Scorpion Sting: ಸರ್ಕಾರಿ ಶಾಲೆಯಲ್ಲಿ ಚೇಳು ಕುಟುಕಿ ವಿದ್ಯಾರ್ಥಿನಿ ಸಾವು

Scorpion Sting: ಸರ್ಕಾರಿ ಶಾಲೆಯೊಂದರಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳು ಚೇಳು ಕಡಿತದಿಂದ ಸಾವನ್ನಪ್ಪಿದ್ದಾಳೆ.

ಚೇಳು

ಚೇಳು

  • Share this:
ಛತ್ತೀಸ್​ಗಡ(ಜು.01): ಛತ್ತೀಸ್‌ಗಢದ ಬೆಮೆತಾರಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ (Govt School) ಎಂಟು ವರ್ಷದ ಬಾಲಕಿಯೊಬ್ಬಳು (Girl) ಚೇಳು ಕಡಿತದಿಂದ (Scorpion Sting) ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಬಂಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ (Govt School) ಬುಧವಾರ ಈ ಘಟನೆ ನಡೆದಿದೆ. 2ನೇ ತರಗತಿ ವಿದ್ಯಾರ್ಥಿನಿ ದಿವ್ಯಾ ಮಾಂಡವಿ ಬಿಡುವಿನ ವೇಳೆ ಆಟವಾಡುತ್ತಿದ್ದಾಗ ಚೇಳು ಕುಟುಕಿದೆ ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಕೆಯನ್ನು ಮೊದಲು ಸಮೀಪದ ದಾಧಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮತ್ತು ನಂತರ ಬೆಮೆತಾರಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ದಾರಿಯಲ್ಲೇ ಸಾವನ್ನಪ್ಪಿದ ಬಾಲಕಿ

ಆದರೆ ಆಕೆಯ ಸ್ಥಿತಿ ಚಿಂತಾಜನಕವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರು ಆಕೆಯನ್ನು ರಾಜಧಾನಿ ರಾಯ್‌ಪುರಕ್ಕೆ ಸ್ಥಳಾಂತರಿಸುವಂತೆ ಪೋಷಕರಿಗೆ ಸೂಚಿಸಿದ್ದಾರೆ. ರಾಯಪುರಕ್ಕೆ ಹೋಗುವ ದಾರಿಯಲ್ಲಿ ಸಿಮ್ಗಾ ಬಳಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಂತಾಪ ಸೂಚಿಸಿದ ಸಿಎಂ

ಘಟನೆಯ ಬಗ್ಗೆ ಮುಖ್ಯಮಂತ್ರಿ ಭೂಪೇಶ್ ಬಘೇಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. ಸಿಎಂ ನಿರ್ದೇಶನದ ಮೇರೆಗೆ ಬೆಮೆತಾರಾ ಜಿಲ್ಲಾ ಶಿಕ್ಷಣಾಧಿಕಾರಿಗಳು ಬಾಲಕಿಯ ತಂದೆಗೆ 1 ಲಕ್ಷ ರೂ. ಚೆಕ್ ನೀಡಿದ್ದು, 4 ಲಕ್ಷ ರೂ.

ಬೀದಿ ನಾಯಿ ದಿನಾ ಇರೋದೆ ಇದು ಅಂತ ನಿರ್ಲಕ್ಷ್ಯ ಮಾಡಲೇಬೇಡಿ. ಬೆಚ್ಚಿಬೀಳಿಸುವ ಘಟನೆಯೊಂದು ಕೇರಳದಲ್ಲಿ ವರದಿಯಾಗಿದೆ. ಹೌದು. ನಾಯಿ ಕಡಿತಕ್ಕೊಳಗಾದ (Dog Bite) ಒಂದೇ ತಿಂಗಳಿಗೆ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ (Kerala) ವರದಿಯಾಗಿದೆ. ಕೇರಳದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನಾಯಿ ಕಚ್ಚಿ ರೇಬಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಒಂದು ತಿಂಗಳ ನಂತರ ಜೂನ್ 30 ಗುರುವಾರ ಮುಂಜಾನೆ ಕೊನೆಯುಸಿರೆಳೆದಿದ್ದಾಳೆ. ಪಾಲಕ್ಕಾಡ್ (Palakkad) ಜಿಲ್ಲೆಯ ಮಂಕರ ಪ್ರದೇಶದಲ್ಲಿ ವಾಸಿಸುತ್ತಿದ್ದ ಶ್ರೀಲಕ್ಷ್ಮಿ (18) ಮೇ 30 ರಂದು ಕಾಲೇಜಿಗೆ (College) ತೆರಳುತ್ತಿದ್ದಾಗ ನಾಯಿ ಕಚ್ಚಿತ್ತು. ಅವಳು ಕೊಯಮತ್ತೂರಿನ ಕಾಲೇಜಿನಲ್ಲಿ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪದವಿ (BCA) ಓದುತ್ತಿದ್ದಳು. ಅಲ್ಲಿ ಅವಳು ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದಳು.

ಸಾಯುವ ಎರಡು ದಿನ ಮೊದಲು ಕಾಣಿಸಿಕೊಂಡ ರೇಬೀಸ್ ಲಕ್ಷಣ

ಆ್ಯಂಟಿ ರೇಬಿಸ್ ಲಸಿಕೆಯನ್ನು ನಾಲ್ಕು ಬಾರಿ ತೆಗೆದುಕೊಂಡ ನಂತರ, ಶ್ರೀಲಕ್ಷ್ಮಿ ಅವರಿಗೆ ಆರಂಭದಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದಿಲ್ಲ. ಸಾಯುವ ಎರಡು ದಿನಗಳ ಮೊದಲು ಆಕೆ ರೋಗಲಕ್ಷಣಗಳನ್ನು ತೋರಿಸಲಾರಂಭಿಸಿದಳು. ಮೊದಲು ಪಾಲಕ್ಕಾಡ್‌ನ ಮಂಕರದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇದನ್ನೂ ಓದಿ: Dog Bite: ನಾಯಿ ಕಚ್ಚಿದ್ರೆ ನಿರ್ಲಕ್ಷ್ಯ ಬೇಡ, ನಾಯಿ ಕಚ್ಚಿ 1 ತಿಂಗಳಲ್ಲಿ ಯುವತಿ ಸಾವು

ಚಿಕಿತ್ಸೆ ನೀಡುತ್ತಿರುವಾಗಲೇ ಸಾವು

ನಂತರ ತೀವ್ರ ಜ್ವರದಿಂದ ಬಳಲುತ್ತಿದ್ದ ಆಕೆಯನ್ನು ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿತ್ತು. ಆಕೆಗೆ ರೇಬಿಸ್‌ನ ಎಲ್ಲಾ ಲಕ್ಷಣಗಳಿವೆ ಎಂದು ಆಸ್ಪತ್ರೆಯವರು ತಿಳಿಸಿದ್ದು, ಅದಕ್ಕೆ ಚಿಕಿತ್ಸೆ ಆರಂಭಿಸಿದ್ದಾರೆ. ಆದರೆ, ಜೂನ್ 30 ರಂದು ಶ್ರೀಲಕ್ಷ್ಮಿ ನಿಧನರಾದರು.

ವರದಿಗಳ ಪ್ರಕಾರ, ಮೇ 29 ರಂದು ನಾಯಿ ತನ್ನ ಮಾಲೀಕರಿಗೆ ಕಚ್ಚಿದೆ. ದು ದಿನದ ನಂತರ ಶ್ರೀಲಕ್ಷ್ಮಿಯನ್ನು ಕಚ್ಚಿದೆ. ಮಾಲೀಕರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಕಾಸರಗೋಡು ಜಿಲ್ಲೆಯ 7 ವರ್ಷದ ಬಾಲಕನ ಮರಣವು ರೇಬೀಸ್‌ನಿಂದ ಸಾವನ್ನಪ್ಪಿದವರ ಬಗ್ಗೆ ಅಧ್ಯಯನದ ಬೇಡಿಕೆಗೆ ಕಾರಣವಾಯಿತು. ವಿಶೇಷವಾಗಿ ಲಸಿಕೆ ಹಾಕಿಸಿಕೊಂಡ ಜನರಲ್ಲಿ ಇದು ಕಾಣಿಸಿಕೊಂಡಿತು. ಈ ಪ್ರಕರಣದಲ್ಲಿ 7 ವರ್ಷದ ಬಾಲಕ ಬೀದಿ ನಾಯಿ ಕಚ್ಚಿದ ನಂತರ ರೇಬೀಸ್ ಲಸಿಕೆಯನ್ನು ಮೊದಲ ಡೋಸ್ ತೆಗೆದುಕೊಂಡಿದ್ದನು ಆದರೆ ಮೂರು ವಾರಗಳ ನಂತರ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: Manipur Landslide: ಮಣಿಪುರ ಭೂಕುಸಿತಕ್ಕೆ 7 ಯೋಧರು ಸೇರಿದಂತೆ 14 ಮಂದಿ ಬಲಿ, 25 ಸೈನಿಕರು ನಾಪತ್ತೆ

ರೇಬೀಸ್ ವೈರಸ್ ಲಿಸ್ಸಾವೈರಸ್ ಫ್ಯಾಮಿಲಿಗೆ ಸೇರಿದೆ. ರೇಬೀಸ್-ಸೋಂಕಿತ ಪ್ರಾಣಿಗೆ ಒಡ್ಡಿಕೊಂಡ ನಂತರ ಆಂಟಿ-ರೇಬೀಸ್ ಲಸಿಕೆಯನ್ನು ಜನರಿಗೆ ನೀಡಲಾಗುತ್ತದೆ. ಇದನ್ನು ನಾಲ್ಕು ಡೋಸ್‌ಗಳಲ್ಲಿ ಕೆಲವು ವಾರಗಳ ಅವಧಿಯಲ್ಲಿ ನೀಡಲಾಗುತ್ತದೆ. ಯಾರಿಗಾದರೂ ಸೋಂಕಿತ ಪ್ರಾಣಿ ಕಚ್ಚಿದಾಗ ತೆಗೆದುಕೊಳ್ಳಬೇಕಾದ ತಕ್ಷಣದ ಕ್ರಮಗಳೆಂದರೆ ಟೆಟನಸ್ ಟಾಕ್ಸಾಯ್ಡ್ ಚುಚ್ಚುಮದ್ದನ್ನು ನೀಡಿದ ನಂತರ ಸೋಪ್ ಮತ್ತು ನೀರಿನಿಂದ ಗಾಯವನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸುವುದು. ಇದರ ನಂತರ ಲಸಿಕೆ ನೀಡಲಾಗುತ್ತದೆ.
Published by:Divya D
First published: