• Home
  • »
  • News
  • »
  • national-international
  • »
  • Narendra Modi: ತಾಯಿ ಶ್ರದ್ಧಾಂಜಲಿ ಜಾಹೀರಾತಿನಲ್ಲೂ ಸರಳತೆ ಮೆರೆದ ಮೋದಿ ಕುಟುಂಬ; ಚೆಕ್‌ ಡ್ಯಾಂಗೆ ಹೀರಾಬೆನ್ ಹೆಸರಿಟ್ಟ ಗ್ರಾಮಸ್ಥರು!

Narendra Modi: ತಾಯಿ ಶ್ರದ್ಧಾಂಜಲಿ ಜಾಹೀರಾತಿನಲ್ಲೂ ಸರಳತೆ ಮೆರೆದ ಮೋದಿ ಕುಟುಂಬ; ಚೆಕ್‌ ಡ್ಯಾಂಗೆ ಹೀರಾಬೆನ್ ಹೆಸರಿಟ್ಟ ಗ್ರಾಮಸ್ಥರು!

ಹೀರಾಬೆನ್ ಜೊತೆ ಪ್ರಧಾನಿ ಮೋದಿ

ಹೀರಾಬೆನ್ ಜೊತೆ ಪ್ರಧಾನಿ ಮೋದಿ

ಗುಜರಾತ್‌ನ ರಾಜ್‌ಕೋಟ್ ನಗರದ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ಚೆಕ್‌ಡ್ಯಾಮ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಾಯಿ ಹೀರಾಬೆನ್ ಅವರ ಹೆಸರನ್ನು ಇಡಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

  • Share this:

ಗಾಂಧೀನಗರ: ಸಾಮಾನ್ಯವಾಗಿ ಯಾರಾದರೂ ನಿಧನರಾದರೇ ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದು ಸಹಜ. ಕೆಲವರು ದೊಡ್ಡದಾಗಿ ಜಾಹೀರಾತು ನೀಡಿದರೆ, ಇನ್ನೂ ಕೆಲವರು ಪುಟ್ಟದಾಗಿ ಶ್ರದ್ಧಾಂಜಲಿ ಜಾಹೀರಾತನ್ನು ನೀಡುತ್ತಾರೆ. ಆದರೆ ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿ (Narendra Modi) ಅವರ ತಾಯಿ ವಿಧಿವಶರಾಗಿದ್ದಾಗ, ಹೀರಾಬೆನ್ (Heeraben)​ ಅವರ ಶ್ರದ್ಧಾಂಜಲಿ ಜಾಹೀರಾತನ್ನು (Advertaisment) ಪತ್ರಿಕೆಯೊಂದರಲ್ಲಿ (News Paper) ಬಹಳ ಸರಳವಾಗಿ ಯಾವುದೋ ಒಂದು ಮೂಲೆಯಲ್ಲಿ ಹಾಕಲಾಗಿತ್ತು. ಮೋದಿ ಅವರ ಈ ನಡೆಗೆ ಅನೇಕ ಮಂದಿ ಮೆಚ್ಚಗೆ ವ್ಯಕ್ತಪಡಿಸಿದ್ದರು. ವಾಸ್ತವವಾಗಿ ಹೇಳಬೇಕೆಂದರೆ ಬಹಳ ಸರಳ ವ್ಯಕ್ತಿ. ಅವರು ದೇಶದ ಪ್ರಧಾನಿಯಾಗಿದ್ದರೂ, ಎಂದಿಗೂ ಯಾರ ಬಳಿ, ಅಹಂ ತೋರಿಲ್ಲ ಮತ್ತು ಎಲ್ಲರನ್ನು ಪ್ರೀತಿ ಮತ್ತು ಗೌರವದಿಂದ ಕಾಣುತ್ತಾರೆ. ಸದ್ಯ ಮೋದಿ ಅವರು ತಾಯಿ ಹೀರಾಬೆನ್ ಅವರು ನಿಧರಾದಾಗಲೂ ಸರಳ ಮಾರ್ಗವನ್ನೇ ಅನುಸರಿಸಿದ್ದನ್ನು ಕಂಡು ಜನ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.


ಚೆಕ್‌ಡ್ಯಾಮ್‌ಗೆ ಮೋದಿ ತಾಯಿ ಹೀರಾಬೆನ್ ಹೆಸರು


ಮತ್ತೊಂದೆಡೆ ಗುಜರಾತ್‌ನ (Gujrat) ರಾಜ್‌ಕೋಟ್ ನಗರದ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ಚೆಕ್‌ಡ್ಯಾಮ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಾಯಿ ಹೀರಾಬೆನ್ ಅವರ ಹೆಸರನ್ನು ಇಡಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
15 ಲಕ್ಷ ರೂಪಾಯಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ


ರಾಜ್‌ಕೋಟ್-ಕಲವಾಡ ರಸ್ತೆಯ ವಗುಡಾಡ್ ಗ್ರಾಮದ ಬಳಿ ನ್ಯಾರಿ ನದಿಯ ಕೆಳಭಾಗದಲ್ಲಿ ಗಿರ್ ಗಂಗಾ ಪರಿವಾರ ಟ್ರಸ್ಟ್‌ನಿಂದ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗುತ್ತಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ದಿಲೀಪ್ ಸಖಿಯಾ ಹೇಳಿದ್ದಾರೆ.


ಗೌರವ ಸಲ್ಲಿಸುವ ಸಲುವಾಗಿ ಹೀರಾಬೆನ್ ಹೆಸರಲ್ಲಿ ಡ್ಯಾಂ​


ಸ್ಥಳೀಯ ಶಾಸಕಿ ದರ್ಶಿತಾ ಶಾ ಮತ್ತು ರಾಜ್‌ಕೋಟ್ ಮೇಯರ್ ಪ್ರದೀಪ್ ದಾವ್ ಅವರ ಸಮ್ಮುಖದಲ್ಲಿ ಬುಧವಾರ ಅಣೆಕಟ್ಟು ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ನಾವು ಚೆಕ್ ಡ್ಯಾಂಗೆ ಹೀರಾಬಾ ಸ್ಮೃತಿ ಸರೋವರ ಎಂದು ಹೆಸರಿಸಲು ನಿರ್ಧರಿಸಿದ್ದೇವೆ. ಈ ಡ್ಯಾಂ ಅನ್ನು ಅವರ ಸವಿ ನೆನಪಿಗಾಗಿ ನಿರ್ಮಿಸಲಾಗುತ್ತಿದೆ. ಇದರಿಂದ ಇತರರಿಗೆ ತಮ್ಮ ಪ್ರೀತಿಪಾತ್ರರು ಮರಣದ ಹೊಂದಿದ ಬಳಿಕ ಏನಾದರೂ ಮಾಡಲು ಅಥವಾ ಒಳ್ಳೆಯ ಉದ್ದೇಶಕ್ಕಾಗಿ ದಾನ ಮಾಡಲು ಪ್ರೇರೇಪಿಸುತ್ತದೆ ಎಂದು ಸಖಿಯಾ ಹೇಳಿದ್ದಾರೆ.


ದಾನಿಗಳ ನೆರವಿನಿಂದ 75 ಚೆಕ್ ಡ್ಯಾಂ ನಿರ್ಮಿಸಿರುವ ಟ್ರಸ್ಟ್​


ಗಿರ್ ಗಂಗಾ ಪರಿವಾರ ಟ್ರಸ್ಟ್ ಕಳೆದ ನಾಲ್ಕು ತಿಂಗಳಲ್ಲಿ ದಾನಿಗಳು ನೀಡಿದ ಆರ್ಥಿಕ ನೆರವಿನಿಂದ 75 ಚೆಕ್ ಡ್ಯಾಂಗಳನ್ನು ನಿರ್ಮಿಸಿದೆ. ಎರಡು ವಾರಗಳಲ್ಲಿ ಅಣೆಕಟ್ಟೊಂದನ್ನು ಪೂರ್ಣಗೊಳಿಸಲಿದೆ ಮತ್ತು ಸುಮಾರು 2.5 ಕೋಟಿ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು  ಈ ಅಣೆಕಟ್ಟು ಹೊಂದಿದೆ.


ಅಲ್ಲದೇ ಈ ಅಣೆಕಟ್ಟು 400 ಅಡಿ ಉದ್ದ ಮತ್ತು 150 ಅಡಿ ಅಗಲವಿದೆ. ಒಮ್ಮೆ ತುಂಬಿದರೆ ಒಂಬತ್ತು ತಿಂಗಳು ಬತ್ತುವುದಿಲ್ಲ. ಇದು ಅಂತರ್ಜಲವನ್ನು ಮರುಪೂರ್ಣಗೊಳಿಸುತ್ತದೆ ಮತ್ತು ಸಮೀಪದಲ್ಲಿರುವ ಹಳ್ಳಿಗಳ ರೈತರಿಗೆ ಮತ್ತು ಜಾನುವಾರುಗಳ ಮಾಲೀಕರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಡಿಸೆಂಬರ್ 30ರಂದು ವಿಧಿವಶರಾದ ಹೀರಾಬೆನ್


ಅನಾರೋಗ್ಯದಿಂದ ಬಳಲುತ್ತಿದ್ದ ಹೀರಾಬೆನ್​​ ಅವರನ್ನು ಅಹಮದಾಬಾದ್​ನ ಮೆಹ್ತಾ ಇನ್​​ಸ್ಟಿಟ್ಯೂಟ್​ ಆಫ್​ ಕಾರ್ಡಿಯಾಲಜಿ ಆಂಡ್ ರೀಸಚ್​ರ್ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದರೆ ಡಿಸೆಂಬರ್ 30ರಂದು ಮುಂಜಾನೆ 3.39ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಹೀರಾಬೆಮ್​ ಅವರು ಕೊನೆಯುಸಿರೆಳೆದಿದ್ದರು.


ಇದನ್ನೂ ಓದಿ: Heeraben Modi: ತಾಯಿ ಕಲಿಸಿದ ಪಾಠದಿಂದ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ್ದ ಪ್ರಧಾನಿ ಮೋದಿ!


ತಾಯಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದ ಮೋದಿ


ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಯ್​ಸನ್​ ಗ್ರಾಮಕ್ಕೆ ಆಗಮಿಸಿದ ಮೋದಿ ಅಂತಿಮ ದರ್ಶನ ಪಡೆದು ಅಂತ್ಯಸಂಸ್ಕಾರದಲ್ಲಿ ಭಾಗಿಯಾದರು. ಹೀರಾಬೆನ್ ಅವರ ಅಂತ್ಯಸಂಸ್ಕಾರವನ್ನು ಗಾಂಧಿನಗರದಲ್ಲಿರುವ ಚಿತಾಗಾರದಲ್ಲಿ ನೆರವೇರಿಸಲಾಯಿತು. ತಾಯಿಯ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಮೋದಿ ನಂತರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದರು.

Published by:Monika N
First published: