Robot Goes Rogue: ಬಾಲಕನ ಬೆರಳನ್ನೇ ಕಟ್ ಮಾಡಿದ ರೋಬೋಟ್‍​​, ಅಯ್ಯೋ ಆಗಿದ್ದೇನು?

ರಷ್ಯಾದಲ್ಲಿ ಚೆಸ್ ಆಡುವ ರೋಬೋಟ್‍ನ 'ಆಂಡ್ರಾಯ್ಡ್ ಗ್ಯಾಂಬಿಟ್' ಆಟವಾಡುತ್ತಿದ್ದ ಏಳು ವರ್ಷದ ಮಗುವಿನ ಬೆರಳು ಮುರಿದಿದೆ. ತನ್ನ ಸರದಿಗೆ ಕಾಯದೆ ಕ್ಷಿಪ್ರವಾಗಿ ಆಟವಾಡಿದ ಬಾಲಕನ ಬೆರಳನ್ನು ರೋಬೋಟ್ ಮುರಿದಿದೆ ಎಂದು ಸಂಘಟನಾ ಸಮಿತಿ ಸ್ಪಷ್ಟಪಡಿಸಿದೆ.

ರೋಬೋಟ್‍ನೊಂದಿಗೆ ಚೆಸ್ ಆಡುತ್ತಿದ್ದ ಬಾಲಕ

ರೋಬೋಟ್‍ನೊಂದಿಗೆ ಚೆಸ್ ಆಡುತ್ತಿದ್ದ ಬಾಲಕ

  • Share this:
ರೋಬೋಟ್ (Robot) ಒಂದು ಯಂತ್ರ. ವಿಶೇಷವಾಗಿ ಕಂಪ್ಯೂಟರ್‍ನಿಂದ ಪ್ರೋಗ್ರಾಮೆಬಲ್ ಮಾಡಬಹುದಾದ ಒಂದು ಸಂಕೀರ್ಣ ಕ್ರಿಯೆಗಳ ಸರಣಿಯನ್ನು ಸ್ವಯಂಚಾಲಿತವಾಗಿ ನಿರ್ವಹಿಸುವ ಸಾಮಥ್ರ್ಯ ಹೊಂದಿರುತ್ತದೆ. ರೋಬೋಟ್ ಅನ್ನು ಬಾಹ್ಯ ನಿಯಂತ್ರಣ ಸಾಧನದಿಂದ ಮಾರ್ಗದರ್ಶನ ಮಾಡಬಹುದು, ಅಥವಾ ನಿಯಂತ್ರಣವನ್ನು ಒಳಗೆ ಅಳವಡಿಸಬಹುದು. ಮಾನವ ರೂಪವನ್ನು ಪ್ರಚೋದಿಸಲು ರೋಬೋಟ್‍ಗಳನ್ನು ನಿರ್ಮಿಸಬಹುದು, ಆದರೆ ಹೆಚ್ಚಿನ ರೋಬೋಟ್‍ಗಳು ಕಾರ್ಯ-ನಿರ್ವಹಣೆಯ ಯಂತ್ರಗಳಾಗಿವೆ. ರಷ್ಯಾ (Russia)ದಲ್ಲಿ ಚೆಸ್ (Chess) ಆಡುವ ರೋಬೋಟ್‍ನ 'ಆಂಡ್ರಾಯ್ಡ್ ಗ್ಯಾಂಬಿಟ್' ಆಟವಾಡುತ್ತಿದ್ದ ಏಳು ವರ್ಷದ (7 years) ಮಗುವಿನ ಬೆರಳು (finger) ಮುರಿದಿದೆ. ತನ್ನ ಸರದಿಗೆ ಕಾಯದೆ ಕ್ಷಿಪ್ರವಾಗಿ ಆಟವಾಡಿದ ಬಾಲಕನ ಬೆರಳನ್ನು ರೋಬೋಟ್ ಮುರಿದಿದೆ ಎಂದು ಸಂಘಟನಾ ಸಮಿತಿ ಸ್ಪಷ್ಟಪಡಿಸಿದೆ.

7 ವರ್ಷದ ಬಾಲಕನ ಬೆರಳ ಮುರಿದ ರೋಬೋಟ್
ಜುಲೈ 19 ರಂದು ಮಾಸ್ಕೋ ಚೆಸ್ ಓಪನ್ ಟೂರ್ನಮೆಂಟ್‍ನಲ್ಲಿ ಏಳು ವರ್ಷದ ಬಾಲಕನು ವಿಶೇಷವಾದ ಚೆಸ್-ಆಡುವ ಯಂತ್ರದೊಂದಿಗೆ ಸ್ಪರ್ಧಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಚೆಸ್ ಆಡುವ ರೋಬೋಟ್‍ನ 'ಆಂಡ್ರಾಯ್ಡ್ ಗ್ಯಾಂಬಿಟ್' ಕ್ರಿಸ್ಟೋಫರ್ ಎಂಬ ಹುಡುಗನ ತೋರು ಬೆರಳನ್ನು ಹಿಡಿದು ಬಲವಾಗಿ ಹಿಂಡಿದೆ.

ಲೀಗ್ ಸಂಘಟಕರು ಏನು ಹೇಳಿದರು?
ರೋಬೋಟ್ ಆಟವಾಡಿ ಮುಗಿಸುವ ವರೆಗೆ ಕಾಯದೇ, ಬಾಲಕ ಆತುರವಾಗಿ ತನ್ನ ಆಟ ಆಡಲು ಹೋಗಿದ್ದಾನೆ. ಆದ್ದರಿಂದ ರೋಬೋಟ್ ಹುಡುಗನ ಬೆರಳನ್ನು ಮುರಿದಿದೆ ಎಂದು ಹೇಳಿದ್ದಾರೆ. ಇದೇ ಮೊದಲ ರೀತಿ ಈ ತರ ಆಗಿದೆ. ಮಗು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ. ಇದು ಕಾಕತಾಳೀಯ ಮತ್ತು ಚೆಸ್ ರೋಬೋಟ್ ತುಂಬಾ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಮತ್ತೊಂದು ರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸುತ್ತೇವೆ ಎಂದಿದ್ದಾರೆ.

ರೋಬೋಟ್ ನಡ ಬಗ್ಗೆ ವಿಶ್ಲೇಷಕರ ಹೇಳಿದ್ದೇನು?
ರೋಬೋಟ್ ಆತುರವನ್ನು ಇಷ್ಟಪಡದ ಕಾರಣ ಅದು ಕ್ರಿಸ್ಟೋಫರ್ ಅವರ ತೋರು ಬೆರಳನ್ನು ಹಿಡಿದು ಬಲವಾಗಿ ಹಿಂಡಿದೆ. ಬಾಲಕನು ರೋಬೋಟ್ ಆಡೋವರೆಗೆ ಕಾಯ ಬೇಕಿತ್ತು ಎಂದು ವಿಶಲೇಷಕರು ಹೇಳಿದ್ದಾರೆ.

ಇದನ್ನೂ ಓದಿ: Blackout Challenge: ಮಕ್ಕಳ ಸಾವಿಗೆ ಕಾರಣವಾಗುತ್ತಿದೆಯಂತೆ ಟಿಕ್‌ ಟಾಕ್‌ನ ಮಾರಣಾಂತಿಕ ಬ್ಲಾಕ್‌ಔಟ್ ಗೇಮ್‌!

ಪೋಷಕರು ಆರೋಪ ಏನು?
ರೋಬೋಟ್ ನಮ್ಮ ಮಗುವನ್ನು ಹಿಡಿಯುತ್ತಿದ್ದಂತೆ, ಪಕ್ಕದಲ್ಲಿದ್ದವರು ಧಾವಿಸಿ ಅವನನ್ನು ರೋಬೋಟ್‍ನ ಹಿಡಿತದಿಂದ ಮುಕ್ತಗೊಳಿಸಿದರು.
ನಾವು ಸ್ಥಳೀಯ ಪ್ರಾಸಿಕ್ಯೂಟರ್‍ಗೆ ದೂರು ನೀಡಲು ಅವರನ್ನು ಸಂಪರ್ಕಿಸುತ್ತೇವೆ ಎಂದು ಪೋಷಕರು ಹೇಳಿದ್ದಾರೆ.  ಅಲ್ಲದೇ ಲೀಗ್ ಸಂಘಟಕರೇ ಇದರ ಹೊಣೆ ಹೊರಬೇಕು. ನಮ್ಮ ಮಗುವಿಗೆ ಏನಾದ್ರೂ ತೊಂದರೆ ಆಗಿದ್ದರೆ ಏನು ಕಥೆ. ನೀವು ಸುರಕ್ಷತೆ ಬಗ್ಗೆ ಗಮನ ಕೊಡಬೇಕಿತ್ತು ಎಂದು ಆರೋಪಿಸಿದ್ದಾರೆ.

ಕ್ರಿಸ್ಟೋಫರ್ ಅತ್ಯುತ್ತಮ ಆಟಗಾರ
ರೋಬೋಟ್‍ನಿಂದ ಬೆರಳು ಮುರಿಸಿಕೊಂಡಿರುವ ಕ್ರಿಸ್ಟೋಫರ್ ಅತ್ಯುತ್ತಮ ಚೆಸ್ ಆಟಗಾರ. ಮಾಸ್ಕೋದಲ್ಲಿ ಒಂಬತ್ತು ವರ್ಷ ವಯಸ್ಸಿನ 30 ಅತ್ಯುತ್ತಮ ಆಟಗಾರರಲ್ಲಿ ಕ್ರಿಸ್ಟೋಫರ್ ಒಬ್ಬನಂತೆ. ಈಗ ಅವನ ಬೆರಳೇ ಮುರಿದಿರೋದ್ರಿಂದ, ಸ್ಪಲ್ಪ ದಿನ ಚೆಸ್ ಆಡಲು ಕಷ್ಟವಾಗಬಹುದು.

ಟ್ವಿಟರ್ ನಲ್ಲಿ ವಿಡಿಯೋ ವೈರಲ್
ರೋಬೋಟ್ ಬಾಲಕನ ಬೆರಳು ಮುರಿಯುತ್ತಿರುವ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಜನ ರೋಬೋಟ್‍ನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  Danger TV Shows: ರಿಯಾಲಿಟಿ ಶೋ ನೋಡಿದ ವಿದ್ಯಾರ್ಥಿಗಳು ಬಾಲಕನನ್ನೇ ಕಿಡ್ನಾಪ್ ಮಾಡಿದ್ರು! ಮುಂದೆ ನಡೆದಿದ್ದು ಮಾತ್ರ ಆಘಾತಕಾರಿ ಘಟನೆ

ಚೆಸ್‍ನಲ್ಲಿ ಯಂತ್ರ ಕಲಿಕೆ
ಚೆಸ್ ಪ್ಲೇಯಿಂಗ್ ರೋಬೋಟ್‍ಗಳು ಮತ್ತು ರೋಬೋಟ್ ಆರ್ಮ್‍ಗಳನ್ನು ಹಲವು ವರ್ಷಗಳಿಂದ ಜಾಗತಿಕ ಸಮುದಾಯದಲ್ಲಿ ಬಳಸಲಾಗುತ್ತಿದೆ.
ಸ್ಪರ್ಧೆಗಳಲ್ಲಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಕ್ರೀಡೆಯೊಂದಿಗೆ ಎಐ ಅನ್ನು ಸಂಯೋಜಿಸಲು ಪ್ರಪಂಚದಾದ್ಯಂತದ ಲೀಗ್‍ಗಳು ಅವುಗಳನ್ನು ಬಳಸುತ್ತವೆ. ಸುಲಭವಾಗಿ ಮಾಡಬಹುದಾದಂತಹವುಗಳಿಂದ ಹಿಡಿದು, ಬೋರ್ಡ್ ಸುತ್ತಲೂ ಚದುರಂಗದ ತುಂಡುಗಳನ್ನು ಸರಿಸಲು ಮಿನಿ-ರೊಬೊಟಿಕ್ ತೋಳನ್ನು ನಿಯಂತ್ರಿಸುವ ವೃತ್ತಿಪರ ಸಾಫ್ಟ್‍ವೇರ್‍ಗಳವರೆಗೆ ಇರುತ್ತದೆ.
Published by:Savitha Savitha
First published: