ನವದೆಹಲಿ(ಆ.16): ಬರೋಬ್ಬರಿ 15 ವರ್ಷಗಳ ಬಳಿಕ ಛತ್ತೀಸ್ಗಢದ ನಕ್ಸಲ್ ಪೀಡಿತ ಬಿಜಾಪುರ್ ಜಿಲ್ಲೆಗೆ ಬಸ್ ಸಂಚಾರ ಪ್ರಾರಂಭವಾಗಿದೆ. ಭಾನುವಾರ ಅಂದರೆ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಸ್ ಸೌಲಭ್ಯವನ್ನು ನೀಡಲಾಯಿತು. ನಕ್ಸಲರ ಚಟುವಟಿಕೆಗಳಿಂದ ಬೇಸತ್ತಿದ್ದ ಸ್ಥಳೀಯ ಜನರಿಗೆ ಬಸ್ ಸೌಕರ್ಯ ಕೊಂಚ ರಿಲೀಫ್ ನೀಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
25 ಕಿ.ಮೀ ದೂರದ ಬಿಜಾಪುರ-ಗಂಗಲೂರ್ ರಸ್ತೆ ಮಾರ್ಗಕ್ಕೆ ಬಸ್ ಸಂಚಾರ ಪುನರ್ ಆರಂಭವಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ಮತ್ತು ಪಾರ್ಲಿಮೆಂಟರಿ ಸೆಕ್ರೆಟರಿ ಶಿಶುಪಾಲ್ ಸೋರಿ ಭಾನುವಾರ ಗಂಗಲೂರಿನಲ್ಲಿ ಬಿಜಾಪುರದಿಂದ ಗಂಗಲೂರ್ ಗ್ರಾಮಕ್ಕೆ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.
ಇದೇ ವೇಳೆ ಗಂಗಲೂರ್ ಸರಪಂಚ್ ರಾಜು ಕಲ್ಮು ಮಾತನಾಡಿ, ಇಲ್ಲಿನ ಜನರು ಬಸ್ಗಳ ಮೇಲೆ ತೀರಾ ಅವಲಂಬಿತರಾಗಿದ್ದಾರೆ. ಹೀಗಾಗಿ ಇವರಿಗೆ ಬಸ್ ಸೌಕರ್ಯದ ಅವಶ್ಯಕತೆ ಬಹಳಷ್ಟಿದೆ ಎಂದು ಹೇಳಿದರು.
ಇದನ್ನೂ ಓದಿ:Haiti Earthquake: ಭೀಕರ ಭೂಕಂಪಕ್ಕೆ ತತ್ತರಿಸಿದ ಹೇತಿ; ಸಾವಿನ ಸಂಖ್ಯೆ 1200ಕ್ಕೆ ಏರಿಕೆ, 5700 ಮಂದಿಗೆ ಗಾಯ
ಮತ್ತೆ ಬಸ್ ಸಂಚಾರ ಆರಂಭ ಮಾಡಿದ್ದು, ಇಲ್ಲಿನ ಸ್ಥಳೀಯ ಜನರಿಗೆ ಸಾಕಷ್ಟು ನೆಮ್ಮದಿ ನೀಡಿದೆ. ಅದರಲ್ಲೂ ಮಹಿಳೆಯರು, ಮಕ್ಕಳು ಮತ್ತು ವಯಸ್ಸಾದವರಿಗೆ ಬಸ್ಗಳ ಮೇಲೆ ಹಚ್ಚು ಅವಲಂಬಿತರಾಗಿದ್ದರು. ಈಗ ಇಲ್ಲಿನ ಜನರು ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್(ಬಸ್ತಾರ್ ರೇಂಜ್) ಸುಂದರ್ರಾಜ್ ಪಿ ಮಾತನಾಡಿ, ಈ ಪ್ರದೇಶದಲ್ಲಿ ಮಾವೋವಾದಿಗಳ ಅಟ್ಟಹಾಸ ಹೆಚ್ಚಾಗಿದ್ದರಿಂದ ಕಳೆದ 15 ವರ್ಷಗಳಿಂದ ಈ ಮಾರ್ಗದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಬಿಜಾಪುರ-ಗಂಗಲೂರ್ ಮಾರ್ಗದಲ್ಲಿ ಈಗಾಗಲೇ ಹಳೇ ರಸ್ತೆಯೇ ಇದ್ದು, ಬಸ್ ಸಂಚಾರ ಭಾನುವಾರದಿಂದ ಪ್ರಾರಂಭವಾಗಿದೆ. ಭದ್ರತಾ ಪಡೆಯ ಕಾವಲಿನೊಂದಿಗೆ ಬಸ್ ಸಂಚಾರವನ್ನು ಶುರು ಮಾಡಲಾಗಿದೆ. ಸಿಆರ್ಪಿಎಫ್ 85ನೇ ಬೆಟಾಲಿಯನ್ ಬಿಜಾಪುರ್-ಗಂಗಲೂಲರ್ ಮಾರ್ಗದಲ್ಲಿ ಬೀಡುಬಿಟ್ಟಿದೆ.
ಇದನ್ನೂ ಓದಿ:Petrol Price Today: ಕಳೆದೊಂದು ತಿಂಗಳಿಂದ ಬದಲಾಗದ ಪೆಟ್ರೋಲ್-ಡೀಸೆಲ್ ಬೆಲೆ; ಇಂದಿನ ದರ ಹೀಗಿದೆ
ಇನ್ನು, ಗಂಗಲೂರಿನ ಜೊತೆಗೆ ಮಿರ್ತೂರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಇದು ಬಿಜಾಪುರದ ಭೈರಮಗರ್ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ.
ಈ ರಸ್ತೆ ಸಂಪರ್ಕ ಹಳ್ಳಿ ಜನರಿಗೆ ಸಹಾಯ ಮಾಡುತ್ತದೆ. ಅದರಲ್ಲೂ ಬುಡಕಟ್ಟಿನ ಜನರು ರಾಜ್ಯ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಲು ಹಾಗೂ ನೇರವಾಗಿ ಆಡಳಿತ ಕೇಂದ್ರದೊಂದಿಗೆ ಸಂಪರ್ಕ ಹೊಂದಲು ಸಹಕರಿಸುತ್ತದೆ ಎಂದು ಐಜಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ