• Home
  • »
  • News
  • »
  • national-international
  • »
  • Coronavirus: ಈ ಚ್ಯುಯಿಂಗಮ್‌ ತಿಂತಿದ್ರೆ ಸಾಕಂತೆ.. ಕೊರೋನಾ ನಿಮ್ ಹತ್ರಾನೂ ಸುಳಿಯಲ್ವಂತೆ..!

Coronavirus: ಈ ಚ್ಯುಯಿಂಗಮ್‌ ತಿಂತಿದ್ರೆ ಸಾಕಂತೆ.. ಕೊರೋನಾ ನಿಮ್ ಹತ್ರಾನೂ ಸುಳಿಯಲ್ವಂತೆ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Coronavirus : ಇದೀಗ ಅಮೆರಿಕದ ಪೆನ್ಸಿಲ್‌ವಾನಿಯಾ ವಿಶ್ವವಿದ್ಯಾಲಯವು(University of Pennsylvania) ಚ್ಯುಯಿಂಗಮ್​​(Chewing Gum) ಒಂದನ್ನು ಅಭಿವೃದ್ಧಿಪಡಿಸಿದ್ದು ಇದು ಜೊಲ್ಲುರಸದ ಮೂಲಕ ಕೊರೋನಾ ವೈರಸ್ ಹರಡುವುದನ್ನು ಕಡಿಮೆ ಮಾಡಲಿದೆ ಎನ್ನಲಾಗಿದೆ.

  • Share this:

ಇಡೀ ವಿಶ್ವವನ್ನೇ ತನ್ನ ಕಪಿ ಮುಷ್ಟಿಯಲ್ಲಿಟ್ಟುಕೊಂಡು ಮಾಹಾಮಾರಿ ಕೊರೋನಾ(Corona) ಹಿಂಡಿ ಹಿಪ್ಪೆ ಮಾಡಿತ್ತು. ಪ್ರತಿದಿನ ಹೊಸ ಹೊಸ ರೂಪದಲ್ಲಿ ಬಂದು ಜನರ ಪ್ರಾಣ ತೆಗೆದಿತ್ತು. ಕೆಲ ಕಾಲ ಗ್ಯಾಪ್​ ಕೊಟ್ಟಿದ್ದ ಈ ಕ್ರೂರಿ, ಮತ್ತೆ ತನ್ನ ಅಟ್ಟಹಾಸವನ್ನು ಮೆರೆತಿದೆ. ಸಿಕ್ಕಸಿಕ್ಕವರ ಮೇಲೆ ಅಟ್ಯಾಕ್​(Attack) ಮಾಡುತ್ತಿದೆ. ಅದರಲ್ಲೂ ಈ ರೂಪಾಂತರಿ ವೈರಸ್(Mutant Virus)​​ಗಳ ಅಬ್ಬರ ಜೋರಾಗಿದೆ. ರೂಪಾಂತರಿ ವೈರಸ್​ಗಳು ಪ್ರಬಲಗೊಳ್ಳುತ್ತಿವೆ. ಇದೀಗ ಮತ್ತೆ ಒಮಿಕ್ರಾನ್(Omicron)​ ಎಂದ ಹೊಸ ರೂಪಾಂತರಿ ಅಲೆ ಅಪ್ಪಿಳಿಸುವ ಸಾಧ್ಯತೆ ಹೆಚ್ಚಿದೆ. ಕೊರೋನಾ ಮೊದಲ ಅಲೆ ಬಂದಾಗಿನಿಂದಲೂ ವೈದ್ಯರು(Doctors) ಇದರ ವಿರುದ್ಧ ಹೋರಾಡಲು ಮದ್ದು ಕಂಡು ಹಿಡಿಯುತ್ತಲೇ ಇದ್ದಾರೆ. ಕೊರೋನಾಗೆ ವ್ಯಾಕ್ಸಿನ್(Vaccine)​ ಕಂಡುಹಿಡಿದಿದ್ದಾರೆ. ಈ ಕೊರೋನಾ ಬರದಂತೆ ವ್ಯಾಕ್ಸಿನ್​ ನೀಡಲಾಗುತ್ತಿದೆ. ಆದರೆ ಇನ್ನೂ ಈ ಡೆಡ್ಲಿ ವೈರಸ್​​ಗೆ ಮದ್ದು(Medicine) ಸಿಕ್ಕಿಲ್ಲ. ಪ್ರತಿದಿನ ಹೊಸ ಹೊಸ ಆವಿಷ್ಕಾರಗಳುನ ನಡೆಯುತ್ತಿವೆ. ಇತ್ತಿಚೆಗೆ ಕೊರೋನಾ ವಿರುದ್ಧ ಮಾತ್ರೆ(Tablet)ಗಳನ್ನು ಸಿದ್ಧಪಡಿಸಲಾಗಿತ್ತು.  ಇದೀಗ ಅಮೆರಿಕದ ಪೆನ್ಸಿಲ್‌ವಾನಿಯಾ ವಿಶ್ವವಿದ್ಯಾಲಯವು(University of Pennsylvania) ಚ್ಯುಯಿಂಗಮ್​​(Chewing Gum) ಒಂದನ್ನು ಅಭಿವೃದ್ಧಿಪಡಿಸಿದ್ದು ಇದು ಜೊಲ್ಲುರಸದ ಮೂಲಕ ಕೊರೋನಾ ವೈರಸ್ ಹರಡುವುದನ್ನು ಕಡಿಮೆ ಮಾಡಲಿದೆ ಎನ್ನಲಾಗಿದೆ. ಈ ವಿಶೇಷ ಚ್ಯುಯಿಂಗಮ್ ಅಗಿಯುವಾಗ ಬಾಯಲ್ಲಿ ಜೊಲ್ಲುರಸದಲ್ಲಿ ನಿಲ್ಲುವ ಕೊರೋನಾ ವೈರಸ್ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ವೈರಸ್ ಹರಡುವ ವೇಗಕ್ಕೆ ತಡೆ ಒಡ್ಡುತ್ತದೆ ಎನ್ನಲಾಗಿದೆ. 


ಕೊರೋನಾ ವೈರಸ್​ ತಗುಲಿದವರು ಇದ್ದಾಗ ಮುಖ್ಯವಾಗಿ ಒಳಾಂಗಣದಲ್ಲಿ ಕೊರೋನಾವೈರಸ್ ಹನಿಗಳು, ಏರೋಸೊಲ್ಸ್‌ಗಳ ಮೂಲಕ ಹರಡುತ್ತದೆ. ಕೊರೋನಾ ಹರಡುವುದನ್ನು ತಡೆಯಲು ನಿಯಂತ್ರಿಸಲು, ಹೆಚ್ಚಾಗಿ ಭೌತಿಕ ಅಂತರ ಕಾಪಾಡಬೇಕಾಗುತ್ತದೆ. ಈ ಮೂಲಕ ಒಳಾಂಗಣ ಏರೋಸಾಲ್‌ಗಳ ಸಾಂದ್ರತೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ಸೂಚಿಸಲಾಗಿದೆ.


ಚ್ಯುಯಿಂಗಮ್ ಹೇಗೆ ವೈರಸ್ ಹರಡುವಿಕೆ ಕಡಿಮೆ ಮಾಡುತ್ತದೆ ?


ಸಂಶೋಧಕರ ಪ್ರಕಾರ ಅವರು ಅಭಿವೃದ್ಧಿಪಡಿಸಿದ ಚ್ಯುಯಿಂಗಮ್ ಅಗಿಯುತ್ತಿದ್ದರೆ ಅದು ರಿಲೀಸ್ ಮಾಡುವ ಪ್ರೊಟೀನ್ ಕೊರೋನಾವೈರಸ್‌ನ್ನು ಟ್ರಾಪ್ ಮಾಡುತ್ತದೆ. ಇದು ಕೊರೊನಾವೈರಸ್ ಭರಿತ ಹನಿಗಳ ಮೂಲಕ ಕೊರೋನಾ ಹರಡುವುದನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಈ ಚ್ಯುಯಿಂಗಮ್ ಮುಖ್ಯವಾಗಿ ವ್ಯಾಕ್ಸಿನೇಷನ್‌ ಕಾರ್ಯಕ್ರಮಕ್ಕೆ ನೆರವಾಗುವುದರ ಜೊತೆಗೆ ಲಸಿಕೆಗಳ ಕೊರತೆ ಇರುವ ರಾಷ್ಟ್ರಗಳಲ್ಲಿ ಬಹಳಷ್ಟು ಪ್ರಯೋಜನಕಾರಿಯಾಗಲಿದೆ ಎಂದಿದ್ದಾರೆ. ಸೋಂಕಿತರ ಜೊತೆ ಇದ್ದಾಗ ಈ ಚ್ಯುಯಿಂಗಮ್​ ಜಗಿಯುತ್ತಿದ್ದರೆ, ಸೋಂಕು ಹರಡಲ್ವಂತೆ.


ಇದನ್ನು ಓದಿ : Omicron ಆತಂಕದ ನಡುವೆಯೇ ದುಪ್ಪಟ್ಟಾದ ವಿಮಾನ ಪ್ರಯಾಣ ದರಗಳು


ಚ್ಯುಯಿಂಗಮ್‌ನಲ್ಲಿ ಅಂಥಾದ್ದೆನಿದೆ ?


ಚ್ಯುಯಿಂಗಮ್ ಮೇಲ್ಮೈ ACE2 ಅಂಶವನ್ನು ಪ್ರೊಟೀನ್ ಪ್ರತಿಯನ್ನು ಹೊಂದಿದ್ದು, ಇದು ಕೊರೊನಾವೈರಸ್ ಜೀವಕೋಶಗಳಿಗೆ ಸೋಂಕು ಇನ್‌ಫಟಕ್ಟ್ ಆಗಲು ಬಳಸುವ ಸ್ಪೈಕ್ ಪ್ರೋಟೀನ್ ಆಗಿದೆ. ಪ್ರಯೋಗಗಳ ಸಮಯದಲ್ಲಿ ಗಮ್‌ನಲ್ಲಿರುವ ACE2 ಗ್ರಾಹಕಗಳಿಗೆ ವೈರಸ್ ಕಣಗಳು ಲಗತ್ತಿಸಲಾಗಿದೆ. ಚ್ಯುಯಿಂಗಮ್ ಅಗಿದರೆ ವೈರಲ್ ಲೋಡ್ ಶೇಕಡಾ 95ಕ್ಕಿಂತ ಹೆಚ್ಚು ಕಡಿಮೆಯಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇನ್ನೂ ಈ ಬಗ್ಗೆ ಹಲವು ಪರೀಕ್ಷೆಗಳನ್ನು ಕೂಡ ನಡೆಸಲಾಗಿದೆ. ಸೋಂಕಿತರು ಹಾಗೂ ಸೋಂಕು ಹರದವರನ್ನು ಒಟ್ಟಿಗೆ ಸೇರಿಸಿ, ಈ ಚ್ಯುಯಿಂಗಮ್​ ತಿನ್ನಿಸಿ ಪರೀಕ್ಷೆ ಮಾಡಲಾಗಿದೆ. ಸದ್ಯಕ್ಕೆ ಈ ಚ್ಯುಯಿಂಗಮ್​ ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಕೆಲವೊಂದು ಪರೀಕ್ಷೆಗಳು ಕೊನೆ ಹಂತದಲ್ಲಿದ್ದು, ಅದೆಲ್ಲ ಮುಗಿದ ಬಳಿಕ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಅಂತ  ಸಂಶೋಧಕರು ಹೇಳಿದ್ದಾರೆ.


ಇದನ್ನು ಓದಿ : ಕೊರೋನಾದ ಹೊಸ ರೂಪಾಂತರ ಓಮಿಕ್ರಾನ್​ ಲಕ್ಷಣಗಳೇನು? ಏನೆಲ್ಲಾ ಎಚ್ಚರಿಕೆ ವಹಿಸಬೇಕು? ವೈದ್ಯರು ನೀಡಿದ್ದಾರೆ ಫುಲ್ ಡೀಟೆಲ್ಸ್


ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ ರೂಪಾಂತರಿ ಒಮಿಕ್ರಾನ್​ ಇಡೀ ವಿಶ್ವಕ್ಕೆ ಮತ್ತೆ ಆತಂಕ ಮೂಡಿಸಿದೆ.  ಈಗಲೇ ಎಲ್ಲರೂ ಎಚ್ಚೆತ್ತುಕೊಳ್ಳದಿದ್ದರೆ, ಮತ್ತೆ ಕೊರೋನಾ ಬಂದು ನಮ್ಮ ಪ್ರಾಣ ಕಸಿದು, ಬದುಕನ್ನು ಕಿತ್ತುಕೊಳ್ಳುವುದರಲ್ಲಿ ಅನುಮಾನ ಇಲ್ಲ. ಹೀಗಾಗಿ ಎಲ್ಲೆ ಹೋದರು ಮಾಸ್ಕ್​ ಮರೆಯದೇ ಧರಿಸಿ, ನಿಮ್ಮ ಕೈಗಳನ್ನು ಆಗಾಗೆ ತೊಳೆದುಕೊಳ್ಳಿ.

Published by:Vasudeva M
First published: