Cheat and Rape: ₹260 ಕೋಟಿ ಹಣದ ಆಸೆ ತೋರಿಸಿ ಅತ್ಯಾಚಾರ; ಡೋಂಗಿ ಬಾಬಾಗಳಿಂದ 4 ಮಹಿಳೆಯರ ಮೇಲೆ ರೇಪ್

ಪೂಜೆಗೆ 10 ಸಾವಿರ ರೂಪಾಯಿ ಖರ್ಚಾಗುತ್ತೆ. ಬಳಿಕ ನಾವು ನಿಮಗೆ ₹260 ಕೋಟಿ ಕೊಡುತ್ತೇವೆ ಎಂದು ನಂಬಿಸಿದ್ದಾರೆ. ಇವರ ಮಾತುಗಳನ್ನ ನಂಬಿದ ಮಹಿಳೆ ಹಣವನ್ನು ಹೊಂದಿಸಿಕೊಂಡು ಬರುವುದಾಗಿ ಹೇಳಿದ್ದಳು.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
    ಮೋಸ (Cheating) ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೆ ಇರುತ್ತಾರೆ. ಯಾರು ಎಷ್ಟೇ ಮೋಸ ಮಾಡಲು ಏನೇ ಹೇಳಿದರೂ, ನಮ್ಮ ಬುದ್ಧಿ ನಮ್ಮ ಕೈಯಲ್ಲಿ ಇರಬೇಕು. ಅದರಲ್ಲೂ ಈ ಮೂಡನಂಬಿಕೆ(Foolishness)ಗಳನ್ನ ಬಂಡವಾಳ ಮಾಡಿಕೊಂಡು ಮೋಸಮಾಡುವವರು ತುಂಬಾ ಜನರಿದ್ದಾರೆ. ದಿನಬೆಳಗಾದರೆ​ ಇಂತಹ ಪ್ರಕರಣಗಳನ್ನು ನೋಡುತ್ತಿರುತ್ತೇವೆ, ಕೇಳುತ್ತಿರುತ್ತೇವೆ. ಈ ರೀತಿಯ ಘಟನೆಗಳು ಎಷ್ಟೆ ನಡೆದರೂ ಜನರು ಮಾತ್ರ ಬುದ್ಧಿ ಕಲಿಯಲ್ಲ. ಹಣದಾಸೆ, ದ್ವೇಷ(hateable) ತೀರಿಸಿಕೊಳ್ಳಲು ಹೋಗಿ ಮೋಸ ಹೋಗುತ್ತಾರೆ. ಇತ್ತೀಚೆಗೆ ಡೋಂಗಿ ಬಾಬಾಗಳ ಸಂಖ್ಯೆಯೂ ಹೆಚ್ಚಾಗಿದೆ. ನಿಂಬೆಹಣ್ಣು ಮಂತ್ರಿಸಿ ಕೊಟ್ಟರೇ ಸಾಕು ನಿಮಗೆ ಮಕ್ಕಳಾಗುತ್ತೆ. ತುಂಬಾ ಐಶ್ವರ್ಯ ಸಿಗುತ್ತೆ ಅಂತ ಸುಳ್ಳು ಹೇಳುತ್ತಾ ವಂಚಿಸುತ್ತಾರೆ. ಆದರೆ ಮಹಾರಾಷ್ಟ್ರ(Maharashtra)ದಲ್ಲಿ ಇಬ್ಬರು ಡೋಂಗಿ ಬಾಬಾಗಳು, ಒಂದು ಹೆಜ್ಜೆ ಮುಂದೆ ಹೋಗಿ ಮೋಸ ಮಾಡುವುದರ ಜತೆ 4 ಮಹಿಳೆಯರ ಮೇಲೆ ಅತ್ಯಾಚಾರ(Rape)ವೆಸಗಿರುವ ಘಟನೆ ನಡೆದಿದೆ. ಹಣದ ಆಸೆಗೆ ಬಿದ್ದ ಮಹಿಳೆಯರು ಈಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

    ಆಗಿದ್ದೇನು?

    ಮಹಾರಾಷ್ಟ್ರ ಮುಂಬೈ ನಗರದ ಅರ್ನಾಳ ಕರಾವಳಿ ಭಾಗದಲ್ಲಿ ಈ ರೀತಿಯ ಘಟನೆ ನಡೆದಿದೆ. ಮಹಿಳೆಯೊಬ್ಬಳಿಗೆ ಈ ಇಬ್ಬರು ಡೋಂಗಿ ಬಾಬಾಗಳು ಪರಿಚಯ ಆಗುತ್ತಾರೆ. ಕೆಲವು ದಿನಗಳ ಕಾಲ ಆಕೆಯನ್ನ ಫಾಲೋ ಮಾಡಿ ತಮ್ಮ ಮೇಲೆ ನಂಬಿಕೆ ಬರುವ ಹಾಗೆ ನಡೆದುಕೊಳ್ಳುತ್ತಾರೆ. ಯಾವ ಮಟ್ಟಿಗೆ ಎಂದರೆ ಈ ಇಬ್ಬರು ಕಲಿಯುಗದ ದೇವರು ಎಂದು ಹೇಳಿಕೊಳ್ಳುವಷ್ಟು ಆ ಮಹಿಳೆಯನ್ನ ನಂಬಿಸುತ್ತಾ ಬರುತ್ತಾರೆ. ಮೊದಮೊದಲು ಈ ಡೋಂಗಿ ಬಾಬಾಗಳನ್ನು ನಂಬಲು ಹಿಂದೇಟು ಹಾಕುತ್ತಿದ್ದ ಮಹಿಳೆ ದಿನ ಕಳೆದಂತೆ ಇವರನ್ನ ದೇವರ ರೀತಿಯಲ್ಲಿ ನೋಡಲು ಶುರುಮಾಡುತ್ತಾಳೆ. ಇದೇ ಸಮಯಕ್ಕೆ ಕಾಯುತ್ತಿದ್ದ ಡೋಂಗಿ ಬಾಬಾಗಳು ತಮ್ಮ ಅಸಲಿ ಆಟವನ್ನು ಶುರುಮಾಡಿದ್ದಾರೆ.

    ₹260 ಕೋಟಿ ಬರುವುದಾಗಿ ನಂಬಿಸಿದ್ದ ವಂಚಕರು

    ಪರಿಚಯವಾಗಿ ಸಲುಗೆ ಬೆಳೆದ ಮೇಲೆ, ಮಹಿಳೆ ಬಳಿ ನಿನಗೆ ಸಾಕಷ್ಟು ಐಶ್ವರ್ಯ ಒಲಿಯುತ್ತೆ. ಆದರೆ ನೀನು ನಮ್ಮ ಮಾತು ಕೇಳಬೇಕು. ನಾವು ಹೇಳಿದ ಪೂಜೆಯಲ್ಲಿ ಭಾಗಿಯಾಗಬೇಕು ಎಂದು ಹೇಳುತ್ತಾರೆ. ಬಡತನದಲ್ಲಿದ್ದ ಮಹಿಳೆ ಇವರ ಮಾತುಗಳನ್ನ ನಂಬಿ ಒಪ್ಪಿಗೆ ಸೂಚಿಸುತ್ತಾಳೆ. ಪೂಜೆಗೆ 10 ಸಾವಿರ ರೂಪಾಯಿ ಖರ್ಚಾಗುತ್ತೆ. ಬಳಿಕ ನಾವು ನಿಮಗೆ ₹260 ಕೋಟಿ ಕೊಡುತ್ತೇವೆ ಎಂದು ನಂಬಿಸಿದ್ದಾರೆ. ಇವರ ಮಾತುಗಳನ್ನ ನಂಬಿದ ಮಹಿಳೆ ಹಣವನ್ನು ಹೊಂದಿಸಿಕೊಂಡು ಬರುವುದಾಗಿ ಹೇಳಿದ್ದಳು.

    ಮೂರು ಸ್ನೇಹಿತೆಯರನ್ನೂ ಕರೆ ತಂದಿದ್ದ ಮಹಿಳೆ

    ಹಣ ಹೊಂದಿಸಿ ಪೂಜೆ ಮಾಡಲು ಎಲ್ಲ ಸಿದ್ಧತೆಗಳನ್ನ ಮಹಿಳೆ ಮಾಡಿಕೊಂಡಿದ್ದಳು. ಮತ್ತೆ ಮೂವರು ಸ್ನೇಹಿತರಿಗೆ ಈ ವಿಚಾರವನ್ನು ಮಹಿಳೆ ತಿಳಿಸಿದ್ದಳು. ಅವರು ಕೂಡ ನಾವು 10 ಸಾವಿರ ರೂಪಾಯಿ ಕೊಟ್ಟು, ಪೂಜೆ ಮಾಡಿಸಿಕೊಳ್ಳುತ್ತೇವೆ ಎಂದು ಬಾಬಾಗಳ ಬಳಿ ಬಂದಿದ್ದಾರೆ. ಪೂಜೆಯ ಒಂದು ಭಾಗವಾಗಿ ನಾವು ನಿಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತೇವೆ ಇದು ಈ ಪೂಜೆಯ ನಿಯಮವೆಂದು ಡೋಂಗಿ ಬಾಬಾ ಹೇಳಿದ್ದಾರೆ. 260 ಕೋಟಿ ಮೇಲೆ ಆಸೆ ಇಟ್ಟುಕೊಂಡಿದ್ದ ಮಹಿಳೆಯರು ಒಪ್ಪಿಗೆ ಸೂಚಿಸಿದ್ದಾಳೆ. ಪೂಜೆ ನೆಪದಲ್ಲಿ ಮಹಿಳೆಯರ ಮೇಲೆ ಇಬ್ಬರು ಕಾಮುಕರು ಎರಗಿ ಬಿದ್ದಿದ್ದಾರೆ. ಹಲವು ಬಾರಿ ಅತ್ಯಾಚಾರಗೊಳಿಸಿದ್ದಾರೆ.

    ದುಡ್ಡು ಕೊಡದೇ ಇದ್ದಾಗ ದೂರು

    ಎಲ್ಲ ಮುಗಿದ ಮೇಲೆ ದುಡ್ಡು ಕೊಡಿ ಎಂದು ಕೇಳಿದಾಗ ಕಾಮುಕರ ಮುಖವಾಡ ಬಯಲಾಗಿದೆ. ನಾಲ್ವರಲ್ಲಿ 26 ವರ್ಷದ ಓರ್ವ ಮಹಿಳೆ ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡಿದ್ದಾಳೆ. ಮ್ಯಾಥ್ಯೂ ಪಾಂಡಿಯನ್​ ಹಾಗೂ ದಿನೇಶ್​ ದೇವ್ರಕ್ಕರ್​ ಎಂಬುವವರನ್ನು ಪೊಲೀಸರು ಬಂಧಿಸಿ ಜೈಲುಗಟ್ಟಿದ್ದಾರೆ. ಇತ್ತ ದುಡ್ಡಿನಾಸೆಗೆ ದುಡುಕಿ ಎಂತಹ ತಪ್ಪು ಮಾಡಿಬಿಟ್ಟೇವು ಎಂದು ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.

    ವರದಿ - ವಾಸುದೇವ್​. ಎಂ
    Published by:Latha CG
    First published: