ಟಿಕ್​ಟಾಕ್​ಗೆ ಗೃಹಿಣಿ ಬಲಿ; ತಾನು ವಿಷ ಕುಡಿಯುವುದನ್ನೂ ವಿಡಿಯೋ ಮಾಡಿ ಸತ್ತ ಮಹಿಳೆ!

ಮೃತ ದುರ್ದೈವಿಯನ್ನು ಅನಿತಾ(26) ಎಂದು ಗುರುತಿಸಲಾಗಿದೆ. ಚೆನ್ನೈನ ಪೆರಂಬೂರ್ ನಿವಾಸಿಯಾದ ಅನಿತಾ ಅವರಿಗೆ 7 ಹಾಗೂ 5 ವರ್ಷದ ಇಬ್ಬರು ಮಕ್ಕಳಿದ್ದಾರೆ. ಇದೀಗ ಅವರು ಆತ್ಮಹತ್ಯೆಗೆ ಶರಣಾಗಿದ್ದು ಮಕ್ಕಳು ಬೀದಿ ಪಾಲಾಗುವಂತಾಗಿದೆ.

MAshok Kumar | news18
Updated:June 13, 2019, 4:45 PM IST
ಟಿಕ್​ಟಾಕ್​ಗೆ ಗೃಹಿಣಿ ಬಲಿ; ತಾನು ವಿಷ ಕುಡಿಯುವುದನ್ನೂ ವಿಡಿಯೋ ಮಾಡಿ ಸತ್ತ ಮಹಿಳೆ!
ವಿಷ ಸೇವನೆಯನ್ನೂ ಟಿಕ್​ಟಾಕ್​ನಲ್ಲಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಗೃಹಿಣಿ ಅನಿತಾ.
MAshok Kumar | news18
Updated: June 13, 2019, 4:45 PM IST
ಚೆನ್ನೈ ಜೂನ್ (13); ಭಾರತದ ಮಟ್ಟಿಗೆ ಟಿಕ್​ಟಾಕ್ ಎಂಬುದು ಸಾಮಾಜಿಕ ಪಿಡುಗಾಗಿ ಬದಲಾಗಿ​ದೆ. ಇಷ್ಟು ದಿನ ಕೇವಲ ತಮಾಷೆ, ಮೋಜು, ಮಸ್ತಿಗೆ ಮಾತ್ರ ಸೀಮಿತವಾಗಿದ್ದ ಟಿಕ್​ಟಾಕ್ ಇದೀಗ ಸರಣಿ ಸರಣಿಯಾಗಿ ಪ್ರಾಣ ಬಲಿಯನ್ನೂ ಪಡೆಯುತ್ತಿದೆ. ಟಿಕ್​ಟಾಕ್ ಬಳಸಬೇಡ ಎಂದು ಗಂಡ ಹೇಳಿದ ಒಂದೇ ಒಂದು ಮಾತಿಗೆ ತಮಿಳುನಾಡಿನ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಾನು ವಿಷ ಸೇವಿಸುವುದನ್ನೂ ಟಿಕ್​ಟಾಕ್​ನಲ್ಲಿ ವಿಡಿಯೋ ಮಾಡಿ ಆಕೆ ಸಾವಿಗೆ ಶರಣಾಗಿದ್ದಾಳೆ.

ಮೃತ ದುರ್ದೈವಿಯನ್ನು ಅನಿತಾ(26) ಎಂದು ಗುರುತಿಸಲಾಗಿದೆ. ಚೆನ್ನೈನ ಪೆರಂಬೂರ್ ನಿವಾಸಿಯಾದ ಅನಿತಾ ಅವರಿಗೆ 7 ಹಾಗೂ 5 ವರ್ಷದ ಇಬ್ಬರು ಮಕ್ಕಳಿದ್ದಾರೆ. ಇದೀಗ ಅವರು ಆತ್ಮಹತ್ಯೆಗೆ ಶರಣಾಗಿದ್ದು ಮಕ್ಕಳು ಬೀದಿ ಪಾಲಾಗುವಂತಾಗಿದೆ.

 ಆತ್ಮಹತ್ಯೆಗೆ ಕಾರಣವೇನು?

ಅನಿತಾ ಗಂಡನ ಹೆಸರು ಪಳನಿವೇಲ್. ಸಣ್ಣ ಪ್ರಮಾಣದ ರೈತನಾದ ಈತ ಸಾಲದ ಕಾರಣಕ್ಕೆ ಕಳೆದ ವರ್ಷ ಕೆಲಸಕ್ಕಾಗಿ ಸಿಂಗಾಪೂರ್​ಗೆ ತೆರಳಿದ್ದ. ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಅನಿತಾ ಮಕ್ಕಳು ಶಾಲೆಗೆ ತೆರಳಿದ ನಂತರ ಒಂಟಿಯಾಗಿರುತ್ತಿದ್ದರು. ಇವರ ಏಕಾಂತಕ್ಕೆ ಟಿಕ್​ಟಾಕ್​ ಮದ್ದಾಗಿತ್ತು.

ಇದನ್ನೂ ಓದಿ : ಟಿಕ್​ ಟಾಕ್​ ಬ್ಯಾನ್​ ಆದ್ರೂ ಡೌನ್​ಲೋಡ್​ ಮಾಡಬಹುದು: ಹೇಗೆ ಗೊತ್ತಾ?

ಒಂಟಿಯಾಗಿರುವಾಗ ಅನಿತಾ ಪ್ರತಿದಿನ ವಿವಿಧ ಸಂಭಾಷಣೆ ಹಾಗೂ ಹಾಡುಗಳಿಗೆ ಟಿಕ್​ಟಾಕ್ ಮಾಡಿ ಆ ವಿಡಿಯೋ ತಮ್ಮ ಗೆಳೆಯರ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ, ಹೆಂಡತಿಯ ಇಂತಹ ವರ್ತನೆಯಿಂದ ಗಂಡನಿಗೆ ಅನುಮಾನ ಶುರುವಾಗಿದೆ. ಅಲ್ಲದೆ ಕಳೆದ ವಾರ ಫೋನ್​ ಕರೆ ಮಾಡಿದ್ದಾಗ ತನ್ನ ಹೆಂಡತಿಯ ನಡತೆಯನ್ನು ಪ್ರಶ್ನೆ ಮಾಡಿದ್ದ ಆತ ಮತ್ತೆ ಟಿಕ್​ಟಾಕ್ ಮಾಡದಂತೆ ತಾಕೀತು ಮಾಡಿದ್ದ.

ಇದರಿಂದ ಮನನೊಂದ ಅನಿತಾ ಕಳೆದ 9ರಂದು ಸಂಜೆ ತಮ್ಮ ಕೃಷಿ ಭೂಮಿಗೆಂದು ತಂದಿದ್ದ ಕ್ರಿಮಿನಾಶಕವನ್ನು ಕುಡಿದಿದ್ದಾಳೆ. ಅಲ್ಲದೆ ಅದನ್ನೂ ಟಿಕ್​ಟಾಕ್​ನಲ್ಲಿ ವಿಡಿಯೋ ಮಾಡಿ ತನ್ನ ಗಂಡ ಹಾಗೂ ಕುಟುಂಬಸ್ಥರಿಗೆ ವಾಟ್ಸಾಪ್​ ಮೂಲಕ ಕಳಿಸಿದ್ದಾಳೆ. ವಿಷಯ ತಿಳಿದ ತಕ್ಷಣ ಮನೆಗೆ ದೌಡಾಯಿಸಿದ್ದ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೂ, ಚಿಕಿತ್ಸೆ ಫಲಕಾರಿಯಾಗದೆ ಅನಿತಾ ಇಂದು ಕೊನೆ ಉಸಿರೆಳೆದಿದ್ದಾಳೆ.
Loading...

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಆದರೆ, ಆತ್ಮಹತ್ಯೆಯಂತಹ ತಾಯಿಯ ದುಡುಕಿನ ನಿರ್ಧಾರದಿಂದ ಮಕ್ಕಳು ಅನಾಥರಾಗಿದ್ದು ಮಾತ್ರ ದುರಂತವೇ ಸರಿ. ಒಟ್ಟಲ್ಲಿ ಟಿಕ್​ಟಾಕ್ ಆಗಿಂದಾಗ್ಗೆ ಹಲವಾರು ಪ್ರಾಣಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ಬ್ಯಾನ್​ ಮಾಡುವ ಕುರಿತು ಸರ್ಕಾರ ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಿದೆ.

ಇದನ್ನೂ ಓದಿ : TikTok: ಭಾರತೀಯರಿಗೆ ಈಗ ಟಿಕ್​ಟಾಕ್ ಚಿಂತೆ: ಗೂಗಲ್​ನಲ್ಲಿ ಆ್ಯಪ್​ಗಾಗಿ ಹುಡುಕಾಟ

First published:June 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...