ಹೆಂಡತಿಯನ್ನು ಸಾಯಿಸಿ ತುಂಡು ತುಂಡಾಗಿ ಕತ್ತರಿಸಿದ ಕಾಲಿವುಡ್​ ನಿರ್ದೇಶಕನ ಬಂಧನ

ಕಾರ್ಪೊರೇಷನ್​ ಕಸದ ರಾಶಿಯಲ್ಲಿ ಮಹಿಳೆಯ ದೇಹ ಪತ್ತೆಯಾಗುತ್ತಿದ್ದಂತೆ ಇಲ್ಲಿನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಸಂಧ್ಯಾ ಕೈಯಲ್ಲಿದ್ದ ಟ್ಯಾಟೂನಿಂದಾಗಿ ಕಡೆಗೆ ಪ್ರಕರಣ ಬೆಳಕಿಗೆ ಬಂದಿದೆ.

Seema.R | news18
Updated:February 7, 2019, 1:22 PM IST
ಹೆಂಡತಿಯನ್ನು ಸಾಯಿಸಿ ತುಂಡು ತುಂಡಾಗಿ ಕತ್ತರಿಸಿದ ಕಾಲಿವುಡ್​ ನಿರ್ದೇಶಕನ ಬಂಧನ
ಸಾಂದರ್ಭಿಕ ಚಿತ್ರ
Seema.R | news18
Updated: February 7, 2019, 1:22 PM IST
ಚೆನ್ನೈ (ಫೆ.7): ಸಿನಿಮಾ ಕ್ಷೇತ್ರದಲ್ಲಿ ಒಳ್ಳೆಯ ಚಿತ್ರ ನಿರ್ದೇಶನ ಮಾಡುವ ಮೂಲಕ ಹೆಸರು ಮಾಡಬೇಕಿದ್ದ ನಿರ್ದೇಶಕನೊಬ್ಬ ತನ್ನ ಅನುಮಾನದ ಸುಳಿಯಿಂದಾಗಿ ಅಪರಾಧ ಲೋಕದಲ್ಲಿ ಹೆಸರಾಗಿದ್ದಾನೆ.

ಕಾಲಿವುಡ್​ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವ ಗೋಪಾಲ್​ ಕೃಷ್ಣನ್​ ತನ್ನ ತನ್ನ ಹೆಂಡತಿ ಮೇಲೆ ಅನುಮಾನಪಟ್ಟು ಈ ಕೃತ್ಯ ಎಸಗಿದ್ದಾನೆ. ತನ್ನ ಹೆಂಡತಿಯನ್ನು ಕೊಂದು ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಅದನ್ನು ಕಸಕ್ಕೆ ಹಾಕಿದ ತಮಿಳುನಾಡಿದನ ಸಿನಿಮಾ ನಿರ್ದೇಶಕನನ್ನು ಪೊಲೀಸರು ಬಂಧಿಸಿದ್ದಾರೆ.

ತನಗಿಂತ ಬಹಳ ಚಿಕ್ಕವಯಸ್ಸಿನ ಸಂಧ್ಯಾ ಎಂಬವರ ಜೊತೆ ಮದುವೆಯಾಗಿದ್ದ ಗೋಪಾಲಕೃಷ್ಣನ್​ ಆಕೆಯ ಮೇಲೆ ಅನುಮಾನವನ್ನು ಹೊಂದಿದ್ದ, ಪೊಂಗಲ್​ ಆಚರಣೆಗೆಂದು ಊರಿನಲ್ಲಿದ್ದ ಹೆಂಡತಿಯನ್ನು ಚೆನ್ನೈಗೆ ಕರೆಸಿಕೊಂಡಿದ್ದ ಈತ ಆಕೆಯೊಂದಿಗೆ ಜಗಳ ಶುರುಮಾಡಿದ್ದ. ಜ.18ರಂದು ಈ ಜಗಳ ತಾರಕಕ್ಕೇರಿದ ಪರಿಣಾಮ ಆತ ಆಕೆಯ ಮೇಲೆ ಹಲ್ಲೆ ಮಾಡಿ ಹತ್ಯೆಮಾಡಿದ್ದಾನೆ. ಬಳಿಕ ಏನು ಮಾಡಬೇಕು ಎಂದು ತಿಳಿಯದೆ ಪ್ರಕರಣ ಮುಚ್ಚಿ ಹಾಕಲು ಆಕೆಯ ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ದೇಹವನ್ನು ಒಂದೊಂದು ಮೂಲೆಯಲ್ಲಿ ಎಸೆದಿದ್ದಾನೆ.

ಆಕೆಯ ಕೈ ಹಾಗೂ ಎರಡು ಕಾಲನ್ನು ಕೊಡಂಬಕಮ್​ ಹಾಗೂ ಪೆರುಗುಂಡಿಯಲ್ಲಿ ಲಭ್ಯವಾಗಿದೆ. ಉಳಿದ ದೇಹದ ಭಾಗಗಳು ಕಾರ್ಪೊರೇಷನ್​ ಕಸದ ರಾಶಿಯಲ್ಲಿ ಪತ್ತೆಯಾಗಿದೆ. ಪ್ರಕರಣ ಬೆಳಕಿಗೆ ಬಂದ ಕೂಡಲೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಪೊರೇಷನ್​ ಕಸದ ರಾಶಿಯಲ್ಲಿ ಮಹಿಳೆಯ ದೇಹ ಪತ್ತೆಯಾಗುತ್ತಿದ್ದಂತೆ ಇಲ್ಲಿನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಸಂಧ್ಯಾ ಕೈಯಲ್ಲಿದ್ದ ಟ್ಯಾಟೂನಿಂದಾಗಿ ಕಡೆಗೆ ಪ್ರಕರಣ ಬೆಳಕಿಗೆ ಬಂದಿದೆ.  ಗೋಪಾಲ ಕೃಷ್ಣ ಕೂಡ ಈ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ಇದನ್ನು ಓದಿ: ನಟಿ ನಾಗಾ ಆತ್ಮಹತ್ಯೆ; ಕಾರಣವಾಯ್ತಾ ಲವ್ ಸ್ಟೋರಿ?

2010ರಲ್ಲಿ ಗೋಪಾಲಕೃಷ್ಣ ನಿರ್ಮಾಣ ಮಾಡಿದ್ದ ಸಿನಿಮಾಗೆ ಸಂಧ್ಯಾ ಹಣ ಹೂಡಿಕೆ ಮಾಡಿದ್ದರು. ಆದರೆ, ಈ ಸಿನಿಮಾ ಸೋತಿತ್ತು. ಬಳಿಕ ಆತ ಅನಿವಾರ್ಯವಾಗಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವ ಪರಿಸ್ಥಿತಿ ಬಂದು ಬಂದಗಿತು.
Loading...

ಇದಾದ ಬಳಿಕವೂ ಇವರಿಬ್ಬರ ನಡುವೆ ಜಗಳಗಳು ನಡೆಯುತ್ತಲೆ ಇದ್ದವು. ಇಲ್ಲದೆ ಇಬ್ಬು ಕೂಡ ಡೈವರ್ಸ್​ಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಬಳಿಕ ತೂತುಕೂಡಿಯಲ್ಲಿ ಸಂಧ್ಯಾ ವಾಸವಾಗಿದ್ದಳು.

ಇನ್ನು ಈ ಪ್ರಕರಣಕ್ಕೆ ಸಹಾಯ ಮಾಡಿದ ಗೋಪಾಲಕೃಷ್ಣನ್​ ಗೆಳಯರನ್ನು ಕೂಡ ಬಂಧಿಸಲಾಗಿದೆ.

First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...