇ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಗುಡಿ ಕೈಗಾರಿಕೆಯನ್ನು ಬಲಪಡಿಸಲು ರಾಜ್ಯದಲ್ಲಿ ಗ್ರಾಮೀಣ ಕೈಗಾರಿಕೆ ನೀತಿಯನ್ನು ರೂಪಿಸುವುದಾಗಿ ಘೋಷಿಸಿದರು. ಕೈಗಾರಿಕಾ ಇಲಾಖೆ ಅಭಿವೃದ್ಧಿಪಡಿಸಿರುವ ಕೈಗಾರಿಕಾ ಪ್ರದೇಶಗಳಲ್ಲಿನ ಕಾರ್ಖಾನೆಗಳಿಗೆ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡಲಾಗುವುದು. ರಾಯಪುರ ವಿಮಾನ ನಿಲ್ದಾಣದ ಬಳಿ ಏರೋಸಿಟಿ ಸ್ಥಾಪನೆ, ಕಾರ್ಮಿಕರಿಗೆ ವಸತಿ ನೆರವು ಯೋಜನೆ ಮತ್ತು ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವ ಯೋಜನೆ ಸೇರಿದಂತೆ ಹಲವಾರು ಘೋಷಣೆಗಳನ್ನು ಮಾಡಿದರು.


ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ


ಅಲ್ಲದೇ ಈ ಬಾರಿಯ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಅವರು, ಮುಂದಿನ ಹಣಕಾಸು ವರ್ಷದಿಂದ (2023-24) ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡಲಾಗುವುದು" ಎಂದು ಘೋಷಿಸಿದರು.


Bhupesh Baghel


ಉದ್ಯೋಗ ಸೃಷ್ಟಿಗೆ ಏರೋಸಿಟಿ ಅಭಿವೃದ್ಧಿ


ರಾಯಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದ ಬಳಿ ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು, ವಿಮಾನ ನಿಲ್ದಾಣದ ಪ್ರದೇಶದ ವಾಣಿಜ್ಯ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಏರೋಸಿಟಿಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.


Bhupesh Baghel


ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಾಣ


ಮೂರು ವರ್ಷದೊಳಗೆ ಛತ್ತೀಸ್‌ಗಢ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು 50 ಸಾವಿರ ರೂ.ಗಳ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.


ಗುಡಿ ಕೈಗಾರಿಕೆ ಆಧಾರಿತ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಮತ್ತು ಗ್ರಾಮೀಣ ಭಾಗದಲ್ಲಿರುವ ಜನರ ಉದ್ಯೋಗ ಮತ್ತು ಆದಾಯವನ್ನು ಹೆಚ್ಚಿಸಲು, ಬಾಘೆಲ್ ರಾಜ್ಯದಲ್ಲಿ ಗ್ರಾಮೀಣ ಉದ್ಯಮ ನೀತಿಯನ್ನು ರೂಪಿಸುವುದಾಗಿ ಘೋಷಿಸಿದರು.


ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತೇಜಿಸಲು ಹೊಸ ಯೋಜನೆ


ಇದಲ್ಲದೆ, ಮಹಿಳೆಯರಿಗೆ, ಮಹಿಳಾ ಉದ್ಯಮಗಳನ್ನು ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಲು ಮತ್ತು ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತೇಜಿಸಲು ಹೊಸ ಯೋಜನೆಯನ್ನು ಸಹ ತರಲಾಗುವುದು ಎಂದು ಹೇಳಿದರು. ಇದೇ ವೇಳೆ ಬುಡಕಟ್ಟು ಸಂಸ್ಕೃತಿ ಮತ್ತು ಹಬ್ಬಗಳನ್ನು ಸಂರಕ್ಷಿಸಲು ರಾಜ್ಯ ಸರ್ಕಾರ ಸಂಕಲ್ಪ ಮಾಡಿದೆ ಎಂದು ಬಾಘೆಲ್ ಪ್ರತಿಪಾದಿಸಿದರು.




ಇದನ್ನೂ ಓದಿ: Explained: ಪಂಜಾಬ್ ಮತ್ತು ಚಂಡೀಗಢ ವಿಶ್ವವಿದ್ಯಾಲಯ ಒಂದೇ ಅಲ್ಲ; ವಿಡಿಯೋ ಸೋರಿಕೆಯಿಂದ ಮತ್ತೆ ಮರುಕಳಿಸಿತು ಹಳೆ ವಿವಾದ


ಬುಡಕಟ್ಟು ಸಮುದಾಯ ಹಬ್ಬ ಆಚರಿಸಲು ಪ್ರತಿ ವರ್ಷ 10 ಸಾವಿರ ನೆರವು


ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಬುಡಕಟ್ಟು ಪ್ರಾಬಲ್ಯದ ಬಸ್ತಾರ್ ಮತ್ತು ಸುರ್ಗುಜಾ ವಿಭಾಗಗಳು ಮತ್ತು ಪರಿಶಿಷ್ಟ ಪ್ರದೇಶಗಳಲ್ಲಿ ಬುಡಕಟ್ಟು ಸಮುದಾಯಗಳ ಹಬ್ಬಗಳನ್ನು ಆಯೋಜಿಸಲು ಪ್ರತಿ ಗ್ರಾಮ ಪಂಚಾಯಿತಿಗೆ ಪ್ರತಿ ವರ್ಷ 10,000 ರೂ.ಗಳ ನೆರವು ನೀಡಲಾಗುವುದು ಎಂದು ತಿಳಿದರು.

Published by:Monika N
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು