ಈ ವರ್ಷ ಅತಿಹೆಚ್ಚು ರೀಟ್ವೀಟ್​ ಆದವರಲ್ಲಿ ಪ್ರಧಾನಿ ಮೋದಿಗೆ ಪ್ರಥಮ, ರಾಹುಲ್ ಗಾಂಧಿಗೆ 2ನೇ ಸ್ಥಾನ

2018ರಲ್ಲಿ ಯಾರ ಟ್ವೀಟ್​ಗಳು ಹೆಚ್ಚು ಚರ್ಚೆಗೊಳಗಾಗಿವೆ ಎಂಬುದನ್ನು ಆಧರಿಸಿ ಟಾಪ್​ 10 ಪಟ್ಟಿ ಸಿದ್ಧಪಡಿಸಲಾಗಿದ್ದು, ಮೊದಲ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ, 2ನೇ ಸ್ಥಾನದಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಮತ್ತು 3ನೇ ಸ್ಥಾನವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಪಡೆದುಕೊಂಡಿದ್ದಾರೆ.

sushma chakre | news18india
Updated:December 6, 2018, 1:03 PM IST
ಈ ವರ್ಷ ಅತಿಹೆಚ್ಚು ರೀಟ್ವೀಟ್​ ಆದವರಲ್ಲಿ ಪ್ರಧಾನಿ ಮೋದಿಗೆ ಪ್ರಥಮ, ರಾಹುಲ್ ಗಾಂಧಿಗೆ 2ನೇ ಸ್ಥಾನ
ನರೇಂದ್ರ ಮೋದಿ- ರಾಹುಲ್ ಗಾಂಧಿ
sushma chakre | news18india
Updated: December 6, 2018, 1:03 PM IST
ಬೆಂಗಳೂರು (ಡಿ. 6): ಟ್ವಿಟ್ಟರ್​ ಇಂಡಿಯಾ ಈ ವರ್ಷ ಟ್ವಿಟ್ಟರ್​ನಲ್ಲಿ ಯಾರ ಟ್ವೀಟ್​ಗಳು ಹೆಚ್ಚು ಚರ್ಚೆಗೊಳಗಾಗಿವೆ, ಯಾರ ಬಗ್ಗೆ ಹೆಚ್ಚು ಸರ್ಚ್​ ಮಾಡಲಾಗಿದೆ ಎಂದು ಅಧ್ಯಯನ ನಡೆಸಿದ್ದು, ಮೊದಲ ಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿ ಪಡೆದುಕೊಂಡಿದ್ದಾರೆ.

2018ರಲ್ಲಿ ಯಾರ ಟ್ವೀಟ್​ಗಳು ಹೆಚ್ಚು ಚರ್ಚೆಗೊಳಗಾಗಿವೆ ಎಂಬುದನ್ನು ಆಧರಿಸಿ ಟಾಪ್​ 10 ಪಟ್ಟಿ ಸಿದ್ಧಪಡಿಸಲಾಗಿದ್ದು, ಮೊದಲ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ, 2ನೇ ಸ್ಥಾನದಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಮತ್ತು ಮೂರನೇ ಸ್ಥಾನವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಪಡೆದುಕೊಂಡಿದ್ದಾರೆ. ಉಳಿದಂತೆ ಕ್ರಮವಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್, ತೆಲುಗು ನಟ ಪವನ್​ ಕಲ್ಯಾಣ್​, ಬಾಲಿವುಡ್​ ನಟ ಶಾರುಖ್​ ಖಾನ್, ತಮಿಳು ನಟ ವಿಜಯ್​, ತೆಲುಗು ನಟ ಮಹೇಶ್​ ಬಾಬು, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್​ ಟಾಪ್​ 10ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: 'ಕೆಜಿಎಫ್​‘ ಹಾಡಿನಲ್ಲಿ ಹಿಂದಿ ಹೇರಿಕೆ!; ಟ್ವಿಟ್ಟರ್​ನಲ್ಲಿ ಭುಗಿಲೆದ್ದ ಆಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವ ಟ್ವಿಟ್ಟರ್ ಅನ್ನು ಸೆಲೆಬ್ರಿಟಿ ಮತ್ತು ರಾಜಕಾರಣಿಗಳು ಹೆಚ್ಚೆಚ್ಚು ಬಳಸತೊಡಗಿರುವುದರಿಂದ ಅವರನ್ನು ಸಂಪರ್ಕಿಸಲು ಟ್ವಿಟ್ಟರ್​ ಒಂದು ಮಾಧ್ಯಮವಾಗಿದೆ. ಈ ವರ್ಷ ಟ್ವಿಟ್ಟರ್​ನಲ್ಲಿ ಆರಂಭವಾದ #MeToo ಅಭಿಯಾನ ಹೆಚ್ಚು ಚರ್ಚೆಗೆ ಪಾತ್ರವಾಗಿತ್ತು. #DeepVeer, #KarnatakaElection ಟ್ಯಾಗ್​ನಲ್ಲಿಯೂ ಅತಿಹೆಚ್ಚು ಟ್ವೀಟ್​ಗಳಾಗಿದ್ದವು.
ಅದೇರೀತಿ, ಈ ವರ್ಷ ಯಾವ ವ್ಯಕ್ತಿಗಳ ಟ್ವೀಟ್​ಗಳು ಅತಿಹೆಚ್ಚು ರೀಟ್ವೀಟ್​ ಆಗಿದೆ ಎಂಬುದನ್ನು ಅಧ್ಯಯನ ನಡೆಸಿರುವ ಟ್ವಿಟ್ಟರ್ ಇಂಡಿಯಾ ಪಟ್ಟಿಯನ್ನು ಸಿದ್ಧಪಡಿಸಿದೆ.

ಟಾಪ್​ 10 ಸೆಲೆಬ್ರಿಟಿಗಳ ಪಟ್ಟಿ


ಇದನ್ನೂ ಓದಿ: 'ಕರಾವಳಿ ಕೋಮುವಾದದ ಪ್ರಯೋಗಾಲಯ' ಎಂದ ಸಿದ್ದರಾಮಯ್ಯ; ಟ್ವಿಟ್ಟರ್​ನಲ್ಲಿ ತಿಗುಗೇಟು ಕೊಟ್ಟ ಸದಾನಂದ ಗೌಡ
Loading...

ಈ ಪಟ್ಟಿಯಲ್ಲಿ ರಾಜಕಾರಣಿಗಳು ಮತ್ತು ಚಿತ್ರರಂಗದವರು ಟಾಪ್​ 10 ಸ್ಥಾನ ಪಡೆದುಕೊಂಡಿದ್ದಾರೆ. ಅತಿಹೆಚ್ಚು ರೀಟ್ವೀಟ್​ ಆಗಿರುವ ವಿಷಯಗಳಲ್ಲಿ ಪ್ರಧಾನಿ ಮೋದಿಯ ಫಿಟ್​ನೆಸ್​ ಚಾಲೆಂಜ್, ಇಂಧನ ಬೆಲೆ ಹೆಚ್ಚಳ, ಕರ್ನಾಟಕದಲ್ಲಿ ಬಿಜೆಪಿಯನ್ನು ಬದಿಗೊತ್ತಿ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರ ರಚಿಸಿದ ಅನಿರೀಕ್ಷಿತ ಬೆಳವಣಿಗೆ, ಕೇರಳ ಪ್ರವಾಹ ಸಂತ್ರಸ್ಥರಿಗೆ ದೆಹಲಿಯ ಆಮ್​ ಆದ್ಮಿ ಪಕ್ಷದ ಎಂಎಲ್​ಎ, ಎಂಪಿಗಳು ಹಾಗೂ ಸಚಿವರು ತಮ್ಮ ಒಂದು ತಿಂಗಳ ಸಂಬಳವನ್ನು ನೀಡಿದ್ದು, ಚಾನೆಲ್​ಗಳಲ್ಲಿ ಮಹಿಳೆಯರ ಅಸಂಬದ್ಧ ಚಿತ್ರಣ, ಶಾರುಖ್​- ಆಮೀರ್​ ಖಾನ್ ಫೋಟೋ, ವಿಜಯ್​ ದಳಪತಿ ಅವರ 'ಸರ್ಕಾರ್'​ ಸಿನಿಮಾದ ಲುಕ್ ಮುಂತಾದವು ಅತಿಹೆಚ್ಚು ರೀಟ್ವೀಟ್​ ಆಗಿವೆ.

First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...