ಜೀನ್ಸ್​ ಧರಿಸಿದ ಯುವತಿಗೆ ಆರ್​ಟಿಓ ಅಧಿಕಾರಿ ಈ ರೀತಿ ಮಾಡೋದಾ?; ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ

ಚೆನ್ನೈ ಮೂಲದ ಯುವತಿಯೊಬ್ಬಳು ಡ್ರೈವಿಂಗ್ ಲೈಸೆನ್ಸ್​ ಮಾಡಿಸಿಕೊಳ್ಳಲು ಆರ್​ಟಿಓಗೆ ಜೀನ್ಸ್​ ಧರಿಸಿ ಡ್ರೈವಿಂಗ್ ಟೆಸ್ಟ್​ಗೆ ಹೋಗಿದ್ದಳು. ಆದರೆ, ಆರ್​ಟಿಓ ಅಧಿಕಾರಿಗಳು ಆಕೆ ಜೀನ್ಸ್​ ಧರಿಸಿ ಬಂದ ಕಾರಣಕ್ಕೆ ಡ್ರೈವಿಂಗ್ ಟೆಸ್ಟ್​ ನೀಡಲು ನಿರಾಕರಿಸಿದ್ದಾರೆ.

Sushma Chakre | news18-kannada
Updated:October 23, 2019, 9:48 AM IST
ಜೀನ್ಸ್​ ಧರಿಸಿದ ಯುವತಿಗೆ ಆರ್​ಟಿಓ ಅಧಿಕಾರಿ ಈ ರೀತಿ ಮಾಡೋದಾ?; ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ
ಸಾಂದರ್ಭಿಕ ಚಿತ್ರ
  • Share this:
ಚೆನ್ನೈ (ಅ. 23): ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಬಳಿಕ ಅನೇಕ ಬದಲಾವಣೆಗಳು ಉಂಟಾಗಿವೆ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದವರು ದುಬಾರಿ ದಂಡ ಕಟ್ಟುತ್ತಿದ್ದಾರೆ. ಲುಂಗಿ ಉಟ್ಟು ಲಾರಿ ಚಲಾಯಿಸುತ್ತಿದ್ದ ಚಾಲಕನಿಗೆ 2 ಸಾವಿರ ರೂ. ದಂಡ ವಿಧಿಸಿದ್ದು, ಹೆಲ್ಮೆಟ್ ಧರಿಸದೆ ಟ್ರಾಕ್ಟರ್ ಓಡಿಸಿದ ತಪ್ಪಿಗೆ ದುಬಾರಿ ದಂಡ ತೆತ್ತಿದ್ದು ಇಂತಹ ಹಲವು ಅಚ್ಚರಿಯ ಘಟನೆಗಳು ಇತ್ತೀಚೆಗೆ ನಡೆದಿತ್ತು. ಆದರೆ, ಚೆನ್ನೈನ ಆರ್​ಟಿಓ ಕೂಡ ಅತಿರೇಕದ ವರ್ತನೆ ತೋರಿ ಇದೀಗ ಆಕ್ರೋಶಕ್ಕೆ ತುತ್ತಾಗಿದೆ.

ಚೆನ್ನೈ ಮೂಲದ ಯುವತಿಯೊಬ್ಬಳು ಡ್ರೈವಿಂಗ್ ಲೈಸೆನ್ಸ್​ ಮಾಡಿಸಿಕೊಳ್ಳಲು ಆರ್​ಟಿಓಗೆ ತೆರಳಿದ್ದಳು. ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಆ ಯುವತಿ ಜೀನ್ಸ್​ ಧರಿಸಿ ಡ್ರೈವಿಂಗ್ ಟೆಸ್ಟ್​ಗೆ ಹೋಗಿದ್ದಳು. ಆದರೆ, ಆರ್​ಟಿಓ ಅಧಿಕಾರಿಗಳು ಆಕೆ ಜೀನ್ಸ್​ ಧರಿಸಿ ಬಂದ ಕಾರಣಕ್ಕೆ ಡ್ರೈವಿಂಗ್ ಟೆಸ್ಟ್​ ನೀಡಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ, ಸರಿಯಾದ ಉಡುಪು ಧರಿಸಿ ಬಂದರೆ ಡ್ರೈವಿಂಗ್ ಟೆಸ್ಟ್​ ನೀಡುವುದಾಗಿ ಹೇಳಿ ವಾಪಾಸ್ ಕಳುಹಿಸಿದ್ದಾರೆ!

ಜೀನ್ಸ್​ ಇಂದಿನ ಕಾಲದಲ್ಲಿ ಕ್ಯಾಷುವಲ್ ಉಡುಗೆಯ ಸಾಲಿಗೇ ಸೇರಿಕೊಂಡಿದೆ. ಸಲ್ವಾರ್​, ಕುರ್ತಾ ಬಳಸುವಂತೆಯೇ ಇಂದಿನ ಕಾಲದ ಯುವತಿಯರು ಜೀನ್ಸ್​ ಅನ್ನು ಕೂಡ ಧರಿಸುವುದು ಸಾಮಾನ್ಯವಾಗಿದೆ. ಆದರೆ, ಜೀನ್ಸ್​ ಅನ್ನು ಸರಿಯಾದ ಉಡುಗೆಯಲ್ಲ ಎಂದು ಆರ್​ಟಿಓ ಅಧಿಕಾರಿಗಳು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಅತ್ಯಾಚಾರ ತಡೆಯಲಾಗದಿದ್ದರೆ ಎಂಜಾಯ್ ಮಾಡಿ; ವಿವಾದ ಸೃಷ್ಟಿಸಿದ ಕಾಂಗ್ರೆಸ್ ಸಂಸದನ ಪತ್ನಿಯ ಫೇಸ್​ಬುಕ್ ಪೋಸ್ಟ್​

ಜೀನ್ಸ್​ ಪ್ಯಾಂಟ್ ಮತ್ತು ಸ್ಲೀವ್​ಲೆಸ್ ಟಾಪ್ ಧರಿಸಿ ಕೆ.ಕೆ. ನಗರದ ಆರ್​ಟಿಓ ಆಫೀಸಿಗೆ ಡ್ರೈವಿಂಗ್ ಟೆಸ್ಟ್​ಗೆ ಹೋಗಿದ್ದ ಯುವತಿಗೆ ಈ ರೀತಿಯ ಕಹಿ ಅನುಭವವಾಗಿದೆ. ಆಕೆಗೆ ಮನೆಗೆ ಹೋಗಿ ಸರಿಯಾದ ಉಡುಪು ಧರಿಸಿ ಡ್ರೈವಿಂಗ್ ಟೆಸ್ಟ್​ಗೆ ಬರುವಂತೆ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಆರ್​ಟಿಓ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, 'ಇದು ಸರ್ಕಾರಿ ಕಚೇರಿ. ಜನರು ಮೈಮುಚ್ಚುವ ಮತ್ತು ಸಮರ್ಪಕವಾದ ಉಡುಪು ಧರಿಸಿ ಬರುವಂತೆ ಕೇಳಿದರೆ ಅದರಲ್ಲಿ ತಪ್ಪೇನಿದೆ? ಅವರ ಆಫೀಸಿಗೆ ಹೋಗುವಾಗ ಅವರು ಹೇಗೆ ಬೇಕಾದರೂ ಹೋಗಲಿ' ಎಂದು ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಅನರ್ಹ ಶಾಸಕರಿಗೆ ಇಂದು ಮಹತ್ವದ ದಿನ; ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ

ಡ್ರೈವಿಂಗ್ ಲೈಸೆನ್ಸ್​ಗೆ ಅರ್ಜಿ ಸಲ್ಲಿಸುವವರಿಗೆ ಯಾವುದೇ ನಿಖರವಾದ ಡ್ರೆಸ್​ಕೋಡ್ ಇಲ್ಲದೇ ಇದ್ದರೂ ಪುರುಷರು ಮತ್ತು ಮಹಿಳೆಯರು ಸಮಪರ್ಕವಾದ ಉಡುಗೆ ಧರಿಸಿ ಬರುವುದು ಶಿಸ್ತನ್ನು ಸೂಚಿಸುತ್ತದೆ. ಕೇವಲ ಮಹಿಳೆಯರಿಗೆ ಮಾತ್ರ ನಾವು ಡ್ರೆಸ್​ಕೋಡ್ ಪಾಲಿಸುವಂತೆ ಹೇಳುತ್ತಿಲ್ಲ. ಲುಂಗಿ, ತ್ರೀಫೋರ್ತ್​ ಧರಿಸಿ ಬರುವ ಪುರುಷರಿಗೂ ಸರಿಯಾದ ಉಡುಪು ಧರಿಸಿ ಬರುವಂತೆ ವಾಪಾಸ್​ ಕಳುಹಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೇ ರೀತಿ ಅರ್ಧ ಪ್ಯಾಂಟ್​ ಧರಿಸಿ ಹೋಗಿದ್ದ ಯುವತಿಗೂ ಸರಿಯಾದ ಉಡುಪು ಧರಿಸಿ ಬರುವಂತೆ ಅಧಿಕಾರಿಗಳು ವಾಪಾಸ್​ ಕಳುಹಿಸಿದ್ದಾರೆ.
First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading