HOME » NEWS » National-international » CHENNAI POES GARDEN JAYALALITHAA HOME MAY CONVERTED AS TAMIL NADU CM RESIDENCE INSTEAD OF MEMORIAL SCT

ಸ್ಮಾರಕವಾಗಬೇಕಿದ್ದ ಜಯಲಲಿತಾ ಬಂಗಲೆ ಇನ್ಮುಂದೆ ತಮಿಳುನಾಡು ಸಿಎಂ ಸರ್ಕಾರಿ ನಿವಾಸ?

ಚೆನ್ನೈನ ಪೋಯೆಸ್ ಗಾರ್ಡನ್​ನಲ್ಲಿರುವ ವೇದ ನಿಲಯವನ್ನು ಸ್ಮಾರಕದ ಬದಲಾಗಿ ಮುಖ್ಯಮಂತ್ರಿಗಳ ಸರ್ಕಾರಿ ಕಚೇರಿ ಹಾಗೂ ಬಂಗಲೆಯಾಗಿ ಘೋಷಣೆ ಮಾಡುವಂತೆ ಮದ್ರಾಸ್​ ಹೈಕೋರ್ಟ್​ ಸಲಹೆ ನೀಡಿದೆ.

Sushma Chakre | news18-kannada
Updated:May 27, 2020, 4:35 PM IST
ಸ್ಮಾರಕವಾಗಬೇಕಿದ್ದ ಜಯಲಲಿತಾ ಬಂಗಲೆ ಇನ್ಮುಂದೆ ತಮಿಳುನಾಡು ಸಿಎಂ ಸರ್ಕಾರಿ ನಿವಾಸ?
ಮಾಜಿ ಸಿಎಂ ಜಯಲಲಿತಾ
  • Share this:
ಚೆನ್ನೈ (ಮೇ 27): ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮನೆಯನ್ನು ತಮಿಳುನಾಡು ಸಿಎಂ ಅಧಿಕೃತ ನಿವಾಸ ಮತ್ತು ಕಚೇರಿಯನ್ನಾಗಿ ಪರಿವರ್ತಿಸುವಂತೆ ಮದ್ರಾಸ್​ ಹೈಕೋರ್ಟ್​ ಸಲಹೆ ನೀಡಿದೆ. ಇದಕ್ಕೂ ಮೊದಲು ಜಯಲಲಿತಾ ಅವರ ಮನೆಯನ್ನು ಸ್ಮಾರಕವನ್ನಾಗಿಸಲು ನಿರ್ಧರಿಸಲಾಗಿತ್ತು.

ಚೆನ್ನೈನ ಪೋಯೆಸ್​ ಗಾರ್ಡನ್​ನಲ್ಲಿರುವ ಜಯಲಲಿತಾ ಅವರ ವೇದ ನಿಲಯಂ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸಲು ನಿರ್ಧರಿಸಲಾಗಿತ್ತು. ಈ ನಿಟ್ಟಿನಲ್ಲಿ ಆ ಬಂಗಲೆ ಮತ್ತು ಅದರಲ್ಲಿನ ಅಪರೂಪದ ವಸ್ತುಗಳನ್ನು ತಾತ್ಕಾಲಿಕವಾಗಿ ಸರ್ಕಾರದ ವಶಕ್ಕೆ ಪಡೆಯುವ ಸುಗ್ರೀವಾಜ್ಞೆಗೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಒಪ್ಪಿಗೆ ನೀಡಿದ್ದರು. ವೇದ ನಿಲಯವನ್ನು ಸ್ಮಾರಕವನ್ನಾಗಿ ಪರಿವರ್ತಿಸಲು ಪುರಚ್ಚಿ ತಲೈವಿ ಡಾ.ಜೆ. ಜಯಲಲಿತಾ ಸ್ಮಾರಕ ಫೌಂಡೇಷನ್ ಕೂಡಾ ರಚಿಸಲು ನಿರ್ಧರಿಸಲಾಗಿತ್ತು.

ಇದನ್ನೂ ಓದಿ: ಮಳೆಗಾಲ ಹತ್ತಿರವಾಗ್ತಿದ್ರೂ ಕುಂಭಕರ್ಣ ನಿದ್ರೆಗೆ ಜಾರಿರುವ ಬಿಬಿಎಂಪಿ; ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಜೀವಗಳ ಬಲಿಬೇಕೋ..?

ಚೆನ್ನೈನ ಪೋಯೆಸ್ ಗಾರ್ಡನ್​ನಲ್ಲಿರುವ ವೇದ ನಿಲಯವನ್ನು ಸ್ವಾಧೀನಪಡಿಸಿಕೊಳ್ಳಲು 2017ರ ಅಕ್ಟೋಬರ್ ತಿಂಗಳಲ್ಲಿ ಸರ್ಕಾರ ಅನುಮೋದನೆ ನೀಡಿತ್ತು. 2019ರ ಮೇ 6ರಂದು ಈ ಬಗ್ಗೆ ಅಂತಿಮ ಘೋಷಣೆ ಮಾಡಲಾಗಿತ್ತು. ಆದರೆ, ಇದೀಗ ಆ ನಿವಾಸವನ್ನು ಸ್ಮಾರಕದ ಬದಲಾಗಿ ಮುಖ್ಯಮಂತ್ರಿಗಳ ಸರ್ಕಾರಿ ಕಚೇರಿ ಹಾಗೂ ಬಂಗಲೆಯಾಗಿ ಘೋಷಣೆ ಮಾಡುವಂತೆ ಮದ್ರಾಸ್​ ಹೈಕೋರ್ಟ್​ ಸಲಹೆ ನೀಡಿದೆ.

ವೇದ ನಿಲಯಂ ನಿವಾಸವನ್ನು ಸ್ಮಾರಕವನ್ನಾಗಿ ಮಾಡಿದರೆ ಅದರ ನಿರ್ವಹಣೆಗೆ ಸಾರ್ವಜನಿಕರ ಅಪಾರ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಅದರ ಬದಲಾಗಿ ಆ ಖಾಸಗಿ ಬಂಗಲೆಯನ್ನು ಸರ್ಕಾರಿ ಬಂಗಲೆಯಾಗಿ ಪರಿವರ್ತಿಸಿದರೆ ಹಣದ ಉಳಿತಾಯವೂ ಆಗುತ್ತದೆ, ಬಂಗಲೆಯ ಸದುಪಯೋಗವೂ ಆಗುತ್ತದೆ ಎಂದು ಮದ್ರಾಸ್ ಹೈಕೋರ್ಟ್​ನ ನ್ಯಾ. ಎನ್​. ಕಿರುಬಾಕರನ್ ಹಾಗೂ ಅಬ್ದುಲ್ ಖುದ್ದೋಸ್​ ಅವರ ನ್ಯಾಯಪೀಠ​ ತಮಿಳುನಾಡು ಸರ್ಕಾರಕ್ಕೆ ಸಲಹೆ ನೀಡಿದೆ.

(ವರದಿ: ಪೂರ್ಣಿಮಾ ಮುರಳಿ)
First published: May 27, 2020, 4:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories