ಇರಾಕ್: ಇದೊಂದು ಅತ್ಯಂತ ದಾರುಣ ಘಟನೆ ಅಂದ್ರೂ ತಪ್ಪಾಗಲ್ಲ. ಇರಾಕಿನ ಜಾಕೋ ಪ್ರದೇಶದಲ್ಲಿ ಅದ್ಧೂರಿ ಮದುವೆಯೊಂದು ನಡೆಯುತ್ತಿತ್ತು. ಆ ಮದುವೆಗೆ ಬಂದ ಎಲ್ಲಾ ಅತಿಥಿಗಳಿಗೂ ಅದ್ಧೂರಿ ಭೋಜನಕೂಟ ಏರ್ಪಡಿಸಲಾಗಿತ್ತು. ಇದಕ್ಕಾಗಿ ಪ್ರಸಿದ್ಧ ಬಾಣಸಿಗರ ದೊಡ್ಡ ಗುಂಪು ರುಚಿಕರ ಖಾದ್ಯಗಳನ್ನು ತಯಾರಿಸುತ್ತಿತ್ತು. ಇನ್ನೇನು ಕೆಲ ಹೊತ್ತಿನಲ್ಲಿ ಅತಿಥಿಗಳಿಗೆ ಮಧ್ಯಾಹ್ನದ ಊಟ ಬಡಿಸಬೇಕು, ಅಷ್ಟರಲ್ಲೇ ಅಲ್ಲೊಂದು ಅಚಾತುರ್ಯ ನಡೆದುಹೋಯ್ತು. ನೋಡನೋಡುತ್ತಿದ್ದಂತೆಯೇ ಮದುವೆ ಮನೆಯಲ್ಲಿ ಸಾವಿನ ಸನ್ನಿವೇಶ ನಿರ್ಮಾಣವಾಯ್ತು.
ಇಸ್ಸಾ ಇಸ್ಮಾಯಿಲ್ ಆ ಪ್ರದೇಶದ ಚಿರಪರಿಚಿತ ಅಡುಗೆಯಾತ. 25 ವರ್ಷದ ಈತ ಅನೇಕ ಪಾರ್ಟಿಗಳಲ್ಲಿ, ಸಮಾರಂಭಗಳಲ್ಲಿ ತನ್ನ ಅಡುಗೆಗಳಿಂದ ಹೆಸರು ಮಾಡಿದ್ದ. ಆದರೆ ಆ ಒಂದು ಮದುವೆ ಮಾತ್ರ ಆತನ ಪಾಲಿಗೆ ಯಮಲೋಕವೇ ಆಗಿಬಿಡ್ತು. ಶ್ರದ್ಧೆಯಿಂದ ಆತ ಮಾಡಿದ್ದ ಚಿಕನ್ ಸೂಪ್ ಕೊರಳಿಗೇ ಉರುಳಾಗಿಬಿಡ್ತು.
ಇಸ್ಸಾ ಇಸ್ಮಾಯಿಲ್ 3 ಮಕ್ಕಳ ತಂದೆ. ತಾನು ತಯಾರಿಸಿದ ಸೂಪ್ ಚೆನ್ನಾಗಿ ಆಗಿದೆ ಎನ್ನುವುದನ್ನು ಖಾತ್ರಿ ಮಾಡಿಕೊಂಡ ನಂತರ ಅದೇನು ಮಾಡೋಕೆ ಹೋದನೋ ಗೊತ್ತಿಲ್ಲ, ಕಾಲು ಜಾರಿದ ಇಸ್ಮಾಯಿಲ್ ಬಿದ್ದಿದ್ದು ಮಾತ್ರ ನೇರವಾಗಿ ಚಿಕನ್ ಸೂಪ್ ಕುದಿಯುತ್ತಿದ್ದ ದೊಡ್ಡ ಕಡಾಯಿಯೊಳಗೇ. ಅದೆಷ್ಟು ಜೋರಾಗಿ ಇಸ್ಮಾಯಿಲ್ ಆ ಕಡಾಯಿಯೊಳಗೆ ಬಿದ್ದನೋ ಅಷ್ಟೇ ವೇಗವಾಗಿ ಹೊರಗೆ ಹಾರಿದ್ದಾನೆ. ಆದರೆ ಕುದಿಯುತ್ತಿದ್ದ ಚಿಕನ್ ಸೂಪ್ ಆತನ ದೇಹದ ಬಹುಪಾಲನ್ನು ಸುಟ್ಟುಬಿಟ್ಟಿತ್ತು.
ಇದನ್ನೂ ಓದಿ: ಪ್ರೇಯಸಿಯನ್ನು ಕೊಂದು ಅಡುಗೆಮನೆಯಲ್ಲೇ ಸಮಾಧಿ; ಪೇಂಟಿಂಗ್ನಿಂದ ಬಯಲಾಯ್ತು ಕೊಲೆ ರಹಸ್ಯ!
ದೇಹದ ಶೇಕಡಾ 70ರಷ್ಟು ಭಾಗ ಸುಟ್ಟುಹೋದ ಪರಿಣಾಮ ಆತ ಬದುಕುಳಿಯಲಿಲ್ಲ. ಕೂಡಲೇ ಆಸ್ಪತ್ರೆ ದಾಖಲಿಸಲಾಯಿತಾದರೂ 5 ದಿನಗಳ ಸತತ ನರಳಾಟದ ನಂತರ ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ. ಕಳೆದ 8 ವರ್ಷಗಳಿಂದ ಇಸ್ಮಾಯಿಲ್ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದ. ತಾನೇ ತಯಾರಿಸಿದ ಚಿಕಿನ್ ಸೂಪ್ನೊಳಗೆ ಬಿದ್ದು ಜೀವ ಕಳೆದುಕೊಂಡಿದ್ದು ಆತನ ದುರಾದೃಷ್ಟವೇ ಸರಿ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ