ಕಾರ್ಖಾನೆ ಬಾಗಿಲು ತೆರೆಯುವುದಕ್ಕೂ ಮುನ್ನ ರಾಸಾಯನಿಕ ಅಧ್ಯಯನ ಕಡ್ಡಾಯ; ದುರಂತದ ಬಳಿಕ ಎಚ್ಚೆತ್ತ ಇಲಾಖೆ

ದೀರ್ಘಕಾಲದ ಲಾಕ್ ಡೌನ್ ನಿಂದ ಕಾರ್ಖಾನೆಗಳಲ್ಲಿ ಯಂತ್ರಗಳು ದುರಸ್ಥಿಯಾಗುವ ಸಂಭವ ಹೆಚ್ಚು. ಇಂತಹ ಸಮಯದಲ್ಲಿ ಅನಿಲ ಸೋರಿಕೆ ಆಗಬಹುದು ಹೀಗಾಗಿ ರಾಸಾಯನಿಕ ಅಧ್ಯಯನ ನಡೆಸುವಂತೆ ಎಲ್ಲ‌ ಕಾರ್ಖಾನೆಗಳಿಗೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಲಾಗಿದೆ. 

ವಿಷಾನಿಲ ಸೋರಿಕೆಯಾದ ವೈಜಾಗ್‌ನ ರಾಸಾಯನಿಕ ಕಾರ್ಖಾನೆ.

ವಿಷಾನಿಲ ಸೋರಿಕೆಯಾದ ವೈಜಾಗ್‌ನ ರಾಸಾಯನಿಕ ಕಾರ್ಖಾನೆ.

 • Share this:
  ಬೆಂಗಳೂರು (ಮೇ 10); ಲಾಕ್‌ಡೌನ್ ಅವಧಿಯ ನಂತರ ಯಾವುದೇ  ಕಾರ್ಖಾನೆಗಳ ಬಾಗಿಲು ತೆರೆಯುವುದಕ್ಕೂ ಮುನ್ನ ಕಡ್ಡಾಯವಾಗಿ ರಾಸಾಯನಿಕ ಸುರಕ್ಷತಾ ಅಧ್ಯಯನವನ್ನು ನಡೆಸಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಖಡಕ್‌ ಸೂಚನೆ ನೀಡಿದೆ

  ಇತ್ತೀಚೆಗೆ ವಿಶಾಖಪಟ್ಟಣಂ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿತ್ತು. ಪರಿಣಾಮ ಸುಮಾರು 12ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರೆ, 200ಜನ ಅಸ್ವಸ್ಥರಾಗಿದ್ದರು. ಈ ದುರಂತದ ಬಳಿಕ ಕೊನೆಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚೆತ್ತಿದೆ.

  ದೀರ್ಘಕಾಲದ ಲಾಕ್ ಡೌನ್ ನಿಂದ ಕಾರ್ಖಾನೆಗಳಲ್ಲಿ ಯಂತ್ರಗಳು ದುರಸ್ಥಿಯಾಗುವ ಸಂಭವ ಹೆಚ್ಚು. ಇಂತಹ ಸಮಯದಲ್ಲಿ ಅನಿಲ ಸೋರಿಕೆ ಆಗಬಹುದು ಹೀಗಾಗಿ ರಾಸಾಯನಿಕ ಅಧ್ಯಯನ ನಡೆಸುವಂತೆ ಎಲ್ಲ‌ ಕಾರ್ಖಾನೆಗಳಿಗೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಲಾಗಿದೆ.

  ಅಲ್ಲದೆ, ಕಾರ್ಖಾನೆಗಳು ಉಂಟು ಮಾಡುವ ಪರಿಸರ ಮಾಲಿನ್ಯದ ಆಧಾರದ ಮೇಲೆ ಮೂರು ಭಾಗಗಳಾಗಿ ಕೆಂಪು, ಕಿತ್ತಳೆ, ಹಸಿರು, ಬಿಳಿ ಎಂದು ವರ್ಗೀಕರಣ ಮಾಡುವುದಕ್ಕೂ ಸಹ ಪರಿಸರ ಮಾಲಿನ್ಯ ಮಂಡಲಿ ನಿರ್ಧರಿಸಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

  ಇದನ್ನೂ ಓದಿ :  Visakhapatnam Gas Leak: ವಿಶಾಖಪಟ್ಟಣಂ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ; 11 ಸಾವು, 5,000ಕ್ಕೂ ಹೆಚ್ಚು ಜನ ಅಸ್ವಸ್ಥ
  First published: