ಚೆನ್ನೈ (ಅ.10): ಸಿನಿಮಾಗಳಲ್ಲಿ ಮಕ್ಕಳನ್ನು ಅಪಹರಿಸಿ ದುಡ್ಡಿಗೆ ಆಮಿಷವೊಡ್ಡುವ ಪ್ರಕರಣಗಳಿಂದ ಪ್ರೇರಣೆಗೊಂಡ ಬಾಲಕನೊಬ್ಬ ತನ್ನ ಅಪಹರಣವನ್ನು ತಾನೇ ಮಾಡಿಕೊಂಡಿದ್ದಾನೆ. ಅಲ್ಲದೇ, ನಿಮ್ಮ ಮಗ ಕಿಡ್ನಾಪ್ ಆಗಿದ್ದಾನೆ ಎಂದು ತಂದೆಗೆ ಕರೆ ಮಾಡಿ 10 ಲಕ್ಷ ಹಣದ ಬೇಡಿಕೆಯನ್ನು ಇಟ್ಟಿದ್ದಾನೆ ಈ 14 ವರ್ಷದ ಚಾಲಕಿ ಬಾಲಕ. ತಂದೆಯಿಂದಲೇ ಲಕ್ಷ ಲಕ್ಷ ಕೀಳಲು ಮುಂದಾಗಿದ್ದ ಆತನ ಈ ಯೋಜನೆ ತಲೆಗೆಳಗಾಗಿದ್ದು, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸ್ನೇಹಿತರ ಸಹಾಯದಿಂದ ಈ ರೀತಿ ಯೋಜನೆ ರೂಪಿಸಿದ್ದಾಗಿ ಬಾಲಕ ತಿಳಿಸಿದ್ದಾನೆ. 9ನೇ ತರಗತಿಯಲ್ಲಿ ಓದುತ್ತಿರುವ ಚೆನ್ನೈನ ಈ ಬಾಲಕ ತನ್ನ ತಂದೆಯಿಂದಲೇ ದುಡ್ಡು ಕೀಳುವ ಯತ್ನ ನಡೆಸಿದ್ದಾನೆ. ಅದು ಬರೋಬ್ಬರಿ 10 ಲಕ್ಷ. ಇದಕ್ಕಾಗಿ ಸ್ನೇಹಿತರ ಜೊತೆ ಯೋಜನೆ ಕೂಡ ರೂಪಿಸಿದ್ದಾನೆ. ತಂದೆಗೆ ಕರೆ ಮಾಡಿದ ಬಾಲಕ ಯಾರೋ ಅಪರಿಚಿತರು ತನ್ನನ್ನು ಅಪಹರಿಸಿದ್ದಾರೆ. ಅವರು 10 ಲಕ್ಷ ಹಣದ ಬೇಡಿಕೆ ಇಟ್ಟಿದ್ದಾರೆ. ನನ್ನನ್ನು ರಕ್ಷಿಸುವಂತೆ ಮನವಿ ಮಾಡಿದ್ದಾನೆ.
ಮಗನ ಆಕ್ರಂದನ ಕೇಳುತ್ತಿದ್ದಂತೆ ಬೆಚ್ಚಿದ ಅಪ್ಪ. ನೇರವಾಗಿ ಪೊಲೀಸ್ ಠಾಣೆಯ ಮೇಟ್ಟಿಲೇರಿದ್ದಾರೆ, ಚೆನ್ನೈನ ಟ್ರಿಪ್ಲಿಕೇನ್ ಹತ್ತಿರದ ಜಾಮ್ ನಗರ ಪೊಲೀಸ್ ಠಾಣೆಗೆ ತೆರಳಿದ ಬಾಲಕನ ತಂದೆ ನಡೆದ ಘಟನೆಯನ್ನು ತಿಳಿಸಿದ್ದಾರೆ. ತಕ್ಷಣಕ್ಕೆ ಕಾರ್ಯಪ್ರವೃತ್ತರಾದ ಪೊಲೀಸರು ಹುಡುಗನ ಹುಟುಕಾಟಕ್ಕೆ ಮುಂದಾಗಿದ್ದಾರೆ.
ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಬಾಲಕ ಇಲ್ಲಿನ ಐಸ್ಹೌಸ್ನ ಟ್ಯೂಷನ್ ಕ್ಲಾಸ್ನಿಂದ ನಾಪತ್ತೆಯಾಗಿದ್ದ . ಬಳಿಕ ಆತನ ಕರೆಯನ್ನು ಬೆನ್ನಟ್ಟಿದಾಗ ಆತ ಚೆಪಾಕ್ ರೈಲ್ವೆ ನಿಲ್ದಾಣದ ಬಳಿಯಿರುವುದು ಪತ್ತೆಯಾಗಿದೆ.
ಪೊಲೀಸರು ಬಂದು ನೋಡಿದಾಗ ಹುಡುಗ ಏಕಾಂಗಿಯಾಗಿ ನಿಂತಿದ್ದ. ಪೊಲೀಸರ ಕಂಡು ಕಂಗಾಲಾದ ಬಾಲಕ ನನ್ನನ್ನು ಕೆಲವರು ಅಪಹರಣ ಮಾಡಿದರು ಎಂದು ಹೇಳಿದ್ದಾನೆ. ಈ ವೇಳೆ ರೈಲ್ವೆ ನಿಲ್ದಾಣದ ಸಿಸಿಟಿವಿ, ಬಾಲಕ ಬಂದಿಳಿದ ಆಟೋ ಗಮನಿಸಿದಾಗ ಆತ ಒಬ್ಬನೇ ಇರುವುದು ಪತ್ತೆಯಾಗಿದೆ.
ಇದನ್ನು ಓದಿ: World Mental Health Day 2020: ನಿದ್ದೆಯ ಕೊರತೆ ನಿಮ್ಮನ್ನು ಮಾನಸಿಕವಾಗಿ ಎಷ್ಟೆಲ್ಲಾ ಕುಗ್ಗಿಸುತ್ತದೆ ಗೊತ್ತೇ?
ಪೊಲೀಸರು ಗದರಿಸಿದಾಗ ಬಾಲಕ ಕಿಡ್ನಾಪ್ ನಾಟಕ ಆಡಿದ್ದ ಕುರಿತು ಬಾಯ್ಬಿಟ್ಟಿದ್ದಾನೆ. ಟ್ಯೂಷನ್ ನಿಂದ ಸ್ನೇಹಿತರೇ ಆಟೋ ಮಾಡಿ ಇಲ್ಲಿಗೆ ಕಳುಹಿಸಿದರು ಎಂದಿದ್ದಾನೆ. ಈ ಕುರಿತು ಆಟೋ ರಿಕ್ಷಾ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗಿದೆ. ಬಾಲಕರು ಮೊಬೈಲ್ ಮೂಲಕ ಆಟೋ ಬುಕ್ ಮಾಡಿದ್ದರು. ಆಟೋ ದುಡ್ಡನ್ನು ಸಹ ಅವರು ಕೊಟ್ಟಿಲ್ಲ ಎಂದಿದ್ದಾನೆ.
ಬಾಲಕನ ಈ ಅಪಹರಣ ನಾಟಕ ತಿಳಿಯುತ್ತಿದ್ದಂತೆ ಪೊಲೀಸರು ಕೂಡ ಗದರಿದ್ದಾರೆ. ಇನ್ನೇಂದು ಈ ರೀತಿ ಮಾಡದಂತೆ ಎಚ್ಚರಿಸಿ ಕಳುಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ