ಕೊರೋನಾದಿಂದಾಗಿ ಮೃತಪಟ್ಟ ದೆಹಲಿಯ ಆರೀಫ್ ಖಾನ್ ಕುಟುಂಬಕ್ಕೆ 2 ಲಕ್ಷ ಪರಿಹಾರ ನೀಡಿದ ರಾಷ್ಟ್ರಪತಿ ಭವನ

ಮೊಹಮ್ಮದ್ ಆರಿಫ್ ಅವರ ಸೇವೆಯನ್ನು ಶ್ಲಾಘಿಸಿ ಡಿಎಂ ಶಹದಾರಾ ಅವರು ನವೆಂಬರ್ 17, 2020 ರಂದು ಮೊಹಮ್ಮದ್ ಆರಿಫ್ ಅವರ ಹೆಂಡತಿ ಸುಲ್ತಾನಾ ಆರೀಫ್ ಅವರಿಗೆ ಶ್ಲಾಘನಾ ಪತ್ರವನ್ನು ನೀಡಿ ಗೌರವಿಸಿದ್ದರು.

news18-kannada
Updated:October 17, 2020, 3:04 PM IST
ಕೊರೋನಾದಿಂದಾಗಿ ಮೃತಪಟ್ಟ ದೆಹಲಿಯ ಆರೀಫ್ ಖಾನ್ ಕುಟುಂಬಕ್ಕೆ 2 ಲಕ್ಷ ಪರಿಹಾರ ನೀಡಿದ ರಾಷ್ಟ್ರಪತಿ ಭವನ
ಆರೀಫ್ ಖಾನ್ ಹೆಂಡತಿಗೆ ಚೆಕ್ ನೀಡುತ್ತಿರುವ ಅಧಿಕಾರಿ.
  • Share this:
ನವ ದೆಹಲಿ (ಅಕ್ಟೋಬರ್​ 17); ದೇಶದಲ್ಲಿ ಕೊರೋನಾ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಕಳೆದ ಮೂರು ತಿಂಗಳಿನಿಂದ ಕೊರೋನಾದಿಂದಾಗಿ ಮೃತಪಟ್ಟವರ ಶವವನ್ನು ಸಾಗಿಸಿ, ಆ ದೇಹಗಳಿಗೆ ಗೌರವಾನ್ವಿತವಾಗಿ ಅಂತ್ಯ ಸಂಸ್ಕಾರ ನಡೆಸಿದ್ದವರು ದೆಹಲಿಯ ಆಂಬ್ಯುಲೆನ್ಸ್​ ಚಾಲಕ ಆರೀಫ್​ ಖಾನ್​. ಆರೀಫ್ ಖಾನ್ ಅವರ ಈ ಸೇವೆ ದೇಶದಲ್ಲಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ, ಇದೇ ಕೆಲಸದಿಂದಾಗಿ ಆರೀಫ್ ಖಾನ್​ ಸಹ ಅಕ್ಟೋಬರ್​ 10 ರಂದು ಕೊರೋನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದರು. ಇವರ ಸಾವಿಗೆ ಇಡೀ ದೇಶ ಮರುಗಿತ್ತು. ಅಲ್ಲದೆ, ಸ್ವತಃ ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆರೀಫ್ ಖಾನ್ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದರು.

"ಆಂಬ್ಯುಲೆನ್ಸ್ ಚಾಲಕ, ದೆಹಲಿಯ ಆರಿಫ್ ಖಾನ್ ಅವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪ. ಆರೀಫ್ ಕೊವಿಡ್ -19 ರೋಗಿಗಳ 200 ಶವಗಳನ್ನು ಅವರ ಕೊನೆಯ ವಿಧಿಗಳಿಗಾಗಿ ದೋಣಿ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಇಂದು ಅವರು ಸಹ ಕೊರೊನಾ ವೈರಸ್​ಗೆ ಬಲಿಯಾದ ಸುದ್ದಿ ದುಖಃವನ್ನು ತಂದಿದೆ. ಆತನ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಸ್ಥರಿಗೆ ದುಖಃ ಬರಿಸುವ ಶಕ್ತಿಯನ್ನು ದೇವರು ನೀಡಲಿ" ಎಂದಿದ್ದರು. ಆದರೆ, ಇದೀಗ ರಾಷ್ಟ್ರಪತಿ ಭವನದಿಂದ ಆರೀಫ್ ಕುಟುಂಬಕ್ಕೆ 2 ಲಕ್ಷ ರೂ ಹಣ ಸಹಾಯ ಮಾಡಲಾಗಿದೆ. ರಾಷ್ಟ್ರಪತಿ ಭವನದಿಂದ ಇಂದು ಆರೀಫ್ ಮನೆಗೆ ಆಗಮಿಸಿದ್ದ ಅಧಿಕಾರಿಗಳು ಆರೀಫ್ ಖಾನ್ ಅವರ ಪತ್ನಿಗೆ 2 ಲಕ್ಷ ರೂ. ಗಳ ಚೆಕ್​ ನೀಡಿದ್ದಾರೆ.

ಇದನ್ನೂ ಓದಿ : ಜಾರ್ಖಂಡ್​: ಶಾಲೆಗೆ ತೆರಳಿದ್ದ 12 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆ

ಕೊರೋನಾ ವಾರಿಯರ್​ ಆಗಿದ್ದ ಆರೀಫ್ ಖಾನ್ ಮೃತಪಟ್ಟಾಗ ಆ ಸುದ್ದಿ ಹಲವಾರು ಮಾಧ್ಯಮಗಳಲ್ಲೂ ಸಹ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಈ ಸುದ್ದಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಗಮನಕ್ಕೂ ಬಂದಿತ್ತು. ಹೀಗಾಗಿ ಮೃತನ ಸೇವೆಯನ್ನು ಗೌರವಿಸುವ ಸಲುವಾಗಿ ಸ್ವತಃ ರಾಷ್ಟ್ರಪತಿ ಆತನ ಕುಟುಂಬಕ್ಕೆ 2 ಲಕ್ಷ ರೂ.ಗಳ ಚೆಕ್ ಅನ್ನು ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.

ಮೊಹಮ್ಮದ್ ಆರಿಫ್ ಅವರ ಸೇವೆಯನ್ನು ಶ್ಲಾಘಿಸಿ ಡಿಎಂ ಶಹದಾರಾ ಅವರು ನವೆಂಬರ್ 17, 2020 ರಂದು ಮೊಹಮ್ಮದ್ ಆರಿಫ್ ಅವರ ಹೆಂಡತಿ ಸುಲ್ತಾನಾ ಆರೀಫ್ ಅವರಿಗೆ ಶ್ಲಾಘನಾ ಪತ್ರವನ್ನು ನೀಡಿ ಗೌರವಿಸಿದ್ದರು. ಇದೀಗ ರಾಷ್ಟ್ರಪತಿ ಭವನದಿಂದಲೇ ಆರೀಫ್ ಕುಟುಂಬಕ್ಕೆ ಸಹಾಯ ಧನ ನೀಡಲಾಗಿರುವುದು ಉಲ್ಲೇಖಾರ್ಹ. ಮೃತ ಆರೀಫ್ ಅವರಿಗೆ 2 ಗಂಡು ಮತ್ತು 2 ಹೆಣ್ಣು ಮಕ್ಕಳಿದ್ದಾರೆ.
Published by: MAshok Kumar
First published: October 17, 2020, 3:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading