HOME » NEWS » National-international » CHEAP FUEL SMUGGLING FROM NEPAL TO INDIA BECAUSE OF FUEL HIKE STG SESR

Petrol Price: ಪೆಟ್ರೋಲ್ ಬೆಲೆ ಏರಿಕೆ ಪರಿಣಾಮ: ನೇಪಾಳದಿಂದ ಅಗ್ಗದ ಇಂಧನ ಕಳ್ಳಸಾಗಣೆ

ಬಿಹಾರದ ಅರೇರಿಯಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 93.50 ರೂಪಾಯಿ, ಆದರೆ ಪಕ್ಕದ ನೇಪಾಳದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 70.62 ರೂಪಾಯಿಗೆ ಲಭ್ಯವಿದೆ

news18-kannada
Updated:February 19, 2021, 5:13 PM IST
Petrol Price: ಪೆಟ್ರೋಲ್ ಬೆಲೆ ಏರಿಕೆ ಪರಿಣಾಮ: ನೇಪಾಳದಿಂದ ಅಗ್ಗದ ಇಂಧನ ಕಳ್ಳಸಾಗಣೆ
ಸಾಂದರ್ಭಿಕ ಚಿತ್ರ
  • Share this:
ದೇಶದಲ್ಲಿ ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಈ ಕುರಿತು ಅನೇಕ ವ್ಯಂಗ್ಯಚಿತ್ರ ಹಾಗೂ  ಮೆಮ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಲ್ಲದೇ, ಪೆಟ್ರೋಲ್ ಬೆಲೆ ಏರಿಕೆಗೆ ಈ ಹಿಂದಿನ ಸರ್ಕಾರವೇ ಕಾರಣ ಎಂದು ಪ್ರಧಾನಿ ಮೋದಿ ಅಪರೋಕ್ಷವಾಗಿ ಕಾಂಗ್ರೆಸ್‌ ಕಡೆಗೆ ಬೆಟ್ಟು ಮಾಡಿದ್ದರು. ಈ ಮಧ್ಯೆ ದೇಶದ ಗಡಿಭಾಗದಲ್ಲೊಂದು ಆಸಕ್ತಿಕರ ಘಟನೆ ಜರುಗಿದೆ. ಭಾರತ ಹಾಗೂ ನೇಪಾಳದ ಗಡಿಗಳಲ್ಲಿ ಅಕ್ರಮ ಪೆಟ್ರೋಲ್ ಸಾಗಾಣಿಕೆ ನಡೆಯುತ್ತಿದೆ. ಇದಕ್ಕೆ ಕಾರಣ ಭಾರತಕ್ಕೆ ಹೋಲಿಸಿದರೆ, ನೇಪಾಳದಲ್ಲಿ ಪೆಟ್ರೋಲ್ ಬೆಲೆ 22 ರೂಪಾಯಿ ಕಡಿಮೆ.  ಈ ಕುರಿತು ಮತ್ತಷ್ಟು ಮಾಹಿತಿ ಹೊರಹಾಕಿರುವ ಹಿಂದೂಸ್ತಾನ್ ಟೈಮ್ಸ್‌ನ ಸಹೋದರ ಪತ್ರಿಕೆ ಲೈವ್ ಹಿಂದೂಸ್ತಾನ್ ಪ್ರಕಾರ, ಬಿಹಾರದ ಅರೇರಿಯಾ ಮತ್ತು ಕಿಶನ್‌ಗಂಜ್‌ನಲ್ಲಿ ಕೆಲವು ಜನರು ಪೆಟ್ರೋಲ್ ಕಳ್ಳಸಾಗಣೆ ಮಾಡುತ್ತಿದ್ದಾರೆ. ಅವರು ಕಿರಿದಾದ ದಾರಿಯನ್ನು ಬಳಸಿಕೊಂಡು ಗಡಿ ದಾಟಿ, ನೇಪಾಳಕ್ಕೆ ಕಾಲಿಡುತ್ತಿದ್ದಾರೆ. ನಂತರ ಅಲ್ಲಿಂದ ಅಗ್ಗದ ದರದಲ್ಲಿ ಬಿಹಾರಕ್ಕೆ ಪೆಟ್ರೋಲ್ ತರುತ್ತಿದ್ದಾರೆ. ಅಂತಹ ಕೆಲವು ಜನರನ್ನು ಸ್ಥಳೀಯ ಪೊಲೀಸರು ಹಿಡಿದಿದ್ದಾರೆ ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.

ಬಿಹಾರದ ಅರೇರಿಯಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 93.50 ರೂಪಾಯಿ, ಆದರೆ ಪಕ್ಕದ ನೇಪಾಳದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 70.62 ರೂಪಾಯಿಗೆ ಲಭ್ಯವಿದೆ. ಇದೇ ಕಾರಣದಿಂದ ಈ ಅಕ್ರಮ ಪೆಟ್ರೋಲ್ ಸಾಗಾಣಿಕೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಷ್ಟಕ್ಕೂ ನೇಪಾಳಕ್ಕೆ ಪೆಟ್ರೋಲ್ ಸಿಗೋದು ಎಲ್ಲಿಂದ ಗೊತ್ತಾ? ಅದು ಭಾರತದಿಂದಲೇ. ಹೌದು, ಉಭಯ ದೇಶಗಳ ನಡುವಿನ ಹಳೆಯ ಒಪ್ಪಂದದ ಪ್ರಕಾರ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಗಲ್ಫ್ ರಾಷ್ಟ್ರಗಳಿಂದ ನೇಪಾಳಕ್ಕೆ ಪೆಟ್ರೋಲ್ ಆಮದು ಮಾಡಿಕೊಳ್ಳುತ್ತದೆ. ಇದನ್ನು ವೆಚ್ಚದ ಬೆಲೆಗೆ ನೇಪಾಳಕ್ಕೆ ಕಳುಹಿಸಿಕೊಡುತ್ತದೆ. ಹೀಗಾಗಿ ಇದಕ್ಕೆ ಕೇವಲ ಸಂಸ್ಕರಣಾ ಶುಲ್ಕವನ್ನು ಮಾತ್ರ ವಿಧಿಸಲಾಗುತ್ತದೆ. ಇದರಿಂದಾಗಿ ಹಿಮಾಲಯನ್ ದೇಶದಲ್ಲಿ (ನೇಪಾಳ) ಇಂಧನ ದರವು ಅಗ್ಗವಾಗಿದೆ ಎನ್ನಲಾಗುತ್ತಿದೆ.

"ನೇಪಾಳದಿಂದ ಪೆಟ್ರೋಲ್ ಕಳ್ಳಸಾಗಣೆ ಮಾಡುತ್ತಿರುವುದು ನಮ್ಮ ದೇಶೀಯ ಮಾರುಕಟ್ಟೆಯಲ್ಲಿನ ಪೆಟ್ರೋಲ್ ಮಾರಾಟದ ಮೇಲೆ ಪರಿಣಾಮ ಬೀರುತ್ತಿದೆ" ಎಂದು ಜೋಗಬಾನಿ ಪಟ್ಟಣದಲ್ಲಿನ ಇಂಧನ ಕೇಂದ್ರದ ಮಾಲೀಕ ಸುಧೀರ್ ಕುಮಾರ್ ಹೇಳಿದ್ದಾರೆ.

ಇನ್ನು ಈ ಬೆಳವಣಿಗೆ ಕುರಿತು ಎಸ್‌ಎಸ್‌ಬಿಯ ಡಿಐಜಿ ಎಸ್‌ಕೆ ಸಾರಂಗಿ ಪ್ರತಿಕ್ರಿಯೆ ನೀಡಿದ್ದು, 'ಗಡಿ ಪ್ರದೇಶದಲ್ಲಿ ಗಸ್ತು ತಿರುಗುವುದನ್ನು ತೀವ್ರಗೊಳಿಸಲಾಗಿದೆ' ಎಂದಿದ್ದಾರೆ. 'ಎಸ್‌ಎಸ್‌ಬಿಯೊಂದಿಗೆ ಸ್ಥಳೀಯ ಪೊಲೀರು ಗಸ್ತು ತಿರುಗುತ್ತಿದ್ದಾರೆ. ಈ ಕುರಿತು ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ' ಎಂದು ಕಿಶನ್‌ಗಂಜ್ ಎಸ್‌ಪಿ ಕುಮಾರ್ ಆಶಿಶ್ ತಿಳಿಸಿದ್ದಾರೆ.

ಇದನ್ನು ಓದಿ: COVID-19 ವೇಳೆ ಶಾಲೆಯಿಂದ ದೂರ ಉಳಿದ ಮಕ್ಕಳು: ಭಾರತದ ಮುಂದಿದೆ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಹಿಂಜರಿತದಿಂದ ಹೊರತರುವ ಸವಾಲು!

ಏತನ್ಮಧ್ಯೆ, ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಬೆಲೆಯನ್ನು ಗುರುವಾರ ಲೀಟರ್‌ಗೆ 34 ಪೈಸೆ ಮತ್ತು ಡೀಸೆಲ್ 32 ಪೈಸೆ ಹೆಚ್ಚಿಸಿದೆ. ಅಲ್ಲದೇ, ಕಳೆದ 10 ದಿನಗಳಲ್ಲಿ ಪೆಟ್ರೋಲ್ ಬೆಲೆ ಸತತ ಏರಿಕೆಯ ನಂತರ, ಭಾರತದ ಅನೇಕ ನಗರಗಳಲ್ಲಿ ಪೆಟ್ರೋಲ್ ಬೆಲೆ ₹100ರ ಸಮೀಪದಲ್ಲಿದೆ.ಇನ್ನು ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ರಾಜಸ್ಥಾನವು ದೇಶದಲ್ಲಿ ಪೆಟ್ರೋಲ್ ಮೇಲೆ ಅತಿ ಹೆಚ್ಚು ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ವಿಧಿಸುತ್ತಿದ್ದು, ನಂತರದ ಸ್ಥಾನದಲ್ಲಿ ಮಧ್ಯಪ್ರದೇಶವಿದೆ.
Published by: Seema R
First published: February 19, 2021, 5:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories