TTD: ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಬರೋಬ್ಬರಿ 9.2ಕೋಟಿ ರೂ ದಾನ ಮಾಡಿದ ಮಹಿಳೆ; ಕಾರಣ ಇದು!

ದೇವಾಲಯಕ್ಕೆ ಇಷ್ಟು ಮೊತ್ತದ ದೇಣಿಗೆಯನ್ನು ಒಬ್ಬರೇ ನೀಡಿರುವುದು ಇದೇ ಮೊದಲು ಎಂದು ಟಿಟಿಡಿ ತಿಳಿಸಿದೆ.

ತಿರುಪತಿ ವೆಂಕಟೇಶ್ವರ ಸನ್ನಿಧಿ

ತಿರುಪತಿ ವೆಂಕಟೇಶ್ವರ ಸನ್ನಿಧಿ

  • Share this:
     ತಿರುಪತಿ (ಫೆ. 18):  ದೇಶದ ಶ್ರೀಮಂತ ದೇಗುಲ ಎಂಬ ಖ್ಯಾತಿಗೆ ಪಾತ್ರವಾಗಿರುವ ದೇಗುಲ ಆಂಧ್ರಪದೇಶದ ತಿರುಪತಿ ವೆಂಕಟೇಶ್ವರ (Tirupati Venkateshwara) ಸನ್ನಿಧಿ. ತಿಮ್ಮಪ್ಪನ ದರ್ಶನಕ್ಕೆ ದೇಶ- ವಿದೇಶದಿಂದ ಭಕ್ತರು ಹರಿದು ಬರುತ್ತಾರೆ. ದಿನವೊಂದಕ್ಕೆ ಲಕ್ಷಾಂತರ ಭಕ್ತರು ತಿಮ್ಮಪ್ಪನ ದರ್ಶನಕ್ಕೆ ಹರಿದು ಬರುತ್ತಾರೆ. ಕೋವಿಡ್ ಸಮಯದಲ್ಲೂ ದಾಖಲೆ ನಿಧಿಯನ್ನು ಟಿಟಿಡಿ (TTD) ಸಂಗ್ರಹಿಸಿತು. ತಿಮ್ಮಪ್ಪನ ದರ್ಶನದ ಜೊತೆಗೆ ತಿಮ್ಮಪ್ಪನ ಸನ್ನಿಧಿಗೆ ದಾನ ನೀಡುವ ಭಕ್ತರು ಸಂಖ್ಯೆ ಕೂಡ ಕಡಿಮೆ ಇಲ್ಲ. ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಭಕ್ತರು ದೇಗುಲಕ್ಕೆ ಕೋಟಿ ಕೋಟಿ ರೂಗಳನ್ನು ದಾನ (Donation) ಮಾಡುವ ಕುರಿತು ಈ ಹಿಂದೆ ವರದಿ ಆಗಿದೆ. ಆದರೆ, ಈ ಬಾರಿ ಮಹಿಳೆಯೊಬ್ಬರು ಬರೋಬ್ಬರಿ 9. 2 ಕೋಟಿ ರೂ ದಾನ ಮಾಡಿ ಸುದ್ದಿಯಾಗಿದ್ದಾರೆ. ಸಾವಿಗೂ ಮುನ್ನ 6 ಕೋಟಿ ನೀಡಿದ್ದ ಮಹಿಳೆ ಆಕೆಯ ಕಾಲದ ನಂತರೂ ದೇಗುಲಕ್ಕೆ 3. 2 ಕೋಟಿ ರೂ ಹಣ ನೀಡುವಂತೆ ನೋಡಿಕೊಂಡಿದ್ದಾರೆ.

    ವೆಂಕಟೇಶ್ವರನ ಭಕ್ತೆಯಾಗಿದ್ದ ಚೆನ್ನೈ ನಿವಾಸಿ
    ಚೆನ್ನೈನ ನಿವಾಸಿಯಾಗಿರವ 76 ವರ್ಷದ ಪಾರ್ವತಮ್ಮ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಗೆ ಈ ಮೊತ್ತದ ಹಣವನ್ನು ದಾನ ಮಾಡಿದ್ದಾರೆ. ದೇವಾಲಯಕ್ಕೆ ಇಷ್ಟು ಮೊತ್ತದ ದೇಣಿಗೆಯನ್ನು ಒಬ್ಬರೇ ನೀಡಿರುವುದು ಇದೇ ಮೊದಲು ಎಂದು ಟಿಟಿಡಿ ತಿಳಿಸಿದೆ. ಈ ಹಿಂದೆ ಪಾರ್ವತಮ್ಮ 6 ಕೋಟಿ ಹಣವನ್ನು ದಾನ ಮಾಡಿದ್ದರು. ಅವರು ಸಾವನ್ನಪ್ಪಿದ ಬಳಿಕ ಅವರ ಸಹೋದರಿ ಉಳಿದ ಹಣವನ್ನು ದಾನ ಮಾಡಿದ್ದಾರೆ. ವೆಂಕಟೇಶ್ವರ ದೇವರ ಹೆಸರಿನಲ್ಲಿ 3.2 ಕೋಟಿ ರೂಪಾಯಿಗಳ ಡಿಮ್ಯಾಂಡ್ ಡ್ರಾಫ್ಟ್ ಅನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಗೆ ಹಸ್ತಾಂತರಿಸಿದ್ದಾರೆ.

    ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಬಳಕೆ
    ದೇಗುಲಕ್ಕೆ ದಾನ ಮಾಡಿರುವ 3.2 ಕೋಟಿ ರೂ.ಗಳನ್ನು ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ದಾನಿ ಪಾರ್ವತಮ್ಮ ಅವರ ಸಹೋದರಿ ರೇವತಿ ವಿಶ್ವನಾಥನ್ ಮನವಿ ಮಾಡಿದ್ದಾರೆ ಎಂದು ದೇವಸ್ತಾನ ಮಂಡಳಿ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ತಿಳಿಸಿದ್ದಾರೆ. ತಿರುಪತಿ ಮಂಡಳಿಯು ಈ ಆಸ್ಪತ್ರೆಯನ್ನು ನಿರ್ಮಿಸುತ್ತಿದೆ.
    ರೇವತಿ ಅವರು ತಮ್ಮ ಸಹೋದರಿಯ ಹೆಸರಿನಲ್ಲಿದ್ದ ಎರಡು ಮನೆಗಳ ದಾಖಲೆಯನ್ನು ದೇವಸ್ಥಾನದ ಟ್ರಸ್ಟ್‌ಗೆ ಹಸ್ತಾಂತರಿಸಿದ್ದಾರೆ.

    ಇದನ್ನು ಓದಿ: ಭದ್ರತಾ ಪಡೆ ಮೇಲೆ ಗ್ರೆನೇಡ್ ದಾಳಿ ನಡೆಸಿದ ಭಯೋತ್ಪಾದಕರು; ಎರಡು ಅಂಗಡಿಗಳಿಗೆ ಹಾನಿ

    ಪಾರ್ವತಮ್ಮ ಅವಿವಾಹಿತರಾಗಿದ್ದು, ವೆಂಕಟೇಶ್ವರನ ವಿಶೇಷ ಭಕ್ತೆಯಾಗಿದ್ದರು. ಈ ಮೊದಲಿನಿಂದಲೂ ಕಾಲಕಾಲಕ್ಕೆ ತಿರುಪತಿ ಮಂಡಳಿಗೆ ದೇಣಿಗೆ ನೀಡುತ್ತಿದ್ದರು. ತನ್ನ ಸಾವಿನ ನಂತರ ತನ್ನ ಆಸ್ತಿಯನ್ನು ತಿರುಪತಿ ದೇವಸ್ಥಾನಕ್ಕೆ ದಾನ ಮಾಡಬೇಕು ಎಂದು ಆಸೆ ವ್ಯಕ್ತಪಡಿಸಿದ್ದರು. ಅವರ ಬರೆದ ವಿಲ್​ನಂತೆ ಆಸ್ತಿಯನ್ನು ದೇವರಿಗೆ ಒಪ್ಪಿಸಿದ್ದೇವೆ ಎಂದು ರೇವತಿ ತಿಳಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

    ಇದನ್ನು ಓದಿ: ಅಂತರ್ಜಾತಿ ಮದುವೆಯಾದ ಮಗಳು; ಹೆಂಡತಿ- ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ

    ಒಂದೇ ದಿನದಲ್ಲಿ 84 ಕೋಟಿ ಸಂಗ್ರಹ
    ತಿರುಪತಿ ದೇವಸ್ತಾನ ಮಂಡಳಿ 230 ಕೋಟಿ ವೆಚ್ಚದಲ್ಲಿ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಮುಂದಾಗಿದೆ. ಈ ಯೋಜನೆಗಾಗಿ ದೇಣಿಗೆ ಆರಂಭಿಸಿದೆ. ಯೋಜನೆಯ ಮೊದಲ ದಿನವೇ 84 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿ ದಾಖಲೆ ನಿರ್ಮಿಸಿದೆ.
    70 ದಾನಿಗಳು ದಾನ ಮಾಡಿದ್ದು, 84 ಕೋಟಿ ರೂ ಸಂಗ್ರಹವಾಗಿದೆ. ದಾನಿಗಳಿಗೆ ಎಲ್ಲರಿಗೂ ಸೇವಾ ಚೀಟಿಯನ್ನು ಉಡುಗೊರೆಯಾಗಿ ನೀಡಲಾಗಿದೆ. ಟಿಟಿಡಿ ಸುಬ್ಬಾ ರೆಡ್ಡಿ ಅವರ ಪ್ರಕಾರ, 28 ಕಂಪನಿಗಳು ಮತ್ತು ಭಕ್ತರು ತಲಾ 1.5 ಕೋಟಿ ರೂ., 42 ದಾನಿಗಳು ತಲಾ 1 ಕೋಟಿ ರೂ. ದಾನಿಗಳಿಗಾಗಿ ಒಟ್ಟು 531 ಸೇವಾ ಟಿಕೆಟ್‌ಗಳನ್ನು ಇಡಲಾಗಿದೆ ಎಂದು ಟಿಟಿಡಿ ತಿಳಿಸಿದೆ.
    Published by:Seema R
    First published: