Deadly Accident : ನಡುರಸ್ತೆಯಲ್ಲಿ ಬಾಯ್ತೆರೆದು ಕಾದು ಕುಳಿತಿದ್ದ ಯಮ, ರಸ್ತೆಗುಂಡಿಯಿಂದ ಬೈಕರ್​ ಸವಾರ ಭೀಕರ ಸಾವು!

Deadly Accident : ತಪ್ಪು ಮಾಡಿದವರು ನೆಮ್ಮದಿಯಿಂದ ಇರುತ್ತಾರೆ. ಆದರೆ ಏನು ತಪ್ಪು ಮಾಡದೇ ಇರುವವರು ಯಮಲೋಕಕ್ಕೆ ಹೊರಟಿರುತ್ತಾರೆ. ತಮಿಳುನಾಡಿನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಅಧಿಕಾರಿಗಳ ತಪ್ಪಿಗೆ, 32 ವರ್ಷದ ಟೆಕ್ಕಿ ಬಲಿಯಾಗಿದ್ದಾನೆ.

ರಸ್ತೆಗುಂಡಿಯಿಂದ ಬೈಕ್​ ಸವಾರ ಸಾವು

ರಸ್ತೆಗುಂಡಿಯಿಂದ ಬೈಕ್​ ಸವಾರ ಸಾವು

  • Share this:
ಮನುಷ್ಯ(Humans) ಯಾರಿಗೂ ಹೆದರದಿದ್ದರೂ, ಸಾವಿ(Death)ಗೆ ಮಾತ್ರ ಪ್ರತಿಕ್ಷಣ ಹೆದರುತ್ತಲೇ ಇರುತ್ತನೆ. ಆದರೆ ಕೆಲವೊಂದು ಸಾವುಗಳು ಮಾತ್ರ ಯಾರದ್ದೋ ತಪ್ಪಿಗೆ, ಇನ್ಯಾರಿಗೋ ಶಿಕ್ಷೆ(Punishment) ಅನ್ನುವಂತಿರುತ್ತೆ.  ತಪ್ಪು ಮಾಡಿದವರು ನೆಮ್ಮದಿಯಿಂದ ಇರುತ್ತಾರೆ. ಆದರೆ ಏನು ತಪ್ಪು ಮಾಡದೇ ಇರುವವರು ಯಮಲೋಕಕ್ಕೆ ಹೊರಟಿರುತ್ತಾರೆ. ತಮಿಳುನಾಡಿ(Tamilnadu)ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಅಧಿಕಾರಿಗಳ ತಪ್ಪಿಗೆ, 32 ವರ್ಷದ ಟೆಕ್ಕಿ ಬಲಿಯಾಗಿದ್ದಾನೆ. ನಡುರಸ್ತೆಯಲ್ಲೆ ಬಾಯ್ತರೆದು ಯಮಗುಂಡಿಗಳು ಕಾಯುತ್ತಿವೆ. ಇಂತಹ ಯಮಗುಂಡಿ(Patholes)ಯಿಂದ ಒಬ್ಬನ ಪ್ರಾಣಪಕ್ಷಿ ಹಾರಿಹೋಗಿದೆ. ತನ್ನ ಪಾಡಿಗೆ ಮನೆಯಿಂದ ಕೆಲಸಕ್ಕೆ ಹೋಗುತ್ತಿದ್ದ ಬೈಕ್​ ಸವಾರ(Bike Rider), ರಸ್ತೆಗುಂಡಿಯಿಂದಾಗಿ ಇಹಲೋಕ ತ್ಯಜಿಸಿದ್ದಾನೆ. ರಸ್ತೆಗುಂಡಿಯಿಂದ ಬೈಕ್​ ಬ್ಯಾಲೆನ್ಸ್(Balance)​ ತಪ್ಪಿ ಕೆಳಗೆ ಬಿದಿದ್ದಾನೆ. ಪಕ್ಕದಲ್ಲೇ ಹೋಗುತ್ತಿದ್ದ ಬಸ್​ ಅಡಿಗೆ ವ್ಯಕ್ತಿ ಬಿದ್ದಿದ್ದು, ಬಸ್(Bus)​ ಈತನ ಮೇಲೆ ಹರಿದಿದೆ,ಈ ಭೀಕರ ಅಪಘಾತದ ಸಂಪೂರ್ಣ ದೃಶ್ಯ ಸಿಸಿ ಟಿವಿ(CCTV)ಯಲ್ಲಿ ಸೆರೆಯಾಗಿದೆ. 

ಪ್ರಾಣ ತೆಗೆದ ರಸ್ತೆಗುಂಡಿ

ಹೌದು, ರಸ್ತೆ ಗುಂಡಿ ಮುಚ್ಚದೇ ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ. ಚೆನ್ನೈನ ಸೈದ್​ಪೆಟ್​ನ ಚಿನ್ನಮಲೈ ಏರಿಯಾದಲ್ಲಿ ಈ ದುರ್ಘಟನೆ ಸಂಭವಿಸಿದೆ.  32 ವರ್ಷದ ಟೆಕ್ಕಿ ಮೊಹಮ್ಮದ್​ ಯೂನಸ್​ ಎಂಬಾತ ಮೃತಪಟ್ಟಿದ್ದಾನೆ. ಸೋಮವಾರ ಬೆಳಗ್ಗೆ ಕೆಲಸಕ್ಕೆ ಈತ ಹೊರಟ್ಟಿದ್ದ. ವೃತ್ತಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್ ಆಗಿದ್ದ ಮೊಹಮ್ಮದ್​​ ತಮ್ಮ ಬೈಕ್​ನಲ್ಲಿ ಆಫೀಸ್​ ಕಡೆ ಹೊರಟಿದ್ದಾರೆ. ಮಳೆ ಇದ್ದ ಕಾರಣ ನಿಧಾನವಾಗಿಯೇ ತಮ್ಮ ಬೈಕ್​ ಓಡಿಸಿಕೊಂಡು ಹೊರಟ್ಟಿದ್ದರು. ಆದರೆ ಅಣ್ಣಾ ಸಲೈ ರಸ್ತೆಯಲ್ಲಿ ಗುಂಡಿಯಿಂದಾಗಿ ತಮ್ಮ ಬೈಕ್​ ಬ್ಯಾಲೆನ್ಸ್​ ತಪ್ಪಿದೆ. ಮೊಹಮ್ಮದ್​ ಕೆಳಗೆ ಬಿದ್ದಿದ್ದಾರೆ. ಪಕ್ಕದಲ್ಲೇ ಬರುತ್ತಿದ್ದ ಬಸ್ ಇವರ ಮೇಲೆ ಹರಿದಿದೆ. ಸ್ಥಳದಲ್ಲೇ ಯೂನಸ್​ ಸಾವನ್ನಪ್ಪಿದ್ದಾನೆ.



ಡೆಡ್ಲಿ ಆಕ್ಸಿಡೆಂಟ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇನ್ನೂ ಭೀಕರ ಅಪಘಾತದ ದೃಶ್ಯ ಸ್ಥಳೀಯ ಅಂಗಡಿಯೊಂದರ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಗುಂಡಿಯಲ್ಲಿ ಹೇಗೆ ಆತ ಸಿಲುಕಿ ಬ್ಯಾಲೆನ್ಸ್​ ತಪ್ಪುತ್ತೆ ಎಂದು ನೀವು ಗಮನಿಸಬಹುದು. ಅಪಘಾತದ ಬಳಿಕ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟೋತ್ತಿಗಾಗಲೇ ಬೈಕ್​ ಸವಾರನ ಪ್ರಾಣ ಪಕ್ಷಿ ಹಾರಿಹೋಗಿದೆ. ಬಳಿಕ ಆತನ ಕುಟುಂಬಸ್ಥರಿಗೆ ಪೊಲೀಸರು ಮೃತದೇಹವನ್ನು ಹಸ್ತಾಂತರಿಸಿದ್ದಾರೆ. ಇನ್ನೂ ಅಪಘಾತತ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನು ಓದಿ : ಬಸ್ ನಿಂದ ಆಯತಪ್ಪಿ ಬಿದ್ದು ಮಹಿಳೆ ಸಾವು: ಹೆಗಲ ಮೇಲೆ 8 ಕಿಲೋಮೀಟರ್ ದೂರ ಶವ ಹೊತ್ತೊಯ್ದ ಗ್ರಾಮಸ್ಥರು

ಸರ್ಕಾರಿ ಬಸ್​ ಡ್ರೈವರ್​ ಅರೆಸ್ಟ್​

ರಸ್ತೆಗುಂಡಿಯಿಂದ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆದರೆ ಪೊಲೀಸರು ​ ಸರ್ಕಾರಿ ಬಸ್​ನ ಚಾಲಕನನ್ನು ಬಂಧಿಸಿದ್ದಾರೆ. ಡ್ರೈವರ್​ ದೇವರಾಜ್​ ವಿರುದ್ಧ ನಿರ್ಲಕ್ಷ್ಯದ ಚಾಲನೆ ಕೇಸ್​ ಬುಕ್​ ಮಾಡಿದ್ದಾರೆ. ಅತಿಯಾದ ವೇಗ ಚಾಲನೆ ಕೇಸ್​ ಕೂಡ ಆತನ ಮೇಲೆ ದಾಖಲಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ​ ಚರ್ಚೆಯಾಗುತ್ತಿದೆ. ಅಧಿಕಾರಿಗಳ ತಪ್ಪಿನಿಂದ ಬೈಕ್​ ಸವಾರ ಸಾವನ್ನಪ್ಪಿದ್ದಾನೆ. ಅವರನ್ನು ಬಂಧಿಸಿ, ಅದು ಬಿಟ್ಟು ಬಸ್​ ಡ್ರೈವರ್​ ತನ್ನ ಪಾಡಿಗೆ ಬಸ್​ ಓಡಿಸುತ್ತಿರುವುದು ದೃಶ್ಯದಲ್ಲಿ ಕಾಣಿಸುತ್ತಿದೆ.

ಇದನ್ನು ಓದಿ : ಮಧ್ಯರಾತ್ರಿ ಡೆಡ್ಲಿ ಆ್ಯಕ್ಸಿಡೆಂಟ್​​,​ ಮಿಸ್​ ಕೇರಳ ಮುಡಿಗೇರಿಸಿಕೊಂಡಿದ್ದ ಸುಂದರಿಯರ ದುರಂತ ಅಂತ್ಯ!

ಪೊಲೀಸರು ಕುರುಡರಾಗಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನೂ ಈ ಘಟನೆ ನಡೆದ ಮೇಲೆ, ಅಧಿಕಾರಿಗಳು ಆ ಗುಂಡಿಗಳನ್ನಮುಚ್ಚಲು ಸಿಬ್ಬಂದಿಯನ್ನ ಕಳುಹಿಸಿದ್ದಾರೆ. ಸಿಬ್ಬಂದಿ ಮರಳು ತಂದು ಆ ಗುಂಡಿಗಳನ್ನು ಮುಚ್ಚಿದ್ದಾರೆ. ಆದರೆ ಮಳೆ ಜೋರಾಗಿ ಬಂದರೇ ಆ ಮರುಳು ನೀರಿನಲ್ಲಿ ಕೊಚ್ಚಿಹೋಗುತ್ತದೆ. ಮತ್ತೊಂದು ಪ್ರಾಣಕ್ಕಾಗಿ ಆ ಗುಂಡಿ ಬಾಯ್ತರೆದು ಕಾದು ಕೂರದಂತು ನಿಜ.
Published by:Vasudeva M
First published: