43 Naxals surrender in Chhattisgarh| ಛತ್ತೀಸ್​ಗಢದ ಸುಕ್ಮಾದಲ್ಲಿ 43 ನಕ್ಸಲರು ಶರಣಾಗತಿ!

ಇತ್ತೀಚಿನ ನಕ್ಸಲ್ ಶರಣಾಗತಿಯೊಂದಿಗೆ, ಛತ್ತೀಸ್​ಗಢದಲ್ಲಿ ಈ ವರ್ಷ ಆಗಸ್ಟ್‌ನಲ್ಲಿ ಆರಂಭವಾದ 'ಪುನಾ ನರ್ಕೋಮ್' ಅಭಿಯಾನದ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 176 ನಕ್ಸಲರು ಹಿಂಸಾಚಾರವನ್ನು ತೊರೆದಿದ್ದಾರೆ ಎಂದು ತಿಳಿದುಬಂದಿದೆ.

ನಕ್ಸಲ್ ಕಾರ್ಯಾಚರಣೆ (ಪ್ರಾತಿನಿಧಿಕ ಚಿತ್ರ).

ನಕ್ಸಲ್ ಕಾರ್ಯಾಚರಣೆ (ಪ್ರಾತಿನಿಧಿಕ ಚಿತ್ರ).

 • Share this:
  ಸುಕ್ಮಾ (ಅಕ್ಟೋಬರ್​ 21); ಛತ್ತೀಸ್‌ಗಢದ (Chhattisgarh) ಮಾವೋವಾದ (Maoist Ideology) ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಒಂಬತ್ತು ಮಹಿಳಾ ಸಿಬ್ಬಂದಿ ಸೇರಿದಂತೆ 43 ನಕ್ಸಲರು (Naxal) ಪೊಲೀಸರ ಮುಂದೆ ಬುಧವಾರ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುಕ್ಮಾ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ನಕ್ಸಲರ ದಾಳಿಗೆ ಅನೇಕ ಪೊಲೀಸರು ಮೃತಪಟ್ಟಿದ್ದಾರೆ. ಅಲ್ಲದೆ, ಅನೇಕ ನಕ್ಸಲರನ್ನೂ ಸಹ ಎನ್​ಕೌಂಟರ್ (Encounter) ಮಾಡಲಾಗಿತ್ತು. ಆದರೆ, ಇದೀಗ ಸುಕ್ಮಾ ಜಿಲ್ಲೆಯ ಹತ್ತು ಗ್ರಾಮಗಳಿಗೆ ಸೇರಿದ 43 ಕಾರ್ಮಿಕರು ಸುಕ್ಮಾ ಪಟ್ಟಣದ ಹಿರಿಯ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಅಲ್ಲದೆ, ತಾವು "ಅಮಾನವೀಯ ಮತ್ತು ಪೊಳ್ಳು" ಮಾವೋವಾದಿ ಸಿದ್ಧಾಂತದ ಬಗ್ಗೆ ನಿರಾಶೆಗೊಂಡಿದ್ದೇವೆ ಎಂದು ತಿಳಿಸಿದ್ದಾರೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.

  ನಕ್ಸಲರ ಶರಣಾಗತಿ:

  ಸುಕ್ಮಾ ಜಿಲ್ಲೆಯ ಪೋಲಿಯಾಮಿ ಲಕ್ಷ್ಮಣ್ ಎಂಬ ನಕ್ಸಲ್ ಮಿಲಿಟರಿ ಕಮಾಂಡರ್ ತಲೆಯ ಮೇಲೆ ಪೊಲೀಸರು 1 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ್ದರು. ನಿನ್ನೆ ಪೊಲೀಸರ ಎದುರು ಶರಣಾದ ಮಾವೋ ನಕ್ಸಲರ ಪಟ್ಟಿಯಲ್ಲಿ ಅವರೂ ಸಹ ಇದ್ದಾರೆ ಎನ್ನಲಾಗಿದೆ.

  ಇದಲ್ಲದೆ, ಉಳಿದ ಅಲ್ಟ್ರಾಗಳ (ನಕ್ಸಲರು) ಸೇನೆಯ ಸದಸ್ಯರು ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಟನೆ (DAKMS), ಕ್ರಾಂತಿಕಾರಿ ಮಹಿಳಾ ಆದಿವಾಸಿ ಸಂಘಟನೆ (KAMS), ಚೆಟ್ನಾ ನಾಟ್ಯ ಮಂಡಲಿ (CNM)- ಮಾವೋವಾದಿಗಳ ಎಲ್ಲಾ ನಕ್ಸಲರು ದಕ್ಷಿಣ ಬಸ್ತಾರ್‌ನ ವಿವಿಧ ಪ್ರದೇಶಗಳಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  ಇದನ್ನೂ ಓದಿ: Four Terrorists Killed in Kashmir| ಜಮ್ಮು-ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ; 4 ಉಗ್ರರ ಹತ್ಯೆ!

  "ಶರಣಾದ ನಕ್ಸಲರು 'ಪುನಾ ನಾರ್ಕೋಮ್' ಎಂದು ಕರೆಯಲ್ಪಡುವ ನಕ್ಸಲರಿಗಾಗಿ ಜಿಲ್ಲಾ ಪೊಲೀಸರು ಆರಂಭಿಸಿರುವ ಪುನರ್ವಸತಿ ಅಭಿಯಾನದಿಂದ  ಪ್ರಭಾವಿತರಾಗಿ ಶರಣಾಗಿದ್ದಾರೆ. ಶರಣಾದವರಿಗೆ  ಪುನರ್ವಸತಿ ನೀತಿಯ ಪ್ರಕಾರ ಮತ್ತೊಂದು ಬದುಕನ್ನು ಕಟ್ಟಿಕೊಡಲಾಗುವುದು" ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸುನೀಲ್ ಶರ್ಮಾ ತಿಳಿಸಿದ್ದಾರೆ.

  ಇದನ್ನೂ ಓದಿ: ಚೀನಾ-ತಾಲಿಬಾನ್ ಆಯ್ತು ಈಗ ಬಾಂಗ್ಲಾವನ್ನೂ ಕಂಡು ಹೆದರುತ್ತಿದೆಯೇ ಭಾರತ?; ಸುಬ್ರಮಣಿಯನ್ ಸ್ವಾಮಿ ಚಾಟಿ

  ಇತ್ತೀಚಿನ ನಕ್ಸಲ್ ಶರಣಾಗತಿಯೊಂದಿಗೆ, ಛತ್ತೀಸ್​ಗಢದಲ್ಲಿ ಈ ವರ್ಷ ಆಗಸ್ಟ್‌ನಲ್ಲಿ ಆರಂಭವಾದ 'ಪುನಾ ನರ್ಕೋಮ್' ಅಭಿಯಾನದ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 176 ನಕ್ಸಲರು ಹಿಂಸಾಚಾರವನ್ನು ತೊರೆದಿದ್ದಾರೆ ಎಂದು ತಿಳಿದುಬಂದಿದೆ.
  Published by:MAshok Kumar
  First published: