ಛತ್ತೀಸ್‌ಗಢ: ಭಾರತದಲ್ಲಿ (in India), ಅದರಲ್ಲೂ ಹಿಂದೂ ಧರ್ಮದಲ್ಲಿ (Hindu Religion) ಗೋವಿಗೆ (Cow) ಅಂತ್ಯಂತ ಮಹತ್ವದ ಸ್ಥಾನ ನೀಡಲಾಗಿದೆ. ಹೋರಿಗಳನ್ನು ಬಸವಣ್ಣ, ಶಿವನ (Shiva) ವಾಹನ ಅಂತ ಗೌರವಿಸಲಾಗುತ್ತದೆ. ಹಸುಗಳನ್ನು ಗೋಮಾತೆ ಅಂತ ಕರೆದು, ಪೂಜಿಸಿ ಗೌರವಿಸಲಾಗುತ್ತದೆ. ಗೋವಿನ ಮೂತ್ರ (Urine), ಸಗಣಿ (Dung), ಹಾಲು (Milk) ಎಲ್ಲವೂ ಶ್ರೇಷ್ಠ ಎನ್ನುವುದು ಹಿಂದೂ ಧರ್ಮೀಯರ ನಂಬಿಕೆ. ಗೋಮೂತ್ರ ಹಲವು ರೋಗಗಳಿಗೆ (Dieses) ರಾಮಬಾಣ ಎನ್ನುವುದು ಅನೇಕ ಪ್ರಯೋಗಗಳಿಂದ ಸಾಬೀತಾಗಿದೆ. ಇದೀಗ ಗೋಮೂತ್ರಗಳಿಗೆ ಮತ್ತೆ ಡಿಮ್ಯಾಂಡ್ ಬಂದಿದೆ. ಛತ್ತೀಸ್‌ಗಢ (Chhattisgarh) ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈಗ ಗೋವಿನ ಮೂತ್ರಕ್ಕೆ ಭಾರೀ ಬೆಡಿಕೆ ಬಂದಿದ್ಯಂತೆ.
ಸರ್ಕಾರದಿಂದಲೇ ಗೋಮೂತ್ರ ಖರೀದಿಗೆ ನಿರ್ಧಾರ
ಛತ್ತೀಸ್‌ಗಢ ರಾಜ್ಯ ಸರ್ಕಾರ ಇದೀಗ ಗೋಮೂತ್ರ ಖರೀದಿಗೆ ಮುಂದಾಗಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ನಿನ್ನೆ ಸರ್ಕಾರದ ಆರೋಗ್ಯ ಇಲಾಖೆಯಿಂದ ಔಷಧ ತಯಾರಿಸಲು ಗೋಮೂತ್ರವನ್ನು ಖರೀದಿಸುವುದಾಗಿ ಘೋಷಿಸಿದ್ದಾರೆ. ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಯಲ್ಲಿ ಎರಡು ಸ್ವತಂತ್ರ ಜಾನುವಾರು ಆಶ್ರಯ ಕೇಂದ್ರಗಳಲ್ಲಿ ಗೋಮೂತ್ರ ಸಂಗ್ರಹಣೆಯನ್ನು ಮಾಡಲು ನಿರ್ಧರಿಸಲಾಗಿದೆ.
ಸ್ಥಳೀಯ ಹಬ್ಬಕ್ಕಾಗಿ ಗೋಮೂತ್ರದ ಬಳಕೆ
ಸರ್ಕಾರವು ಜುಲೈ 28 ರಂದು ಸ್ಥಳೀಯ ಹಬ್ಬ 'ಹರೇಲಿ'ಯಿಂದ ಪ್ರತಿ ಲೀಟರ್‌ಗೆ ಕನಿಷ್ಠ ರೂ 4 ದರದಲ್ಲಿ ಗೋಮೂತ್ರವನ್ನು ಖರೀದಿಸಲು ಪ್ರಾರಂಭಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Buffalo: ಕಿತ್ತೋದ ಬಸ್ ನಿಲ್ದಾಣದ ಅದ್ಧೂರಿ ಉದ್ಘಾಟನೆ; ಚೀಫ್ ಗೆಸ್ಟ್ ಆಗಿ ಬಂದಿದ್ದು ಎಂಎಲ್ಎ ಅಲ್ಲ, ಎಮ್ಮೆ!
‘ಗೋದಾನ ನ್ಯಾಯ ಯೋಜನೆ ಅಡಿಯಲ್ಲಿ ಗೋಮೂತ್ರ ಖರೀದಿ
ಹಸುವಿನ ಸಗಣಿ ಸಂಗ್ರಹಣೆಯನ್ನು ಒಳಗೊಂಡಿರುವ ಪ್ರಮುಖ 'ಗೋಧನ್ ನ್ಯಾಯ್ ಯೋಜನೆ'ಯನ್ನು ಎರಡು ವರ್ಷಗಳ ಹಿಂದೆ ದನ-ಪಾಲಕರು, ಸಾವಯವ ಕೃಷಿಕರಿಗೆ ಆದಾಯವನ್ನು ಒದಗಿಸುವ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಜಾರಿಗೆ ತರಲಾಯಿತು. ಅದರ ಅಡಿಯಲ್ಲಿಯೇ ಲೀಟರ್‌ಗೆ 4 ರೂಪಾಯಿಯಂತೆ ಗೋಮೂತ್ರ ಖರೀದಿಗೆ ಸರ್ಕಾರ ಮುಂದಾಗಿದೆ.
ಜಾನುವಾರು ಆಶ್ರಯ ಕೇಂದ್ರಗಳಲ್ಲಿ ಗೋಮೂತ್ರ ಸಂಗ್ರಹಣೆ
"ಮೊದಲ ಹಂತದಲ್ಲಿ, ಪ್ರತಿ ಜಿಲ್ಲೆಯಲ್ಲಿ ಎರಡು ಸ್ವತಂತ್ರ 'ಗೌಥಾನ್' ಅಂದರೆ ಜಾನುವಾರು ಆಶ್ರಯ ಕೇಂದ್ರಗಳಲ್ಲಿ ಗೋ ಮೂತ್ರ ಸಂಗ್ರಹಣೆಯನ್ನು ಮಾಡಲಾಗುತ್ತದೆ. ಗೌತನ್ ನಿರ್ವಹಣಾ ಸಮಿತಿಯು ಸ್ಥಳೀಯ ಮಟ್ಟದಲ್ಲಿ ಗೋಮೂತ್ರದ ದರವನ್ನು ನಿಗದಿಪಡಿಸಲು ಅರ್ಹವಾಗಿದೆ. ಜಿಲ್ಲಾ ಕೇಂದ್ರಗಳಲ್ಲಿರುವ ಗೋಠಾಣೆಗಳು (ಗೋಶಾಲೆ) ಗೋಮೂತ್ರ ಖರೀದಿಸಲಿವೆ. ಆಯಾ ಜಿಲ್ಲೆಯ ರೈತರು ಸಂಗ್ರಹಿಸಿ ಗೋಮೂತ್ರವನ್ನು ಈ ಗೋಠಾಣೆಗಳಿಗೆ ತಂದು ನೀಡಬೇಕು’ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕೃಷಿ ಅಭಿವೃದ್ಧಿ ಮತ್ತು ರೈತರು ಕಲ್ಯಾಣ ಇಲಾಖೆಯು ಪ್ರತಿ ಲೀಟರ್‌ಗೆ ಕನಿಷ್ಠ 4 ರೂಪಾಯಿ ಪಾವತಿಸುವುದಾಗಿ ಸರ್ಕಾರ ಹೇಳಿದೆ.
ಸಗಣಿ ಪ್ರತಿ ಕೆಜಿಗೆ 2 ರೂಪಾಯಿ
‘ಗೋದಾನ ನ್ಯಾಯ ಯೋಜನೆ 2020 ರಲ್ಲಿ ಆರಂಭಿಸಲಾಯಿತು. ಈಗಾಗಲೇ ಈ ಯೋಜನೆಯಲ್ಲಿ ಸಗಣಿಯನ್ನು ಪ್ರತಿ ಕೆಜಿಗೆ 2 ರೂಪಾಯಿಗಳಂತೆ ನೀಡಿ ಖರೀದಿಸಲಾಗುತ್ತಿದೆ. ಇಲ್ಲಿವರೆಗೆ 150 ಕೋಟಿ ರೂಪಾಯಿಯ ಸಗಣಿ ಖರೀದಿಸಿ ಸಾವಯವ ಮಿಷನ್‌ಗೆ ನೀಡಲಾಗಿದೆ’ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಸ್ವ ಸಹಾಯ ಸಂಘಗಳು 20 ಲಕ್ಷ ಕ್ವಿಂಟಲ್ ವರ್ಮಿಕಾಂಪೋಸ್ಟ್, ಸೂಪರ್ ಕಾಂಪೋಸ್ಟ್ ಮತ್ತು ಸೂಪರ್ ಪ್ಲಸ್ ಕಾಂಪೋಸ್ಟ್ ಉತ್ಪಾದಿಸಿದ್ದು, ಇದಕ್ಕಾಗಿ 143 ಕೋಟಿ ರೂ.ಗಳನ್ನು ಪಡೆದಿವೆ ಅಂತ ಸರ್ಕಾರದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Water Problem: ನಾಯಿ ಸ್ನಾನ ಮಾಡೋ ನೀರನ್ನು ಕುಡಿಯುತ್ತಾರೆ ಇಲ್ಲಿನ ಜನ! ಜೀವಜಲಕ್ಕಾಗಿ ಪರದಾಟ
ಗೋಮೂತ್ರದಲ್ಲಿ ಏನಿರುತ್ತದೆ?
ಗೋಮೂತ್ರದಿಂದ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಗೋಮೂತ್ರ ತನ್ನಲ್ಲಿ ಒಳಗೊಂಡಿರುವ ಕೆಲವೊಂದು ವಿಶೇಷ ಬಗೆಯ ಮನುಷ್ಯನಿಗೆ ಉಪಯುಕ್ತವಾದ ಅಂಶಗಳನ್ನು ನೋಡುವುದಾದರೆ ನೀರು, ಉಪ್ಪಿನ ಅಂಶ, ಯೂರಿಯಾ, ಖನಿಜಾಂಶಗಳು ಮನುಷ್ಯನಿಗೆ ಉಪಯೋಗಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ