Cheque Rule Change: ಇನ್ಮುಂದೆ ಈ ರೀತಿ ಚೆಕ್ ಬರೆದರೆ ಚೆಕ್ ಬೌನ್ಸ್ ಆಗುತ್ತೆ ಹುಷಾರ್..!

High Value Cheques to Bounce: ಹೊಸ ನಿಯಮದ ಪ್ರಕಾರವಾಗಿ, ಚೆಕ್ ನೀಡಲು ಬಯಸುವ ವ್ಯಕ್ತಿಯು ಮೊದಲಿಗೆ ತಮ್ಮ ಖಾತೆಯನ್ನು ಹೊಂದಿರುವಂತಹ ಬ್ಯಾಂಕ್‌ಗೆ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಥವಾ ಖುದ್ದಾಗಿ ತಾವೇ ಬ್ಯಾಂಕಿಗೆ ಹೋಗಿ ತಮ್ಮ ಚೆಕ್ ವಿವರಗಳನ್ನು ನೀಡಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಮ್ಮ ದೇಶದಲ್ಲಿ ಹೆಚ್ಚುತ್ತಿರುವಂತಹ ಬ್ಯಾಂಕ್ ಸಂಬಂಧಿತ ವಂಚನೆಗಳ ಪ್ರಕರಣಗಳಿಗೆ ಕಡಿವಾಣ ಹಾಕಲು ಮತ್ತು ಇಂತಹ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಲು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜನವರಿ 2021 ರಲ್ಲಿ ‘ಪಾಸಿಟಿವ್ ಪೇ ಸಿಸ್ಟಂ’ ಹೆಸರಿನ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ಹೊಸದಾಗಿ ಪರಿಚಯಿಸಿದಂತಹ ವ್ಯವಸ್ಥೆಯಡಿಯಲ್ಲಿ ಆರ್‌ಬಿಐ, ನೀವು ನೀಡಿರುವಂತಹ ಚೆಕ್‌ನ ವಿವರಗಳನ್ನು ಮತ್ತು ನಿಮ್ಮ ವಿವರಗಳನ್ನು ಹೊಂದಿಸಿ ನೋಡಿದ ಮೇಲೆಯೇ ಅದನ್ನು ಮುಂದಿನ ಪ್ರಕ್ರಿಯೆಗೆ ಕಳುಹಿಸಲಾಗುವುದು ಎಂದು ತಿಳಿಸಿದೆ. 

    ಹೊಸ ನಿಯಮದ ಪ್ರಕಾರವಾಗಿ, ಚೆಕ್ ನೀಡಲು ಬಯಸುವ ವ್ಯಕ್ತಿಯು ಮೊದಲಿಗೆ ತಮ್ಮ ಖಾತೆಯನ್ನು ಹೊಂದಿರುವಂತಹ ಬ್ಯಾಂಕ್‌ಗೆ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಥವಾ ಖುದ್ದಾಗಿ ತಾವೇ ಬ್ಯಾಂಕಿಗೆ ಹೋಗಿ ತಮ್ಮ ಚೆಕ್ ವಿವರಗಳನ್ನು ನೀಡಬೇಕಾಗುತ್ತದೆ. ಒಂದು ವೇಳೆ ಚೆಕ್ ನೀಡಲು ಬಯಸುವ ವ್ಯಕ್ತಿಯು ಮೊದಲೇ ಬ್ಯಾಂಕ್‌ಗೆ ಈ ವಿಷಯ ತಿಳಿಸದೇ ಹೋದರೆ, ಅವರ ಚೆಕ್ ಬೌನ್ಸ್ ಆಗುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಈ ಹೊಸದಾಗಿ ಪರಿಚಯಿಸಿದ ಪದ್ದತಿಯು ಆನ್‌ಲೈನ್/ ನೆಟ್ ಬ್ಯಾಂಕಿಂಗ್ ಬಗ್ಗೆ ಗೊತ್ತಿಲ್ಲದೇ ಇರುವವರಿಗೆ ತೊಂದರೆಯನ್ನುಂಟು ಮಾಡಬಹುದು.
    ಈ ಸಮಯದಲ್ಲಿ ಗ್ರಾಹಕರು ತಾವೇ ಖುದ್ದಾಗಿ ಬ್ಯಾಂಕ್‌ಗೆ ಹೋಗಿ ವಿವರವನ್ನು ತಿಳಿಸುವುದು ಉತ್ತಮ.

    ಕೆಲವು ಬ್ಯಾಂಕ್ ಗಳು ತಮ್ಮ ಗ್ರಾಹಕರ ಅನುಕೂಲಕ್ಕಾಗಿ ಸಂದೇಶ, ಎಟಿಎಂ ಅಥವಾ ಇಮೇಲ್ ಮೂಲಕವೂ ಸಹ ಚೆಕ್ ಬಗ್ಗೆ ಮಾಹಿತಿಯನ್ನು ಬ್ಯಾಂಕಿಗೆ ತಿಳಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇಲ್ಲಿ ಬ್ಯಾಂಕ್‌ಗೆ ನೀವು ನೀಡಲು ಇಚ್ಛಿಸುವ ಚೆಕ್ ಸಂಖ್ಯೆ, ಚೆಕ್ ನೀಡುವ ದಿನಾಂಕ, ಚೆಕ್ ಯಾರಿಗೆ ಪಾವತಿಸುತ್ತಿದ್ದೀರಿ ಅವರ ಹೆಸರು, ಖಾತೆ ಸಂಖ್ಯೆ ಮತ್ತು ಮೊತ್ತ ಎಲ್ಲದರ ವಿವರಗಳನ್ನು ನೀಡಬೇಕಾಗುತ್ತದೆ. ಬ್ಯಾಂಕ್ ಸಿಬ್ಬಂದಿಗಳು, ಚೆಕ್ ನೀಡುವ ವ್ಯಕ್ತಿಯು ಒದಗಿಸಿದ ಹಳೆಯ ಚೆಕ್ ವಿವರಗಳನ್ನು ಒಮ್ಮೆ ಪರಿಶೀಲಿಸಿದ ನಂತರ ಚೆಕ್ ನೀಡಲು ಅನುಮತಿ ನೀಡುತ್ತಾರೆ.

    ಅದರಲ್ಲೂ ಭಾರಿ ಮೊತ್ತದ ಚೆಕ್ ಇದ್ದರೆ ಪರಿಶೀಲನೆಯೂ ಸಹ ಅಷ್ಟು ಕಟ್ಟುನಿಟ್ಟಿನದಾಗಿರುತ್ತದೆ. ಈಗಾಗಲೇ ದೇಶದ ಕೆಲವು ಪ್ರಮುಖ ಬ್ಯಾಂಕುಗಳು ಈ ವ್ಯವಸ್ಥೆಯನ್ನು ಜಾರಿಗೆ ತಂದಿವೆ. ಚೆಕ್‌ಗೆ ಸಂಬಂಧಿಸಿದ ವಂಚನೆಗಳನ್ನು ಮಟ್ಟ ಹಾಕಲು ಎಲ್ಲಾ ಬ್ಯಾಂಕುಗಳಿಗೆ ಭಾರಿ ಮೊತ್ತದ ಚೆಕ್‌ ಪ್ರಕ್ರಿಯೆ ನಡೆಸುವಾಗ ಈ ವ್ಯವಸ್ಥೆಯ ಮೂಲಕ ಪರಿಶೀಲಿಸಿ ಚೆಕ್ ವಿತರಿಸುವಂತೆ ಜನವರಿ 1, 2021 ರಿಂದ ಕಡ್ಡಾಯಗೊಳಿಸಲಾಗಿದೆ.

    ಇದನ್ನೂ ಓದಿ: Changes From September 1: ಸಿಲಿಂಡರ್ ಬೆಲೆಯಿಂದ PF ರೂಲ್ಸ್​​​ವರೆಗೆ ಸೆ.1ರಿಂದ ಏನೆಲ್ಲಾ ಬದಲಾಗುತ್ತಿದೆ ಗೊತ್ತಾ?

    50,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚು ಮೊತ್ತದ ಚೆಕ್ ನೀಡುವಾಗ ಈ ಪರಿಶೀಲನಾ ಪ್ರಕ್ರಿಯೆಯನ್ನು ಮಾಡಬೇಕು ಎಂದು ಆರ್‌ಬಿಐ ಕಳೆದ ವರ್ಷ ಎಲ್ಲಾ ಬ್ಯಾಂಕುಗಳಿಗೆ ಹೊರಡಿಸಿದ್ದ ಸೂಚನೆಯಲ್ಲಿ ತಿಳಿಸಿದೆ. ನಂತರ ಆರ್‌ಬಿಐ 5 ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಮೊತ್ತದ ಚೆಕ್ ಅನ್ನು ಪರಿಶೀಲಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಬ್ಯಾಂಕುಗಳಿಗೆ ತಿಳಿಸಿದೆ. ಈಗಾಗಲೇ ದೇಶದ ಅನೇಕ ಬ್ಯಾಂಕುಗಳು ಈ ಪದ್ದತಿಯನ್ನು ಅಳವಡಿಸಿಕೊಂಡಿವೆ ಮತ್ತು ಹೆಚ್ಚಿನ ಮೌಲ್ಯದ ಚೆಕ್ ವಿತರಿಸುವ ಮುನ್ನ ನೋಂದಾಯಿಸದೆ ಇದ್ದರೆ ಅಂತಹ ಚೆಕ್ ಬೌನ್ಸ್ ಆಗುತ್ತವೆ ಎಂದು ಆರ್‌ಬಿಐ ಅಧಿಕಾರಿಗಳು ಸೂಚನೆಯಲ್ಲಿ ತಿಳಿಸಿದ್ದಾರೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:Kavya V
    First published: