Pulwama Attackನಲ್ಲಿ ಬಳಸಿದ ಸ್ಫೋಟಕಗಳ ತಯಾರಿಕೆಗೆ Amazon ಮೂಲಕ ಕೆಮಿಕಲ್​​ಗಳ ಖರೀದಿ!

ಬಂಧಿತ ವ್ಯಕ್ತಿಯು ಐಇಡಿಗಳು, ಬ್ಯಾಟರಿಗಳು ಮತ್ತು ಕೆಲ ಪರಿಕರಗಳನ್ನು ತಯಾರಿಸಲು ರಾಸಾಯನಿಕಗಳನ್ನು ಖರೀದಿಸಿದ್ದಾನೆ. ಇದಕ್ಕಾಗಿ ಅಮೆಜಾನ್ ಆನ್‌ಲೈನ್ ಶಾಪಿಂಗ್ ಖಾತೆಯನ್ನು ಬಳಸಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
2019ರಲ್ಲಿ 40 ಸಿಆರ್‌ಪಿಎಫ್ ಯೋಧರ (CRPF Soldiers) ಸಾವಿಗೆ ಕಾರಣವಾದ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ (Pulwama Attack) ಬಳಸಲಾದ ಸುಧಾರಿತ ಸ್ಫೋಟಕ ಸಾಧನಗಳನ್ನು (IEDs) ತಯಾರಿಸಲು ರಾಸಾಯನಿಕಗಳನ್ನು ಇ-ಕಾಮರ್ಸ್ ಪೋರ್ಟಲ್ ಆದ ಅಮೆಜಾನ್​​ (Amazon) ಮೂಲಕ ಖರೀದಿಸಲಾಗಿದೆ ಎಂದು CAIT ಹೇಳಿದೆ. ಮಾರ್ಚ್ 2020 ರಲ್ಲಿ ಪುಲ್ವಾಮಾ ಪ್ರಕರಣದ ತನಿಖೆಯ ಸಂದರ್ಭದಲ್ಲಿ NIA ತನ್ನ ವರದಿಯಲ್ಲಿ ಈ ಸತ್ಯವನ್ನು ಬಹಿರಂಗಪಡಿಸಿತು, ಮಾರ್ಚ್ 2020 ರಲ್ಲಿ ಮಾಧ್ಯಮಗಳಲ್ಲಿ ಸುದ್ದಿ ವ್ಯಾಪಕವಾಗಿ ಪ್ರಕಟವಾಯಿತು. ಭಾರತದಲ್ಲಿ ನಿಷಿದ್ಧ ವಸ್ತುವಾಗಿರುವ ಅಮೋನಿಯಂ ನೈಟ್ರೇಟ್ ಅನ್ನು ಸಹ ಆನ್​​ಲೈನ್​​ ಮೂಲಕ ಖರೀದಿಸಲಾಗಿದೆ.

ಅಮೆಜಾನ್​ನಲ್ಲಿ ಕೆಮಿಕಲ್​ ತರಿಸಿಕೊಂಡು ಬಾಂಬ್​ ತಯಾರಿಕೆ!

ಸಿಎಐಟಿಯ ರಾಷ್ಟ್ರೀಯ ಅಧ್ಯಕ್ಷ ಬಿ ಸಿ ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಅವರು ತಿಳಿಸಿರುವಂತೆ NIA ಪ್ರಾಥಮಿಕ ವಿಚಾರಣೆಯಲ್ಲಿ ಆನ್​​​ಲೈನ್​ ಖರೀದಿ ಬಗ್ಗೆ ತಿಳಿದು ಬಂದಿದೆ. ಬಂಧಿತ ವ್ಯಕ್ತಿಯು ಐಇಡಿಗಳು, ಬ್ಯಾಟರಿಗಳು ಮತ್ತು ಕೆಲ ಪರಿಕರಗಳನ್ನು ತಯಾರಿಸಲು ರಾಸಾಯನಿಕಗಳನ್ನು ಖರೀದಿಸಿದ್ದಾನೆ. ಇದಕ್ಕಾಗಿ ಅಮೆಜಾನ್ ಆನ್‌ಲೈನ್ ಶಾಪಿಂಗ್ ಖಾತೆಯನ್ನು ಬಳಸಿದ್ದಾನೆ ಎಂದು ಬಹಿರಂಗಪಡಿಸಿದ್ದಾರೆ. ದಾಳಿಯಲ್ಲಿ ಬಳಸಲಾದ ಸ್ಫೋಟಕಗಳು ಅಮೋನಿಯಂ ನೈಟ್ರೇಟ್, ನೈಟ್ರೋ-ಗ್ಲಿಸರಿನ್ ಸೇರಿ ಹಲವು ರಾಸಾಯನಿಕಗಳು ಇರುವುದನ್ನು ವಿಧಿವಿಜ್ಞಾನ ತನಿಖೆಯ ಮೂಲಕ ನಿರ್ಧರಿಸಲಾಯಿತು.

ನಿಷೇಧಿತ ರಾಸಾಯನಿಕ ಆನ್​ಲೈನ್​ನಲ್ಲಿ ಮಾರಾಟ!

ನಮ್ಮ ಸೈನಿಕರ ವಿರುದ್ಧ ಅಮೋನಿಯಂ ನೈಟ್ರೇಟ್ ಅಕ್ರಮ ಮಾರಾಟಕ್ಕೆ ಅನುಕೂಲವಾಗುವಂತೆ ಬಳಸಲಾಗಿರುವುದರಿಂದ ಅಮೆಜಾನ್ ಮತ್ತು ಅದರ ಅಧಿಕಾರಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಸಿಎಐಟಿ ಹೇಳಿದೆ. 2011 ರಲ್ಲಿ ಅಮೋನಿಯಂ ನೈಟ್ರೇಟ್ ಅನ್ನು ನಿಷೇಧಿತ ವಸ್ತುವೆಂದು ಘೋಷಿಸಲಾಗಿದೆ. ಇದಕ್ಕಾಗಿ 1884 ರ ಸ್ಫೋಟಕಗಳ ಕಾಯಿದೆಯ ಅಡಿಯಲ್ಲಿ ಅಮೋನಿಯಂ ನೈಟ್ರೇಟ್‌ನ ಅಪಾಯಕಾರಿ ಶ್ರೇಣಿಗಳನ್ನು ಪಟ್ಟಿ ಮಾಡಿ ಮತ್ತು ಭಾರತದಲ್ಲಿ ಅದರ ಮುಕ್ತ ಮಾರಾಟ, ಖರೀದಿ ಮತ್ತು ತಯಾರಿಕೆಯನ್ನು ನಿಷೇಧಿಸುವ ಅಧಿಸೂಚನೆಯನ್ನು ಹೊರಡಿಸಲಾಯಿತು ಎಂದು ಭಾರ್ತಿಯಾ ಮತ್ತು ಖಂಡೇಲ್ವಾಲ್ ಹೇಳಿದ್ದಾರೆ.

ಹಲವು ಬಾಂಬ್​​ ಸ್ಫೋಟಗಳಲ್ಲಿ ಅಮೋನಿಯಂ ನೈಟ್ರೇಟ್ ಬಳಕೆ

ಜನನಿಬಿಡ ಪ್ರದೇಶಗಳಲ್ಲಿ ಸ್ಫೋಟಗಳನ್ನು ಪ್ರಚೋದಿಸಲು ಬಳಸಿದ ಬಾಂಬ್‌ಗಳಲ್ಲಿ ಅಮೋನಿಯಂ ನೈಟ್ರೇಟ್ ಮುಖ್ಯ ಸ್ಫೋಟಕವಾಗಿದೆ ಎಂದು ಕಂಡು ಬಂದಿದೆ. ಮುಂಬೈಗಿಂತ ಮೊದಲು, 2006 ರಲ್ಲಿ ವಾರಣಾಸಿ ಮತ್ತು ಮಾಲೆಗಾಂವ್ ಸ್ಫೋಟಗಳಲ್ಲಿ ಮತ್ತು 2008 ರಲ್ಲಿ ದೆಹಲಿಯಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಅಮೋನಿಯಂ ನೈಟ್ರೇಟ್ ಅನ್ನು ಬಳಸಲಾಗಿತ್ತು.

ರಾಸಾಯನಿಕಗಳ ಮಾರಾಟ ನಿಜಕ್ಕೂ ದೇಶದ್ರೋಹ

2016 ರಿಂದ CAIT ಇ-ಕಾಮರ್ಸ್‌ಗಾಗಿ ಕ್ರೋಡೀಕೃತ ಕಾನೂನು ಮತ್ತು ನಿಯಮಗಳನ್ನು ಒತ್ತಾಯಿಸುತ್ತಿದೆ. ಆದರೆ ದುರದೃಷ್ಟವಶಾತ್ ಇದುವರೆಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಬಾಂಬ್‌ಗಳನ್ನು ತಯಾರಿಸಲು ಮತ್ತು ನಮ್ಮ ಮಹಾನ್ ಸೈನಿಕರನ್ನು ಗುರಿಯಾಗಿಸಲು ಬಳಸುವ ರಾಸಾಯನಿಕಗಳ ಮಾರಾಟ ನಿಜಕ್ಕೂ ದೇಶದ್ರೋಹ. ಈ ಪ್ರಕರಣವನ್ನು ಪುನಃ ತೆರೆಯಬೇಕು ಮತ್ತು ಅಮೆಜಾನ್ ಪೋರ್ಟಲ್ ಅನ್ನು ನಿರ್ವಹಿಸುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು CAIT ಹೇಳಿದೆ.

ಇದನ್ನೂ ಓದಿ: Pakistan: ಪಾಕಿಸ್ತಾನದಲ್ಲಿ ರೇಪಿಸ್ಟ್​​ಗಳಿಗೆ ರಾಸಾಯನಿಕ ನೀಡಿ 'ಅದನ್ನೇ' ಕಿತ್ತುಕೊಳ್ತಾರೆ!

ಡೇಂಜರಸ್​​ ಅಮೋನಿಯಂ ನೈಟ್ರೇಟ್

ಅಮೋನಿಯಂ ನೈಟ್ರೇಟ್ ಸ್ಫಟಿಕದಂತಹ ಬಿಳಿ ಘನವಸ್ತುವಾಗಿದ್ದು ಇದನ್ನು ದೊಡ್ಡ ಕೈಗಾರಿಕಾ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಇದನ್ನು ರಸಗೊಬ್ಬರದ ಸಾರಜನಕದ ಮೂಲವಾಗಿದೆ, ಆದರೆ ಗಣಿಗಾರಿಕೆಗೆ ಸ್ಫೋಟಕಗಳನ್ನು  ತಯಾರಿಸಲು ಸಹ ಇದನ್ನು ಬಳಸಲಾಗುತ್ತದೆ. ಬೆಂಕಿಯು ಅದನ್ನು ತಲುಪಿದರೆ, ರಾಸಾಯನಿಕ ಕ್ರಿಯೆಯು ಹೆಚ್ಚು ತೀವ್ರವಾಗಿರುತ್ತದೆ. ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡಾಗ, ಅದು ಸಾರಜನಕ ಸೇರಿದಂತೆ ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡಬಹುದು. ಆಕ್ಸೈಡ್‌ಗಳು ಮತ್ತು ಅಮೋನಿಯಾ ಅನಿಲಗಳು ಸುತ್ತಮುತ್ತ ವಾಸಿಸುವ ಜನರಿಗೆ ಅಪಾಯಕಾರಿ. ಈ ವಿಷಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನೇರ ಮಧ್ಯಸ್ಥಿಕೆಗೆ ಭಾರ್ತಿಯಾ ಮತ್ತು ಖಂಡೇಲ್ವಾಲ್ ಒತ್ತಾಯಿಸಿದ್ದಾರೆ.
Published by:Kavya V
First published: