Plane Crash: ರಾಜಸ್ಥಾನದ ಭರತ್​ಪುರದಲ್ಲಿ ಸೇನಾ ಯುದ್ಧ ವಿಮಾನ ಪತನ

ವಿಮಾನ ಪತನಗೊಂಡ ಸ್ಥಳದ ಬಳಿ ಜಮಾಯಿಸಿದ ಸ್ಥಳೀಯರು

ವಿಮಾನ ಪತನಗೊಂಡ ಸ್ಥಳದ ಬಳಿ ಜಮಾಯಿಸಿದ ಸ್ಥಳೀಯರು

ರಾಜಸ್ಥಾನದ ಭರತ್‌ಪುರದಲ್ಲಿ ಭಾರತೀಯ ಸೇನೆಯ ಫೈಟರ್ ಜೆಟ್ ಪತನಗೊಂಡಿದೆ. ಶನಿವಾರ ಬೆಳಗ್ಗೆ ಭರತ್‌ಪುರದ ಸೇವರ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ವೀಸಾದಲ್ಲಿ ಫೈಟರ್ ಜೆಟ್ ಪತನಗೊಂಡಿದೆ ಎಂದು ಹೇಳಲಾಗಿದೆ.

  • News18 Kannada
  • 5-MIN READ
  • Last Updated :
  • Rajasthan, India
  • Share this:

ಜೈಪುರ(ಜ.28): ರಾಜಸ್ಥಾನದ (Rajasthan) ಭರತ್‌ಪುರದಲ್ಲಿ ಭಾರತೀಯ ಸೇನೆಯ (Indian Army) ಫೈಟರ್ ಜೆಟ್ ಪತನಗೊಂಡಿದೆ. ಶನಿವಾರ ಬೆಳಗ್ಗೆ ಭಾರತ್‌ಪುರದ ಸೇವರ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ವೀಸಾದಲ್ಲಿ ಫೈಟರ್ ಜೆಟ್ ಪತನಗೊಂಡಿದೆ. ಫೈಟರ್ ಜೆಟ್ ಅಪಘಾತಕ್ಕೀಡಾದ (Plane Crash) ಬೆನ್ನಲ್ಲೇ ಅದು ಸ್ಫೋಟಗೊಂಡು ಬೆಂಕಿ ಆವರಿಸಿಕೊಂಡಿದೆ. ಈ ಫೈಟರ್ ಜೆಟ್ ಹಳ್ಳಿಯ ಸಮೀಪವಿರುವ ಬಂಜರು ಭೂಮಿಯಲ್ಲಿ ಪತನಗೊಂಡಿದೆ. ಹೀಗಾಗಿ ಭಾರೀ ಆಪಾಯವೊಂದು ತಪ್ಪಿದಂತಾಗಿದೆ. ವಿಮಾನ ಪತನದ ಬಗ್ಗೆ ಮಾಹಿತಿ ಬಂದ ತಕ್ಷಣ ಎಲ್ಲಾ ಪೊಲೀಸ್ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.


ಇದನ್ನೂ ಓದಿ: Nepal Plane Crash: ನೇಪಾಳ ವಿಮಾನ ದುರಂತದ ಕೊನೇ ಕ್ಷಣದ ವಿಡಿಯೋ ಭಾರತೀಯ ಯುವಕನ ಫೋನ್​ನಲ್ಲಿ ಸೆರೆ!


ಉತ್ತರ ಪ್ರದೇಶದ ಆಗ್ರಾದಿಂದ ಹೊರಟಿದ್ದ ಹೆಲಿಕಾಪ್ಟರ್ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಉಚ್ಚೈನ್ ಪ್ರದೇಶದಲ್ಲಿ ತಾಂತ್ರಿಕ ದೋಷದಿಂದ ಪತನಗೊಂಡಿದೆ. ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಕೂಡಲೇ ಅಪಘಾತ ಸ್ಥಳಕ್ಕೆ ದೌಡಾಯಿಸಿದ್ದಾರೆ. ಜನವಸತಿ ಪ್ರದೇಶದಲ್ಲಿ ಈ ಅಪಘಾತ ಸಂಭವಿಸದಿರುವುದು ಸಮಾಧಾನದ ಸಂಗತಿ ಎಂದು ಜಿಲ್ಲಾಧಿಕಾರಿ ಅಲೋಕ್ ರಂಜನ್ ತಿಳಿಸಿದ್ದಾರೆ. ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.



ಘಟನೆ ಬಗ್ಗೆ ಮತ್ತಷ್ಟು ಮಾಹಿತಿ ನೀಡಿರುವ  ಡಿಸಿ ಅಲೋಕ್ ರಂಜನ್ ಪೈಲಟ್ ಅಪಘಾತಕ್ಕೂ ಮುನ್ನ ತನ್ನನ್ನು ತಾನು ಅಜೆಕ್ಟ್​ ಮಾಡಿಕೊಂಡಿದ್ದಾರೆ. ಆದರೆ ಈವರೆಗೂ ಅವರೆಲ್ಲಿದ್ದಾರೆಂಬ ವಿಚಾರ ತಿಳಿದು ಬಂದಿಲ್ಲ.




ಅವರಿಗಾಗಿ ರಕ್ಷಣಾ ತಂಡಗಳು ಹುಡುಕಾಟ ನಡೆಸುತ್ತಿವೆ ಎಂದಿದ್ದಾರೆ. ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ಮುಂದುವರೆದಿದೆ.

Published by:Precilla Olivia Dias
First published: