ಚೆನ್ನೈನಲ್ಲಿ 5 ಮೂತ್ರಪಿಂಡಗಳಿರುವ 41 ವರ್ಷದ ವ್ಯಕ್ತಿ ಬದುಕಿದ್ದೇ ಪವಾಡ..!

ರೋಗಿಯು ಈಗಾಗಲೇ 2 ಮೂತ್ರಪಿಂಡ ಕಸಿಗಳಿಗೆ ಒಳಗಾಗಿದ್ದು ಅದು ವಿಫಲವಾಗಿತ್ತು. ಹೀಗಾಗಿ ಮೂರನೇ ಮೂತ್ರಪಿಂಡ ಕಸಿಯನ್ನು ಡಾ.ಎಸ್ ಸರವಣನ್ ನೇತೃತ್ವದಲ್ಲಿ ನಡೆಸಲಾಯಿತು. ರೋಗಿಯ ದೇಹದಲ್ಲಿ ಕಸಿ ಮಾಡುವುದಕ್ಕಾಗಿ ಹೆಚ್ಚು ಸ್ಥಳಾವಕಾಶ ಇಲ್ಲದೇ ಇರುವುದು ವೈದ್ಯರಿಗೆ ಸವಾಲಾಗಿ ಮಾರ್ಪಟ್ಟಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚೆನ್ನೈ ಆಸ್ಪತ್ರೆಯೊಂದರಲ್ಲಿ 41ರ ಹರೆಯದ ವ್ಯಕ್ತಿಯೊಬ್ಬರು 3 ಮೂತ್ರಪಿಂಡ ಕಸಿ ಚಿಕಿತ್ಸೆಗೆ ಒಳಗಾಗಿದ್ದು, ಇದೀಗ ತಮ್ಮ ದೇಹದಲ್ಲಿ 5 ಮೂತ್ರಪಿಂಡಗಳನ್ನು ಹೊಂದಿರುವ ಅಸಾಮಾನ್ಯ ಘಟನೆ ವರದಿಯಾಗಿದೆ. ತೀವ್ರ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗೆ ಮದ್ರಾಸ್ ಮೆಡಿಕಲ್ ಮಿಷನ್ ಆಸ್ಪತ್ರೆಯಲ್ಲಿ ಮೂರನೇ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಮೊದಲ ಶಸ್ತ್ರಚಿಕಿತ್ಸೆಯ ತಪಾಸಣೆಯ ನಂತರ ರೋಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

  ರೋಗಿಯ ದೇಹದಲ್ಲಿ ಕಸಿ ಮಾಡುವುದಕ್ಕಾಗಿ ಹೆಚ್ಚು ಸ್ಥಳಾವಕಾಶ ಇಲ್ಲದೇ ಇರುವುದು ವೈದ್ಯರಿಗೆ ಸವಾಲಾಗಿ ಮಾರ್ಪಟ್ಟಿತ್ತು. ರೋಗಿಯು ಈಗಾಗಲೇ 2 ಮೂತ್ರಪಿಂಡ ಕಸಿಗಳಿಗೆ ಒಳಗಾಗಿದ್ದು ಅದು ವಿಫಲವಾಗಿತ್ತು. ಹೀಗಾಗಿ ಮೂರನೇ ಮೂತ್ರಪಿಂಡ ಕಸಿಯನ್ನು ಡಾ.ಎಸ್ ಸರವಣನ್ ನೇತೃತ್ವದಲ್ಲಿ ನಡೆಸಲಾಯಿತು. ಈ ಮೊದಲು ನಡೆಸಿದ ವಿಫಲ ಮೂತ್ರಪಿಂಡ ಕಸಿಯು ಹೆಚ್ಚಿನ ರಕ್ತದೊತ್ತಡ ಸಮಸ್ಯೆಯಿಂದ ಉಂಟಾಗಿರುವುದಾಗಿದೆ ಎಂಬುದಾಗಿ ವೈದ್ಯರು ತಿಳಿಸಿದ್ದು ಈ ಕಸಿ ಚಿಕಿತ್ಸೆ ಮಾಡುವಾಗ ವೈದ್ಯರು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿತ್ತು. ಮೂರನೇ ಕಸಿಗೂ ಮುನ್ನ ಪರಿಧಮನಿಯ ಕಾಯಿಲೆಯಿಂದ ಬಳಲುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿತ್ತು. ಅನಿಯಂತ್ರಿತ ಅಧಿಕ ರಕ್ತದೊತ್ತಡ ಸಮಸ್ಯೆಯಿಂದಾಗಿ ರೋಗಿಯ ಎರಡು ಮೂತ್ರಪಿಂಡ ಕಸಿ ವಿಫಲವಾಗಿತ್ತು. ಅಲ್ಲದೆ ರೋಗಿಯು ಅದೇ ಆಸ್ಪತ್ರೆಯಲ್ಲಿ ಮೂರು ಬೈಪಾಸ್ ಶಸ್ತ್ರಚಿಕಿತ್ಸೆಗೆ ಕೂಡ ಒಳಗಾಗಿದ್ದರು. ಇದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು ಎಂಬುದಾಗಿ ಸರವಣನ್ ತಿಳಿಸಿದ್ದಾರೆ.

  ಈ ಪರಿಸ್ಥಿತಿಯಲ್ಲಿ ವೈದ್ಯರ ತಂಡವು ಸಮಾಲೋಚನೆ ನಡೆಸಿ ಕಸಿ ಮಾಡುವುದು ಎಂದು ತೀರ್ಮಾನಿಸಿದರು. ರೋಗಿಯು ಈಗಾಗಲೇ ತಮ್ಮ ದೇಹದಲ್ಲಿ ಎರಡು ಜನ್ಮಜಾತ ಮೂತ್ರಪಿಂಡಗಳು ಹಾಗೂ ಎರಡು ದಾನಿಗಳ ಮೂತ್ರಪಿಂಡಗಳನ್ನು ಹೊಂದಿದ್ದರು ಹಾಗಾಗಿ ಐದನೆಯ ಮೂತ್ರಪಿಂಡ ಅಳವಡಿಕೆಗೆ ರೋಗಿಯ ದೇಹದೊಳಗೆ ಸ್ಥಳಾವಕಾಶಕ್ಕಾಗಿ ವೈದ್ಯರ ತಂಡ ಹುಡುಕಬೇಕಾಗಿತ್ತು. ಇನ್ನು ಐದನೇ ಮೂತ್ರಪಿಂಡದ ವಿವರಗಳನ್ನು ನೀಡಿದ್ದ ವೈದ್ಯರು ಮೂತ್ರಪಿಂಡದ ಕಸಿಯನ್ನು ನಡೆಸುವ ವೈದ್ಯರು ನಿಷ್ಕ್ರಿಯ ಮೂತ್ರಪಿಂಡಗಳನ್ನು ತೆಗೆದುಹಾಕುವುದಿಲ್ಲ ಬದಲಿಗೆ ರಕ್ತಸ್ರಾವದ ಅಪಾಯದಿಂದ ಸೂಕ್ತ ಸ್ಥಳಾವಕಾಶ ಮಾಡಬೇಕಾಗುತ್ತದೆ ಎಂದು ಸರವಣನ್ ತಿಳಿಸಿದ್ದಾರೆ.

  ರೋಗಿಯ ವೈದ್ಯಕೀಯ ದಾಖಲೆಗಳನ್ನು ವಿಶ್ಲೇಷಿಸಿದಾಗ ಆತನಿಗೆ 14 ರ ಹರೆಯದಲ್ಲಿ ಮೂತ್ರಪಿಂಡವು ವಿಫಲವಾಯಿತು. ಇದು ರೋಗಿಯ ಮೊದಲ ಮೂತ್ರಪಿಂಡ ಕಸಿ ಚಿಕಿತ್ಸೆಯಾಗಿದ್ದು 9 ವರ್ಷಗಳ ಕಾಲ ಮೂತ್ರಪಿಂಡ ಕಾರ್ಯನಿರ್ವಹಿಸಿತು. ತದನಂತರ 2005ರಲ್ಲಿ 2ನೇ ಮೂತ್ರಪಿಂಡ ಚಿಕಿತ್ಸೆ ಮಾಡಲಾಯಿತು ಈ ಸಮಯದಲ್ಲಿ ಮೂತ್ರಪಿಂಡವು 12 ವರ್ಷಗಳ ಕಾಲ ಕೆಲಸ ಮಾಡಿತು. ಇನ್ನೂ ದುಃಖಕರವಾದ ಅಂಶವೆಂದರೆ 4 ವರ್ಷಗಳ ಕಾಲ ರೋಗಿಯು ವಾರಕ್ಕೆ 3 ಬಾರಿ ಡಯಾಲಿಸಿಸ್ ಮಾಡಿಸಬೇಕಾಗುತ್ತದೆ ಎಂಬುದಾಗಿ ವೈದ್ಯರು ವಿಷಾದಿಸಿದ್ದಾರೆ

  ದೀರ್ಘಕಾಲದ ಮೂತ್ರಪಿಂಡದ ಅಸ್ವಸ್ಥತೆ ಹೊಂದಿರುವ ರೋಗಿಗಳಲ್ಲಿ ದೇಹದ ಬೇಡದ ತ್ಯಾಜ್ಯಗಳನ್ನು ಮೂತ್ರದ ರೂಪದಲ್ಲಿ ಹೊರಹಾಕುವ ಪ್ರಕ್ರಿಯೆಯನ್ನು ಮೂತ್ರಪಿಂಡಗಳು ಮಾಡುವುದಿಲ್ಲ. ಈ ಸಮಯದಲ್ಲಿ ಡಯಾಲಿಸಿಸ್ ಯಂತ್ರಗಳು ದೇಹದಿಂದ ತ್ಯಾಜ್ಯ ಹೊರಹಾಕುವ ಕೆಲಸವನ್ನು ಮಾಡುತ್ತವೆ.
  Published by:Kavya V
  First published: